Oscars 2025: ಇಂದು ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ; ಭಾರತೀಯರು ಈ ಒಟಿಟಿಯಲ್ಲಿ ಅಕಾಡೆಮಿ ಪ್ರಶಸ್ತಿಯ ನೇರ ಪ್ರಸಾರ ನೋಡಿ
Oscars 2025 nominations: 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ವಿವರವನ್ನು ಜನವರಿ 23ರಂದು ಆಸ್ಕರ್ ಅಕಾಡೆಮಿಯು ಘೋಷಿಸಲಿದೆ. ನಟರಾದ ರಾಚೆಲ್ ಸೆನ್ನಾಟ್ ಮತ್ತು ಬೋವೆನ್ ಯಾಂಗ್ ನಾಮನಿರ್ದೇಶಿತರನ್ನು ಘೋಷಿಸಲಿದ್ದಾರೆ. ಭಾರತೀಯರು ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಜನವರಿ 23ರ ರಾತ್ರಿ 7 ಗಂಟೆಗೆ ವೀಕ್ಷಿಸಬಹುದು.

Oscars 2025 nominations: 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ವಿವರವನ್ನು ಜನವರಿ 23ರಂದು ಆಸ್ಕರ್ ಅಕಾಡೆಮಿಯು ಘೋಷಿಸಲಿದೆ. ನಟರಾದ ರಾಚೆಲ್ ಸೆನ್ನಾಟ್ ಮತ್ತು ಬೋವೆನ್ ಯಾಂಗ್ ನಾಮನಿರ್ದೇಶಿತರನ್ನು ಘೋಷಿಸಲಿದ್ದಾರೆ. ಇವರಿಬ್ಬರು ಈ ಬಾರಿಯ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 97ನೇ ಆಸ್ಕರ್ ಪ್ರಶಸ್ತಿಗೆ ಯಾವ ಸಿನಿಮಾಗಳು ಮತ್ತು ಯಾರೆಲ್ಲ ಆಯ್ಕೆಯಾಗಿದ್ದಾರೆ ಎನ್ನುವುದು ಜನವರಿ 23ರಂದು ತಿಳಿಯಲಿದೆ. ಬೆಳಿಗ್ಗೆ 8:30 ಗಂಟೆಗೆ (ET) / 5:30 ಗಂಟೆಗೆ (PT) ಸಮಯದಲ್ಲಿ ಈ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೋಡಬಹುದು.
ಭಾರತೀಯರು ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಜನವರಿ 23ರ ಸಂಜೆ 7 ಗಂಟೆಗೆ ವೀಕ್ಷಿಸಬಹುದು. ಅಕಾಡೆಮಿಯ ಸ್ಯಾಮ್ಯುಯೆಲ್ ಗೋಲ್ಡ್‌ವಿನ್ ಥಿಯೇಟರ್‌ನಲ್ಲಿ ಆಸ್ಕರ್ ನಾಮನಿರ್ದೇಶಿತರ ಘೋಷಣೆ ನಡೆಯಲಿದೆ. ಆಸ್ಕರ್.ಕಾಂ, ಆಸ್ಕರ್ಸ್.ಆರ್ಗ್ ಮತ್ತು ಅಕಾಡೆಮಿಯ ಡಿಜಿಟಲ್ ಚಾನೆಲ್‌ಗಳಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಎಬಿಸಿಯ ಗುಡ್ ಮಾರ್ನಿಂಗ್ ಅಮೆರಿಕಾದಲ್ಲಿಯೂ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 2, 2025ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಕಾನನ್ ಒ'ಬ್ರೇನ್ ಈ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.
ಈ ನಾಮನಿರ್ದೇಶನ ಘೋಷಣೆ ಕಾರ್ಯಕ್ರಮ ಜನವರಿ 17ರಂದೇ ನಡೆಯಬೇಕಿತ್ತು. ಲಾಸ್ ಏಂಜಲೀಸ್ ಕಾಡ್ಜಿಚ್ಚಿನಿಂದಾಗಿ ಈ ಕಾರ್ಯಕ್ರಮವನ್ನು ಮೊದಲು ಜನವರಿ 19ಕ್ಕೆ, ಬಳಿಕ ಜನವರಿ 23ಕ್ಕೆ ಮುಂದೂಡಲಾಗಿತ್ತು. ಲಾಸ್ ಏಂಜಲೀಸ್‌ನ ಪ್ರಾಕೃತಿಕ ವಿಕೋಪವು ಆಸ್ಕರ್ ಓಟಿಂಗ್ ಮೇಲೆ ಪರಿಣಾಮ ಬೀರಿತ್ತು. ನಾಮಿನೇಷನ್‌ಗೆ ಮತ ಚಲಾವಣೆ ಮಾಡುವ ಅವಧಿಯನ್ನು ಬಳಿಕ ವಿಸ್ತರಿಸಲಾಗಿತ್ತು.
ಏನಿದು ಆಸ್ಕರ್ ಪ್ರಶಸ್ತಿ?
ಸಿನಿಮಾ ರಂಗದಲ್ಲಿ ಕಲಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಸಾಧನೆ ಮಾಡಿದವರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತದೆ. ಅಕಾಡೆಮಿ ಪ್ರಶಸ್ತಿಯನ್ನೇ ಆಸ್ಕರ್ ಪ್ರಶಸ್ತಿ ಎನ್ನಲಾಗುತ್ತದೆ. ಪ್ರತಿವರ್ಷ ಹಲವು ಸಿನಿಮಾಗಳನ್ನು ವೀಕ್ಷಿಸಿ, ಆ ಸಿನಿಮಾದ ಶ್ರೇಷ್ಠತೆಯ ಆಧಾರದ ಮೇಲೆ ಅಮೆರಿಕದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಈ ಪ್ರಶಸ್ತಿ ನೀಡುತ್ತದೆ. ಆಸ್ಕರ್ ಪ್ರಶಸ್ತಿಯನ್ನು ಸಿನಿಮಾ ರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ.
