ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು ಯಾವುವು? ಯಾವ 5 ಸಿನಿಮಾಗಳು ಅತ್ಯುತ್ತಮ?
ಕನ್ನಡ ಸುದ್ದಿ  /  ಮನರಂಜನೆ  /  ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು ಯಾವುವು? ಯಾವ 5 ಸಿನಿಮಾಗಳು ಅತ್ಯುತ್ತಮ?

ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು ಯಾವುವು? ಯಾವ 5 ಸಿನಿಮಾಗಳು ಅತ್ಯುತ್ತಮ?

ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 10 ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಆ ಹತ್ತು ಸಿನಿಮಾಗಳು ಯಾವುವು? ಅವುಗಳಿಗೆ ಸಿಕ್ಕ ಸ್ಥಾನ ಯಾವುದು ಅದೆಲ್ಲದರ ವಿವರ ಇಲ್ಲಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು ಯಾವುವು? ಯಾವ 5 ಸಿನಿಮಾಗಳು ಅತ್ಯುತ್ತಮ?
ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು ಯಾವುವು? ಯಾವ 5 ಸಿನಿಮಾಗಳು ಅತ್ಯುತ್ತಮ?

ಕಳೆದ ಒಂದು ತಿಂಗಳಲ್ಲಿ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸಾಕಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಆ ಪೈಕಿ ಇಂದಿಗೂ ಕೆಲವು ಸಿನಿಮಾಗಳು ಟಾಪ್‌ ಟ್ರೆಂಡಿಂಗ್‌ನಲ್ಲಿ ಮುಂದುವರಿದಿವೆ. ಆ ಪೈಕಿ ಇಂದಿನ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳು ಯಾವುವು? ಅವುಗಳಿಗೆ ಸಿಕ್ಕ ಸ್ಥಾನ ಯಾವುದು? ಅದೆಲ್ಲದರ ವಿವರ ಇಲ್ಲಿದೆ.

  • ದಿ ಡಿಪ್ಲೊಮ್ಯಾಟ್ ಒಟಿಟಿ

ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ 1 ಸ್ಥಾನದಲ್ಲಿರುವ ಸಿನಿಮಾ ದಿ ಡಿಪ್ಲೊಮ್ಯಾಟ್. ಜಾನ್ ಅಬ್ರಹಂ, ಸದಿಯಾ, ಪ್ರಾಪ್ತಿ ಶುಕ್ಲಾ, ಶರೀಬ್ ಹಶ್ಮಿ ಅಭಿನಯಿಸಿರುವ ಈ ಸಿನಿಮಾ 7.1 IMDb ರೇಟಿಂಗ್ ಪಡೆದಿದೆ. ಶಿವಂ ನಾಯರ್ ನಿರ್ದೇಶನದ ಈ ಸಿನಿಮಾ ಹಿಂದಿ ಭಾಷೆಯಲ್ಲಿ ಮಾತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

  • ಜಾಕ್ ಒಟಿಟಿ

ಸಿದ್ಧು ಜೊನ್ನಲಗಡ್ಡ ಮತ್ತು ವೈಷ್ಣವಿ ಚೈತನ್ಯ ಅಭಿನಯಿಸಿರುವ ಸ್ಪೈ ಕಾಮಿಡಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಜಾಕ್. ಬೊಮ್ಮರಿಲ್ಲು ಭಾಸ್ಕರ್ ದೀರ್ಘಕಾಲದ ನಂತರ ನಿರ್ದೇಶಿಸಿರುವ ಈ ತೆಲುಗು ಸಿನಿಮಾ ಥಿಯೇಟರ್‌ಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ, ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 2ರಲ್ಲಿ ಸ್ಥಾನ ಪಡೆದಿದೆ.‌

  • ಗುಡ್ ಬ್ಯಾಡ್ ಅಗ್ಲಿ ಒಟಿಟಿ

ತಮಿಳು ಸ್ಟಾರ್ ಹೀರೋ ಅಜಿತ್ ಕುಮಾರ್ ಅಭಿನಯಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಗುಡ್ ಬ್ಯಾಡ್ ಅಗ್ಲಿ. ಕಾಲಿವುಡ್‌ನಲ್ಲಿ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲೂ ಲಭ್ಯವಿದೆ. ನೆಟ್‌ಫ್ಲಿಕ್ಸ್‌ನ ಟಾಪ್ 10 ಟ್ರೆಂಡ್ ಆಗುತ್ತಿರುವ ಸಿನಿಮಾಗಳಲ್ಲಿ ಗುಡ್ ಬ್ಯಾಡ್ ಅಗ್ಲಿ ಮೂರನೇ ಸ್ಥಾನದಲ್ಲಿದೆ.

  • ಮಿಷನ್ ಇಂಪಾಸಿಬಲ್ ಡೆಡ್ ರೆಕನಿಂಗ್ ಪಾರ್ಟ್ 1 ಒಟಿಟಿ

ಹಾಲಿವುಡ್ ಆಕ್ಷನ್ ಸ್ಟಾರ್ ಟಾಮ್ ಕ್ರೂಜ್ ಅಭಿನಯಿಸಿರುವ ಇತ್ತೀಚಿನ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಿಷನ್ ಇಂಪಾಸಿಬಲ್ ದಿ ಫೈನಲ್ ರೆಕನಿಂಗ್ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 4ರಲ್ಲಿ ಈ ಸಿನಿಮಾ ಸಹ ಟ್ರೆಂಡಿಂಗ್‌ನಲ್ಲಿದೆ.

  • ಫಿಯರ್ ಸ್ಟ್ರೀಟ್ ಪ್ರಾಮ್ ಕ್ವೀನ್ ಒಟಿಟಿ

ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಹಾಲಿವುಡ್ ಹಾರರ್ ಥ್ರಿಲ್ಲರ್ ಸಿನಿಮಾ ʻಫಿಯರ್ ಸ್ಟ್ರೀಟ್ ಪ್ರಾಮ್ ಕ್ವೀನ್ʼ. ಹುಡುಗಿಯರನ್ನು ಬೇಟೆಯಾಡಿ ಕೊಲ್ಲುವ ಕಿಲ್ಲರ್‌ವೊಬ್ಬನ ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ ಟ್ರೆಂಡ್‌ನಲ್ಲಿ ಐದನೇ ಸ್ಥಾನದಲ್ಲಿದೆ.

  • ಕೋರ್ಟ್ ಒಟಿಟಿ

ಕೋರ್ಟ್ ರೂಮ್ ಡ್ರಾಮಾ ಜಾನರ್‌ನ ʻಕೋರ್ಟ್; ಸ್ಟೇಟ್ ವರ್ಸಸ್ ನೋ ಬಡಿʼ ಇನ್ನೂ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 10 ಟ್ರೆಂಡ್‌ನಲ್ಲಿದೆ. ಈ ಸಿನಿಮಾ ಒಟಿಟಿಯಲ್ಲಿ ಟಾಪ್ 6 ಸ್ಥಾನದಲ್ಲಿದೆ.

  • ಆಫೀಸರ್ ಆನ್ ಡ್ಯೂಟಿ ಒಟಿಟಿ

ಕ್ರೈಮ್ ಇನ್ವೆಸ್ಟಿಗೇಷನ್‌ನಲ್ಲಿ ಬಂದಿರುವ ಮಲಯಾಳಂನ ಸೂಪರ್ ಹಿಟ್ ಸಿನಿಮಾ ಆಫೀಸರ್ ಆನ್ ಡ್ಯೂಟಿ ಇನ್ನೂ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟ್ರೆಂಡ್ ಆಗುತ್ತಿದೆ. ಪ್ರಿಯಮಣಿ ಅಭಿನಯಿಸಿರುವ ಈ ಸಿನಿಮಾ ಟಾಪ್ 7ರಲ್ಲಿದೆ. ಥ್ರಿಲ್ಲಿಂಗ್ ದೃಶ್ಯಗಳು ಮತ್ತು ಇನ್ವೆಸ್ಟಿಗೇಷನ್‌ನಿಂದ ಕೂಡಿರುವ ಈ ಸಿನಿಮಾವನ್ನು ಕನ್ನಡದಲ್ಲಿಯೂ ವೀಕ್ಷಣೆ ಮಾಡಬಹುದು.

  • ಜುವೆಲ್ ಥೀಫ್ ಒಟಿಟಿ

ನೇರವಾಗಿ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜುವೆಲ್ ಥೀಫ್. ಸೈಫ್ ಅಲಿ ಖಾನ್ ಅಭಿನಯಿಸಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 8 ಸ್ಥಾನದಲ್ಲಿದೆ.

  • ದೇವ ಒಟಿಟಿ

ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಅಭಿನಯಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ದೇವ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಇನ್ನೂ ಟ್ರೆಂಡ್ ಆಗುತ್ತಿದೆ. ಇಂದು (ಮೇ 25) ಟಾಪ್ 9 ಸ್ಥಾನದಲ್ಲಿದೆ.

  • ಛಾವಾ ಒಟಿಟಿ

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಹಿಂದಿ ಹಿಸ್ಟಾರಿಕಲ್ ಪೀರಿಯಾಡಿಕ್ ಆಕ್ಷನ್ ಡ್ರಾಮಾ ʻಛಾವಾʼ ಸಿನಿಮಾ ಇನ್ನೂ ಒಟಿಟಿಯಲ್ಲಿ ಟಾಪ್‌ನಲ್ಲಿದೆ. ಇಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 10 ಸ್ಥಾನದಲ್ಲಿದೆ.

  • ಅತ್ಯುತ್ತಮ ಸಿನಿಮಾಗಳು

ಇಂದು (ಮೇ 25) ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟಾಪ್ 10 ಟ್ರೆಂಡ್ ಆಗುತ್ತಿರುವ ಸಿನಿಮಾಗಳಲ್ಲಿ ಮಿಷನ್ ಇಂಪಾಸಿಬಲ್ ಡೆಡ್ ರೆಕನಿಂಗ್ ಪಾರ್ಟ್ 1, ಫಿಯರ್ ಸ್ಟ್ರೀಟ್ ಪ್ರಾಮ್ ಕ್ವೀನ್, ಕೋರ್ಟ್, ಆಫೀಸರ್ ಆನ್ ಡ್ಯೂಟಿ, ಛಾವಾ ಅತ್ಯುತ್ತಮ ಸಿನಿಮಾಗಳಾಗಿವೆ. ಫಿಯರ್ ಸ್ಟ್ರೀಟ್ ಪ್ರಾಮ್ ಕ್ವೀನ್ ಹೊರತುಪಡಿಸಿ ಉಳಿದ ನಾಲ್ಕು ಸಿನಿಮಾಗಳು ಟೆಲುಗು ಭಾಷೆಯಲ್ಲಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.