Leelavathi Death: ನಾನು ಒಂಟಿಯಾಗಿಬಿಟ್ಟೆ, ಅಮ್ಮನ ಕಳೆದುಕೊಂಡ ವಿನೋದ್‌ ರಾಜ್‌ ಕಣ್ಣೀರು
ಕನ್ನಡ ಸುದ್ದಿ  /  ಮನರಂಜನೆ  /  Leelavathi Death: ನಾನು ಒಂಟಿಯಾಗಿಬಿಟ್ಟೆ, ಅಮ್ಮನ ಕಳೆದುಕೊಂಡ ವಿನೋದ್‌ ರಾಜ್‌ ಕಣ್ಣೀರು

Leelavathi Death: ನಾನು ಒಂಟಿಯಾಗಿಬಿಟ್ಟೆ, ಅಮ್ಮನ ಕಳೆದುಕೊಂಡ ವಿನೋದ್‌ ರಾಜ್‌ ಕಣ್ಣೀರು

Kannada Veteran Actress Leelavathi Passes Away: ಕನ್ನಡದ ಹಿರಿಯ ನಟಿ ಲೀಲಾವತಿ ಇಂದು ವಿಧಿವಶರಾಗಿದ್ದಾರೆ. ಲೀಲಾವತಿ ಅಮ್ಮ ಹಾಸಿಗೆ ಹಿಡಿದ ದಿನದಿಂದ ಮಗುವಿನಂತೆ ಸೇವೆ ಮಾಡಿದೆ ವಿನೋದ್‌ ರಾಜ್‌ ದುಃಖತಪ್ತರಾಗಿದ್ದಾರೆ. ನನ್ನನ್ನು ದೇವರು ಒಂಟಿಯಾಗಿ ಮಾಡಿಬಿಟ್ಟ ಎಂದು ದುಃಖಿಸುತ್ತಿದ್ದಾರೆ.

Leelavathi Death: ನಾನು ಒಂಟಿಯಾಗಿಬಿಟ್ಟೆ, ಅಮ್ಮನ ಕಳೆದುಕೊಂಡ ವಿನೋದ್‌ ರಾಜ್‌ ಕಣ್ಣೀರು
Leelavathi Death: ನಾನು ಒಂಟಿಯಾಗಿಬಿಟ್ಟೆ, ಅಮ್ಮನ ಕಳೆದುಕೊಂಡ ವಿನೋದ್‌ ರಾಜ್‌ ಕಣ್ಣೀರು

Kannada Actress Leelavathi Death: ಕನ್ನಡ ಸಿನಿಮಾರಂಗದ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದು, ಅವರ ಪ್ರೀತಿಯ ಪುತ್ರ ವಿನೋದ್‌ರಾಜ್‌ರನ್ನು ಶೋಕದ ಕಡಲಲ್ಲಿ ಮುಳುಗಿಸಿದೆ. ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಮ್ಮನನ್ನು ಚಿಕ್ಕ ಮಗುವಿನಂತೆ ಆರೈಕೆ ಮಾಡಿದ್ದರು. ಇದೀಗ ಅಮ್ಮನ ಅಗಲಿಕೆಯಿಂದ ವಿನೋದ್‌ ರಾಜ್‌ ಕಂಗಲಾಗಿದ್ದಾರೆ. ನನ್ನನ್ನು ದೇವರು ಒಂಟಿಯಾಗಿ ಮಾಡಿಬಿಟ್ಟ ಎಂದು ಹೇಳಿ ವಿನೋದ್‌ ರಾಜ್‌ ಕಣ್ಣೀರು ಸುರಿಸಿದ್ದಾರೆ.

ಕೊನೆಗೂ ನನ್ನನ್ನು ಭಗವಂತ ಒಂಟಿಯಾಗಿ ಮಾಡಿಬಿಟ್ಟ. ಈ ಸಂದರ್ಭದಲ್ಲಿ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಅವರಿಗೆ ವಯಸ್ಸು ಆಗಿತ್ತು. ವಯೋಸಹಜ ಸಮಸ್ಯೆ ಇತ್ತು. ಹೃದಯ ಸ್ತಂಭನ ಆಗಿ ಕೊನೆಯ ಉಸಿರು ಎಳೆದಿದ್ದಾರೆ. ಕೊನೆಗೂ ನನ್ನಮ್ಮ ನನ್ನ ಊರಿಗೆ ಆಸ್ಪತ್ರೆ ಕಟ್ಟಿಸಿ ಸಾಧನೆ ಮಾಡಿದರು. ಅವರ ಜೀವನದ ಆಸೆಯನ್ನು ಈ ಮೂಲಕ ಈಡೇರಿಸಿದರು ಎಂದು ವಿನೋದ್‌ ರಾಜ್‌ ಹೇಳಿದ್ದಾರೆ.

ಇತ್ತೀಚೆಗೆ ಅಮ್ಮ ಕಟ್ಟಿಸಿದ ಪಶು ಆರೋಗ್ಯ ಆಸ್ಪತ್ರೆಯ ಉದ್ಘಾಟನೆಯ ಸಂದರ್ಭದಲ್ಲೂ ವಿನೋದ್‌ ರಾಜ್‌ ಭಾವುಕರಾಗಿದ್ದರು. "ನನ್ನ ತಾಯಿಯವರು ಸ್ವಲ್ಪ ಆರೋಗ್ಯವಾಗಿರಬೇಕಿತ್ತು. ಪ್ರಾಣಿಗಳ ಕಾಳಜಿ ಕುರಿತು ತುಂಬಾ ಆಸೆ ಪಟ್ಟವರು. ಇದೇ ಕಾರಣಕ್ಕೆ ಈ ಪಶು ಆಸ್ಪತ್ರೆ ಕಟ್ಟಿಸಿದ್ದಾರೆ. ಅವರು ಆರೋಗ್ಯವಾಗಿದ್ದರೆ ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು" ಎಂದು ಅಮ್ಮನ ಆರೋಗ್ಯ ನೆನೆದು ವಿನೋದ್‌ ರಾಜ್‌ ಹೇಳಿದ್ದರು.

"ನನ್ನ ಅಮ್ಮನಿಗೆ ಪ್ರಾಣಿಗಳೆಂದರೆ ಇಷ್ಟ. ಪ್ರಾಣಿಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಿಮಗೆ ದನ ಹಾಲು ಕರೆದರೆ ಸಾಕು, ನಾಯಿಗಳು ಶೋ ಮಾಡಲು ಕಾಣಿಸಿದರೆ ಸಾಕು, ನಾನು ಅದನ್ನು ನೋಡೋಲ್ಲ ಕಣೋ, ನಾಯಿ ಕಣ್ಣನ್ನು ನೋಡ್ತಿನಿ, ಅದರ ಪರಿಸ್ಥಿತಿ ನೋಡ್ತಿನಿ, ಅದಕ್ಕೆ ಹೊಟ್ಟೆ ನೋವು ಆಗಿದೆಯಾ, ಅದಕ್ಕೆ ಹೊಟ್ಟೆ ಹಸಿವಾಗಿದೆಯೇ, ಎಲ್ಲವನ್ನೂ ನಾನು ಗಮನಿಸ್ತಿನಿ. ನೀವು ಕೂಡ ಈ ರೀತಿ ನೋಡಬೇಕು. ದೂರದಿಂದ ಯಾರಾದರೂ ಬರುವ ಜನರನ್ನು ನೋಡಬೇಕು. ಯಾರಾದರೂ ಹರಕಲು ಬಟ್ಟೆ ಹಾಕಿ ಬಂದರೆ ತಾತ್ಸಾರ ಮಾಡಬಾರದು. ಹರಕಲು ಬಟ್ಟೆ ಹಾಕಿದವರು ಕಸದ ಸಮ ಎಂದುಕೊಳ್ಳಬಾರದು. ಅವನ ಪರಿಸ್ಥಿತಿ ನೋಡಬೇಕಪ್ಪ ಎಂದು ನನ್ನಮ್ಮ ಹೇಳುತ್ತಿದ್ದರು" ಎಂದು ಅಮ್ಮನ ಪ್ರಾಣಿ ಪ್ರೀತಿಯನ್ನು ನೆನಪಿಸಿಕೊಂಡಿದ್ದರು. ಇದೇ ಕಾರಣಕ್ಕೆ ಊರಿನಲ್ಲೇ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಿಸಿದ್ದಾರೆ ಎಂದು ಹೇಳಿದ್ದರು.

ಎದ್ದು ಓಡಾಡದ ಸ್ಥಿತಿಗೆ ತಲುಪಿದ್ದ ಅಮ್ಮ ಲೀಲಾವತಿ ಅವರನ್ನು ನೆಲಮಂಗಲದ ಸೋಲದೇವನಹಳ್ಳಿಯ ಮನೆಯಲ್ಲಿಯೇ ವಿನೋದ್‌ ರಾಜ್‌ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ಅಮ್ಮನ ಪಕ್ಕದಲ್ಲಿಯೇ ಕುಳಿತು ತಾಯಿಯ ತಲೆಗೆ ತಲೆಕೊಟ್ಟು ದೇವರ ಹಾಡುಗಳನ್ನು ಹಾಡುತ್ತ ಇದ್ದರು. ಅಮ್ಮನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಿನೋದ್‌ ರಾಜ್‌ ಇಂದು ಒಂಟಿಯಾದ ಭಾವ ತೋಡಿಕೊಂಡಿದ್ದಾರೆ.

Whats_app_banner