Kajal Aggarwal: ಮಾತೃಭಾಷೆ ಹಿಂದಿ ಆದರೂ ನನಗೆ ಉತ್ತಮ ವಾತಾವರಣ ಮುಖ್ಯ, ಸೌತ್ನಂತೆ ಬಾಲಿವುಡ್ನಲ್ಲಿ ಶಿಸ್ತು ಇಲ್ಲ; ಕಾಜಲ್ ಅಗರ್ವಾಲ್
ಹಿಂದಿ ನನ್ನ ಮಾತೃಭಾಷೆ ನಿಜ. ಆದರೆ ನಾನು ಅದಕ್ಕಿಂತ ಉತ್ತಮ ವಾತಾವರಣಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ. ದಕ್ಷಿಣದಲ್ಲಿ ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಾರೆ. ಆದರೆ ಬಾಲಿವುಡ್ನಲ್ಲಿ ಆ ರೀತಿ ಇಲ್ಲ.
ಕಾಜಲ್ ಅಗರ್ವಾಲ್ ಮುಂಬೈನಲ್ಲಿ ಹುಟ್ಟಿ, ಬೆಳೆದರೂ ಉತ್ತರ ಭಾರತಕ್ಕೆ ಸೇರಿದವರಾದರೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಮದುವೆ, ಮಗು ಎಂದು ನಟನೆಯಿಂದ ದೂರಾಗಿದ್ದ ಈ ಚೆಲುವೆ ಈಗ ನಟನೆಗೆ ವಾಪಸಾಗಿದ್ದಾರೆ.
ಈಗ ದಕ್ಷಿಣದ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿವೆ. ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆಯುತ್ತಿವೆ. ಈ ಸಂದರ್ಭದಲ್ಲಿ ನಟಿ ಕಾಜಲ್ ಅಗರ್ವಾಲ್ ಬಾಲಿವುಡ್ನಲ್ಲಿ ಶಿಸ್ತು ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ಧಾರೆ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಾಜಲ್ ಅಗರ್ವಾಲ್, ಬಹಳಷ್ಟು ಕಲಾವಿದರು ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಬಯಸುತ್ತಾರೆ. ಆದರೆ ಬಾಲಿವುಡ್ನಲ್ಲಿ ಶಿಸ್ತು ಇಲ್ಲ. ದಕ್ಷಿಣದಲ್ಲಿ ಬಹಳ ಪ್ರತಿಭಾವಂತ ನಿರ್ದೇಶಕ, ತಂತ್ರಜ್ಞರು ಇದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸಿನಿಮಾದಲ್ಲಿ ಉತ್ತಮ ಕಂಟೆಂಟ್ ಇದೆ ಎಂದಿದ್ಧಾರೆ.
ಹಿಂದಿ ನನ್ನ ಮಾತೃಭಾಷೆ ನಿಜ. ಆದರೆ ನಾನು ಅದಕ್ಕಿಂತ ಉತ್ತಮ ವಾತಾವರಣಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ. ದಕ್ಷಿಣದಲ್ಲಿ ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಾರೆ. ಆದರೆ ಬಾಲಿವುಡ್ನಲ್ಲಿ ಆ ರೀತಿ ಇಲ್ಲ. ಮೌಲ್ಯಗಳು, ನೈತಿಕತೆ, ಶಿಸ್ತಿನ ವಿಚಾರಕ್ಕೆ ಬರುವುದಾದರೆ ದಕ್ಷಿಣ ಚಿತ್ರರಂಗವೇ ಬೆಸ್ಟ್ ಎಂದಿದ್ಧಾರೆ. ಕಾಜಲ್ ಅಗರ್ವಾಲ್ ಮಾತುಗಳಿಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಾಲಿವುಡ್ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ.
2020ರಲ್ಲಿ ಗೌತಮ್ ಕಿಚ್ಲು ಕೈ ಹಿಡಿದ ಕಾಜಲ್ ಅಗರ್ವಾಲ್
2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದ ಕಾಜಲ್, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್ಗಳನ್ನು ಮುಗಿಸಿ ಕುಟುಂಬದ ಕಡೆಗೆ ಗಮನ ನೀಡಿದರು. ಗರ್ಭಿಣಿಯಾದ ನಂತರ ತಾವು ಒಪ್ಪಿಕೊಂಡಿದ್ದ 3-4 ಸಿನಿಮಾಗಳಿಂದ ಕಾಜಲ್ ಹೊರ ಬಂದಿದ್ದರು. 2022 ಏಪ್ರಿಲ್ನಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಇದೀಗ ಅವರು ಮತ್ತೆ ನಟನೆಗೆ ವಾಪಸಾಗಿದ್ದಾರೆ.
ಕಾಜಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಎಸ್. ಶಂಕರ್ ನಿರ್ದೇಶಿಸುತ್ತಿರುವ 'ಇಂಡಿಯನ್ 2' ಚಿತ್ರದಲ್ಲಿ ನಟಿಸುತ್ತಿದ್ಧಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್, ನಯನ ತಾರಾ, ಕಾಜಲ್ ಅಗರ್ವಾಲ್, ಬಾಬ್ಬಿ ಸಿಂಹ, ವಿದ್ಯುತ್ ಜಮಾಲ್, ರಕುಲ್ ಪ್ರೀತ್ ಸಿಂಗ್, ಐಶ್ವರ್ಯ ರಾಜೇಶ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. 'ಇಂಡಿಯನ್ 2' ಸಿನಿಮಾ ಮಾತ್ರವಲ್ಲ, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಸಿನಿಮಾಗಳನ್ನು ಶೀಘ್ರದಲ್ಲೇ ಕಂಪ್ಲೀಟ್ ಮಾಡಲಿದ್ದಾರೆ. ಜೊತೆಗೆ ಹೊಸ ಸಿನಿಮಾಗಳ ಕಥೆಗಳನ್ನು ಕೂಡಾ ಕೇಳುತ್ತಿದ್ದಾರಂತೆ. ಮದುವೆಯಾದ ನಂತರ ಕಾಜಲ್, ಗ್ಲಾಮರ್ ರೋಲ್ಗಳನ್ನು ಬಿಟ್ಟು ಮಹಿಳಾ ಪ್ರಧಾನ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾಜಲ್, ಮಹಿಳಾ ಪ್ರಧಾನ ಪಾತ್ರಗಳನ್ನು ಬಿಟ್ಟು ಈಗಲೂ ಗ್ಲಾಮರ್ ರೋಲ್ಗಳಿಗೆ ರೆಡಿ ಇದ್ದಾರಂತೆ. 'ಪುಷ್ಪ 2' ಚಿತ್ರದ ಸ್ಪೆಷಲ್ ಹಾಡಿಗೆ ಚಿತ್ರತಂಡ ಕಾಜಲ್ ಅಗರ್ವಾಲ್ ಅವರನ್ನು ಕರೆ ತರುತ್ತಿದೆ ಎನ್ನಲಾಗಿದೆ. ಆದರೆ ಕಾಜಲ್ ಆಗಲೀ, ಚಿತ್ರತಂಡವಾಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.