ಹೆಣದ ಪಾತ್ರದಲ್ಲಿ ನಕ್ಕು ನಗಿಸುವ ಪ್ರಭುದೇವ, ಡಾರ್ಕ್‌ ಕಾಮಿಡಿ ಸಿನಿಮಾ ́'ಜಾಲಿ ಓ ಜಿಂಖಾನಾ' ಒಟಿಟಿಯಲ್ಲಿ ಬಿಡುಗಡೆಯಾಗಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಹೆಣದ ಪಾತ್ರದಲ್ಲಿ ನಕ್ಕು ನಗಿಸುವ ಪ್ರಭುದೇವ, ಡಾರ್ಕ್‌ ಕಾಮಿಡಿ ಸಿನಿಮಾ ́'ಜಾಲಿ ಓ ಜಿಂಖಾನಾ' ಒಟಿಟಿಯಲ್ಲಿ ಬಿಡುಗಡೆಯಾಗಿದೆ ನೋಡಿ

ಹೆಣದ ಪಾತ್ರದಲ್ಲಿ ನಕ್ಕು ನಗಿಸುವ ಪ್ರಭುದೇವ, ಡಾರ್ಕ್‌ ಕಾಮಿಡಿ ಸಿನಿಮಾ ́'ಜಾಲಿ ಓ ಜಿಂಖಾನಾ' ಒಟಿಟಿಯಲ್ಲಿ ಬಿಡುಗಡೆಯಾಗಿದೆ ನೋಡಿ

ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಶಕ್ತಿ ಚಿದಂಬರಂ ನಿರ್ದೇಶನದ ಜಾಲಿ ಓ ಜಿಂಖಾನಾ ಎಂಬ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಈ ಸಿನಿಮಾವನ್ನು ಯಾವ ಒಟಿಟಿಯಲ್ಲಿ ನೋಡಬಹುದು? ಸಿನಿಮಾದ ಕಥೆಯೇನು ಇತ್ಯಾದಿ ವಿವರ ಪಡೆಯೋಣ ಬನ್ನಿ.

ಡಾರ್ಕ್‌ ಕಾಮಿಡಿ ಸಿನಿಮಾ "ಜಾಲಿ ಓ ಜಿಮ್ಖಾನಾ ಒಟಿಟಿಯಲ್ಲಿ ಬಿಡುಗಡೆ
ಡಾರ್ಕ್‌ ಕಾಮಿಡಿ ಸಿನಿಮಾ "ಜಾಲಿ ಓ ಜಿಮ್ಖಾನಾ ಒಟಿಟಿಯಲ್ಲಿ ಬಿಡುಗಡೆ

ನಟ ಪ್ರಭುದೇವ ಒಳ್ಳೆಯ ಡ್ಯಾನ್ಸರ್‌. ಅತ್ಯುತ್ತಮ ನಟ ಕೂಡ ಹೌದು. ಇವರು ಕಾಮಿಡಿ ಜಾನರ್‌ನಲ್ಲಿಯೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದ ಕರಟಕ ಧಮನಕ ಸಿನಿಮಾದಲ್ಲಿ ಶಿವಣ್ಣನ ಜತೆ ಸೇರಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದರು. ಪ್ರಭುದೇವ ಅವರು ತಮಿಳಿನಲ್ಲಿಯೂ ಕಾಮಿಡಿ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ ಜಾಲಿ ಓ ಜಿಂಖಾನಾ ಎಂಬ ಡಾರ್ಕ್‌ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಶಕ್ತಿ ಚಿದಂಬರಂ ನಿರ್ದೇಶನದ ಜಾಲಿ ಓ ಜಿಂಖಾನಾ ಎಂಬ ಸಿನಿಮಾ ಇದೀಗ ಒಟಿಟಿಯಲ್ಲಿ ರಿಲೀಸ್‌ ಆಗಿದೆ.

ಒಟಿಟಿಯಲ್ಲಿ ನೋಡಿ ಜಾಲಿ ಓ ಜಿಂಖಾನಾ

ನವೆಂಬರ್ 22, 2024ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಪ್ರಭುದೇವ ಅವರ ಜಾಲಿ ಓ ಜಿಂಖಾನಾ ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಶಕ್ತಿ ಚಿದಂಬರಂ ನಿರ್ದೇಶನದ ತಮಿಳು ಬ್ಲ್ಯಾಕ್‌ ಕಾಮಿಡಿ ಸಿನಿಮಾದಲ್ಲಿ ಪ್ರಭುದೇವ ಅವರ ಹಾಸ್ಯ ಅಭಿನಯ ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸದೆ ಇರುವವರು ಇದೀಗ ಒಟಿಟಿಯಲ್ಲಿ ನೋಡಬಹುದು.

ಜಾಲಿ ಓ ಜಿಂಖಾನಾ ಸಿನಿಮಾವು ಮೇ 15ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದನ್ನು ಆಹಾ ವಿಡಿಯೋ ಒಟಿಟಿಯಲ್ಲಿ ನೋಡಬಹುದು. "ಬ್ಯಾಗ್‌ಗಳು, ತಿಂಡಿಗಳು... ಮತ್ತು ಮೃತ ದೇಹವನ್ನು ಪ್ಯಾಕ್ ಮಾಡಿದ್ದಾರೆಯೇ? ಜಾಲಿ ಓ ಜಿಮ್‌ನಲ್ಲಿ ಅತ್ಯಂತ ಅನಿರೀಕ್ಷಿತ ಕುಟುಂಬ ಪ್ರಯಾಣವನ್ನು ಅನ್ವೇಷಿಸಿ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆಹಾ ವಿಡಿಯೋ ಅಪ್‌ಡೇಟ್‌ ನೀಡಿದೆ.

ಜಾಲಿ ಓ ಜಿಂಖಾನಾ ಸಿನಿಮಾದ ಕಥೆಯೇನು?

ಜಾಲಿ ಓ ಜಿಂಖಾನಾ ಸಿನಿಮಾದ ಕಥೆಯು ಭವಾನಿ ಎಂಬ ಯುವತಿಯು ಚರ್ಚ್‌ನಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಆರಂಭವಾಗುತ್ತದೆ. ಬಳಿಕ ಕಥೆ ಮೇಘನಪುರಂಗೆ ಶಿಫ್ಟ್‌ ಆಗುತ್ತದೆ. ಬೈಪಾಸ್‌ ರಸ್ತೆ ನಿರ್ಮಾಣದಿಂದ ಗ್ರಾಹಕರನ್ನು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿಕೊಂಡ ಭವಾನಿಯ ಕುಟುಂಬದ ಕಥೆ ಆರಂಭವಾಗುತ್ತದೆ. ಸ್ಥಳೀಯ ಶಾಸಕ ಅಡೈಕಳರಾಜ್ ಅವರು ಕೆಟರಿಂಗ್‌ ಆರ್ಡರ್‌ ಪಡೆದಿರುತ್ತಾರೆ. ಆದರೆ, ಹಣ ನೀಡಲು ನಿರಾಕರಿಸುತ್ತಾರೆ. ಇದರಿಂದ ಇವರ‌ ಪರಿಸ್ಥಿತಿ ಹದಗೆಡುತ್ತದೆ. ಭವಾನಿಯ ಅಜ್ಜನ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗುತ್ತದೆ.

ಅನಿರೀಕ್ಷಿತ ತಿರುವು ಎಂಬಂತೆ ಗುತ್ತಿಗೆ ಕೊಲೆಗಾರನಗೆ ಮೀಸಲಾದ ಹಣ ಭವಾನಿಯ ಕೈ ಸೇರುತ್ತದೆ. ಅಡೈಕಳರಾಜ್‌ನ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದ ವಕೀಲ ಪೂಂಗುಂದ್ರನ್ (ಪ್ರಭುದೇವ) ಕೊಲೆಯಾಗುತ್ತಾನೆ. ಭಯದಿಂದ ಭವಾನಿ ಮತ್ತು ಅವಳ ಸಹೋದರಿಯರು ಅವನ ದೇಹವನ್ನು ಅಡಗಿಸುತ್ತಾರೆ. ಬಳಿಕ ಈ ಹೆಣವನ್ನು ಬಳಸಿ (ಸತ್ತಿಲ್ಲ ಎಂದು ಹೊರಜಗತ್ತಿಗೆ ತೋರಿಸಿ) ಅನೇಕ ಕೆಲಸ ಮಾಡುತ್ತಾರೆ. ಹತ್ತು ಕೋಟಿ ಇರುವ ಅಕೌಂಟ್‌ ಅನ್‌ಲಾಕ್‌ ಮಾಡಲು ಪ್ರಯತ್ನಿಸಿದಾಗ ಘಟನೆಗಳ ಸರಣಿಗಳು ಶುರುವಾಗುತ್ತವೆ. ವರದಿಗಾರ ಕನ್ನಿಗ ಮತ್ತು ಅವರ ವಿಲಕ್ಷಣ ಚಿಕ್ಕಪ್ಪ ಮಾಪ್ಪುಮಾಮ ಸಹಾಯದಿಂದ ಸಹೋದರಿಯರು ಜಾಣತನದಿಂದ ಭ್ರಷ್ಟ ಅಧಿಕಾರಿಗಳನ್ನು ಎದುರಿಸುತ್ತಾರೆ. ಇಂತಹ ರೋಲರ್‌ಕಾಸ್ಟರ್‌ ಘಟನೆಗಳಿಂದ ಸಿನಿಮಾ ಇಷ್ಟವಾಗುತ್ತದೆ. ಆಸಕ್ತರು ಈ ಸಿನಿಮಾವನ್ನು ಆಹಾ ಒಟಿಟಿಯಲ್ಲಿ ನೋಡಬಹುದು.

ಜಾಲಿ ಓ ಜಿಂಖಾನಾ ಪಾತ್ರವರ್ಗ

ಜಾಲಿ ಓ ಜಿಂಖಾನಾ ಚಿತ್ರದಲ್ಲಿ ಪ್ರಭುದೇವ, ಮಡೋನಾ ಸೆಬಾಸ್ಟಿಯನ್, ಅಭಿರಾಮಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶಕ್ತಿ ಚಿದಂಬರಂ ನಿರ್ದೇಶನದ ಸಿನಿಮಾ. ಅಶ್ವಿನ್ ವಿನಾಯಗಮೂರ್ತಿ ಅವರ ಸಂಗೀತ ಮತ್ತು ಎಂ ಜೆಗನ್ ಕವಿರಾಜ್ ಮತ್ತು ಶಕ್ತಿ ಚಿದಂಬರಂ ಅವರ ಸಾಹಿತ್ಯವಿದೆ. ಈ ಚಿತ್ರವನ್ನು ರಾಜನ್ ಮತ್ತು ನೀಲಾ ನಿರ್ಮಿಸಿದ್ದು, ಇ ಸುರೇಶ್ ಪ್ರಭಾಕರ್ ಮತ್ತು ಟಿ ಕತಿರವನ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in