ಅಜೇಯ್‌ ರಾವ್‌ ನಟನೆಯ ಯುದ್ಧಕಾಂಡ ನೋಡಿದ್ರ? ಇದೇ ರೀತಿಯ ಕೋರ್ಟ್‌ ಡ್ರಾಮಾ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಅಜೇಯ್‌ ರಾವ್‌ ನಟನೆಯ ಯುದ್ಧಕಾಂಡ ನೋಡಿದ್ರ? ಇದೇ ರೀತಿಯ ಕೋರ್ಟ್‌ ಡ್ರಾಮಾ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

ಅಜೇಯ್‌ ರಾವ್‌ ನಟನೆಯ ಯುದ್ಧಕಾಂಡ ನೋಡಿದ್ರ? ಇದೇ ರೀತಿಯ ಕೋರ್ಟ್‌ ಡ್ರಾಮಾ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

ಭಾರತೀಯ ಚಿತ್ರರಂಗದಲ್ಲಿ ವಿವಿಧ ಜಾನರ್‌ನ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ವಿವಿಧ ಭಾಷೆಗಳಲ್ಲಿ ಕೋರ್ಟ್ ರೂಮ್ ಡ್ರಾಮಾ ಹಿನ್ನೆಲೆಯ ಚಿತ್ರಗಳು ಬಿಡುಗಡೆಯಾಗಿವೆ. ಭಾರತದ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ ಸಿನಿಮಾಗಳ ಪಟ್ಟಿ ಇಲ್ಲಿದೆ.

ಅಜೇಯ್‌ ರಾವ್‌ ನಟನೆಯ ಯುದ್ಧಕಾಂಡ ನೋಡಿದ್ರ? ಇದೇ ರೀತಿಯ ಕೋರ್ಟ್‌ ಡ್ರಾಮಾ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ
ಅಜೇಯ್‌ ರಾವ್‌ ನಟನೆಯ ಯುದ್ಧಕಾಂಡ ನೋಡಿದ್ರ? ಇದೇ ರೀತಿಯ ಕೋರ್ಟ್‌ ಡ್ರಾಮಾ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

ಕೋರ್ಟ್‌, ಕ್ರೈಮ್‌ ಕಥಾಹಿನ್ನೆಲೆಯ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬಿಡುಗಡೆಯಾಗಿವೆ. ಆದರೆ ಈ ಹಿನ್ನೆಲೆಯ ಎಲ್ಲಾ ಸಿನಿಮಾಗಳು ಯಶಸ್ಸು ಕಂಡಿಲ್ಲ. ಇತ್ತೀಚೆಗೆ ಕೋರ್ಟ್ ರೂಮ್ ಕಥಾಹಂದರದ ಸಿನಿಮಾಗಳು ಹೆಚ್ಚು ಬಿಡುಗಡೆಯಾಗುತ್ತಿವೆ. ಮಾತ್ರವಲ್ಲ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಕನ್ನಡ ಯುದ್ಧಕಾಂಡ ಸೇರಿ ಭಾರತದ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾಗಳು ಯಾವುವು ನೋಡಿ.

ಜನ ಗಣ ಮನ

2022 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರವಿದು. ಈ ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಡಿಜೊ ಜೋಸ್ ಆಂಥನಿ ನಿರ್ದೇಶನವಿದೆ. ಪ್ರಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಕಾಲೇಜು ಪ್ರಾಧ್ಯಪಕರ ಕೊಲೆಯ ನಂತರ ಏನೇನು ನಡೆಯುತ್ತದೆ ಎಂಬುದು ಈ ಚಿತ್ರದಲ್ಲಿ ಅಡಕವಾಗಿದೆ.

ಓಎಂಜಿ 2

2023ರಲ್ಲಿ ಬಿಡುಗಡೆಯಾದ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಿಂದಿ ಚಿತ್ರವಿದು. 2012ರಲ್ಲಿ ಬಿಡುಗಡೆಯಾದ ಓಹ್ ಮೈ ಗಾಡ್ ಚಿತ್ರದ ಮುಂದುವರಿದ ಭಾಗವಿದು. ಅಮಿತ್ ರೈ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪಂಕನ್ ತ್ರಿಪಾಠಿ, ಯಾಮಿ ಗೌತಮ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಜೈ ಭೀಮ್‌

2021ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಜೈ ಭೀಮ್ ಭಾರತದಲ್ಲಿ ಸಂಚಲನ ಮೂಡಿಸಿತ್ತು. ಸೂರ್ಯ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ ಹಿನ್ನೆಲೆಯ ಕಥೆಯನ್ನು ಹೊಂದಿತ್ತು. ಟಿಜೆ ಜ್ಞಾನವೇಲ್ ನಿರ್ದೇಶನದ ಈ ಸಿನಿಮಾ ಸಾಕಷ್ಟು ಹೆಸರು ಮಾಡಿತ್ತು.

ದಿ ಸ್ಟೇಟ್ vs ಜಾಲಿ ಎಲ್‌ಎಲ್‌ಬಿ 2

ಇದು 2017ರಲ್ಲಿ ಬಿಡುಗಡೆಯಾದ ಕೋರ್ಟ್ ರೂಮ್ ಕಥಾಹಂದರದ ಸಿನಿಮಾ. ಈ ಹಿಂದಿ ಸಿನಿಮಾದಲ್ಲೂ ಅಕ್ಷಯ್‌ ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಸುಭಾಷ್ ಕಪೂರ್ ನಿರ್ದೇಶನದ ಈ ಸಿನಿಮಾದಲ್ಲಿ ಅರ್ಶದ್ ವಾರ್ಸಿ, ಹುಮಾ ಖುರೇಶಿ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೋರ್ಟ್ ಸ್ಟೇಟ್ vs ನೋ ಬಡಿ

ಇದು ಮಾರ್ಚ್ 14 ರಂದು ಬಿಡುಗಡೆಯಾದ ಕೋರ್ಟ್ ರೂಮ್ ಡ್ರಾಮಾ ಹೊಂದಿರುವ ಸೂಪರ್ ಹಿಟ್ ಸಿನಿಮಾ. ಪ್ರಿಯದರ್ಶಿ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಜಗದೀಶ್ ಮೊದಲ ಬಾರಿಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಸಿನಿಮಾ ಇದಾಗಿತ್ತು.

ಪಿಂಕ್

ಅಮಿತಾಬ್‌ ಬಚ್ಚನ್‌, ತಾಪ್ಸಿ ಪನ್ನ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಪಿಂಕ್ ಸಿನಿಮಾ 2016 ರಲ್ಲಿ ಬಿಡುಗಡೆಯಾಗಿತ್ತು. ಅನಿರುಧ್‌ ರಾಯ್ ಚೌಧರಿ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು.

ಯುದ್ಧಕಾಂಡ

ಅಜಯ್ ರಾವ್ ನಟನೆ, ನಿರ್ಮಾಣದ ಕನ್ನಡ ಚಿತ್ರ ಯದ್ಧಕಾಂಡ ಏಪ್ರಿಲ್ 18ಕ್ಕೆ ತೆರೆಕಂಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಅತ್ಯಾಚಾರಕೊಳಗಾದ ಹೆಣ್ಣುಮಗಳ ಕಥೆ ಹಿಂದಿರುವ ಈ ಸಿನಿಮಾ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.