Actress Salary: 6 ವರ್ಷದ ನಂತರ ಸಿನಿಮಾಕ್ಕೆ ಮರಳಿದ ನಟಿಗೆ 30 ಕೋಟಿ ಸಂಭಾವನೆ; ಈಕೆ ದೀಪಿಕಾ, ಆಲಿಯಾ ಭಟ್, ಕರೀನಾ ಕಪೂರ್ ಅಲ್ಲ!
Actress Salary: ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟಿಸುತ್ತಿರುವ ಮುಂಬರುವ ಸಿನಿಮಾವೊಂದರಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಇವರು ಸುಮಾರು ಆರು ವರ್ಷಗಳ ನಂತರ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ.

Actress Salary: ಭಾರತದ ಚಿತ್ರರಂಗದಲ್ಲಿ ಕೆಲವು ನಟಿಯರು, ನಟರ ಸಂಭಾವನೆ ವಿಷಯ ರಹಸ್ಯವಾಗಿರುತ್ತದೆ. ಹೀಗಿದ್ದರೂ, ದೊಡ್ಡ ಮೊತ್ತದ ವೇತನ, ಸಂಭಾವನೆ ಪಡೆಯುವ ಕಲಾವಿದರ ಮಾಹಿತಿ ಆಗಾಗ ಜಾಹೀರು ಆಗುವುದುಂಟು. ಭಾರತೀಯ ಚಿತ್ರರಂಗದಲ್ಲಿ ನಟರು ಹೆಚ್ಚು ಸಂಭಾವನೆ ಪಡೆಯುತ್ತಾರೆ. ನಟಿಯರು ಸಂಭಾವನೆ ಪಡೆಯುತ್ತಾರೆ. ಈ ಲಿಂಗ ತಾರತಮ್ಯದ ಕುರಿತು ಇತ್ತೀಚೆಗೆ ಕನ್ನಡ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದರು. ಕೆಲವು ಸೂಪರ್‌ಸ್ಟಾರ್ ನಟರು ಒಂದೊಂದು ಸಿನಿಮಾಕ್ಕೆ 100 ಕೋಟಿ ರೂಪಾಯಿಗೂ ಅಧಿಕ ವೇತನ ಪಡೆಯುತ್ತಾರೆ. ಆದರೆ, ನಟಿಯರು ಅಷ್ಟೊಂದು ವೇತನ ಪಡೆಯುವುದಿಲ್ಲ. ಈಗ ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ಉತ್ತಮ ಸಂಭಾವನೆ ಪಡೆಯುವ ನಟಿಗಳಲ್ಲಿ ಒಬ್ಬರು. ಸಂಭಾವನೆ ವಿಚಾರದಲ್ಲಿ ಭಾರತದ ನಟಿಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ಸುಮಾರು ಆರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದ ನಟಿ ಈಗ ತನ್ನ ಮುಂದಿನ ಸಿನಿಮಾಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ವೈರಲ್ ಆಗಿದೆ. ಬನ್ನಿ ಆ ನಟಿಯ ಮಾಹಿತಿ ಪಡೆಯೋಣ.
30 ಕೋಟಿ ಸಂಭಾವನೆ ಪಡೆದ ನಟಿ
ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟಿಸುತ್ತಿರುವ ಮುಂಬರುವ ಸಿನಿಮಾವೊಂದರಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಇವರು ಸುಮಾರು ಆರು ವರ್ಷಗಳ ನಂತರ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಂಕ ಚೋಪ್ರಾ ದಕ್ಷಿಣ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪ್ರಿಯಾಂಕಾ ಮರಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಪ್ರಿಯಾಂಕಾ ಈ ಚಿತ್ರಕ್ಕಾಗಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಇದು ಒಂದು ಚಿತ್ರಕ್ಕೆ ಭಾರತೀಯ ನಟಿಯೊಬ್ಬರು ಪಡೆದ ಅತ್ಯಧಿಕ ಸಂಭಾವನೆಯಾಗಿದೆ. "ಇದೇ ಕಾರಣಕ್ಕೆ ಈ ಪ್ರಾಜೆಕ್ಟ್‌ನಲ್ಲಿ ತಾನು ಭಾಗವಹಿಸುವುದನ್ನು ಘೋಷಿಸಲು ಇವರು ಇಷ್ಟು ಸಮಯ ತೆಗೆದುಕೊಂಡಿದ್ದಾರೆ. ತಮ್ಮ ಸಂಭಾವನೆಯನ್ನು ಕಡಿಮೆ ಮಾಡಲು ಅವರು ಸಿದ್ಧರಿರಲಿಲ್ಲ. ಅವರು ಏಕೆ ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು. ಪುರುಷ ನಟರು ಮಾತ್ರ ಅತ್ಯಧಿಕ ಸಂಭಾವನೆ ಪಡೆದರೆ ಸಾಕೆ? ನಟಿಯರೂ ಈ ರೀತಿ ಉತ್ತಮ ವೇತನ ಪಡೆಯಬೇಕು" ಎಂದು ಮೂಲವೊಂದರ ಹೇಳಿಕೆಯನ್ನು ಉಲ್ಲೇಖಿಸಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.
ಪ್ರಿಯಾಂಕಾ ಚೋಪ್ರಾರ ಕುರಿತು ಇನ್ನೊಂದು ಆಸಕ್ತಿದಾಯಕ ವಿಷಯವಿದೆ. ಈ ಹಿಂದೆ ಇವರು ಅಮೆಜಾನ್ ಪ್ರೈಮ್ ವಿಡಿಯೋ ಶೋ ಸಿಟಾಡೆಲ್‌ನಲ್ಲಿ ನಟಿಸಲು 5 ದಶಲಕ್ಷ ಡಾಲರ್ ಅಂದ್ರೆ ಸುಮಾರು 41 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದಿದ್ದರು. ಆದರೆ, ಅದು ಆರು ಗಂಟೆಗಳ ಕಾಲದ ಶೋ. ಆದರೆ, ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಮುಂದಿನ ಚಿತ್ರಕ್ಕೆ 30 ಕೋಟಿ ಪಡೆದಿರುವುದು ಇತರೆ ನಟಿಯರಿಗೂ ಸಂಭಾವನೆ ಹೆಚ್ಚು ಕೇಳಲು ಧೈರ್ಯ ಬಂದಿದೆ. ಅಂದಹಾಗೆ ಈ ಸಿನಿಮಾಕ್ಕೆ ಎಸ್‌ಎಸ್‌ಎಂಬಿ29 ಎಂದು ತಾತ್ಕಾಲಿಕ ಹೆಸರು ನೀಡಲಾಗಿದೆ. ಈ ಸಿನಿಮಾದ ಅಧಿಕೃತ ಹೆಸರು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಬೇರೆ ನಟಿಯರ ಅತ್ಯಧಿಕ ಸಂಭಾವನೆ ಎಷ್ಟಿದೆ?
ರಾಜಮೌಳಿ ಅವರ ಚಿತ್ರಕ್ಕೆ ಪ್ರಿಯಾಂಕಾ ಸಹಿ ಹಾಕುವವರೆಗೂ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಅಗ್ರಸ್ಥಾನದಲ್ಲಿದ್ದರು. ಅವರು ಕಲ್ಕಿ 2898 ಎಡಿ ಸಿನಿಮಾಕ್ಕೆ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಅವರ 'ಜೂನಿಯರ್' ಆಲಿಯಾ ಭಟ್ ಪ್ರತಿ ಚಿತ್ರಕ್ಕೆ 15 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಕರೀನಾ ಕಪೂರ್, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಮುಂತಾದ ನಟಿಯರು ಪ್ರತಿ ಪ್ರಾಜೆಕ್ಟ್‌ಗೆ 10 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ಕೂಡ ಈಗ ಪ್ರತಿ ಸಿನಿಮಾದಲ್ಲಿ ನಟಿಸಲು 10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಸಂಭಾವನೆ ಪಡೆಯುತ್ತಾರೆ.
