Bhoomi Shetty: ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ; ನಿಮ್ಮ ಪ್ರತಿಭೆಗೆ ನಮ್ಮ ಸಲಾಂ ಎಂದ ಅಭಿಮಾನಿಗಳು
ಕನ್ನಡ ಸುದ್ದಿ  /  ಮನರಂಜನೆ  /  Bhoomi Shetty: ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ; ನಿಮ್ಮ ಪ್ರತಿಭೆಗೆ ನಮ್ಮ ಸಲಾಂ ಎಂದ ಅಭಿಮಾನಿಗಳು

Bhoomi Shetty: ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ; ನಿಮ್ಮ ಪ್ರತಿಭೆಗೆ ನಮ್ಮ ಸಲಾಂ ಎಂದ ಅಭಿಮಾನಿಗಳು

Bhoomi Shetty: ಭೂಮಿ ಶೆಟ್ಟಿ ಕನ್ನಡ ಕಿರುತೆರೆ ಮೂಲಕ ವೀಕ್ಷಕರ ಮನಗೆದ್ದವರು. ಈಗ ಯಕ್ಷಗಾನದಲ್ಲೂ ಪಾತ್ರ ಮಾಡುವ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಸೀತೆಯ ಪಾತ್ರದಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡಿದ್ದಾರೆ.

ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ
ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ ಭೂಮಿ ಶೆಟ್ಟಿ

ಭೂಮಿ ಶೆಟ್ಟಿ ಹವ್ಯಾಸಿ ಯಕ್ಷಗಾನ ಕಲಾವಿದೆಯೂ ಹೌದು. ಬಿಗ್ ಬಾಸ್‌ ಹಾಗೂ ಕಿನ್ನರಿ ಧಾರಾವಾಹಿ ಮೂಲಕ ಕರ್ನಾಟಕ ಜನತೆಗೆ ಪರಿಚಿತರಾದ ಭೂಮಿ ಶೆಟ್ಟಿ, ಯಕ್ಷಗಾನದಲ್ಲಿಯೂ ಪಾತ್ರ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಮಾಡಿದ ಪಾತ್ರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಲವ-ಕುಶ ಪ್ರಸಂಗದಲ್ಲಿ ಸೀತೆಯ ಪಾತ್ರವನ್ನು ಭೂಮಿ ಶೆಟ್ಟಿ ಮಾಡಿದ್ದಾರೆ. ಯಾವ ರೀತಿ ಯಕ್ಷಗಾನದ ತಯಾರಿ ಮಾಡಿಕೊಂಡರು? ಹೇಗೆ ತಮ್ಮ ಪಾತ್ರದ ಬಗ್ಗೆ ಅರಿತುಕೊಂಡರು? ಎಂಬೆಲ್ಲ ವಿಷಯವನ್ನು ಹಂಚಿಕೊಂಡಿದ್ದಾರೆ. ರೀಲ್ಸ್‌ ಮಾಡುವ ಮೂಲಕ ಅವರ ತಯಾರಿಯ ಕಿರು ಚಿತ್ರಣವನ್ನು ಜನರ ಮುಂದಿಟ್ಟಿದ್ದಾರೆ.

ಭೂಮಿ ಶೆಟ್ಟಿ ಎಂದು ಅವರ ಮುಖ ನೋಡಿದ ಮಾತ್ರಕ್ಕೆ ಗುರುತೇ ಸಿಗುವುದಿಲ್ಲ, ಆ ರೀತಿಯಲ್ಲಿ ಅವರು ತಯಾರಾಗಿದ್ದಾರೆ. ಬಿಳಿ ಬಣ್ಣದ ಸೀರೆಯಲ್ಲಿ ಯಕ್ಷಗಾನ ವೇಷ ಭೂಷಣಗಳನ್ನು ತೊಟ್ಟು, ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡಿದ್ದಾರೆ. ಸಾಕಷ್ಟು ಜನ ಅವರ ಈ ಪ್ರತಿಭೆಯನ್ನು ಗುರುತಿಸಿ ಪ್ರಶಂಸಿಸಿದ್ದಾರೆ. ಭೂಮಿ ಈ ಹಿಂದೆ ಕೂಡ ಯಕ್ಷಗಾನದಲ್ಲಿ ಪಾತ್ರ ಮಾಡಿದ್ದರು ಎಂದೆನಿಸುವಂತೆ ಅವರು ಇನ್ನೂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೀತೆಯ ಮನದಾಳ

ಲವ ಕುಶರು ಕಾಳಗಕ್ಕೆ ಹೋದಾಗ ಸೀತೆ ತನ್ನ ಮಕ್ಕಳ ಬಗ್ಗೆ ಕಾಳಜಿಯಿಂದ ಮಾತಾಡುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಅದನ್ನು ಹೊರತುಪಡಿಸಿ, ಹೇಗೆ ಹಿಮ್ಮೇಳದಲ್ಲಿ ಕಲಾವಿದರ ಜತೆ ಸಂಪರ್ಕ ಬೇಕು. ಪದ್ಯ ಹಾಗೂ ಸಂಭಾಷಣೆಯನ್ನು ತಾನು ಹೇಗೆ ನೆನಪಿಟ್ಟುಕೊಂಡೆ ಎಂಬ ವಿಷಯವನ್ನೂ ಹಂಚಿಕೊಂಡಿದ್ದಾರೆ. ಒಂದು ಚಿಕ್ಕ ಚೀಟಿಯಲ್ಲಿ ಕನ್ನಡದಲ್ಲಿ ಬರೆದಿರುವ ಸಂಭಾಷಣೆಯನ್ನು ಅವರು ಓದುತ್ತಾರೆ.

ಚೌಕಿಯಲ್ಲಿ ಭೂಮಿ ತಯಾರಿ

ಸೀರೆಯುಟ್ಟು ಯಕ್ಷಗಾನದ ಆಭರಣ ತೊಟ್ಟು, ಚೌಕಿಯಲ್ಲಿ ಎಲ್ಲರಂತೆ ಮುಖಕ್ಕೆ ಬಣ್ಣ ಬಳಿಸಿಕೊಳ್ಳುತ್ತಾರೆ. ಎಲ್ಲವೂ ಸಿದ್ಧವಾದ ನಂತರ ವೇದಿಕೆಯ ಮೇಲೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ರೀತಿ ಇರುವ ಒಂದು ಚಿಕ್ಕ ರೀಲ್ಸ್‌ ಹಂಚಿಕೊಂಡಿದ್ದಾರೆ. ಈ ರೀಲ್ಸ್‌ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಾಜಿ ಬಿಗ್‌ ಬಾಸ್‌ ಸ್ಪರ್ಧಿಗಳಾದ ತನಿಷಾ, ಸಂಗೀತಾ ಹಾಗೂ ಇನ್ನೂ ಹಲವು ತಾರೆಯರು ಅವರನ್ನು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಭೂಮಿ ಶೆಟ್ಟಿ ಅಭಿಮಾನಿಗಳು ಆಶ್ಚರ್ಯಪಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಅಭಿನಯಿಸುತ್ತಿದ್ದ ಉಮಾಶ್ರೀ ಕೂಡ ಯಕ್ಷಗಾನ ರಂಗಪ್ರವೇಶ ಮಾಡಿದ್ದರು. ಈ ರೀತಿಯಾಗಿ ಸಾಕಷ್ಟು ಕಲಾವಿದರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಹೆಚ್ಚಿದಂತಿದೆ.

Whats_app_banner