Kannada News  /  Entertainment  /  Kabzaa Box Office Collection Day 1
ಮೊದಲ ದಿನ ‘ಕಬ್ಜ’ ಬೊಕ್ಕಸಕ್ಕೆ 55 ಕೋಟಿ ರೂ.. ಯಾವ ಭಾಷೆಯಲ್ಲಿ ಎಷ್ಟೆಷ್ಟು?
ಮೊದಲ ದಿನ ‘ಕಬ್ಜ’ ಬೊಕ್ಕಸಕ್ಕೆ 55 ಕೋಟಿ ರೂ.. ಯಾವ ಭಾಷೆಯಲ್ಲಿ ಎಷ್ಟೆಷ್ಟು?

Kabzaa Day 1 Collection: ಮೊದಲ ದಿನ ‘ಕಬ್ಜ’ ಬೊಕ್ಕಸಕ್ಕೆ ಹರಿದು ಬಂತು 55 ಕೋಟಿ ರೂಪಾಯಿ.. ಯಾವ ಭಾಷೆಯಲ್ಲಿ ಎಷ್ಟೆಷ್ಟು?

18 March 2023, 12:32 ISTHT Kannada Desk
18 March 2023, 12:32 IST

ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿರುವ ಕಬ್ಜ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಬೆಳೆಯನ್ನೇ ತೆಗೆದಿದೆ. 

Kabzaa Day 1 Box Office Collection: ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕನಾಗಿ ನಟಿಸಿರುವ ಕಬ್ಜ ಸಿನಿಮಾಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ (ಮಾರ್ಚ್‌ 17) ಬಿಡುಗಡೆ ಆಗಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಮತ್ತೊಂದು ಹೊಸ ಲೋಕಕ್ಕೆ ಕರೆದೊಯ್ದಿದೆ. ಮೆಚ್ಚುಗೆಯ ಜತೆಗೆ ಕಲೆಕ್ಷನ್‌ ವಿಚಾರದಲ್ಲಿಯೂ ಈ ಸಿನಿಮಾ ದಾಖಲೆಯನ್ನು ಬರೆದಿದೆ. ಅಂದರೆ, ಮೊದಲ ದಿನವೇ ಒಟ್ಟಾರೆಯಾಗಿ 55 ಕೋಟಿ ರೂ. ಗಳಿಕೆ ಕಂಡಿದೆ ಕಬ್ಜ.

ಟ್ರೆಂಡಿಂಗ್​ ಸುದ್ದಿ

ಕೆಜಿಎಫ್, ಕಾಂತಾರ ಚಿತ್ರಗಳ ನಂತರ ದೇಶದಾದ್ಯಂತ ಕಬ್ಜ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ಎಲ್ಲ ಭಾಷೆಗಳಲ್ಲಿ ಪಾರಮ್ಯ ಮೆರೆದಿದೆ. ಕೇವಲ ರಾಜ್ಯ, ರಾಷ್ಟ್ರದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕಬ್ಜ ಸಿನಿಮಾ ಕಮಾಲ್‌ ಮಾಡಿದೆ.

ಭಾಷಾವಾರು ಕಲೆಕ್ಷನ್‌ ಎಷ್ಟು?

ಒಂದೊಂದೇ ಭಾಷೆಯಲ್ಲಿ ಕಬ್ಜ ಸಿನಿಮಾ ಗಳಿಕೆ ಎಷ್ಟು ಎಂಬುದನ್ನು ನೋಡುವುದಾದರೆ, ಕನ್ನಡದಲ್ಲಿ ಈ ಸಿನಿಮಾ ಶುಕ್ರವಾರ 20 ಕೋಟಿ ರೂ ಗಳಿಸಿದರೆ, ಹಿಂದಿಯಲ್ಲಿ 12 ಕೋಟಿ ರೂ. ಬಾಚಿಕೊಂಡಿದೆ. ತೆಲುಗಿನಲ್ಲಿ 7 ಕೋಟಿ ರೂ. ಮತ್ತು ತಮಿಳಿನಲ್ಲಿ 5 ಕೋಟಿ. ರೂ ಬೊಕ್ಕಸಕ್ಕೆ ಹಾಕಿಕೊಂಡರೆ, ಮಲಯಾಳಂನಲ್ಲಿ 3 ಕೋಟಿ ರೂ. ಕಮಾಯಿ ಮಾಡಿದೆ. ವಿದೇಶದಲ್ಲಿ 8 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಚಿತ್ರತಂಡದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ತೆಲುಗಿಗೆ ಹೊರಟ್ರಾ ಆರ್‌. ಚಂದ್ರು..

ಕನ್ನಡದಲ್ಲಿ ಯಶಸ್ಸು ಕಂಡ ಅನೇಕ ನಿರ್ದೇಶಕರು ಪರಭಾಷೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಪ್ರಶಾಂತ್‌ ನೀಲ್‌, ಎ. ಹರ್ಷ, ಪವನ್‌ ಕುಮಾರ್‌, ನಾಗಶೇಖರ್‌ ಸೇರಿದಂತೆ ಅನೇಕ ನಿರ್ದೇಶಕರು ಪರಭಾಷೆಯಲ್ಲಿ ಸಿನಿಮಾ ಡೈರೆಕ್ಷನ್‌ ಕೈ ಹಾಕಿದ್ದಾರೆ. ಇದೀಗ ಆರ್.‌ ಚಂದ್ರು ಕೂಡಾ ತೆಲುಗು ಸಿನಿಮಾವೊಂದಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದು ಈ ಚಿತ್ರದಲ್ಲಿ ಪವನ್‌ ಕಲ್ಯಾಣ್‌ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಸ್ಯಾಂಡಲ್‌ವುಡ್‌ ವಲಯದಲ್ಲಿ ಹರಿದಾಡುತ್ತಿದೆ. ತೆಲುಗು ಸ್ಟಾರ್‌ ನಟ ಪವನ್‌ ಕಲ್ಯಾಣ್‌ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ನೋಡಿ ಥ್ರಿಲ್‌ ಆಗಿದ್ದಾರಂತೆ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Dare Devil Musthafa Look: ಅಯ್ಯೋ ‘ಡೇರ್‌ ಡೆವಿಲ್‌ ಮುಸ್ತಫಾ’ ಇವ್ನಾ!?; ಕೊನೆಗೂ ರಿವೀಲ್‌ ಆಯ್ತು ಪೂಚಂತೇ ಕಥೆ ಆಧರಿತ ಚಿತ್ರದ ನಾಯಕನ ಲುಕ್

ಮುಸ್ತಫಾ ಯಾರು? ಮುಸ್ತಫಾ ಯಾರು.. ಅಯ್ಯೋ ಮುಸ್ತಫಾ ಯಾರು? ಹೀಗೊಂದು ಹುಳವನ್ನು ಕಳೆದ ಕೆಲವು ದಿನಗಳಿಂದ ತಲೆಗೆ ಬಿಟ್ಟಿತ್ತು ‘ಡೇರ್‌ ಡೆವಿಲ್‌ ಮುಸ್ತಫಾ’ ಚಿತ್ರತಂಡ. ಬಗೆಬಗೆಯ ಪ್ರೋಮೋ ಮೂಲಕ ಕುತೂಹಲಕ್ಕೂ ಮತ್ತಷ್ಟು ಮಗದಷ್ಟು ಒಗ್ಗರಣೆ ಹಾಕಿತ್ತು. ಇನ್ನೇನು ಮುಸ್ತಫಾ ಇವನೇ ಎನ್ನುವಷ್ಟರ ಮಟ್ಟಿಗೆ ಕಾಯಿಸಿ, ಇನ್ನೂ ಸ್ವಲ್ಪ ದಿನ ಆ ಕಾಯುವಿಕೆ ಇರಲಿ ಎಂದಿತ್ತು. ಇದೀಗ ಕೊನೆಗೂ ಆ ಕಾಯುವಿಕೆಗೆ ಫುಲ್‌ಸ್ಟಾಪ್‌ ಬಿದ್ದಿದೆ. ಮುಸ್ತಪಾ ಲುಕ್‌ ರಿವೀಲ್‌ ಆಗಿದೆ. ಪೂರ್ತಿ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ