ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್‌ಗೆ ಆಗಿದ್ದಾದರೂ ಏನು?
ಕನ್ನಡ ಸುದ್ದಿ  /  ಮನರಂಜನೆ  /  ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್‌ಗೆ ಆಗಿದ್ದಾದರೂ ಏನು?

ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್‌ಗೆ ಆಗಿದ್ದಾದರೂ ಏನು?

ಗಾಯಕ ಸೋನು ನಿಗಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತಿಯಾದ ಬೆನ್ನು ನೋವಿನ ನಡುವೆಯೂ ಮಹಾರಾಷ್ಟ್ರದ ಪುಣೆಯಲ್ಲಿನ ಲೈವ್‌ ಕಾನ್ಸರ್ಟ್‌ ಮುಗಿಸಿ, ಚಿಕಿತ್ಸೆಗೆ ತೆರಳಿದ್ದಾರೆ. ಆಸ್ಪತ್ರೆ ಬೆಡ್‌ ಮೇಲೆಯೇ ಆ ನೋವಿನ ಕ್ಷಣ ಹೇಗಿತ್ತು ಎಂದು ವಿವರಿಸಿದ್ದಾರೆ.

ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್‌ಗೆ ಆಗಿದ್ದಾದರೂ ಏನು?
ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್‌ಗೆ ಆಗಿದ್ದಾದರೂ ಏನು?

Sonu Nigam Hospitalised: ಖ್ಯಾತ ಗಾಯಕ ಸೋನು ನಿಗಂ ತಮ್ಮ ಮಧುರ ಕಂಠದ ಮೂಲಕವೇ ಇಡೀ ದೇಶದ ಮನಗೆದ್ದಿದ್ದಾರೆ. ಸಂಗೀತ ಲೋಕದಲ್ಲಿ ಯಾರೂ ಅಳಿಸದ ಹಲವು ದಾಖಲೆಗಳನ್ನೂ ಬರೆದಿದ್ದಾರೆ ಈ ಗಾಯಕ. ಇದೀಗ ಇದೇ ಸಿಂಗರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಲೈವ್‌ ಕಾನ್ಸರ್ಟ್‌ ಮುಗಿಯುತ್ತಿದ್ದಂತೆ, ಅತೀವ ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

ಲೈವ್‌ ಕಾನ್ಸರ್ಟ್‌ಗೂ ಮೊದಲೇ ಅತಿಯಾದ ಬೆನ್ನು ನೋವಿನಿಂದ ಬಳಲುತ್ತಿದ್ದ ಸೋನು ನಿಗಂ, ಯಾವುದೇ ಕಾರಣಕ್ಕೂ ಸಂಗೀತ ಕಾರ್ಯಕ್ರಮ ನಿಲ್ಲಬಾರದು ಎಂಬ ಕಾರಣಕ್ಕೆ, ಅದೇ ನೋವಿನಲ್ಲಿಯೇ ವೇದಿಕೆ ಮೇಲೆ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಶೋ ಮುಗಿಯುತ್ತಿದ್ದಂತೆ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೈವ್‌ ಕಾನ್ಸರ್ಟ್‌ಗೂ ಮುನ್ನದ ಬೆನ್ನು ನೋವಿನ ವಿಡಿಯೋ ಮತ್ತು ಶೋ ಮುಗಿದ ಬಳಿಕದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಸೋನು ನಿಗಮ್.

ತಾಳಲಾರದ ನೋವು

ವೇದಿಕೆ ಮೇಲೆ ಏನೆಲ್ಲ ಆಯ್ತು ಅನ್ನೋದನ್ನು ಹೇಳಿದ ಸೋನು ನಿಗಂ, "ನನ್ನ ಜೀವನದ ಕಷ್ಟದ ದಿನವಿದು. ಯಾವುದೇ ಕಾರ್ಯಕ್ರಮಕ್ಕೂ ಮೊದಲು ಇಷ್ಟೊಂದು ನೋವನ್ನು ನಾನು ಅನುಭವಿಸಿಲ್ಲ. ವೇದಿಕೆ ಮೇಲೆ ಹಾಡುತ್ತ ಅತ್ತಿಂದಿತ್ತ ಓಡಾಡುತ್ತಿದ್ದೆ. ಹೀಗಿರುವಾಗಲೇ ಅತೀವ ನೋವು ಕಾಣಿಸಿಕೊಂಡಿತು. ಹೇಗೋ ಅದನ್ನು ಮ್ಯಾನೇಜ್‌ ಮಾಡಿದೆ. ಜನರ ಪ್ರೀತಿ ನೋಡಿ, ಆ ನೋವಿನಲ್ಲಿಯೂ ಹಾಡಿದೆ, ಕುಣಿದೆ. ಆ ನೋವು ಎಷ್ಟಿತ್ತು ಎಂದರೆ, ಯಾರೋ ನನ್ನ ಬೆನ್ನಿಗೆ ಸೂಜಿ ಚುಚ್ಚಿದಂತೆ ಅನಿಸುತ್ತಿತ್ತು. ಚೂರು ಆಚೀಚೆ ಆದರೂ, ತಾಳಲಾರದ ನೋವು" ಎಂದು ಆಸ್ಪತ್ರೆ ಬೆಡ್‌ ಮೇಲೆ ಮಲಗಿಕೊಂಡೇ ವಿಡಿಯೋ ಮೂಲಕ ಹೇಳಿದ್ದಾರೆ ಸೋನು ನಿಗಂ.

ಸರಸ್ವತಿಯೇ ನನ್ನ ಕೈ ಹಿಡಿದಳು..

ಈ ಕೆಟ್ಟ ದಿನದ ಬಗ್ಗೆ ವಿಡಿಯೋ ಜತೆಗೆ "ಕಳೆದ ರಾತ್ರಿ ಸರಸ್ವತಿಯೇ ನನ್ನ ಕೈ ಹಿಡಿದಳು" ಎಂದೂ ಕ್ಯಾಪ್ಷನ್‌ ನೀಡಿದ್ದಾರೆ. ಇನ್ನು ಲೈವ್ ಶೋ‌ ಶುರುವಾಗುವುದಕ್ಕೂ ಮುನ್ನ ದಿನ, ಬೆನ್ನಿನ ಮಸಾಜ್‌ ಮಾಡಿಸಿಕೊಂಡಿದ್ದಾರೆ ಸೋನು. ಆ ವಿಡಿಯೋಕ್ಕೆ ಹೀಗೆ ಬರೆದುಕೊಂಡಿದ್ದಾರೆ. "ಈ ವರ್ಷ ಅಪಘಾತಗಳು ಮತ್ತು ವೈದ್ಯಕೀಯ ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ಕೆಲವರು ಭವಿಷ್ಯ ನುಡಿದಿದ್ದರು. ಅವರು ಹೇಳಿದ್ದು ಸರಿ ಎಂದು ನಾನು ಭಾವಿಸುತ್ತೇನೆ. ಪುಣೆಯಲ್ಲಿ ನಾನು ವೇದಿಕೆಯ ಮೇಲೆ ಈ ರೀತಿಯಲ್ಲಿ ಹೋಗುತ್ತಿದ್ದೇನೆ. ಸರಸ್ವತಿ ದೇವಿಯು ಇಂದು ನನ್ನ ಕೈಯನ್ನು ಇನ್ನಷ್ಟು ಬಲವಾಗಿ ಹಿಡಿಯಲಿ" ಎಂದಿದ್ದರು.

Whats_app_banner