ವೈದ್ಯಕೀಯ ಶಿಕ್ಷಣ ಪಡೆದ ಭಾರತೀಯ ನಟಿಯರು: ಸಾಯಿ ಪಲ್ಲವಿ, ಶ್ರೀಲೀಲಾ ಮಾತ್ರವಲ್ಲ; ಇಲ್ಲಿದೆ 6 ನಟಿಯರ ಮೆಡಿಕಲ್‌ ಶಿಕ್ಷಣದ ವಿವರ
ಕನ್ನಡ ಸುದ್ದಿ  /  ಮನರಂಜನೆ  /  ವೈದ್ಯಕೀಯ ಶಿಕ್ಷಣ ಪಡೆದ ಭಾರತೀಯ ನಟಿಯರು: ಸಾಯಿ ಪಲ್ಲವಿ, ಶ್ರೀಲೀಲಾ ಮಾತ್ರವಲ್ಲ; ಇಲ್ಲಿದೆ 6 ನಟಿಯರ ಮೆಡಿಕಲ್‌ ಶಿಕ್ಷಣದ ವಿವರ

ವೈದ್ಯಕೀಯ ಶಿಕ್ಷಣ ಪಡೆದ ಭಾರತೀಯ ನಟಿಯರು: ಸಾಯಿ ಪಲ್ಲವಿ, ಶ್ರೀಲೀಲಾ ಮಾತ್ರವಲ್ಲ; ಇಲ್ಲಿದೆ 6 ನಟಿಯರ ಮೆಡಿಕಲ್‌ ಶಿಕ್ಷಣದ ವಿವರ

ಮಾನುಷಿ ಚಿಲ್ಲರ್‌, ಸಾಯಿ ಪಲ್ಲವಿ ಸೇರಿದಂತ ಹಲವು ನಟಿಯರು ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ಕೆಲವು ನಟಿಯರು ಮೆಡಿಕಲ್‌ ಶಿಕ್ಷಣ ಪಡೆದಿದ್ದಾರೆ. ಇನ್ನು ಕೆಲವು ನಟಿಯರು ಡಾಕ್ಟರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಪಡೆದ ಭಾರತೀಯ ನಟಿಯರು: ಸಾಯಿ ಪಲ್ಲವಿ, ಶ್ರೀಲೀಲಾ ಮಾತ್ರವಲ್ಲ; ಇಲ್ಲಿದೆ 6 ನಟಿಯರ ಮೆಡಿಕಲ್‌ ಶಿಕ್ಷಣದ ವಿವರ
ವೈದ್ಯಕೀಯ ಶಿಕ್ಷಣ ಪಡೆದ ಭಾರತೀಯ ನಟಿಯರು: ಸಾಯಿ ಪಲ್ಲವಿ, ಶ್ರೀಲೀಲಾ ಮಾತ್ರವಲ್ಲ; ಇಲ್ಲಿದೆ 6 ನಟಿಯರ ಮೆಡಿಕಲ್‌ ಶಿಕ್ಷಣದ ವಿವರ

ಭಾರತದ ಚಿತ್ರರಂಗದಲ್ಲಿ ಕಡಿಮೆ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಿದ ನಟಿಯರು ಇದ್ದಾರೆ. ಇದೇ ರೀತಿ ಅತ್ಯುತ್ತಮ ಶಿಕ್ಷಣ ಪಡೆದು ಸಿನಿಮಾ ರಂಗದಲ್ಲಿ ಜನಪ್ರಿಯತೆ ಪಡೆದವರು ಇದ್ದಾರೆ. ಸಾಕಷ್ಟು ನಟಿಯರು ಉನ್ನತ ಶಿಕ್ಷಣ ಪಡೆದಿದ್ದಾರೆ. ಕೆಲವು ನಟಿಯರು ಮೆಡಿಕಲ್‌ ಶಿಕ್ಷಣ ಪಡೆದಿದ್ದಾರೆ. ಇನ್ನು ಕೆಲವು ನಟಿಯರು ಡಾಕ್ಟರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಲವು ನಟಿಯರು ವೈದ್ಯಕೀಯ ಶಿಕ್ಷಣ ಪಡೆದು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು, ಮುಂದಿನ ದಿನಗಳಲ್ಲಿ ಆಕ್ಟಿಂಗ್‌ ಸಾಕು ಎನಿಸಿದರೆ ಡಾಕ್ಟರ್‌ ಆಗಿಯೂ ಕೆಲಸ ಮಾಡಬಹುದು. ಮಾನುಷಿ ಚಿಲ್ಲರ್‌, ಸಾಯಿ ಪಲ್ಲವಿ ಸೇರಿದಂತ ಹಲವು ನಟಿಯರು ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ.

ಶ್ರೀಲೀಲಾ

ದಕ್ಷಿಣ ಭಾರತದ ಜನಪ್ರಿಯ ನಟಿ ಶ್ರೀಲೀಲಾ ಅವರು ಎಂಬಿಬಿಎಸ್‌ ಪದವಿ ಪಡೆದಿದ್ದಾರೆ. ತನ್ನ ವೈದ್ಯಕೀಯ ಶಿಕ್ಷಣವನ್ನು 2021ರಲ್ಲಿ ಪೂರೈಸಿದ್ದಾರೆ. ಇವರ ತಾಯಿ ಗೈನಾಲಕಜಸ್ಟ್‌. ಅಮ್ಮನಂತೆ ಡಾಕ್ಟರ್‌ ಆಗಲು ಬಯಸಿ ಮೆಡಿಕಲ್‌ ಶಿಕ್ಷಣ ಪಡೆದಿದ್ದರು. ಆದರೆ, ಚಿತ್ರರಂಗಕ್ಕೆ ಎಂಟ್ರಿ ನೀಡಿದರು.

ಶಿವಾನಿ ರಾಜಶೇಖರ್‌

ನಟಿ ಶಿವಾನಿ ರಾಜಶೇಖರ್‌ ಅವರು ಹೈದರಾಬಾದ್‌ನ ಅಪೊಲೊ ಮೆಡಿಕಲ್‌ ಕಾಲೇಜಿಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ಇದರೊಂದಿಗೆ ಫ್ಲವರ್‌ ಮೆಡಿಸಿನ್‌,ಆಯುರ್ವೇದ ಥೆರಪಿಗೆ ಸಂಬಂಧಪಟ್ಟಂತೆಯೂ ಶಿಕ್ಷಣ ಪಡೆದಿದ್ದಾರೆ. ಫೆಬ್ರವರಿ 2024ರಲ್ಲಿ ಇವರು ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಮಾನುಷಿ ಚಿಲ್ಲರ್‌

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌ ಅವರು ಆಲ್‌ ಇಡಿಯಾ ಪ್ರಿ ಮೆಡಿಕಲ್‌ ಟೆಸ್ಟ್‌ ಉತ್ತೀರ್ಣರಾಗಿದ್ದಾರೆ. ಅದು ಈಗ ನೀಟ್‌ಎಕ್ಸಾಂ ಎಂದಾಗಿದೆ. ಇವರು ಸೋನಿಪತ್‌ನ ಭಗತ್‌ ಪೋಲ್‌ ಸಿಂಗ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದಿದ್ದಾರೆ.

ಆದಿತಿ ಶಂಕರ್‌

ತಮಿಳು ಸಿನಿಮಾ ನಿರ್ದೇಶಕ ಶಂಕರ್‌ ಅವರ ಮಗಳು ಆದಿತಿ ಶಂಕರ್‌ ಕೂಡ ಡಾಕ್ಟ್‌. ಇವರು ರಾಮಚಂದ್ರ ಯುನಿವರ್ಸಿಟಿಯಲ್ಲಿ ಎಂಬಿಬಎಸ್‌ ಪದವಿ ಪಡೆದಿದ್ದಾರೆ. ಇವು ವಿರುಮನ್‌, ಮಾವೀರನ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಾಯಿ ಪಲ್ಲವಿ

ಸಹಜ ಸುಂದರಿ ಸಾಯಿ ಪಲ್ಲವಿ ಕೂಡ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. 2016ರಲ್ಲಿ ಜಾರ್ಜಿಯಾದ ಟಿಬ್ಲಿಸಿ ಸ್ಟೇಟ್‌ ಮೆಡಿಕಲ್‌ ಯೂನಿವರ್ಸಿಟಿಯಲ್ಲ ವೈದ್ಯಕೀಯ ಶಿಕ್ಷಣ ಪಡೆದರು. 2020ರಲ್ಲಿ ಸಾಯಿ ಪಲ್ಲವಿ ಅವರು ತಿರುಚ್ಚಿಯಲ್ಲಿ ಫಾರಿನ್‌ ಮೆಡಿಕಲ್‌ ಗ್ರಾಜ್ಯುವೇಟ್‌ ಎಕ್ಸಾಮಿನೇಷನ್‌ (ಎಫ್‌ಎಂಜಿಇ) ಬರೆದರು. ವೈದ್ಯಕೀಯ ಶಿಕ್ಷಣ ಪಡೆದಿದ್ದರೂ ಇವರು ಭಾರತದಲ್ಲಿ ಮೆಡಿಕಲ್‌ ಪ್ರಾಕ್ಟಿಸನರ್‌ ಆಗಿ ನೋಂದಾಯಿಸಿಕೊಂಡಿಲ್ಲ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in