Kannada Serial TRP: ನಿಲ್ಲದ ಪುಟ್ಟಕ್ಕನ ಮಕ್ಕಳ ನಂ.1 ಓಟ; ಈ ವಾರದ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ನಿಲ್ಲದ ಪುಟ್ಟಕ್ಕನ ಮಕ್ಕಳ ನಂ.1 ಓಟ; ಈ ವಾರದ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?

Kannada Serial TRP: ನಿಲ್ಲದ ಪುಟ್ಟಕ್ಕನ ಮಕ್ಕಳ ನಂ.1 ಓಟ; ಈ ವಾರದ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?

ಕಿರುತೆರೆಯಲ್ಲಿ ಈ ವಾರವೂ ಹಲವು ಧಾರಾವಾಹಿಗಳು ವೀಕ್ಷಕರಿಂದ ಹೆಚ್ಚು ವೀಕ್ಷಣೆಗೊಳಪಟ್ಟಿವೆ. ಅದರಂತೆ ಕಳೆದ ಕೆಲ ವಾರಗಳಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ. ಹಾಗಾದರೆ ಟಿಆರ್‌ಪಿ ವಿಚಾರದಲ್ಲಿ ಇನ್ನುಳಿದ ಯಾವೆಲ್ಲ ಸೀರಿಯಲ್‌ಗಳು ಟಾಪ್‌ ಐದರಲ್ಲಿವೆ. ಹೀಗಿದೆ ವರದಿ.

ನಿಲ್ಲದ ಪುಟ್ಟಕ್ಕನ ಮಕ್ಕಳ ನಂ.1 ಓಟ; ಈ ವಾರದ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?
ನಿಲ್ಲದ ಪುಟ್ಟಕ್ಕನ ಮಕ್ಕಳ ನಂ.1 ಓಟ; ಈ ವಾರದ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?

Kannada Serial TRP: ಗುರುವಾರ ಬಂದೇ ಬಿಡ್ತು, ಟಿವಿ ಸೀರಿಯಲ್‌ಗಳ ವೀಕ್ಷಣೆ ವಿವರವೂ ಹೊರಬಿತ್ತು. ಹಾಗಾದರೆ ಈ ವಾರ ಕನ್ನಡದ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಯಾವ ನಾನ್‌ ಫಿಕ್ಷನ್‌ ಪ್ರೋಗ್ರಾಂ ಟಾಪ್‌ ಟಿಆರ್‌ಪಿ ಪಡೆದುಕೊಂಡಿದೆ? ಈ ಎಲ್ಲ ಧಾರಾವಾಹಿಗಳ ಕಿರು ಮಾಹಿತಿ ಇಲ್ಲಿದೆ.

ಕಳೆದ ಕೆಲ ವಾರಗಳಿಂದ ಕಿರುತೆರೆ ಸಾಕಷ್ಟು ಬದಲಾವಣೆಗೆ ಮುಖವೊಡ್ಡಿದೆ. ಹೊಸ ಹೊಸ ಧಾರಾವಾಹಿ, ರಿಯಾಲಿಟಿ ಶೋಗಳ ನಡುವೆಯೂ ಈಗಾಗಲೇ ಪ್ರಸಾರ ಮುಂದುವರಿಸಿರುವ ಹಳೇ ಧಾರಾವಾಹಿಗಳು ಸ್ಪರ್ಧೆಯೊಡ್ಡುತ್ತಿವೆ. ಅಚ್ಚರಿ ವಿಚಾರ ಏನೆಂದರೆ ಇದೀಗ ಹಳೇ ಧಾರಾವಾಹಿಗಳೇ ಟಿಆರ್‌ಪಿಯಲ್ಲಿಯೂ ಪಾರಮ್ಯ ಮೆರೆದಿವೆ.

ಮುಂದುವರಿದ ಪುಟ್ಟಕ್ಕನ ನಂ.1 ಓಟ

ಸೀರಿಯಲ್‌ ವಿಚಾರದಲ್ಲಿ ಈ ವಾರ ಜೀ ಕನ್ನಡ ಮುಂದಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುವ ಹಿರಿಯ ನಟಿ ಉಮಾಶ್ರೀ ನಟನೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಕಳೆದ ಒಂದು ತಿಂಗಳಿಂದಲೂ ಈ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತ, ನೋಡುಗರನ್ನು ಸೆಳೆಯುವ ಕೆಲಸ ಮಾಡುತ್ತಿದೆ.

ವೇದಾಂತ್‌ ಅಮೂಲ್ಯ ಜೋಡಿಯ ಗಟ್ಟಿಮೇಳ

ಜೀ ಕನ್ನಡದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ, ಕಥೆಯ ವಿಚಾರದಲ್ಲಿಯೂ ಸರಣಿ ಟ್ವಿಸ್ಟ್‌ಗಳನ್ನು ಪ್ರೇಕ್ಷಕರಿಗೆ ನೀಡುತ್ತ, ಅವರನ್ನು ಹಿಡಿದಿಡುವ ಕೆಲಸ ಮಾಡುತ್ತಿದೆ ಗಟ್ಟಿಮೇಳ ಧಾರಾವಾಹಿ. ಈ ಸೀರಿಯಲ್‌ ಈ ವಾರದ ಟಾಪ್‌ ಐದರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಅಮೃತಧಾರೆ ಕೈಹಿಡಿದ ಮನೆಮಂದಿ

ಇನ್ನು ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ಅಮೃತಧಾರೆ ಸೀರಿಯಲ್ ಸಹ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮದುವೆ ವಯಸ್ಸು ಮೀರಿದ ಗೌತಮ್‌ ಮತ್ತು ಭೂಮಿಕಾ ಜೋಡಿಯ ಕಥೆ ಮನೆಮಂದಿಯ ಫೇವರಿಟ್‌ ಸೀರಿಯಲ್‌ ಆಗಿದೆ. ಕನ್ನಡ ಕಿರುತೆರೆಗೆ ಮರಳಿರುವ ಛಾಯಾಸಿಂಗ್‌ ನಟನೆಗೂ ಪೂರ್ಣಾಂಕ ಲಭ್ಯವಾಗುತ್ತಿದ್ದು, ಈ ವಾರದ ಟಿಆರ್‌ಪಿಯಲ್ಲಿ ಈ ಸೀರಿಯಲ್‌ ಮೂರನೇ ಸ್ಥಾನದಲ್ಲಿದೆ.

ಶ್ರೀರಸ್ತು ಶುಭಮಸ್ತು..

ಸುಧಾರಾಣಿ ಮತ್ತು ಅಜಿತ್‌ ಹಂದೆ ಮುಖ್ಯಭೂಮಿಕೆಯಲ್ಲಿನ ಶ್ರೀರಸ್ತು ಶುಭಮಸ್ತು ಧಾರಾವಾಹಿಯೂ ಅಪಾರ ವೀಕ್ಷಕರಿದ್ದಾರೆ. ನವಿರಾದ ಸಂಭಾಷಣೆ ಮೂಲಕ, ಪಾತ್ರಧಾರಿಗಳ ನಟನೆಯ ಮೂಲಕ ನೋಡುಗ ವರ್ಗವನ್ನು ಹಿಡಿದಿಡುವ ಕೆಲಸ ಮಾಡುತ್ತಿದೆ ಈ ಧಾರಾವಾಹಿ. ಇದೀಗ ವಾರದ ಟಿಆರ್‌ಪಿ ಹಣೆಬರಹದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಈ ಸೀರಿಯಲ್‌.

ಅಮೂಲ್‌ ಬೇಬಿ ಮತ್ತು ಸತ್ಯ ಕಥೆಗೆ ನೋಡುಗ ಫಿದಾ..

ಜೀ ಕನ್ನಡದ ಮತ್ತೊಂದು ಧಾರಾವಾಹಿ ಸತ್ಯ ಸಹ ಈ ವಾರದ ಟಿಆರ್‌ಪಿಯಲ್ಲಿ ಟಾಪ್‌ ಐದನೇ ಸ್ಥಾನದಲ್ಲಿದೆ. ಆರಕ್ಕೇರದೆ, ಮೂರಕ್ಕಿಳಿಯದೇ ಹದವಾದ ಸ್ಥಾನದಲ್ಲಿ ಈ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.

ಜೀ ಕನ್ನಡ ನಂಬರ್‌ 1

ಸದ್ಯದ ಸೀರಿಯಲ್‌ ಟಿಆರ್‌ಪಿ ವಿಚಾರದಲ್ಲಿ ಟಾಪ್‌ ಐದು ಧಾರಾವಾಹಿಗಳ ಪೈಕಿ, ಐದಕ್ಕೆ ಐದೂ ಸೀರಿಯಲ್‌ ಜೀ ಕನ್ನಡದ್ದಾಗಿ. ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಅಮೃತಧಾರೆ, ಶ್ರೀರಸ್ತು ಶುಭಮಸ್ತು ಮತ್ತು ಸತ್ಯ ಟಾಪ್‌ ಐದರಲ್ಲಿವೆ. ಇತ್ತ ಕಲರ್ಸ್‌ ಕನ್ನಡ ಮತ್ತು ಸ್ಟಾರ್‌ ಸುವರ್ಣ ವಾಹಿನಿಯ ಕೆಲವು ಸೀರಿಯಲ್‌ಗಳೂ ವೀಕ್ಷಕರ ಹಾಟ್‌ ಫೇವರಿಟ್‌ ಎನಿಸಿವೆ. ಸ್ಟಾರ್‌ ಸುವರ್ಣದಲ್ಲಿನ ಪೌರಾಣಿಕ ಕಥಾಹಂದರದ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಆರನೇ ಸ್ಥಾನದಲ್ಲಿದೆ. ಅದೇ ರೀತಿ ಲಕ್ಷ್ಮೀ ಬಾರಮ್ಮ ಏಳು, ನೀನಾದೆ ನಾ ಎಂಟು, ಒಂಭತ್ತನೇ ಸ್ಥಾನದಲ್ಲಿ ನಮ್ಮ ಲಚ್ಚಿ, ಹತ್ತನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ಗಳು ಸ್ಥಾನ ಪಡೆದಿವೆ.

Whats_app_banner