ಕನ್ನಡ ಸುದ್ದಿ  /  ಮನರಂಜನೆ  /  ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 11: ಭಾರತದಲ್ಲಿ ಭರ್ಜರಿ ಬೆಳೆ ತೆಗೆದ ಅಮಿತಾಬ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಸಿನಿಮಾ

ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 11: ಭಾರತದಲ್ಲಿ ಭರ್ಜರಿ ಬೆಳೆ ತೆಗೆದ ಅಮಿತಾಬ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಸಿನಿಮಾ

Kalki 2898 AD box office collection day 11: ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾವು ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದೆ.

ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 11
ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 11

Kalki 2898 AD box office collection day 11: ಹನ್ನೊಂದು ದಿನಗಳ ಹಿಂದೆ ಭಾರತ ಮತ್ತು ಜಾಗತಿಕವಾಗಿ ಬಿಡುಗಡೆಯಾದ ಕಲ್ಕಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆಯುವುದನ್ನು ಮುಂದುವರೆಸಿದೆ. ನಾಗ್ ಅಶ್ವಿನ್ ಅವರ ಡಿಸ್ಟೋಪಿಯನ್ ವೈಜ್ಞಾನಿಕ ಚಿತ್ರ ಕಲ್ಕಿ 2898 ಎಡಿಯು ಗಳಿಕೆಯಲ್ಲಿ ಭಾರತದಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟಿದೆ. ಸಕ್‌ನಿಲ್ಕ್‌.ಕಾಂ ಪ್ರಕಾರ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಒಳಗೊಂಡಿರುವ ಈ ಸಿನಿಮಾವು ಬಿಡುಗಡೆಯಾದ 11 ನೇ ದಿನಕ್ಕೆ 506.87 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.

ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾದ ಗಳಿಕೆ ಉತ್ತಮವಾಗಿದೆ. ಸಕ್‌ನಿಲ್ಕ್‌ ಪೋರ್ಟಲ್‌ ಪ್ರಕಾರ ಕಲ್ಕಿ 2898 ಎಡಿ ಸಿನಿಮಾವು ಭಾರತದಲ್ಲಿ ತನ್ನ 11 ನೇ ದಿನದಂದು ಎಲ್ಲಾ ಭಾಷೆಗಳಲ್ಲಿ ಸುಮಾರು 41.17 (ನಿವ್ವಳ ಗಳಿಕೆ) ಕೋಟಿ ರೂಪಾಯಿ ಗಳಿಸಿತ್ತು. ಇದರಿಂದ ಭಾರತದಲ್ಲಿ ಒಟ್ಟಾರೆ ಗಳಿಕೆ 506.87 ಕೋಟಿ ರೂ.ಗೆ ತಲುಪಿದೆ.

ಈ ಸೈನ್ಸ್‌ ಫಿಕ್ಷ್‌ ಸಿನಿಮಾವು ವಾರಾಂತ್ಯದಲ್ಲಿ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಲಾಭ ಗಳಿಸಿದೆ. ಇದು ಸಿನಿಮಾ ಬಿಡುಗಡೆಯಾದ ಬಳಿಕದ ಎರಡನೇ ವೀಕೆಂಡ್‌.

ಟ್ರೆಂಡಿಂಗ್​ ಸುದ್ದಿ

ಕಲ್ಕಿ 2898 ಎಡಿ ಮುಂದಿನ ಅಧ್ಯಾಯದಲ್ಲಿ ಪ್ರಭಾಸ್‌ ಪಾತ್ರಕ್ಕೆ ಮರಣ, ಹಿಂದಿ ಚಿತ್ರರಂಗದವರು ದಕ್ಷಿಣ ಭಾರತೀಯರಿಂದ ಕಲಿಯಬೇಕು- ನಿತೀಶ್‌

ಕಲ್ಕಿ 2898 AD ಜೂನ್ 27 ರಂದು ಅದರ ಆರಂಭಿಕ ದಿನದಂದು 95.3 ಕೋಟಿ ರೂಪಾಯಿ ಗಳಿಕೆ ಮಾಡಿತು. ಮೊದಲ ವಾರ 414.85 ಕೋಟಿ ರೂ. ಗಳಿಕೆ ಮಾಡಿತ್ತು. 10 ನೇ ದಿನದಂದು ಚಿತ್ರವು 34.15 ಕೋಟಿ ವ್ಯವಹಾರ ನಡೆಸಿತು. ವಾರದ ನಡುವಿನ ದಿನಗಳಲ್ಲಿ ಗಳಿಕೆ ಕಡಿಮೆ ಇತ್ತು. ಆದರೆ ವಾರಾಂತ್ಯದಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯಿತು. ಇಂದಿನಿಂದ ನಾಡಿದ್ದು ಶುಕ್ರವಾರದ ತನಕ ಗಳಿಕೆ ಸಾಧಾರಣವಾಗಿರುವ ಸಾಧ್ಯತೆಯಿದೆ. ಮತ್ತೆ ವೀಕೆಂಡ್‌ನಲ್ಲಿ ಜಿಗಿತ ಕಾಣುವ ನಿರೀಕ್ಷೆಯಿದೆ.

ಜಾಗತಿಕವಾಗಿ ಈ 3ಡಿ ಸಿನಿಮಾವು 800 ಕೋಟಿ ರೂಪಾಯಿ ಕ್ಲಬ್‌ಗೆ ಪ್ರವೇಶಿಸಿದೆ.

ಕಲ್ಕಿ 2898 ಎಡಿ ಸಿನಿಮಾ

ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ 2898 ಎಡಿ ಸಿನಿಮಾ ಭಾರತ ಮತ್ತು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ವಿವಿಧ ಹಾಲಿವುಡ್‌ ಸಿನಿಮಾಗಳಿಂದ ಸ್ಫೂರ್ತಿ ಪಡೆದಿರುವುದಾಗಿ ನಿರ್ದೇಶಕರು ಇತ್ತೀಚೆಗೆ ಹೇಳಿದ್ದಾರೆ. ನಾಗ್ ಅಶ್ವಿನ್ ಅವರ ಮಹತ್ವಾಕಾಂಕ್ಷೆಯ 3D ಸಿನಿಮಾವು ಭಾರತದ ಅತ್ಯಂತ ದುಬಾರಿ ಸಿನಿಮಾವಾಗಿದೆ. 600 ಕೋಟಿ ಬಜೆಟ್‌ನ ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್‌ ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಕಲ್ಕಿ 2898 ಎಡಿ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಪ್ರಭಾಸ್, ದಿಶಾ ಪಟಾನಿ, ಶಾಶ್ವತ ಚಟರ್ಜಿ ಮತ್ತು ಶೋಭನಾ ಇತರರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭಾರತದ ಹಲವು ಪ್ರಮುಖ ನಟರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.