ಕನ್ನಡ ಸುದ್ದಿ  /  Entertainment  /  Kajal Aggarwal Re Entry For Movies

Kajal Aggarwal: ಚಿತ್ರರಂಗಕ್ಕೆ ರೀ ಎಂಟ್ರಿ ಕೊಡ್ತಿದ್ದಾರಾ ಮಗಧೀರನ ಹುಡುಗಿ...ಟಾಲಿವುಡ್​​ ಮಂದಿ ಹೇಳೋದೇನು..?

ಕಳೆದ ಏಪ್ರಿಲ್​​​​ನಲ್ಲಿ ಮಗುವಿಗೆ ಜನ್ಮ ನೀಡಿರುವ ಕಾಜಲ್ ಅಗರ್​ವಾಲ್​ ಸದ್ಯಕ್ಕೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಆಪ್ತ ಮೂಲಗಳ ಮಾಹಿತಿ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಕಾಜಲ್ ಒಂದೊಳ್ಳೆ ಸ್ಕ್ರಿಪ್ಟ್​ ಜೊತೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಕಾಜಲ್ ಅಗರ್​​ವಾಲ್
ಕಾಜಲ್ ಅಗರ್​​ವಾಲ್

ಮಗಧೀರನ ಸುಂದರಿ ಕಾಜಲ್ ಅಗರ್​​ವಾಲ್ ಮದುವೆ ಆಗುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರು ಮತ್ತೆ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗಿದ್ದರು. ನಂತರ ಅವರ ಪ್ರೆಗ್ನೆನ್ಸಿ ವಿಚಾರ ತಿಳಿದಾಗಲಂತೂ ಇನ್ನು ಅವರು ನಟಿಸುವುದೇ ಇಲ್ಲ ಎಂದುಕೊಂಡಿದ್ದರು. ಆದರೆ ಕಾಜಲ್ ಈಗ ಮತ್ತೆ ಸಿನಿಮಾಗೆ ವಾಪಸಾಗಲಿದ್ದಾರಂತೆ. ಹಾಗೊಂದು ಸುದ್ದಿ ಟಾಲಿವುಡ್​​​ನಲ್ಲಿ ಹರಿದಾಡುತ್ತಿದೆ.

ತೆಲುಗು, ತಮಿಳು ಭಾಷೆಗಳಲ್ಲಿ ಟಾಪ್ ಹೀರೋಯಿನ್ ಆಗಿ ಧೂಳೆಬ್ಬಿಸಿದ್ದ ಈ ಚೆಲುವೆ 2020ರಲ್ಲಿ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅನೇಕ ನಾಯಕಿಯರು ಮದುವೆಯ ನಂತರವೂ ನಟನೆಯನ್ನು ಮುಂದುವರೆಸುತ್ತಾರೆ. ಆದರೆ ಸದ್ಯಕ್ಕೆ ಕಾಜಲ್ ಅಗರ್​​ವಾಲ್ ನಟನೆಯಿಂದ ವಿರಾಮ ತೆಗೆದುಕೊಂಡು ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಕಳೆದ ಏಪ್ರಿಲ್​​​​ನಲ್ಲಿ ಮಗುವಿಗೆ ಜನ್ಮ ನೀಡಿರುವ ಕಾಜಲ್ ಅಗರ್​ವಾಲ್​ ಸದ್ಯಕ್ಕೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಆಪ್ತ ಮೂಲಗಳ ಮಾಹಿತಿ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಕಾಜಲ್ ಒಂದೊಳ್ಳೆ ಸ್ಕ್ರಿಪ್ಟ್​ ಜೊತೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಮದುವೆಯಾದ ನಂತರ ಮೆಗಾಸ್ಟಾರ್ ಅಭಿನಯದ 'ಆಚಾರ್ಯ' ಚಿತ್ರದಲ್ಲಿ ಕಾಜಲ್ ಅಗರ್​​​ವಾಲ್ ನಟಿಸಿದ್ದರು. ಆದರೆ ಅಷ್ಟರಲ್ಲಿ ಆಕೆ ಗರ್ಭಿಣಿ ಆದ್ದರಿಂದ ಚಿತ್ರದಿಂದ ಹೊರ ಬಂದರು. ಆ ಕಾರಣದಿಂದ ಕಾಜಲ್ ನಟಿಸಿದ್ದ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಕಾಜಲ್ ಅಭಿನಯದ ಮತ್ತೊಂದು ಅದ್ಧೂರಿ ಚಿತ್ರ 'ಇಂಡಿಯನ್-2'. ಶಂಕರ್ ನಿರ್ದೇಶನದ ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಆರಂಭದಿಂದಲೂ ನಾನಾ ವಿವಾದಗಳು, ಕಾರಣಗಳಿಂದಾಗಿ ಸಿನಿಮಾ ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನಿರ್ದೇಶಕ ಶಂಕರ್ ಸದ್ಯ ರಾಮ್ ಚರಣ್ ಅಭಿನಯದ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ನಂತರ 'ಇಂಡಿಯನ್ 2' ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟರಲ್ಲಿ ಕಾಜಲ್ ಕೂಡಾ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದ ಕಾಜಲ್, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್​​​​ಗಳನ್ನು ಮುಗಿಸಿ ವೈಯಕ್ತಿಕ ಜೀವನದ ಕಡೆಗೆ ಗಮನ ನೀಡಿದರು. ಮದುವೆಯಾದ ನಂತರ ಕೂಡಾ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕಾಜಲ್ ಹೇಳಿದ್ದರೂ, ಆಕೆ ಸಿನಿಮಾ ರಂಗದಿಂದ ದೂರ ಉಳಿದು ಪತಿ ಗೌತಮ್ ಕಿಚ್ಲು ಬ್ಯುಸ್ನೆಸ್​​​​ಗೆ ಸಹಾಯ ಮಾಡುತ್ತಾರೆ ಎಂದು ಆಪ್ತ ಮೂಲಗಳಿಂದ ಮಾಹಿತಿ ದೊರೆತಿತ್ತು. ಆದರೆ ಗರ್ಭಿಣಿಯಾದ ನಂತರ ತಾವು ಒಪ್ಪಿಕೊಂಡಿದ್ದ 3-4 ಸಿನಿಮಾಗಳಿಂದ ಕಾಜಲ್ ಹೊರ ಬಂದಿದ್ದರು.

ಪಂಜಾಬಿ ಕುಟುಂಬಕ್ಕೆ ಸೇರಿದ ಕಾಜಲ್ ಅಗರ್​​ವಾಲ್ ಹೆಸರು ಮಾಡಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ. 2004 ರಲ್ಲಿ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಾಜಲ್ ಅಗರ್​ವಾಲ್ ಅದೇ ವರ್ಷ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದರು. ಚಂದಮಾಮಾ, ಮಗಧೀರ, ಆರ್ಯ 2, ಡಾರ್ಲಿಂಗ್ , ಮಿ. ಪರ್ಫೆಕ್ಟ್, ಸಿಂಗಂ, ನಾಯಕ್, ಎವುಡು, ಜನತಾ ಗ್ಯಾರೇಜ್, ಕೈದಿ ನಂ 150 ಸೇರಿ ಕಾಜಲ್ ಅಗರ್​​ವಾಲ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

IPL_Entry_Point