Max Movie Release Date: ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌; ಅಭಿಮಾನಿಗಳಿಗೆ ಸಿಕ್ತು ಬಿಗ್‌ ಅಪ್‌ಡೇಟ್‌
ಕನ್ನಡ ಸುದ್ದಿ  /  ಮನರಂಜನೆ  /  Max Movie Release Date: ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌; ಅಭಿಮಾನಿಗಳಿಗೆ ಸಿಕ್ತು ಬಿಗ್‌ ಅಪ್‌ಡೇಟ್‌

Max Movie Release Date: ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌; ಅಭಿಮಾನಿಗಳಿಗೆ ಸಿಕ್ತು ಬಿಗ್‌ ಅಪ್‌ಡೇಟ್‌

ಬಹು ನಿರೀಕ್ಷಿತ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದಿಂದ ದೊಡ್ಡ ಅನೌನ್ಸ್‌ಮೆಂಟ್‌ ಹೊರಬಿದ್ದಿದೆ. ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಇಲ್ಲೇ ಇದೆ ನೋಡಿ ವಿವರ

ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌
ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌

ಕಿಚ್ಚ ಸುದೀಪ್‌ ಅವರ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಇದೀಗ ಸುದ್ದಿಯಲ್ಲಿದೆ. ಈ ಹಿಂದೆ ತಿಳಿಸಿರುವಂತೆ ಇಂದು ಅಂದರೆ ನವೆಂಬರ್ 27ರಂದು ಸಂಜೆ 4 ಗಂಟೆಗೆ ಸಿನಿಮಾದ ರಿಲೀಸ್‌ ಡೇಟ್ ಅನೌನ್ಸ್ ಮಾಡಲಾಗಿದೆ. ಡಿಸೆಂಬರ್ 25ರಂದು ಸಿನಿಮಾ ರಿಲೀಸ್‌ ಆಗಲಿದೆ. ಹಲವು ದಿನಗಳಿಂದ ಸುದೀಪ್ ಅವರ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು ಕೊನೆಗೂ ಅವರ ಕಾತರಕ್ಕೆ ಉತ್ತರ ಸಿಕ್ಕಿದೆ. ಇದೇ ವರ್ಷ ಅಂದರೆ ಡಿಸೆಂಬರ್ ಕೊನೆ ವಾರದಲ್ಲಿ ಸಿನಿಮಾ ನೋಡಬಹುದಾಗಿದೆ.

ನಿರೀಕ್ಷೆಯ ಪ್ರಕಾರ ಮುಂದಿನ ವರ್ಷ ಅಂದರೆ 2025ರ ಯುಗಾದಿ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಅಂದಾಜಿನಂತೆ ಆಗಿಲ್ಲ. ಅದಕ್ಕೂ ಮುನ್ನವೇ ಅಭಿಮಾನಿಗಳು ಸಿನಿಮಾ ವೀಕ್ಷಿಸಬಹುದು.

ಈ ಹಿಂದೆ ಚಿತ್ರತಂಡ ಪೋಸ್ಟರ್‌ ಬಿಡುಗಡೆ ಮಾಡಿದೆ. ಶೂಟಿಂಗ್‌ ಕೆಲಸ ಮುಗಿಸಿಕೊಂಡಿರುವ ಈ ಸಿನಿಮಾ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಜಿಯಾಗಿದೆ. ಅದರಂತೆ, ಇದೀಗ ನ. 27ರಂದು ಈ ಸಿನಿಮಾದ ರಿಲೀಸ್‌ ದಿನಾಂಕ ಘೋಷಣೆಯಾಗಿದೆ. ಮ್ಯಾಕ್ಸ್ ಮಾಸ್ ಆಕ್ಷನ್‌ ಸಿನಿಮಾ. ವಿಜಯ್ ಕಾರ್ತಿಕೇಯ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಸೇರಿ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗುತ್ತಿದೆ ಸಿನಿಮಾ

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ಬಹುತೇಕ 2025ರ ಯುಗಾದಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಈ ಹಿಂದೆ ಹೇಳಲಾಗಿತ್ತು.

Whats_app_banner