JioHotstar OTT: ಜಿಯೊ ಸಿನಿಮಾ- ಡಿಸ್ನಿ+ಹಾಟ್ ಸ್ಟಾರ್ ವಿಲೀನ, ಇವೆರಡು ಜತೆಯಾದ ಹೊಸ ಒಟಿಟಿ ಹೆಸರು ಎಷ್ಟು ಕ್ಯೂಟಾಗಿದೆ ನೋಡಿ
JioHotstar OTT launched: ಇನ್ಮುಂದೆ ಜಿಯೊ ಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಗಳು ಪ್ರತ್ಯೇಕವಾಗಿ ದೊರಕದು. ಇನ್ಮುಂದೆ ಇವೆರಡು ಪ್ಲಾಟ್‌ಫಾರ್ಮ್‌ಗಳು ಜಿಯೊಹಾಟ್‌ಸ್ಟಾರ್ ಆಗಿ ಒಟಿಟಿ ವೀಕ್ಷಕರಿಗೆ ಲಭ್ಯವಿರಲಿದೆ. ಬನ್ನಿ, ಈ ವಿಲೀನದ ಕುರಿತು ಮತ್ತು ಜಿಯೋಹಾಟ್ ಸ್ಟಾರ್ ರಿಚಾರ್ಜ್ ಯೋಜನೆಗಳ ಹೆಚ್ಚಿನ ವಿವರ ತಿಳಿದುಕೊಳ್ಳೋಣ.

JioHotstar OTT launched: ಇನ್ಮುಂದೆ ಜಿಯೋಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಗಳು ಪ್ರತ್ಯೇಕವಾಗಿ ದೊರಕದು. ಏಕೆಂದರೆ, ಇವೆರಡು ವಿಲೀನವಾಗಿದೆ. ಇನ್ಮುಂದೆ ಇವೆರಡು ಪ್ಲಾಟ್‌ಫಾರ್ಮ್‌ಗಳು ಜಿಯೊಹಾಟ್‌ಸ್ಟಾರ್ ಆಗಿ ಒಟಿಟಿ ವೀಕ್ಷಕರಿಗೆ ಲಭ್ಯವಿರಲಿದೆ. ವಯಾಕಾಂ18 ಮತ್ತು ಸ್ಟಾರ್ ಇಂಡಿಯಾ ವಿಲೀನದ ಜಂಟಿ ಸಹಯೋಗದಿಂದ ರೂಪುಗೊಂಡ ಜಿಯೊಸ್ಟಾರ್ ಇದೀಗ ಜಿಯೊಹಾಟ್‌ಸ್ಟಾರ್ ಆಗಿ ಲಾಂಚ್ ಆಗಿದೆ. ಜಿಯೊಸಿನಿಮಾ ಮತ್ತು ಡಿಸ್ನೀ+ಹಾಟ್ ಸ್ಟಾರ್ ಒಟ್ಟಾಗಿರುವುದರಿಂದ ಒಟಿಟಿ ಪ್ರಿಯರಿಗೆ ಮನರಂಜನೆ ಮತ್ತು ಕ್ರೀಡಾ ಕಂಟೆಂಟ್‌ಗಳು ಜಿಯೊಹಾಟ್‌ಸ್ಟಾರ್‌ನಲ್ಲಿ ದೊರಕಲಿದೆ.
"ಜಿಯೊಹಾಟ್‌ಸ್ಟಾರ್ ಮೂಲಕ ಭಾರತೀಯರಿಗೆ ಪ್ರೀಮಿಯಂ ಮನರಂಜನೆ ನೀಡುವ ಧ್ಯೇಯೋದ್ದೇಶವನ್ನು ಕಂಪನಿ ಹೊಂದಿದೆ. ಎಐ ಆಧರಿತ ಸಜೆಷನ್‌ಗಳು, 19ಕ್ಕೂ ಹೆಚ್ಚು ಭಾಷೆಗಳಲ್ಲಿ ಸ್ಟ್ರೀಮಿಂಗ್ ಒದಗಿಸುವಿಕೆ ಇತ್ಯಾದಿಗಳೊಂದಿಗೆ ನಾವು ಕಂಟೆಂಟ್ ಅನ್ನು ಇನ್ನಷ್ಟು ವೈಯಕ್ತಿಕಗೊಳಿಸುತ್ತಿದ್ದೇವೆ" ಎಂದು ಜಿಯೊಸ್ಟಾರ್ ಸಿಇಒ ಕಿರಣ್ ಮಣಿ ಹೇಳಿದ್ದಾರೆ.
"ಎಲ್ಲರಿಗೂ ಪ್ರೀಮಿಯಂ ಮನರಂಜನೆ ಒದಗಿಸುವ ಸಲುವಾಗಿ ಜಿಯೊಹಾಟ್ ಸ್ಟಾರ್ ಪ್ರತಿಯೊಬ್ಬರಿಗೂ ಎಲ್ಲ ಅವರ ಅಚ್ಚುಮೆಚ್ಚಿನ ಶೋಗಳು, ಚಲನಚಿತ್ರಗಳು ಮತ್ತು ಲೈವ್ ಕ್ರೀಡೆಯನ್ನು ಚಂದಾದಾರಿಕೆಯ ಅಗತ್ಯವಿಲ್ಲದೆ ವೀಕ್ಷಿಸಲು ಆಹ್ವಾನಿಸುತ್ತದೆ. ಮೂರು ಮೊಬೈಲ್ ಯೋಜನೆಗಳಲ್ಲಿ ಆಫರ್‌ಗಳನ್ನು ನೀಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಜಿಯೋಹಾಟ್‌ಸ್ಟಾರ್ ವಿವಿಧ ಪ್ಲ್ಯಾನ್‌ಗಳು
ಒಂದು ಮೊಬೈಲ್ ಪ್ಲಾನ್ ಮೂರು ತಿಂಗಳಿಗೆ 149 ರೂ ಅಥವಾ ವಾರ್ಷಿಕವಾಗಿ 499 ರೂ. ಪಾವತಿಸಬಹುದು. ಸೂಪರ್ ಪ್ಲಾನ್ ಮೂಲಕ ಮೊಬೈಲ್, ವೆಬ್ ಮತ್ತು ಬೆಂಬಲಿತ ಲಿವಿಂಗ್ ರೂಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎರಡು ಸಾಧನಗಳಲ್ಲಿ ವೀಕ್ಷಿಸಬಹುದು. ಇದರ ಬೆಲೆ ಮೂರು ತಿಂಗಳಿಗೆ 299 ರೂ ಮತ್ತು ವಾರ್ಷಿಕವಾಗಿ 899 ರೂ ಆಗಿದೆ. ಪ್ರೀಮಿಯಂ ಪ್ಲಾನ್ ನಾಲ್ಕು ಸಾಧನಗಳವರೆಗೆ ಜಾಹೀರಾತು-ಮುಕ್ತ ವೀಕ್ಷಣೆಯನ್ನು (ಲೈವ್ ಕ್ರೀಡೆ ಮತ್ತು ಈವೆಂಟ್‌ಗಳನ್ನು ಹೊರತುಪಡಿಸಿ) ಅನುಮತಿಸುತ್ತದೆ. ಇದರ ಬೆಲೆ ಮೂರು ತಿಂಗಳಿಗೆ 499 ರೂ. ಅಥವಾ ವಾರ್ಷಿಕವಾಗಿ 1,499 ರೂ. ಆಗಿದೆ.
ಜಿಯೊಹಾಟ್ ಸ್ಟಾರ್ 10 ಭಾಷೆಗಳಲ್ಲಿ ರೂಪಿಸಲಾದ 1.4 ಶತಕೋಟಿ ಭಾರತೀಯರಿಗೆ ರೂಪಿಸಲಾದ ವಿಸ್ತಾರ ಮತ್ತು ವೈವಿಧ್ಯಮಯ ಕಂಟೆಂಟ್ ಮೂಲಕ ಮನರಂಜನೆಯನ್ನು ಮರು ವ್ಯಾಖ್ಯಾನಿಸಲು ಸಜ್ಜಾಗಿದೆ ಎಂದು ಕಂಪನಿ ತಿಳಿಸಿದೆ. ವಿಶ್ವದ ಯಾವುದೇ ಪ್ರದೇಶದಟಿ.ವಿ. ಪ್ರೋಗ್ರಾಮಿಂಗ್ ಆಯ್ಕೆ, ಒರಿಜಿನಲ್ಸ್, ಬ್ಲಾಕ್ ಬಸ್ಟರ್ ಚಲನಚಿತ್ರಗಳು, ಅನಿಮೆ ಮತ್ತು ಅಂತಾರಾಷ್ಟ್ರೀಯ ಪ್ರೀಮಿಯರ್‌ಗಳು ಈ ಒಟಿಟಿಯಲ್ಲಿ ಲಭ್ಯವಿರಲಿದೆ. ಜಿಯೊಹಾಟ್ ಸ್ಟಾರ್, ಡಿಸ್ನೀ, ಎನ್.ಬಿ.ಸಿ. ಯೂನಿವರ್ಸಲ್ ಪೀಕಾಕ್, ವಾರ್ನರ್ ಬ್ರದರ್ಸ್, ಡಿಸ್ಕವರಿ ಎಚ್.ಬಿ.ಒ ಮತ್ತು ಪ್ಯಾರಾಮೌಂಟ್ ಮುಂತಾದವುಗಳಿಂದ ಅತ್ಯುತ್ತಮ ಹಾಲಿವುಡ್ ಕಂಟೆಂಟ್ ಅನ್ನು ನೀಡಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಜಿಯೊಹಾಟ್ ಸ್ಟಾರ್ ಐಸಿಸಿ ಕಾರ್ಯಕ್ರಮಗಳು, ಐಪಿಎಲ್ ಮತ್ತು ಡಬ್ಲ್ಯೂಪಿಎಲ್‌ನಂತಹ ಪ್ರಮುಖ ಟೂರ್ನಮೆಂಟ್‌ಗಳನ್ನು ಪ್ರಸಾರ ಮಾಡುತ್ತದೆ. ಬಿಸಿಸಿಐ, ಐಸಿಸಿ ಮತ್ತು ರಾಜ್ಯ ಸಂಸ್ಥೆಗಳಿಂದಿಗೆ ಕೂಡ ಜಿಯೋ ಹಾಟ್‌ಸ್ಟಾರ್ ಸಹಯೋಗ ಹೊಂದಿದೆ. ಕ್ರಿಕೆಟ್ ಅಲ್ಲದೆ ಇದು ಪ್ರೀಮಿಯರ್ ಲೀಗ್ ಮತ್ತು ವಿಂಬಲ್ಡನ್ ಮೂಲಕ ಜಾಗತಿಕ ಕ್ರೀಡಾ ಕಂಟೆಂಟ್‌ಗಳು ಇರಲಿವೆ. ಅಲ್ಟ್ರಾ-ಎಚ್.ಡಿ. 4ಕೆ ಸ್ಟ್ರೀಮಿಂಗ್ ನ ಎಲಿವೇಟೆಡ್ ಸ್ಟ್ರೀಮಿಂಗ್ ಅನುಭವ, ಎಐ-ಸನ್ನದ್ಧ ಒಳನೋಟಗಳು ರಿಯಲ್-ಟೈಮ್ ಸ್ಟಾರ್ಸ್ ಓವರ್ಲೇಸ್, ಮಲ್ಟಿ-ಆಂಗಲ್ ವೀಕ್ಷಣೆ ಇತ್ಯಾದಿ ಫೀಚರ್‌ಗಳನ್ನು ನೂತನ ಒಟಿಟಿ ಹೊಂದಿರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ವಿಭಾಗ