ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ; ಎಫ್‌ಐಆರ್‌ನಲ್ಲಿ ಸಂತ್ರಸ್ತೆ ತಿಳಿಸಿರುವ ಪ್ರಮುಖ 10 ಅಂಶಗಳು
ಕನ್ನಡ ಸುದ್ದಿ  /  ಮನರಂಜನೆ  /  ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ; ಎಫ್‌ಐಆರ್‌ನಲ್ಲಿ ಸಂತ್ರಸ್ತೆ ತಿಳಿಸಿರುವ ಪ್ರಮುಖ 10 ಅಂಶಗಳು

ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ; ಎಫ್‌ಐಆರ್‌ನಲ್ಲಿ ಸಂತ್ರಸ್ತೆ ತಿಳಿಸಿರುವ ಪ್ರಮುಖ 10 ಅಂಶಗಳು

ಕಾಮಿಡಿ ಕಿಲಾಡಿ ಹಾಸ್ಯ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆ ನಟ ಮಡೆನೂರು ಮನು ವಿರುದ್ಧ ಮಹಿಳೆಯೊಬ್ಬರು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಆರೋಪದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ
ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ

ಬೆಂಗಳೂರು: ಕಾಮಿಡಿ ಕಿಲಾಡಿ ಹಾಸ್ಯ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆ ನಟ ಮಡೆನೂರು ಮನು ವಿರುದ್ಧ ಮಹಿಳೆಯೊಬ್ಬರು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಆರೋಪದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಎಫ್‌ಐಆರ್‌ ಪ್ರತಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಲಭ್ಯವಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಎಫ್‌ಐಆರ್‌ನಲ್ಲಿ ತಿಳಿಸಿರುವ ಪ್ರಮುಖ ಅಂಶಗಳು

  1. ಕಾಮಿಡಿ ಕಾರ್ಯಕ್ರಮದಲ್ಲಿ ಇಬ್ಬರಿಗೂ ಪರಿಚಯ
  2. ಮಡೆನೂರು ಮನುವಿಗ ಈಗಾಗಲೇ ಮದುವೆಯಾಗಿದೆ. ಒಂದು ಹೆಣ್ಣು ಮಗು ಇದೆ.
  3. ಶಿಕಾರಿಪುರದಲ್ಲಿ ರೂಂನಲ್ಲಿ ಅತ್ಯಾಚಾರ
  4. ದೂರುದಾರೆಯ ವಿರೋಧದ ನಡುವೆಯೂ ತಾಳಿ ಕಟ್ಟಿದ ಆರೋಪಿ
  5. ಹಲವು ಬಾರಿ ಅತ್ಯಾಚಾರ.
  6. ಸಂತ್ರಸ್ತ್ರೆ ಗರ್ಭಿಣಿಯಾದಗ ಗರ್ಭಪಾತ ಮಾಡಿಸಿರುತ್ತಾನೆ.
  7. ಖಾಸಗಿ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಬೆದರಿಕೆ ಮತ್ತು ಹಲ್ಲೆ
  8. ಆರೋಪಿಯ ಸಿನಿಮಾಕ್ಕೆ ದೂರುದಾರೆ ಲಕ್ಷಾಂತರ ರೂಪಾಯಿ ನೀಡಿರುತ್ತಾರೆ.
  9. ಮದುವೆ ಮಾಡಿಕೊಂಡಂತೆ ನಾಟಕ ಮಾಡಿ ಮೋಸ.
  10. ಪ್ರಾಣ ಬೆದರಿಕೆ

ಎಫ್‌ಐಆರ್‌ನಲ್ಲಿ ದೂರುದಾರರು ಈ ರೀತಿ ಆರೋಪ ಮಾಡಿದ್ದಾರೆ. "ಈ ದಿನ 12-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಂಕ್ಷಿಪ್ತ ಸಾರಾಂಶವೇಂದರೆ, ನಾನು ಈ ಹಿಂದೆ ನಂ. **** (ವಿಳಾಸ)*** ಬೆಂಗಳೂರು ಇಲ್ಲಿ ಸುಮಾರು 5 ವರ್ಷಗಳ ಕಾಲ ವಾಸವಾಗಿದ್ದೆ. ಸದರಿ ನಾಗರಭಾವಿ ಬಾಡಿಗೆ ಮನೆಯನ್ನು ಮಡೆನೂರು ಮನುರವರೇ ಹುಡುಕಿ ಮಾಡಿಕೊಟ್ಟಿರುತ್ತಾರೆ. 2018ನೇ ಸಾಲಿನಲಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ.. ಮಡೆನೂರು ಮನು ಎಂಬುವರು ನನಗೆ ಪರಿಚಯ ಆಗಿ ಇಬ್ಬರು ಸ್ನೇಹಿತರಾಗಿರುತ್ತೇವೆ. ಸದರಿ ಮಡೆನೂರು ಮನು ಈತನು ಈಗಾಗಲೇ ದಿವ್ಯಾ ಎಂಬುವರನ್ನು ಮದುವೆ ಆಗಿ ಅವರಿಗೆ ಒಂದು ಹೆಣ್ಣು ಮಗು ಇರುತ್ತೆ. ದಿನಾಂಕ: 29-11-2022 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ. ಒಂದು ಕಾರ್ಯಕ್ರಮ ಇದ್ದು, ಸದರಿ ಕಾರ್ಯಕ್ರಮಕ್ಕೆ ನನ್ನನ್ನು ಹಾಗೂ ಇತರೆ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿ ಅಲ್ಲಿಯೇ. ಒಂದು ಹಾಸ್ಯ ಕಾರ್ಯಕ್ರಮ ಮಾಡಿರುತ್ತಾನೆ. ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಶಿಕಾರಿಪುರದ ಹೋಟೆಲ್ ರೂಮಿನಲಿದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ... ರೂಮಿಗೆ ಬಂದು ನನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆ" ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

"ಇದಾದ ಮೇಲೆ 2022ನೇ ಸಾಲಿನ ಡಿಸೆಂಬರ್ ಮಾಹೆಯ 3ನೇ ರಂದು ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿರುತ್ತಾನೆ. ನಂತರ ಅದೇ ಮನೆಯಲ್ಲಿ ಮನು ನನ್ನ ಮೇಲೆ ಹಲವಾರು ಬಾರಿ ಆತ್ಮಾಚಾರ ಮಾಡಿರುತ್ತಾನೆ. ಈ ನಡುವೆ ನಾನು ಪ್ರೆಗ್ನೆಂಟ್ ಆಗಿದ್ದು, ಇದನ್ನು ತಿಳಿದ ಮನು ಮನೆಗೆ ಬಂದು ನನಗೆ ಗರ್ಭಪಾತ ಆಗುವ ಮಾತ್ರೆ ನೀಡಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೆ ಮತ್ತೆ ನಾನು ಪ್ರೆಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ. ನಂತರ ಮನುರವರು ನನಗೆ ಈ ಮೇಲ್ಕಂಡ ಮನೆಯನ್ನು ಬಾಡಿಗೆಗೆ ಮಾಡಿ ಈ ಮನೆಯಲೆಯೂ ಸಹ ನನ್ನ ಮೇಲೆ ಅತ್ಯಾಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಆತನ ಪೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ನನಗೆ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿರುತ್ತಾನೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

"ಆತನು ಒಂದು ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ನಾನು ಸುಮಾರು ಲಕ್ಷಾಂತರ ರೂಪಾಯಿಗಳನ್ನು ಮನುಗೆ ನೀಡಿರುತ್ತೇನೆ. ಆದ್ದರಿಂದ ಈ ರೀತಿ ನನ್ನ ಮೇಲೆ ಆತ್ಯಾಚಾರ ಮಾಡಿ, ಮದುವೆ ಮಾಡಿಕೊಂಡಂತೆ ನಾಟಕ ಮಾಡಿ, ನನಗೆ ಗರ್ಭಪಾತ ಮಾಡಿಸಿ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದು, ಇದನ್ನು ಕೇಳಿದಕ್ಕೆ ನನ್ನ ಮೇಲೆ ಹಲೆ., ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿರುವ ಮಡೆನೂರು ಮನು ರವರ ಮೇಲೆ ಸೂಕ್ತ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ" ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಮಡೆನೂರು ಮನು ನಟನೆಯ ಕುಲದಲ್ಲಿ ಕೀಳ್ಯಾವುದೋ ಸಿನಿಮಾವು ನಾಳೆ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ರಾಮ್‌ ನಾರಾಯಣ್‌ ನಿರ್ದೇಶನವಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in