ಕಾಂತಾರ ಚಿತ್ರದ ಜೂನಿಯರ್‌ ಆರ್ಟಿಸ್ಟ್‌ಗಳಿಗೆ ಊಟವೂ ಇಲ್ಲ, ಸಂಭಾವನೆಯೂ ಇಲ್ಲ! ಹೊಂಬಾಳೆ ಸಂಸ್ಥೆ ಮೇಲೆ ಗಂಭೀರ ಆರೋಪ
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಾರ ಚಿತ್ರದ ಜೂನಿಯರ್‌ ಆರ್ಟಿಸ್ಟ್‌ಗಳಿಗೆ ಊಟವೂ ಇಲ್ಲ, ಸಂಭಾವನೆಯೂ ಇಲ್ಲ! ಹೊಂಬಾಳೆ ಸಂಸ್ಥೆ ಮೇಲೆ ಗಂಭೀರ ಆರೋಪ

ಕಾಂತಾರ ಚಿತ್ರದ ಜೂನಿಯರ್‌ ಆರ್ಟಿಸ್ಟ್‌ಗಳಿಗೆ ಊಟವೂ ಇಲ್ಲ, ಸಂಭಾವನೆಯೂ ಇಲ್ಲ! ಹೊಂಬಾಳೆ ಸಂಸ್ಥೆ ಮೇಲೆ ಗಂಭೀರ ಆರೋಪ

Kantara Chapter 1: ಕುಂದಾಪುರದಲ್ಲಿ ಬೃಹತ್‌ ಸೆಟ್‌ ನಿರ್ಮಿಸಿ ಕಾಂತಾರ ಪಾರ್ಟ್ 1‌ ಚಿತ್ರದ ಶೂಟಿಂಗ್‌ ಮಾಡಲಾಗುತ್ತಿದೆ. ಈ ನಡುವೆ ಇದೇ ಶೂಟಿಂಗ್‌ನಲ್ಲಿ ಭಾಗವಹಿಸಿದ ಜೂನಿಯರ್‌ ಕಲಾವಿದರಿಗೆ, ನಿರ್ಮಾಣ ಸಂಸ್ಥೆ ಸಂಭಾವನೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೊಂಬಾಳೆ ಸಂಸ್ಥೆ ಮೇಲೆ ಗಂಭೀರ ಆರೋಪ
ಹೊಂಬಾಳೆ ಸಂಸ್ಥೆ ಮೇಲೆ ಗಂಭೀರ ಆರೋಪ

Kantara Part 1 Shooting: ಇಡೀ ಭಾರತೀಯ ಚಿತ್ರೋದ್ಯಮವನ್ನೇ ಸ್ಯಾಂಡಲ್‌ವುಡ್‌ ಕಡೆಗೆ ತಿರುಗಿ ನೋಡುವಂತೆ ಮಾಡಿದೆ ಚಿತ್ರನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್.‌ ಕೋಟಿ ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ಇದೇ ಸಂಸ್ಥೆ ಇತ್ತೀಚೆಗಷ್ಟೇ ಪ್ರಭಾಸ್‌ ಜತೆಗೆ ಒಟ್ಟು ಮೂರು ಸಿನಿಮಾಗಳನ್ನು ಘೋಷಣೆ ಮಾಡಿತ್ತು. ಇತ್ತ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರ ಪಾರ್ಟ್‌ 1 ಚಿತ್ರದ ಶೂಟಿಂಗ್‌ ಸಹ ನಡೆಯುತ್ತಿದ್ದು, ಬೃಹತ್‌ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣಕ್ಕೆ ನೂರಾರು ಸಂಖ್ಯೆಯ ಜೂನಿಯರ್‌ ಕಲಾವಿದರೂ ಭಾಗವಹಿಸಿದ್ದಾರೆ.

ಕುಂದಾಪುರದಲ್ಲಿ ಕಾಂತಾರ ಸಿನಿಮಾದ ದೊಡ್ಡ ಸೆಟ್‌ ಹಾಕಲಾಗಿದೆ. ಮೊದಲ ಪಾರ್ಟ್‌ಗಿಂತ ದೊಡ್ಡ ಮಟ್ಟದಲ್ಲಿ ಪ್ರೀಕ್ವೆಲ್‌ ಸಿನಿಮಾ ಹೊರತರುತ್ತಿದ್ದಾರೆ ರಿಷಬ್‌ ಶೆಟ್ಟಿ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಷ್ಟೇ ಗ್ರ್ಯಾಂಡ್‌ ಕ್ಯಾನ್ವಾಸ್‌ನೊಂಡಿಗೆ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾದ ಶೂಟಿಂಗ್‌ ಸಲುವಾಗಿಯೇ ಬೆಂಗಳೂರು ಮಾತ್ರವಲ್ಲದೆ, ಕೇರಳ ಭಾಗದಿಂದಲೂ ಸಾಕಷ್ಟು ಮಂದಿ ಕುಂದಾಪುರಕ್ಕೆ ಆಗಮಿಸಿದ್ದಾರೆ. ಹಾಗೆ ಬಂದ ಜೂನಿಯರ್‌ ಕಲಾವಿದರಿಗೆ ಐದು ದಿನಗಳು ಕಳೆದರೂ ಸಂಬಳ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ವಿಡಿಯೋ ಮಾಡಿರುವ ಜೂನಿಯರ್‌ ಕಲಾವಿದರು, ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಚಿತ್ರೀಕರಣಕ್ಕೆ ಬಂದು ಇಂಥ ಸ್ಥಿತಿ ಎದುರಿಸ್ತಿವಿ ಅಂದುಕೊಂಡರಲಿಲ್ಲ. ಊಟ ಇಲ್ಲ, ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಸಂಬಳ ಕೊಡ್ತಿಲ್ಲ ಎಂದು ಹೊಂಬಾಳೆ ಫಿಲಂಸ್‌ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಮಗೆ ಸರಿಯಾಗಿ ಸಂಭಾವನೆ ನೀಡುತ್ತಿಲ್ಲ..

ನಮಗೆ ಒಳ್ಳೆ ಮರ್ಯಾದೆ ಕೊಟ್ಟಿದ್ದಾರೆ ಇವರು. ಒಂದು ತಿಂಗಳು ಅಂತ ಕರೆಸಿಕೊಳ್ಳೋದಾಗಿ ಹೇಳಿ, 5 ದಿನಕ್ಕೆ ಕಳಿಸುತ್ತಿದ್ದಾರೆ. ಎರಡೇ ದಿನಗಳಲ್ಲಿ ರೂ‌ಮ್‌ ಕ್ಲೀನ್ ಮಾಡ್ತಿನಿ ಅಂತ ಹೇಳಿದ್ರು. ಇನ್ನೂ ಮಾಡಿಲ್ಲ. ಈಗ 5 ದಿನ ಆಗಿದೆ. ಇನ್ನೂ ರೂಮ್‌ ಕ್ಲೀನ್‌ ಮಾಡಿಲ್ಲ. ಇನ್ನೂ ಹಾಗೇ ಇದ್ದೀವಿ. ಇನ್ನೂ ಪೇಮೆಂಟ್‌ ಆಗಿಲ್ಲ. ಹುಡುಗರಿಗೆ ಬಸ್‌ ಸಿಗಲ್ಲ. ಬೆಳಗ್ಗೆಯಿಂದ ಊಟ ಕೊಟ್ಟಿಲ್ಲ. ಲೇಡಿಸ್‌ಗೂ ಇನ್ನು ಕೊಟ್ಟಿಲ್ಲ. ಬೆಂಗಳೂರಿಂದ ಬಂದಿದ್ದಾರೆ. ಕೇರಳದಿಂದ ಬಂದಿದ್ದಾರೆ. ಯಾರಿಗೂ ಸಂಬಳ ಕೊಟ್ಟಿಲ್ಲ. ನೂರು ಸಲ ಮೇಲೆ ಹತ್ತಿಸಿ ನೂರು ಸಲ ಕೆಳಗೆ ಇಳಿಸ್ತಾರೆ. ಕಾಲು ನೋಯ್ತಿವೆ. ಯಾರಿಗಾದ್ರೂ ಹೆಚ್ಚು ಕಡಿಮೆ ಆದರೆ ಏನ್‌ ಮಾಡೋದು?" ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ

ಸ್ಪಷ್ಟನೆ ನೀಡದ ಹೊಂಬಾಳೆ ಫಿಲಂಸ್‌

ಕುಂದಾಪುರದಲ್ಲಿನ ಶೂಟಿಂಗ್‌ ಸೆಟ್‌ ಬಳಿಕ ನೂರಾರು ಸಂಖ್ಯೆಯ ಜೂನಿಯರ್‌ ಆರ್ಟಿಸ್ಟ್‌ಗಳು ವಿಡಿಯೋ ಮಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಇದೆಷ್ಟರ ಮಟ್ಟಿಗೆ ನಿಜ, ಇದರ ಸತ್ಯಾಸತ್ಯತೆ ಏನು? ಈ ಬಗ್ಗೆ ಹೊಂಬಾಳೆ ಫಿಲಂಸ್‌ ಸ್ಪಷ್ಟನೆ ನೀಡಬೇಕಿದೆ.

Whats_app_banner