'ಕಲ್ಕಿ 2' ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ
ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಅಭಿನಯದ ಸಿನಿಮಾ 'ಕಲ್ಕಿ 2898 AD' ಭಾರೀ ಯಶಸ್ಸು ಕಂಡಿರುವುದರಿಂದ ಈ ಸಿನಿಮಾದ ಮುಂಬರುವ ಭಾಗವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಅಭಿನಯದ ಸಿನಿಮಾ 'ಕಲ್ಕಿ 2898 AD' ಭಾರೀ ಯಶಸ್ಸು ಪಡೆದುಕೊಂಡಿದೆ. ಅದಾದ ನಂತರದಲ್ಲಿ ಸಾಕಷ್ಟು ಜನರು ಈ ಸಿನಿಮಾದ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಚಿತ್ರೀಕರಣ ವಿಳಂಬವಾಗುತ್ತಿದೆ. ವರದಿಯ ಪ್ರಕಾರ, ಕಲ್ಕಿ 2 ಚಿತ್ರೀಕರಣವು 2025ರ ಬೇಸಿಗೆಯಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಇನ್ನೂ ಸ್ವಲ್ಪ ದಿನ ಮುಂದೂಡವ ಲಕ್ಷಣ ತೋರುತ್ತಿದೆ. ನಟಿ ದೀಪಿಕಾ ತಮ್ಮ ಮಗಳ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ತನ್ನ ಪುಟ್ಟ ರಾಜಕುಮಾರಿಯನ್ನು ದಾದಿಯೊಂದಿಗೆ ಬಿಡಲು ಬಯಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
"ನನ್ನ ತಾಯಿ ನನ್ನನ್ನು ಬೆಳೆಸಿದ ರೀತಿಯಲ್ಲಿಯೇ ನಾನು ನನ್ನ ಮಗಳನ್ನು ನಾನೇ ಬೆಳೆಸುತ್ತೇನೆ" ಎಂದು ದೀಪಿಕಾ ಈವೆಂಟ್‌ನಲ್ಲಿ ಹೇಳಿದ್ದಾರೆ. ಮಗಳಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಶೂಟಿಂಗ್ ತಡವಾಗಬಹುದು ಎಂದು ಹೇಳಲಾಗಿದೆ.
ದೀಪಿಕಾ ಹಾಗೂ ರಣವೀರ್ ಸೆಪ್ಟೆಂಬರ್ 8, 2024 ರಂದು ತಮ್ಮ ಮಗುವನ್ನು ಸ್ವಾಗತಿಸಿದ್ದು, ಮೂರು ತಿಂಗಳಷ್ಟೇ ಆಗಿದೆ. ಆ ಕಾರಣಕ್ಕಾಗಿ ಅವರು ತಮ್ಮ ಮಗಳೊಂದಿಗೆ ಇನ್ನಷ್ಟು ದಿನ ಜೊತೆಗಿರಲು ಬಯಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ.
ಕಲ್ಕಿ 2 ಸಿನಿಮಾ ಬಗ್ಗೆ ಅಭಿಮಾನಿಗಳ ಊಹೆ
"ಎರಡನೇ ಭಾಗದಲ್ಲಿ ಬುಜ್ಜಿ ಕಾರು ಬಿಳಿ ಕುದುರೆಯಾಗಿ ಬದಲಾಗಲಿದೆ. ಈ ಬುಜ್ಜಿ ಕುದುರೆ ದೀಪಿಕಾಗೆ ಹುಟ್ಟಲಿರುವ ಮಗನನ್ನು ತರುತ್ತಾನೆ" ಎಂದು ಅಭಿಮಾನಿಯೊಬ್ಬರು ಊಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಗ್ ಅಶ್ವಿನ್, "ಊಹೆ ಚೆನ್ನಾಗಿದೆ. ಅದು ಸುಳ್ಳಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. "ಪ್ರಭಾಸ್ ನಿಜವಾಗಿ ದೀಪಿಕಾ ಅವರ ಮಗ, ಅವರನ್ನು ರಕ್ಷಿಸಲು ಭವಿಷ್ಯದಿಂದ ಬರುತ್ತಾರೆ" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
"ಎರಡನೇ ಭಾಗದಲ್ಲಿ, ದುಲ್ಕರ್ ಸಲ್ಮಾನ್ ಪಾತ್ರವು ಮತ್ತೆ ಬಂದು ಪ್ರಭಾಸ್ ಬಗ್ಗೆ ಬಹಿರಂಗಪಡಿಸುತ್ತದೆ ಮತ್ತು ಸುಪ್ರೀಮ್ ಯಾಸ್ಕಿನ್ ಅನ್ನು ಕೊನೆಗೊಳಿಸಲು ವಿಜಯ್ ದೇವರಕೊಂಡ ಅವರ ಪಾತ್ರವೂ ಪ್ರಭಾಸ್ ಅವರೊಂದಿಗೆ ಕೈಜೋಡಿಸುತ್ತದೆ" ಎಂದೆಲ್ಲ ಫ್ಯಾನ್ಸ್ ಊಹಿಸಿದ್ದಾರೆ. ಆದರೆ, ಇವು ನಿಜವಲ್ಲ ಎಂದು ನಾಗ್ ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ಕಲ್ಕಿ ಸಿನಿಮಾ ಒಟಿಟಿ ವೀಕ್ಷಣೆ ಎಲ್ಲಿ?
ಕಲ್ಕಿ 2898 ಎಡಿ ಸಿನಿಮಾದ ಹಿಂದಿ ಆವೃತ್ತಿಯು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ತೆಲುಗು ಅಥವಾ ಹಿಂದಿ ಭಾಷೆಯಲ್ಲಿ ನೋಡಿದ್ದರೆ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲಿ ಕೂಡ ನೋಡಬಹುದಾಗಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope