Saif Ali Khan: ಪ್ರಾಣಾಪಾಯದಿಂದ ಪಾರಾದ ಸೈಫ್ ಅಲಿ ಖಾನ್; ಇಲ್ಲಿದೆ ಡಾಕ್ಟರ್ ನೀಡಿದ ಸಂಪೂರ್ಣ ಮಾಹಿತಿ
ನಟ ಸೈಫ್ ಅಲಿ ಖಾನ್ ಚಿಕಿತ್ಸೆ ಪಡೆದ ನಂತರ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ತಂಡ ಖಚಿತಪಡಿಸಿದೆ. ಡಾ. ನಿತಿನ್ ಡಾಂಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಸೈಫ್ ಅಲಿ ಖಾನ್ ಚಿಕಿತ್ಸೆ ಪಡೆದ ನಂತರ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ತಂಡ ಖಚಿತಪಡಿಸಿದೆ. ಗುರುವಾರ ಮುಂಜಾನೆ ಸೈಫ್ ಅಲಿ ಖಾನ್ ಮನೆಯಲ್ಲಿ ಕಳ್ಳನಿಂದ ಚೂರಿ ಇರಿತವಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರು ಗಾಯಗಳಾಗಿದ್ದು 2 ಗಾಯಗಳು ಆಳವಾಗಿದ್ದವು. ಒಂದು ಗಾಯಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಸರ್ಜರಿಯ ನಂತರ ಅವರು ಆರೋಗ್ಯವಾಗಿದ್ದಾರೆ. ಯಾವುದೇ ಅಪಾಯವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಬಗ್ಗೆ ಡಾಕ್ಟರ್ ಮಾತನಾಡಿದ್ದರು.
ಸೈಫ್ ಅಲಿ ಖಾನ್ ತಂಡ ನೀಡಿದ ಮಾಹಿತಿ
“ ಸೈಫ್ ಅಲಿ ಖಾನ್ ಅವರು ಶಸ್ತ್ರಚಿಕಿತ್ಸೆ ಮುಗಿದಿದೆ. ಅಪಾಯದಿಂದ ಪಾರಾಗಿದ್ದಾರೆ. ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಇದೆ ಎಂದು ಡಾಕ್ಟರ್ ಗಮನಿಸುತ್ತಿದ್ದಾರೆ. ಎಲ್ಲಾ ಕುಟುಂಬ ಸದಸ್ಯರು ಸುರಕ್ಷಿತವಾಗಿದ್ದಾರೆ ಮತ್ತು ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ಧಾರೆ. ತಂಡವು ವೈದ್ಯರು ಹಾಗೂ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದೆ.
“ಲೀಲಾವತಿ ಆಸ್ಪತ್ರೆಯಲ್ಲಿರುವ ಡಾ. ನಿರಜ್ ಉತ್ತಮಿ, ಡಾ. ನಿತಿನ್ ಡಾಂಗೆ, ಡಾ. ಲೀನಾ ಜೈನ್ ಮತ್ತು ತಂಡಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ” ಎಂದು ತಂಡ ತಿಳಿಸಿದೆ. ದಾಳಿಯ ಸುದ್ದಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಎಲ್ಲರೂ ಶಾಕ್‌ನಲ್ಲಿದ್ದಾರೆ. ತನ್ನ ಕುಟುಂಬವನ್ನು ಕಾಪಾಡಲು ನಟ ಸೈಫ್ ಅಲಿ ಖಾನ್ ಇಷ್ಟೆಲ್ಲ ಸಾಹಸ ಮಾಡಿದ್ದಾರೆ. 2 ಗಂಭೀರ ಗಾಯಗಳಾಗಿದ್ದು ಶಸ್ತ್ರಚಿಕಿತ್ಸೆ ಮುಗಿದಿದೆ. ದಾಳಿಕೋರನನ್ನು ಬಂಧಿಸಲು ಪೋಲೀಸ್ ತಂಡಗಳು ಕೆಲಸ ಮಾಡುತ್ತಿದೆ.
ಸೈಫ್ ಅಲಿ ಖಾನ್ ಗಾಯಗೊಂಡದ್ದು ಹೇಗೆ?
ಅಪರಿಚಿತ ವ್ಯಕ್ತಿಯಿಂದ ದಾಳಿ
ಸೈಫ್ ಮತ್ತು ಕರೀನಾ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿ ಕಳ್ಳತನಕ್ಕೆ ಪ್ರಯತ್ನಿಸುತ್ತಾನೆ. ಆದರೆ ಅವನನ್ನು ತಡೆಯಲು ಪ್ರಯತ್ನ ಮಾಡಲಾಗುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ.
ವ್ಯಕ್ತಿಯನ್ನು ತಡೆಯಲು ಮುಂದಾದ ನಟನಿಗೆ ಇರಿತ
ಆ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಸ್ವತಃ ಅಲ್ಲಿಗೆ ಬಂದು ತಡೆಯುವ ಯತ್ನ ಮಾಡುತ್ತಾರೆ. ಆದರೆ ಆ ಅಪರಿಚಿತ ಕಳ್ಳ ಚೂರಿ ಚುಚ್ಚುತ್ತಾನೆ. ಬೆನ್ನು, ಕತ್ತು ಮತ್ತು ತೋಳಿನ ಭಾಗಕ್ಕೆ ಗಂಭೀರವಾದ ಗಾಯಗಳಾಗುತ್ತದೆ.
ಆಸ್ಪತ್ರೆಗೆ ದಾಖಲು
ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತದೆ. ಇಬ್ರಾಹಿಂ ಅಲಿ ಖಾನ್ ಅವರು ಮುಂಜಾನೆ 3.30 ರ ಸುಮಾರಿಗೆ ನಟನನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ರಕ್ತದ ಮಡುವಿನಲ್ಲಿದ್ದ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.
ಕುಟುಂಬದ ಇತರರು ಸುರಕ್ಷಿತವಾಗಿದ್ದಾರೆ
ಸೈಫ್ ಮತ್ತು ಕರೀನಾ ಅವರನ್ನು ಹೊರತುಪಡಿಸಿ, ಅವರ ಇಬ್ಬರು ಮಕ್ಕಳಾದ ತೈಮೂರ್ ಮತ್ತು ಜೆಹ್ ಕೂಡ ಹಲ್ಲೆ ನಡೆದಾಗ ಮನೆಯಲ್ಲಿದ್ದರು.
ಚಿಕಿತ್ಸೆಯ ಬಗ್ಗೆ ಮಾಹಿತಿ
ನಟನಿಗೆ 6 ಗಾಯಗಳಾಗಿರುತ್ತದೆ. ಬೆನ್ನು ಹಾಗೂ ತೋಳು ಕತ್ತು ಹೀಗೆ ನಾನಾ ಕಡೆಗಳಲ್ಲಿ ಚೂರಿ ಇರಿತ ಆಗಿದೆ. ಚೂರಿ ಅವರ ದೇಹಕ್ಕೆ ಚುಚ್ಚಿಕೊಂಡೇ ಇತ್ತು. ಅದನ್ನು ತೆಗೆಯುವಾಗ ಬೆನ್ನು ಮೂಳೆಯ ದ್ರವ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ನಂತರ 10 ಹೊಲಿಗೆಗಳನ್ನು ಹಾಕಲಾಗಿದೆ. ಬೆನ್ನುಮೂಳೆಯ ದ್ರವ ಸೋರಿಕೆಯನ್ನು ನಿಲ್ಲಿಸಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬೆನ್ನುಹುರಿಯಲ್ಲಿ ಹುದುಗಿರುವ 2.5 ಇಂಚಿನ ಚಾಕು ಚೂರನ್ನು ತೆಗೆಯಲಾಗಿದೆ. ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾಕ್ಟರ್ ನಿತಿನ್ ಡಾಂಗೆ ಮಾಹಿತಿ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
