70ರ ವಯಸ್ಸಲ್ಲೂ 20ರ ಯುವಕರು ನಾಚುವಂತೆ ಕಮಲ್ ಹಾಸನ್ ಫಿಟ್ ಆಗಿರುವ ರಹಸ್ಯವೇನು? ಫಿಟ್ನೆಸ್, ಡಯೆಟ್ ರಹಸ್ಯ ತಿಳಿದುಕೊಳ್ಳೋಣ
Kamal Haasan Birthday: ಕಮಲ್ ಹಾಸನ್‌ಗೆ ಇಂದು 70 ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಯಸ್ಸಲ್ಲೂ ಹರೆಯದವರು ನಾಚುವಂತೆ ಸದೃಢವಾಗಿರುವ ಈ ಪ್ರತಿಭಾನ್ವಿತ ಹಿರಿಯ ನಟನ ವರ್ಕೌಟ್, ವ್ಯಾಯಾಮ, ಡಯೆಟ್ ಇತ್ಯಾದಿಗಳ ವಿವರ ಇಲ್ಲಿದೆ.
Kamal Haasan Birthday: ನವೆಂಬರ್ 7, 2024ರಂದು ಇವರಿಗೆ ಭರ್ತಿ 70 ವರ್ಷ ವಯಸ್ಸಾಗಿದೆ. ಆದರೆ, ಇವರ ಫಿಟ್ನೆಸ್ ನೋಡಿದವರಿಗೆ "ಕಮಲ್ ಹಾಸನ್‌ಗೆ ಇಷ್ಟೊಂದು ವಯಸ್ಸಾಯ್ತ" ಎಂಬ ಅನುಮಾನ ಮೂಡಬಹುದು. ಇತ್ತೀಚಿನ ಇಂಡಿಯನ್ 2ನಲ್ಲೂ ಇವರು ತಾತಾನ ವೇಷದಲ್ಲಿ ನಟಿಸಿದ್ದರು. ಈ ವಯಸ್ಸಲ್ಲೂ ಇವರು ಆಕ್ಟಿವ್ ಆಗಿರುತ್ತಾರೆ. ಇದಕ್ಕೆ ಕಾರಣವಾಗಿರುವುದು ಇವರ ಸಮತೋಲಿತ ಜೀವನಶೈಲಿ, ಫಿಟ್ನೆಸ್ ರೂಟಿನ್ ಆಗಿದೆ. ಈ ಮಹಾನಟನ ಜೀವನಶೈಲಿಯನ್ನು ಅನುಸರಿಸಿದರೆ ನಾವೂ ಆರೋಗ್ಯವಂತರಾಗಿ, ಫಿಟ್ನೆಸ್ ಆಗಿ ಇರಬಹುದು.
ಕಮಲ್ ಹಾಸನ್‌ಗೆ ವರ್ಕೌಟ್ ಇಷ್ಟ
ಕಮಲ್ ಹಾಸನ್ ಅವರಿಗೆ ಜಿಮ್‌ಗೆ ಹೋಗೋದೆಂದರೆ ಇಷ್ಟ. ವರ್ಕೌಟ್ ಮಾಡುವುದರಿಂದ ನಮ್ಮ ಮನಸ್ಸು ಮತ್ತು ದೇಹ ಆರೋಗ್ಯವಾಗಿರುತ್ತದೆ ಎಂದು ಅವರು ಹೇಳುತ್ತಾರೆ. ನ್ಯೂಬೈಟ್ಸ್ ವರದಿ ಪ್ರಕಾರ ವಿಶ್ವರೂಪಂ, ದಶಾವತಾರ ನಟ ಬೆಳಗ್ಗಿನ ವೇಳೆ ಜಿಮ್‌ಗೆ ಹೋಗಲು ಇಷ್ಟಪಡುತ್ತಾರೆ. ಪ್ರತಿದಿನ ಒಂದು ಅಥವಾ ಎರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಾರೆ. ಕ್ರಂಚಸ್, ವೈಟ್‌ಲಿಫ್ಟಿಂಗ್ ಮತ್ತು ತೋಳುಗಳಿಗೆ ಶಕ್ತಿ ತುಂಬುವಂತಹ ವ್ಯಾಯಾಮ ಮಾಡಲು ಪ್ರಮುಖ ಆದ್ಯತೆ ನೀಡುತ್ತಾರೆ.
ಯಾವುದಾದರೂ ನೆಪ ಹೇಳಿಕೊಂಡು ವರ್ಕೌಟ್, ವ್ಯಾಯಾಮ ತಪ್ಪಿಸುವ ಜಾಯಮಾನದವರು ಇವರಲ್ಲ. ಬಿಝಿ ಶೂಟಿಂಗ್ ನಡುವೆಯೂ ಲಭ್ಯವಿರುವ ಸೌಕರ್ಯ ಬಳಸಿಕೊಂಡು ವ್ಯಾಯಾಮ ಮಾಡುತ್ತಾರೆ. ಪುಷ್‌ಅಪ್ ಮಾಡುತ್ತ ಇರುತ್ತಾರೆ.
ಇನ್ನೊಂದು ವಿಷಯ ಗೊತ್ತ, ಕಮಲ್‌ಹಾಸನ್‌ಗೆ ಯೋಗವೆಂದರೆ ಇಷ್ಟ. ಪ್ರತಿದಿನ ಅರ್ಧಗಂಟೆಯಾದರೂ ಯೋಗ ಮಾಡಲು ಆದ್ಯತೆ ನೀಡುತ್ತಾರೆ. ದೇಹದ ಫ್ಲೆಕ್ಸಿಬಿಲಿಟಿಗೆ, ಸಮತೋಲನಕ್ಕೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಯೋಗ ನೆರವು ನೀಡುತ್ತದೆ ಎಂದು ಕಮಲ್ ಹಾಸನ್ ಹಿಂದೊಮ್ಮೆ ಹೇಳಿದ್ದರು.
ಇದರೊಂದಿಗೆ ಇವರಿಗೆ ನಡಿಗೆ ಇಷ್ಟ. ಸಮಯ ಸಿಕ್ಕಾಗ ಬಲುದೂರ ನಡೆಯುತ್ತಾರೆ. ವಾಕಿಂಗ್‌ಗೆ ಸಮಯ ಹೊಂದಿಸಲು ಪ್ರಯತ್ನಸಿಉತ್ತಾರೆ. ಪ್ರತಿನಿತ್ಯ ನಾನು 14 ಕಿ.ಮೀ. ನಡೆಯಲು ಇಷ್ಟಪಡುವೆ ಎಂದು ಹಿಂದೊಮ್ಮೆ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು.
ಕಮಲ್ ಹಾಸನ್ ಡಯೆಟ್
ಕಮಲ್ ಹಾಸನ್ ಆಹಾರದ ವಿಷಯದಲ್ಲೂ ಕಟ್ಟುನಿಟ್ಟು ಮತ್ತು ಅಚ್ಚುಕಟ್ಟಾಗಿ ಇರುತ್ತಾರೆ. ಇವರು ಸಮತೋಲಿತ ಆಹಾರ ಸೇವಿಸುತ್ತಾರಂತೆ. ಅಂದರೆ, ಪ್ರೊಟೀನ್, ಫೈಬರ್, ಹೆಲ್ದಿ ಫ್ಯಾಟ್ಸ್ ಒಳಗೊಂಡ ಆಹಾರ ಸೇವಿಸುತ್ತಾರೆ. ಇದದೇ ಸಮಯದಲ್ಲಿ ಸಂಸ್ಕರಿತ ಆಹಾರಗಳು, ಸಕ್ಕರೆ, ಮದ್ಯಪಾನ ಅವಾಯ್ಡ್ ಮಾಡುತ್ತಾರೆ. ಇದರೊಂದಿಗೆ ತಾಜಾ ಹಣ್ಣುಗಳು, ತರಕಾರಿಗಳಿಗೆ ಆದ್ಯತೆ ನೀಡುತ್ತಾರೆ. ರಾತ್ರಿ ಮಿತವಾಗಿ ಊಟ ಮಾಡುತ್ತಾರೆ.
ಹೀಗೆ ವ್ಯಾಯಾಮ ಮತ್ತು ಸಮತೋಲಿತ ಆಹಾರದ ನೆರವಿನಿಂದ ಕಮಲ್ ಹಾಸನ್ ಅವರು ತನ್ನ 70ರ ವಯಸ್ಸಲ್ಲೂ 20ರ ಹರೆಯದ ಯುವಕರು ನಾಚುವಂತೆ ಫಿಟ್ ಆಗಿದ್ದಾರೆ ಎನ್ನಬಹುದು.
ಕಮಲ್ ಹಾಸನ್ ಅವರು 1954ರ ನವೆಂಬರ್ 7ರಂದು ತಮಿಳು ಐಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತನ್ನ ಬಾಲ್ಯದ ಆರು ವರ್ಷ ಇವರು ಬಾಲ ಕಲಾವಿದರಾಗಿಯೂ ಸಿನಿಪ್ರೇಕ್ಷಕರನ್ನು ರಂಜಿಸಿದ್ದಾರೆ. ಕನ್ನಡಿಗರಿಗೆ ಕಮಲ ಹಾಸನ್ ಎಂದಾಕ್ಷಣ ನೆನಪಾಗುವುದು ರಾಮ ಭಾಮ ಶಾಮ. ರಮೇಶ್ ಅರವಿಂದ್ ಮತ್ತು ಕಮಲ ಹಾಸನ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಹಾಸ್ಯ ಚಿತ್ರ ಇದಾಗಿದೆ. ಬನ್ನಿ ಕಮಲ್ ಹಾಸನ್ ಕುರಿತು ಹೆಚ್ಚಿನ ಸುದ್ದಿಗಳನ್ನು ಇಲ್ಲಿ ಓದೋಣ.