21ನೇ ಶತಮಾನದ ಜಗತ್ತಿನ ಅತ್ಯುತ್ತಮ ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ; ಶಾರೂಖ್ ಖಾನ್, ಅಮಿತಾಬ್ ಬಚ್ಚನ್ ಅಲ್ಲ!
ದಿ ಇಂಡಿಪೆಂಡೆಂಟ್ ಪತ್ರಿಕೆಯು 21ನೇ ಶತಮಾನದ ಅತ್ಯುತ್ತಮ 60 ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಲಿಸ್ಟ್‌ನಲ್ಲಿ ಏಕೈಕ ಭಾರತೀಯ ಸ್ಥಾನ ಪಡೆದಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದವರು ಅಮಿತಾಬ್ ಬಚ್ಚನ್, ಅಮಿರ್ ಖಾನ್, ಶಾರೂಖ್ ಖಾನ್ ಅಲ್ಲ. ಆ ನಟ ಯಾರೆಂದು ತಿಳಿಯೋಣ ಬನ್ನಿ.
ಬೆಂಗಳೂರು: ದಿ ಇಂಡಿಪೆಂಡೆಂಟ್ ಪತ್ರಿಕೆಯು 21ನೇ ಶತಮಾನದ ಅತ್ಯುತ್ತಮ 60 ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಲಿಸ್ಟ್‌ನಲ್ಲಿ ಏಕೈಕ ಭಾರತೀಯ ಸ್ಥಾನ ಪಡೆದಿದ್ದಾರೆ. ಜಗತ್ತಿನ ವಿವಿಧ ದೇಶಗಳ ನಟರು ಇದರಲ್ಲಿ ಸೇರಿದ್ದಾರೆ. ಭಾರತದ ಏಕೈಕ ನಟ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂದಹಾಗೆ, ಈ ಸಿನಿಮಾ 2000ರಲ್ಲಿ ಬಿಡುಗಡೆಯಾಗಿತ್ತು.
ಯಾರು ಆ ಏಕೈಕ ನಟ?
ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೇವಲ ಒಬ್ಬ ಭಾರತೀಯ ನಟನಿಗೆ ಮಾತ್ರ ಸಾಧ್ಯವಾಯಿತು. ಈ ರೀತಿ ಸ್ಥಾನ ಪಡೆದಿರುವುದು ಶಾರೂಖ್ ಖಾನ್, ಅಮಿರ್ ಖಾನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಅಲ್ಲ. ಕನ್ನಡದ ಯಶ್, ರಿಷಬ್ ಶೆಟ್ಟಿಯೂ ಅಲ್ಲ. ಪುಷ್ಪ ನಟ ಅಲ್ಲು ಅರ್ಜುನ್ ಕೂಡ ಅಲ್ಲ. ಈ 60 ಅತ್ಯುತ್ತಮ ನಟರಲ್ಲಿ ಸ್ಥಾನ ಪಡೆದಿರುವುದು ಇರ್ಫಾನ್ ಖಾನ್. ಈ ಪಟ್ಟಿಯಲ್ಲಿ ಇರ್ಫಾನ್ ಖಾನ್ 41ನೇ ಸ್ಥಾನ ಪಡೆದಿದ್ದರು.
ನಟ ಇರ್ಫಾನ್ ಖಾನ್ 2020ರಲ್ಲಿ ತನ್ನ 53ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1980ರಿಂದ 2000ರ ಆರಂಭದವರೆಗೆ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದರು. ಆದರೆ, 2001ರಲ್ಲಿ ಆಸೀಫ್ ಕಪಾಡಿಯಾ ನಿರ್ದೇಶನದ ದಿ ವಾರಿಯರ್ ಸಿನಿಮಾದಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ. ನಟನ ತವರು ರಾಜ್ಯವಾದ ರಾಜಸ್ಥಾನ ಮೂಲದ ಯೋಧನ ಪಾತ್ರದಲ್ಲಿ ಇರ್ಫಾನ್‌ನ ನಟನೆ ಅಮೋಘವಾಗಿದೆ ಎಂದು ದಿ ಇಂಡಿಪೆಂಡೆಂಟ್ ಶ್ಲಾಘಿಸಿದೆ.
ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ಇರ್ಫಾನ್ ಖಾನ್ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಿಗ್ಮಾನ್ಶು ಧುಲಿಯಾ ಅವರ 2003ರ ಕ್ರೈಮ್ ಡ್ರಾಮಾ ಹಾಸಿಲ್, ವಿಶಾಲ್ ಭಾರದ್ವಾಜ್ ಅವರ 2003 ರ ಗ್ಯಾಂಗ್‌ಸ್ಟರ್ ಡ್ರಾಮಾ ಮಕ್ಬೂಲ್ ಮತ್ತು ಮೀರಾ ನಾಯರ್ ಅವರ 2006ರ ರೋಮ್ಯಾಂಟಿಕ್ ಡ್ರಾಮಾ ದಿ ನೇಮ್‌ಸೇಕ್‌ನಲ್ಲಿ ಇರ್ಫಾನ್ ನಟನೆ ಎಲ್ಲರ ಗಮನ ಸೆಳೆದಿತ್ತು. ಲೈಫ್ ಇನ್ ಎ ಮೆಟ್ರೋ, ದಿ ಡಾರ್ಜಿಲಿಂಗ್ ಲಿಮಿಟೆಡ್, ಸ್ಲಮ್‌ಡಾಗ್ ಮಿಲಿಯನೇರ್, ಪಾನ್ ಸಿಂಗ್ ತೋಮರ್, ಲೈಫ್ ಆಫ್ ಪೈ, ದಿ ಲಂಚ್‌ಬಾಕ್ಸ್, ಕ್ವಿಸ್ಸಾ, ಹೈದರ್, ಪೀಕು, ತಲ್ವಾರ್, ಹಿಂದಿ ಮೀಡಿಯಂ, ದಿ ಸಾಂಗ್ ಆಫ್ ಸ್ಕಾರ್ಪಿಯನ್ಸ್, ಕರೀಬ್ ಕರೀಬ್ ಸಿಂಗಲ್ಲೆ, ಕಾರ್ವಾನ್ ಮುಂತಾದ ಸಿನಿಮಾಗಳಲ್ಲಿಯೂ ಇರ್ಫಾನ್ ನಟಿಸಿದ್ದಾರೆ.
ದಿ ಇಂಡಿಪೆಂಡೆಂಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಪ್ 10 ನಟರು
ದಿ ಇಡಿಪೆಂಡೆಂಟ್ ಪತ್ರಿಕೆಯ 21ನೇ ಶತಮಾನದ ಅತ್ಯುತ್ತಮ 60 ನಟರ ಪಟ್ಟಿಯಲ್ಲಿ ಟಾಪ್ ಟೆನ್ ಸ್ಥಾನ ಪಡೆದ ಕಲಾವಿದರು ಯಾರೆಂದು ತಿಳಿಯೋಣ. 2014ರಲ್ಲಿ 46 ನೇ ವಯಸ್ಸಿನಲ್ಲಿ ನಿಧನರಾದ ನಟ ಫಿಲಿಪ್ ಸೆಮೌರ್ ಹಾಫ್ಮನ್ ಅವರು 21 ನೇ ಶತಮಾನದ ಅತ್ಯುತ್ತಮ ನಟ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಎಮ್ಮಾ ಸ್ಟೋನ್ ಪಡೆದಿದ್ದಾರೆ. ಈಕೆ ಕ್ರೇಜಿ, ಸ್ಟುಪಿಡ್, ಲವ್, ಲಾ ಲಾ ಲ್ಯಾಂಡ್, ದಿ ಫೇವರಿಟ್ ಮತ್ತು ಪೂರ್ ಥಿಂಗ್ಸ್‌ಗಳಲ್ಲಿ ಅಮೋಘವಾಗಿ ನಟಿಸಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ತಿಳಿಸಿದೆ. 2016ರಲ್ಲಿ ನಿವೃತ್ತಿ ಘೋಷಿಸಿದ ಡೇನಿಯಲ್ ಡೇ-ಲೂಯಿಸ್ "ಓನ್ಲಿ ಟು ರಿಟರ್ನ್ ಟು ಸಟ್ ನೌ" ಪಾತ್ರಕ್ಕಾಗಿ ಅಗ್ರ ಮೂರನೇ ಸ್ಥಾನ ಪಡೆದಿದ್ದಾರೆ. ರಿಡ್ಲಿ ಸ್ಕಾಟ್‌ನ ದಿ ಗ್ಲಾಡಿಯೇಟರ್ IIನಲ್ಲಿನ ನಟನೆಗಾಗಿ ಡೆನ್ಜೆಲ್ ವಾಷಿಂಗ್ಟನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ನಿಕೋಲ್ ಕಿಡ್ಮನ್, ಡೇನಿಯಲ್ ಕಲುಯುಯಾ, ಸಾಂಗ್ ಕಾಂಗ್ ಹೋ, ಕೇಟ್ ಬ್ಲಾಂಚೆಟ್, ಕಾಲಿನ್ ಫಾರೆಲ್ ಮತ್ತು ಫ್ಲಾರೆನ್ಸ್ ಪಗ್ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದು ಟಾಪ್ 10 ಅತ್ಯುತ್ತಮ ನಟರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.