ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್‌ ದೋಂಡಳೆ; ಸಾಲ ಶೂಲವಾಯ್ತಾ?
ಕನ್ನಡ ಸುದ್ದಿ  /  ಮನರಂಜನೆ  /  ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್‌ ದೋಂಡಳೆ; ಸಾಲ ಶೂಲವಾಯ್ತಾ?

ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್‌ ದೋಂಡಳೆ; ಸಾಲ ಶೂಲವಾಯ್ತಾ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್‌ ದೋಂಡಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್‌ ದೋಂಡಳೆ; ಸಾಲ ಶೂಲವಾಯ್ತಾ?
ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್‌ ದೋಂಡಳೆ; ಸಾಲ ಶೂಲವಾಯ್ತಾ?

Vinod Dondale Death: ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿ, ಸ್ಯಾಂಡಲ್‌ವುಡ್‌ನಲ್ಲಿಯೂ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ವಿನೋದ್‌ ದೋಂಡಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನಾಗರಭಾವಿಯಲ್ಲಿನ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದ್ದಂತೆ, ಕಿರುತೆರೆಯ ಆಪ್ತರು ಶಾಕ್‌ಗೆ ಒಳಗಾಗಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಸೀರಿಯಲ್‌ಅನ್ನು ವಿನೋದ್‌ ನಿರ್ದೇಶನ ಮಾಡುತ್ತಿದ್ದರು. ನಿರ್ಮಾಣದ ಜವಾಬ್ದಾರಿಯೂ ಅವರದ್ದೇ ಆಗಿತ್ತು. ಜತೆಗೆ ಈ ಹಿಂದೆ ನನ್ನರಸಿ ರಾಧೆ ಸೇರಿ ಹಲವು ಧಾರಾವಾಹಿಗಳಿಗೂ ನಿರ್ದೇಶನ ಮಾಡಿದ್ದರು ವಿನೋದ್‌ ದೋಂಡಳೆ. ನೀನಾಸಂ ಸತೀಶ್‌ ಅವರ ಅಶೋಕ ಬ್ಲೇಡ್‌ ಸಿನಿಮಾಕ್ಕೂ ಆಕ್ಷನ್‌ ಕಟ್‌ ಹೇಳಿದ್ದರು ಈ ನಿರ್ದೇಶಕ. ಇದೀಗ ದಿಢೀರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.

2 ದಶಕಗಳಿಂದ ಕಿರುತೆರೆಯಲ್ಲಿ ಸೇವೆ

ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‌, ತಮ್ಮದೇ ಆದ ವೃದ್ಧಿ ಕ್ರಿಯೇಷನ್ಸ್‌ ಸಂಸ್ಥೆ ಮೂಲಕ ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದರು. ವಿನೋದ್‌ ಅವರ ಜತೆಗೆ ನರಹರಿ ಕೂಡ ಜತೆಯಾಗಿ ನಿಂತಿದ್ದರು. ನಿರ್ದೇಶನದ ಜತೆಗೆ ಕಂಟೆಂಟ್‌ ವಿಚಾರವಾಗಿ ವಿನೋದ್‌ ಪೂರ್ತಿ ಜವಾಬ್ದಾರಿ ಹೊತ್ತುಕೊಂಡಿದ್ದರೆ, ನರಹರಿ ಸೀರಿಯಲ್‌ ಪ್ರೊಡಕ್ಷನ್‌ ಕೆಲಸ ನೋಡಿಕೊಳ್ಳುತ್ತಿದ್ದರು. ಈ ನಡುವೆ ಕರಿಮಣಿ ಸೀರಿಯಲ್‌ಗೂ ವೀಕ್ಷಕರಿಂದ ಮೆಚ್ಚುಗೆಯೂ ಸಿಕ್ಕಿತ್ತು. 100 ಸಂಚಿಕೆಯನ್ನೂ ಮುಗಿಸಿತ್ತು. ಅಷ್ಟರಲ್ಲಾಗಲೇ ಈ ಘಟನೆ ನಡೆದಿದೆ.

ಸಾಲ ಮಾಡಿ ಸೋತಿದ್ರಾ ವಿನೋದ್?

ಇನ್ನು ಸತೀಶ್‌ ನೀನಾಸಂ ಜತೆಗಿನ ಅಶೋಕ ಬ್ಲೇಡ್‌ ಸಿನಿಮಾದ ಕೊನೇ ಹಂತದ ಶೂಟಿಂಗ್‌ಗೂ ಇನ್ನೇನು ಶೀಘ್ರದಲ್ಲಿ ಚಾಲನೆ ನೀಡಲು ನಿರ್ದೇಶಕ ವಿನೋದ್‌ ಪ್ಲಾನ್‌ ಮಾಡಿದ್ದರು. ನೀನಾಸಂ ಸತೀಶ್‌ ಜತೆಗೂ ಈ ಬಗ್ಗೆ ಚರ್ಚೆ ನಡೆಸಿದ್ದರಂತೆ. ಹೀಗಿರುವಾಗಲೇ ಇಂದು ಬೆಳಗ್ಗೆ (ಜುಲೈ 20) ತಮ್ಮ ನಾಗರಬಾವಿಯಲ್ಲಿನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಣಕಾಸಿನ ವಿಚಾರದಲ್ಲಿ 2 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿದ್ದಕ್ಕೆ ಸಾವಿನ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇತ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಂದುವರಿದಿದ್ದು, ಕೇಸ್‌ ದಾಖಲಾಗಿದೆ.

Whats_app_banner