Seetha Rama Serial: ದೇಸಾಯಿ ಕುಟುಂಬಕ್ಕೆ ಗಂಡು ಸಂತಾನ ಬೇಕು, ರಾಮನ ವಂಶ ಮುಂದುವರೀಬೇಕು; ತಾತನ ಬೇಡಿಕೆ ಈಡೇರಿಸ್ತಾನಾ ಶ್ರೀರಾಮ?
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ದೇಸಾಯಿ ಕುಟುಂಬಕ್ಕೆ ಗಂಡು ಸಂತಾನ ಬೇಕು, ರಾಮನ ವಂಶ ಮುಂದುವರೀಬೇಕು; ತಾತನ ಬೇಡಿಕೆ ಈಡೇರಿಸ್ತಾನಾ ಶ್ರೀರಾಮ?

Seetha Rama Serial: ದೇಸಾಯಿ ಕುಟುಂಬಕ್ಕೆ ಗಂಡು ಸಂತಾನ ಬೇಕು, ರಾಮನ ವಂಶ ಮುಂದುವರೀಬೇಕು; ತಾತನ ಬೇಡಿಕೆ ಈಡೇರಿಸ್ತಾನಾ ಶ್ರೀರಾಮ?

ಮಕ್ಕಳು ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದ ಸೀತಾಗೀಗ, ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ವಿಚಾರ ತಿಳಿಯದ ತಾತ ಸೂರ್ಯಪ್ರಕಾಶ್‌, ಭಾರ್ಗವಿ ಮುಂದೆ, ರಾಮನ ವಂಶ ಮುಂದುವರಿಬೇಕು ಎಂದಿದ್ದಾನೆ. ಅದು ಅಸಾಧ್ಯ ಮಾವಯ್ಯ ಎಂದಿದ್ದಾಳೆ ಭಾರ್ಗವಿ.

Seetha Rama Serial: ದೇಸಾಯಿ ಕುಟುಂಬಕ್ಕೆ ಗಂಡು ಸಂತಾನ ಬೇಕು, ರಾಮನ ವಂಶ ಮುಂದುವರೀಬೇಕು; ತಾತನ ಬೇಡಿಕೆ ಈಡೇರಿಸ್ತಾನಾ ಶ್ರೀರಾಮ?
Seetha Rama Serial: ದೇಸಾಯಿ ಕುಟುಂಬಕ್ಕೆ ಗಂಡು ಸಂತಾನ ಬೇಕು, ರಾಮನ ವಂಶ ಮುಂದುವರೀಬೇಕು; ತಾತನ ಬೇಡಿಕೆ ಈಡೇರಿಸ್ತಾನಾ ಶ್ರೀರಾಮ?

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ದೇಸಾಯಿ ಕುಟುಂಬದ ಸೊಸೆಯಾಗಿ ಬಲಗಾಲಿಟ್ಟು ಬಂದ ಸೀತಾಗೆ, ಅದ್ಧೂರಿ ಸ್ವಾಗತವೇನೋ ಸಿಕ್ಕಿದೆ. ಆದರೆ, ದೊಡ್ಮನೆಯಲ್ಲಿ ಸಿಹಿಯ ಕಡೆಗಣನೆ ಮಾತ್ರ ಮುಂದುವರಿದಿದೆ. ಹೇಗಾದರೂ ಮಾಡಿ, ಸೀತಾ- ರಾಮನಿಂದ ಸಿಹಿಯನ್ನು ದೂರಮಾಡಬೇಕೆಂದು ಪಣ ತೊಟ್ಟಿದ್ದಾಳೆ ಚಿಕ್ಕಿ ಭಾರ್ಗವಿ. ಪರೋಕ್ಷವಾಗಿ ಪುಟಾಣಿ ಸಿಹಿ ಮನಸ್ಸಿಗೆ ಘಾಸಿಯಾಗುವ ಮಾತುಗಳನ್ನೇ ಹೇಳುತ್ತ, ಆಕೆಯ ಮನಸ್ಸಿನಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾಳೆ.

ಈ ನಡುವೆ ಸಿಹಿಯ ವಿಚಾರಕ್ಕೆ ರಾಮ ಮತ್ತು ಸೀತಾ ನಡುವೆ ಆಗಾಗ ಸಣ್ಣಪುಟ್ಟ ವಾದಗಳು ನಡೆಯುತ್ತಿವೆ. ಅದೂ ಸಿಹಿ ಮೇಲಿನ ಪ್ರೀತಿಗಾಗಿ. ಆದರೆ, ಇವರಿಬ್ಬರ ಈ ಕಾಳಜಿ ಕಂಡು ಮನೆ ಮಂದಿ ಖುಷಿಪಟ್ಟರೆ, ಭಾರ್ಗವಿ ಮಾತ್ರ ಒಳಗೊಳಗೆ ಉರಿಯುತ್ತಿದ್ದಾಳೆ. ನೋಡು ನಿನ್ನಿಂದಲೇ ರಾಮ- ಸೀತಾ ಇಬ್ಬರೂ ಜಗಳ ಆಡ್ತಿದ್ದಾರೆ. ನೀನು ದೂರ ಇದ್ರೆ ಇಬ್ಬರೂ ಖುಷಿಖುಷಿಯಾಗಿರ್ತಾರೆ ಎಂದೂ ಸಿಹಿ ಮುಂದೆ ಹೇಳಿದ್ದಾಳೆ ಭಾರ್ಗವಿ.

ತಾತನ ಬೇಡಿಕೆ ಈಡೇರಿಸ್ತಾನಾ ರಾಮ್?‌

ರಾಮನ ಮದುವೆಯೇನೋ ಆಯ್ತು, ಇನ್ನೇನಿದ್ದರೂ ಆ ಪುಟಾಣಿ ಸಿಹಿಯ ಜತೆಗೆ ಆಟವಾಡಲು ಇನ್ನೊಂದು ಪುಟಾಣಿ ಬೇಕಲ್ಲವೇ? ಈ ಬಗ್ಗೆಯೂ ಭಾರ್ಗವಿ ಮತ್ತು ಮಾವಯ್ಯ ನಡುವೆ ಮಾತುಕತೆ ನಡೆದಿದೆ. ಸಿಹಿ ಈ ಮನೆಗೆ ಬಂದಮೇಲೆ ಸಂಭ್ರಮವೋ ಸಂಭ್ರಮ. ಒಂದು ರೀತಿ ಹಬ್ಬದ ವಾತಾವರಣ ಅಲ್ವಾ ಮಾವಯ್ಯ ಎನ್ನುತ್ತಾಳೆ ಭಾರ್ಗವಿ. ಸಿಹಿ ಒಬ್ಬಳಿಂದಲೇ ಇಷ್ಟು ಸಂತೋಷ ಸಿಕ್ಕಿರಬೇಕಾದರೆ, ಅವಳಿಗೆ ಇನ್ನೊಬ್ಬ ತಮ್ಮಾನೋ ತಂಗಿನೋ ಬಂದುಬಿಟ್ಟರೆ ಮನೆ ನಂದಗೋಕುಲ ಆಗಿಬಿಡುತ್ತೆ ಎನ್ನುತ್ತಾನೆ ಸೂರ್ಯಪ್ರಕಾಶ್‌. ಮಾವನ ಮಾತಿಗೆ ಅದು ಆಗಲ್ಲ ಬಿಡಿ ಮಾವಯ್ಯ ಎನ್ನುತ್ತಾಳೆ ಭಾರ್ಗವಿ.

ಅದಕ್ಕೆ ಉತ್ತರಿಸಿದ ಸೂರ್ಯಪ್ರಕಾಶ್‌, ರಾಮನ ವಂಶ ಮುಂದುವರೀಬೇಕು ಅಂದರೆ, ಅವನಿಗೊಂದು ಗಂಡು ಸಂತಾನ ಬೇಕೇ ಬೇಕು ಎನ್ನುತ್ತಾನೆ. ಸಿಹಿ ಹೀಗೆ ಯಾವಾಗಲೂ ಸೀತಾ ಜತೆಯಲ್ಲಿದ್ದರೆ, ಅವರಿಬ್ಬರಿಗೂ ಮಗುವಾಗುವುದು ಕನಸಿನ ಮಾತು ಮಾವಯ್ಯ. ನನಗೆ ಸಿಹಿ ಈ ಮನೆಗೆ ಬಂದ ಮೇಲೆ, ಅನಿಕೇತ್‌ಗಿಂತ ಅವಳ ಮೇಲೆಯೇ ಮುದ್ದು ಜಾಸ್ತಿ. ಸೀತಾ ಹೆತ್ತ ತಾಯಿ, ಅವಳು ಇನ್ನೊಂದು ಮಗುವಿನ ಬಗ್ಗೆ ಯೋಚನಾ ಮಾಡ್ತಾಳಾ ಮಾವಯ್ಯ? ಎನ್ನುತ್ತಾಳೆ ಭಾರ್ಗವಿ. ಸೂರ್ಯಪ್ರಕಾಶ್‌ಗೂ ಭಾರ್ಗವಿ ಮಾತು ಕೇಳಿ ಕೊಂಚ ಗೊಂದಲಕ್ಕೀಡಾಗುತ್ತಾನೆ.

ತಾತನಿಗೆ ಅಸಲಿ ವಿಚಾರ ಇನ್ನೂ ಗೊತ್ತಿಲ್ಲ

ಮದುವೆಗೂ ಮುನ್ನ ರಾಮನ ಮುಂದೆ ಸೀತಾ ಷರತ್ತೊಂದನ್ನು ವಿಧಿಸಿದ್ದಳು. ಯಾವುದೇ ಕಾರಣಕ್ಕೂ ನಾನು ಇನ್ನೊಂದು ಮಗು ಮಾಡಿಕೊಳ್ಳುವುದಿಲ್ಲ. ನನಗೆ ಸಿಹಿನೇ ಎಲ್ಲ. ಅವಳೊಬ್ಬಳೇ ನನಗೆ ಮಗಳು. ಇದಕ್ಕೆ ಒಪ್ಪಿದರೆ ಮಾತ್ರ ನಮ್ಮ ಮದುವೆ ಎಂದಿದ್ದಳು ಸೀತಾ. ಸೀತಾಳ ಮಾತಿಗೆ ಒಪ್ಪಿದ್ದ ರಾಮ್, ನಮಗೆ ಸಿಹಿ ಒಬ್ಬಳೇ ಮಗಳು ಎಂದು ಸಹಮತಿ ಸೂಚಿಸಿದ್ದ. ಇದೇ ವಿಚಾರವನ್ನು ಭಾರ್ಗವಿ ಮುಂದೆಯೂ ಹೇಳಿದ್ದಳು ಸೀತಾ. ಜತೆಗೆ ಈ ವಿಚಾರವನ್ನು ತಾತನಿಗೂ ತಿಳಿಸಿ ಎಂದಿದ್ದಳು. ಆದರೆ, ಭಾರ್ಗವಿ ಮಾತ್ರ ತಾತನಿಗೂ ಈ ವಿಚಾರ ಹೇಳಿದ್ದೇನೆ ಎಂದಿದ್ದಳು.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner