Dr Bro: ನೇಪಾಳದ ಜೀವಂತ ದೇವತೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದ ಡಾಕ್ಟರ್ ಬ್ರೋ; ಕುಮಾರಿಯರ ಜೀವನ ಹೇಗಿರುತ್ತೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Dr Bro: ನೇಪಾಳದ ಜೀವಂತ ದೇವತೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದ ಡಾಕ್ಟರ್ ಬ್ರೋ; ಕುಮಾರಿಯರ ಜೀವನ ಹೇಗಿರುತ್ತೆ ನೋಡಿ

Dr Bro: ನೇಪಾಳದ ಜೀವಂತ ದೇವತೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದ ಡಾಕ್ಟರ್ ಬ್ರೋ; ಕುಮಾರಿಯರ ಜೀವನ ಹೇಗಿರುತ್ತೆ ನೋಡಿ

Dr Bro: ಡಾಕ್ಟರ್ ಬ್ರೋ ತಮ್ಮ ವಿಭಿನ್ನ ಅನುಭವಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತ, ಈ ಬಾರಿ ನೇಪಾಳದ ಜೀವಂತ ದೇವತೆಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಕುಮಾರಿ ಎಂದರೆ ಯಾರು? ಜೀವಂತ ದೇವತೆಗಳು ಹೇಗಿರುತ್ತಾರೆ ನೋಡಿ..

ನೇಪಾಳದ ಜೀವಂತ ದೇವತೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದ ಡಾಕ್ಟರ್ ಬ್ರೋ
ನೇಪಾಳದ ಜೀವಂತ ದೇವತೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದ ಡಾಕ್ಟರ್ ಬ್ರೋ (ಡಾ. ಬ್ರೋ ಯುಟ್ಯೂಬ್‌ )

ಡಾಕ್ಟರ್ ಬ್ರೋ ತಮ್ಮ ವಿಭಿನ್ನ ಅನುಭವಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತ ಸಾಹಸಮಯ ಸನ್ನಿವೇಷಗಳನ್ನು ಎದುರಿಸುತ್ತಾ ಸಾಗುತ್ತಿರುತ್ತಾರೆ. ತಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ವಿಡಿಯೋ ಮಾಡಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ಈ ಬಾರಿ ಡಾಕ್ಟರ್ ಬ್ರೋ ನೇಪಾಳಕ್ಕೆ ಹೋದಾಗಿನ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲಿನ ಜೀವಂತ ದೇವತೆಗಳು ಅಂದರೆ ಕುಮಾರಿಯರ ಪರಿಚಯ ಹಾಗೂ ಅವರ ಜೀವನಶೈಲಿ ಹೇಗಿರುತ್ತದೆ ಎಂಬ ವಿಚಾರದ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಸರಳ ನಿರೂಪಣೆಯ ಮೂಲಕ ಎಲ್ಲವನ್ನೂ ವಿವರಿಸಿದ್ದಾರೆ.

ಕುಮಾರಿಯರು ಎಂದರೆ ಯಾರು?

ಕುಮಾರಿಯರು ಎಂದರೆ ಇನ್ನೂ ಋತುಮತಿಯಾಗದ ದೈವ ಸ್ಪರೂಪಿ ಹೆಣ್ಣು ಮಗಳು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅದೇ ರೀತಿ ಬೇರೆ ಬೇರೆ ದೇಶಗಳಲ್ಲೂ ಅಲ್ಲಿನ ಆಚಾರ, ವಿಚಾರಗಳು ಭಿನ್ನವಾಗಿರುತ್ತದೆ. ಅಂತಹದೇ ಒಂದು ಭಿನ್ನ ಆಚರಣೆಯೇ ನೇಪಾಳದ ಜೀವಂತ ದೇವತೆಗಳು. ಆಚರಣೆ, ಪೂಜೆ ದೇವರ ರೂಪ ಯಾವುದು ಬೇಕಾದರೂ ಬದಲಾಗಬಹುದು. ಆದರೆ, ಎಲ್ಲರೊಳಗಡೆ ಇರುವುದು ಭಕ್ತಿಯೊಂದೇ. ಆ ಕಾರಣಕ್ಕಾಗಿ ಯಾವುದನ್ನೂ ತಪ್ಪು ಅಥವಾ ಸರಿ ಎಂದು ನಿರ್ಣಯ ಮಾಡಲು ಸಾಧ್ಯವಿಲ್ಲ ಎನ್ನುತ್ತಲೇ ನೇಪಾಳದ ಕುಮಾರಿ ಆಚರಣೆಯ ಬಗ್ಗೆ, ಅಲ್ಲಿನ ಜನರ ಭಕ್ತಿಯ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯು ಆಸಕ್ತಿದಾಯಕವಾಗಿದೆ.

ಇಬ್ಬರು ಕುಮಾರಿಯರನ್ನು ವಿಡಿಯೋದಲ್ಲಿ ತೋರಿಸಿದ್ದು, ಇನ್ನೋರ್ವ ಕುಮಾರಿ ಈಗ ನಮ್ಮ ನಿಮ್ಮಂತೆಯೇ ಸರಳ ಜೀವನ ನಡೆಸುತ್ತಿದ್ದಾರೆ. ಕುಮಾರಿಯನ್ನು ಭೇಟಿ ಮಾಡಲು ಹೋಗುವ ಮುನ್ನ ಡಾಕ್ಟರ್ ಬ್ರೋ ಅಲ್ಲಿನ ಯುವತಿಯೊಬ್ಬಳ ಜತೆ ಮಾತಾಡಿ ಕುಮಾರಿಗೆ ಏನೆಲ್ಲ ಇಷ್ಟವಾಗುತ್ತದೆ ಎಂದು ಮೊದಲೇ ತಿಳಿದುಕೊಂಡು ಅವುಗಳನ್ನು ಕೊಂಡುಕೊಂಡಿದ್ದಾರೆ. ಕುಮಾರಿಗೆ ಸೌಭಾಗ್ಯದಾನಕ್ಕೆ ಕೊಡುವ ಎಲ್ಲ ವಸ್ತುಗಳನ್ನು ಹಾಗೂ ದೇವಿಗೆ ಇಷ್ಟವಾಗುವ ಹಣ್ಣು ಹಂಪಲುಗಳನ್ನು ತೆಗೆದುಕೊಂಡು ಹೋಗಿ ದರ್ಶನ ಮಾಡಿ ಆಶಿರ್ವಾದ ಪಡೆದಿದ್ದಾರೆ.

ಶಾಲೆಗೆ ಹೋಗಿ ಅವರು ಕಲಿಯಲು ಸಾಧ್ಯವಾಗುವುದಿಲ್ಲ. ಆದರೂ ಅವರಿಗೆ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಕರೇ ಕುಮಾರಿ ಇರುವಲ್ಲಿಗೆ ಬಂದು ಪಾಠ ಮಾಡುತ್ತಾರೆ. ಇನ್ನು ಕೆಲ ಕಡೆಗಳಲ್ಲಿ ಕುಮಾರಿಯರು ಕೂಡ ಶಾಲೆಗೆ ಹೋಗುತ್ತಾರೆ. ಡಾಕ್ಟರ್ ಬ್ರೋ ದರ್ಶನ ಮೊದಲು ದರ್ಶನ ಮಾಡಿದ ಕುಮಾರಿ ಯಾವಾಗಲೂ ತಮ್ಮ ಭಾವನೆಯನ್ನು ಬದಲಿಸುವುದೇ ಇಲ್ಲವಂತೆ. ಆದರೆ, ಕುಮಾರಿಯರು ನಗುವುದು ಕಡಿಮೆ, ಅವರು ತಮ್ಮ ಮುಖದಲ್ಲಿ ಯಾವುದೇ ಭಾವನೆಗಳನ್ನೂ ತೋರಿಸುವುದಿಲ್ಲ.

ಕುಮಾರಿಯರ ಆಯ್ಕೆ ಹೇಗೆ?
ಕುಮಾರಿಯರನ್ನು ಆಯ್ಕೆ ಮಾಡಲೂ ಸಹ ತುಂಬಾ ವಿಧಾನಗಳಿರುತ್ತವೆ. ತುಂಬಾ ಕಠಿಣವಾದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕಠಿಣ ಪರೀಕ್ಷೆ ಮಾಡಿದ ನಂತರ ಆ ಎಲ್ಲ ಪರೀಕ್ಷೆಗಳನ್ನು ಜಯಿಸಿದರೆ ಮಾತ್ರ ಆ ಹೆಣ್ಣು ಮಗಳನ್ನು ಜೀವಂತ ದೇವಿ ಕುಮಾರಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. 32 ಪರೀಕ್ಷೆಗಳನ್ನು ಮಾಡಲಾಗುತ್ತದೆ. ವಿಜಯದಶಮಿಯ ರಾತ್ರಿ 108 ಎಮ್ಮೆ, 108 ಕುರಿಗಳನ್ನು ಕಡಿಯಲಾಗುತ್ತದೆ. ನಂತರ ಒಂದು ಕೋಣೆಯಲ್ಲಿ ಆ ಎಲ್ಲ ಪ್ರಾಣಿಗಳ ತಲೆಗಳನ್ನು ಹಾಕುತ್ತಾರೆ. ಒಂದು ಇಡೀ ದಿನ ಕುಮಾರಿ ಆಗುವವರು ಅಲ್ಲಿರಬೇಕು. ಇದ್ದರೆ, ಅವರನ್ನು ಕುಮಾರಿ ಎಂದು ಪೂಜಿಸಲಾಗುತ್ತದೆ.

ಕುಮಾರಿಯ ತಾಯಿಯ ಭಾವನೆ ಏನು?

ವಿಶೇಷವಾದ ಅರಮನೆಯಲ್ಲಿ ಕುಮಾರಿಯನ್ನು ಇರಿಸಲಾಗುತ್ತದೆ. 13 ರಿಂದ 15 ವರ್ಷಗಳ ನಂತರ ಅವರು ಋತುಮತಿಯಾದಾಗ ಈ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಆಮೇಲೆ ಎಲ್ಲರಂತೆ, ಸಾಮಾನ್ಯರಂತೆ ಜೀವನ ಮಾಡಬೇಕಾಗುತ್ತದೆ. ಮಗುವಿನ ತಂದೆ, ತಾಯಿಗೆ ಯಾವ ರೀತಿ ಭಾವನೆ ಇರುತ್ತದೆ ಎಂದು ಡಾಕ್ಟರ್ ಬ್ರೋ ಕುಮಾರಿಯ ತಾಯಿಯ ಬಳಿ ಪ್ರಶ್ನೆ ಮಾಡಿದ್ದಾರೆ "ಮೊದಲು ತುಂಬಾ ಬೇಜಾರಾಗ್ತಾ ಇತ್ತು, ಆದ್ರೆ ಈಗ ದೊಡ್ಡವಳಾದ ಕಾರಣ ಎಲ್ಲವನ್ನೂ ಅರ್ಥ ಮಾಡಿಕೊಂಡು ಆ ಜೀವನಕ್ಕೆ ಕುಮಾರಿ ಒಗ್ಗಿಕೊಂಡಿರುವುದು ನನಗೆ ಖುಷಿ ಕೊಡುತ್ತದೆ "ಎಂದು ಕುಮಾರಿಯ ತಾಯಿ ಹೇಳಿದ್ದಾರೆ.