ಅವನೇನು ಗಡಿಗೆ ಹೋಗಿ ಯುದ್ಧ ಮಾಡಿ ಬಂದಿಲ್ಲ; ಅಲ್ಲು ಅರ್ಜುನ್‌ ಬಗ್ಗೆ ಟೀಕೆ ಮಾಡಿದ ತೆಲಂಗಾಣ ಸಿಎಂಗೆ ಚೇತನ್‌ ಅಹಿಂಸಾ ಟಾಂಗ್
ಕನ್ನಡ ಸುದ್ದಿ  /  ಮನರಂಜನೆ  /  ಅವನೇನು ಗಡಿಗೆ ಹೋಗಿ ಯುದ್ಧ ಮಾಡಿ ಬಂದಿಲ್ಲ; ಅಲ್ಲು ಅರ್ಜುನ್‌ ಬಗ್ಗೆ ಟೀಕೆ ಮಾಡಿದ ತೆಲಂಗಾಣ ಸಿಎಂಗೆ ಚೇತನ್‌ ಅಹಿಂಸಾ ಟಾಂಗ್

ಅವನೇನು ಗಡಿಗೆ ಹೋಗಿ ಯುದ್ಧ ಮಾಡಿ ಬಂದಿಲ್ಲ; ಅಲ್ಲು ಅರ್ಜುನ್‌ ಬಗ್ಗೆ ಟೀಕೆ ಮಾಡಿದ ತೆಲಂಗಾಣ ಸಿಎಂಗೆ ಚೇತನ್‌ ಅಹಿಂಸಾ ಟಾಂಗ್

ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ ವಿರುದ್ಧ ದೂರು ದಾಖಲಾಗಿತ್ತು. ಜೈಲು ಶಿಕ್ಷೆಯೂ ಪ್ರಕಟವಾಗಿ, ಕೊನೇ ಕ್ಷಣದಲ್ಲಿ ಮಧ್ಯಂತರ ಜಾಮೀನು ಸಿಕ್ಕಿತ್ತು. ಈ ಘಟನಾವಳಿ ಹಿಂದೆ ರಾಜಕೀಯ ಕೈವಾಡ ಇದೆ ಎಂದೇ ಹೇಳಲಾಗಿತ್ತು. ಈಗ ಇದೇ ಬೆಳವಣಿಗೆಗಳ ಬಗ್ಗೆ ಚೇತನ್‌ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.

ಅಲ್ಲು ಅರ್ಜುನ್‌ ಬಗ್ಗೆ ಟೀಕೆ ಮಾಡಿದ ತೆಲಂಗಾಣ ಸಿಎಂಗೆ ಚೇತನ್‌ ಅಹಿಂಸಾ ಹೇಳಿದ್ಹೀಗೆ
ಅಲ್ಲು ಅರ್ಜುನ್‌ ಬಗ್ಗೆ ಟೀಕೆ ಮಾಡಿದ ತೆಲಂಗಾಣ ಸಿಎಂಗೆ ಚೇತನ್‌ ಅಹಿಂಸಾ ಹೇಳಿದ್ಹೀಗೆ

Chetan Ahimsa on Telangana CM: ಬಾಕ್ಸ್‌ ಆಫೀಸ್‌ನಲ್ಲಿ ಪುಷ್ಪ 2 ಸಿನಿಮಾ ಒಂದಾದ ಮೇಲೊಂದು ದಾಖಲೆ ಬರೆಯುತ್ತಿದ್ದರೆ, ಇತ್ತ ಅದೇ ಸಿನಿಮಾದ ನಟ ಅಲ್ಲು ಅರ್ಜುನ್‌ ಜೈಲಿನ ದರ್ಶನ ಪಡೆದು ಒಂದು ದಿನ ಅಲ್ಲೇ ಇದ್ದು ಮರಳಿದ್ದರು. ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ ಸಿನಿಮಾ ಪ್ರಿಮಿಯರ್‌ ವೇಳೆ ರೇವತಿ ಎಂಬ ಮಹಿಳೆ ಕಾಲ್ತುಳಿತಕ್ಕೆ ಸಿಲುಕಿ ಜೀವ ಬಿಟ್ಟಿದ್ದರು. ಏಳು ವರ್ಷದ ಮಗುವಿಗೂ ಗಾಯಗಳಾಗಿದ್ದವು. ಈ ಬಗ್ಗೆ ಮೃತಳ ಪತಿ ದೂರು ನೀಡುತ್ತಿದ್ದಂತೆ, ಅಲ್ಲು ಅರ್ಜುನ್‌ ವಿರುದ್ಧ ಕೇಸ್‌ ದಾಖಲಿಸಿ, ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಮಧ್ಯಂತರ ಜಾಮೀನು ಪಡೆದು ಮರು ದಿನ ಜೈಲಿಂದ ಬಿಡುಗಡೆ ಆಗಿದ್ದರು. ಈಗ ಇದೇ ಘಟನೆ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಮಾತನಾಡಿದ್ದಾರೆ.

ಅಲ್ಲು ಅರ್ಜುನ್‌ ವಿರುದ್ಧ ದೂರು ದಾಖಲಾಗಿ, ಜೈಲು ಸೇರುತ್ತಿದ್ದಂತೆ ಈ ಪ್ರಕರಣದಲ್ಲಿ ರಾಜಕೀಯ ಮಧ್ಯ ಪ್ರವೇಶಿಸಿದೆ ಎಂದೇ ಪುಕಾರು ಹಬ್ಬಿತ್ತು. ರಾಜಕೀಯ ವ್ಯಕ್ತಿಗಳ ಒತ್ತಡ ಹೇರಿ ಅಲ್ಲು ಅರ್ಜುನ್‌ ಅವರನ್ನು ಬಂಧಿಸುವಂತೆ ಆದೇಶಿಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಬೇಕು ಅಂತಲೇ ಸಿಎಂ ರೇವಂತ್‌ ರೆಡ್ಡಿ ಅಲ್ಲು ಅರ್ಜುನ್‌ ಅವರನ್ನು ಬಂಧಿಸಿದ್ರಾ ಎಂದೂ ಹೇಳಲಾಗಿತ್ತು. ಆದರೆ ಈ ಬಗ್ಗೆ ಉತ್ತರ ನೀಡಿದ್ದ ಸಿಎಂ ರೇವಂತ್‌ ರೆಡ್ಡಿ, ನಮ್ಮ ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದಿದ್ದರು.

ರೇವಂತ್‌ ರೆಡ್ಡಿ ಹೇಳಿದ್ದೇನು?

ತೆಲಂಗಾಣದ ಸಿಎಂ ರೇವಂತ್‌ ರೆಡ್ಡಿ ಮತ್ತು ಅಲ್ಲು ಅರ್ಜುನ್‌ ಅವರ ಪತ್ನಿ ಸ್ನೇಹಾ ರೆಡ್ಡಿ ಸಂಬಂಧಿಗಳು. ಇಷ್ಟಿದ್ದರೂ, ನಾನು ಯಾವತ್ತಿದ್ದರೂ ಸಂತ್ರಸ್ತೆ ಮತ್ತವರ ಕುಟುಂಬದ ಪರವಾಗಿದ್ದೇನೆ. ಯಾರೇ ತಪ್ಪು ಮಾಡಿದ್ದರೂ, ಕಾನೂನು ಅವರನ್ನು ಬಂಧಿಸುತ್ತದೆ. ಅಷ್ಟಕ್ಕೂ ಅಲ್ಲು ಅರ್ಜುನ್‌ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅಷ್ಟೇ. ಭಾರತಕ್ಕಾಗಿ ಅವರು ಯುದ್ಧ ಮಾಡಿ ಗೆದ್ದು ಬಂದಿಲ್ಲ. ಸಿನಿಮಾ ಅನ್ನೋದು ನಟರಿಗೆ ಬಿಜಿನೆಸ್‌ ಇದ್ದಹಾಗೆ. ಅವರು ಲಾಭ ಮಾಡಿಕೊಂಡರೇ, ನಮಗೇನು ಲಾಭ? ರಿಯಲ್‌ ಎಸ್ಟೇಟ್‌ ಥರ ದುಡ್ಡು ಹಾಕಿ ದುಡ್ಡು ಗಳಿಸ್ತಾರೆ ಎಂದು ರೇವಂತ್‌ ರೆಡ್ಡಿ ಹೇಳಿದ್ದರು.

ಚೇತನ್‌ ಅಹಿಂಸಾ ಪ್ರತಿಕ್ರಿಯೆ

ಇದೀಗ ಸಿಎಂ ರೇವಂತ್‌ ರೆಡ್ಡಿ ಮಾತಿಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. "ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಅಲ್ಲು ಅರ್ಜುನ್ ಅವರ ಅಕ್ರಮ ಬಂಧನವನ್ನು ಸಮರ್ಥಿಸ್ಕೊಳ್ಳೋ ರೀತಿಯಲ್ಲಿ ಹೇಳುತ್ತಾರೆ, 'ಅವನೇನು ಗಡಿಗೆ ಹೋಗಿ ಯುದ್ಧ ಮಾಡಿ ಬಂದಿಲ್ಲ'. ನಿಜ. ಸಿನಿಮಾ ತಾರೆಯರಿಗೆ ಅರ್ಹತೆಗಿಂತ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ. ಆದರೆ ನಿಮ್ಮ ಕೊಡುಗೆ ಏನು ಸಿಎಂ ರೆಡ್ಡಿ? 140 ವರ್ಷಗಳಿಂದ ಹೆಚ್ಚು ಪಡೆದುಕೊಂಡ ಮತ್ತು ಕಡಿಮೆ ನೀಡಿದ ಕಾಂಗ್ರೆಸ್ ಪಕ್ಷದ ನೇರ ಫಲಾನುಭವಿ ನೀವು" ಎಂದು ತಿರುಗೇಟು ಕೊಟ್ಟಿದ್ದಾರೆ.

ಪುಷ್ಪ 2 ಕಲೆಕ್ಷನ್‌ ಹೇಗಿದೆ?

ಡಿಸೆಂಬರ್‌ 5ರಂದು ಬಿಡುಗಡೆ ಆದ ಪುಷ್ಪ 2 ಸಿನಿಮಾ ಹತ್ತಾರು ದಾಖಲೆಗಳನ್ನು ಮಾಡುತ್ತ ಮುನ್ನಡೆಯುತ್ತಿದೆ. ಇದೀಗ ಇದೇ ಸಿನಿಮಾ, ಬಿಡುಗಡೆ ಆಗಿ 10 ದಿನಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೂ ಈ ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 1200 ಕೋಟಿ ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಒಟ್ಟಾರೆಯಾಗಿ 850 ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ.

Whats_app_banner