Vaishnavi Gowda: ಸೀತಾ ರಾಮ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಸಂಪನ್ನ; ಅಗ್ನಿಸಾಕ್ಷಿಯಾಗಿ ಕೈಹಿಡಿಯಲು ಮುಂದಾದ ಅನುಕೂಲ್ ಮಿಶ್ರಾ
Vaishnavi Gowda engagement: ಸೀತಾ ರಾಮ, ಅಗ್ನಿಸಾಕ್ಷಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಕನ್ನಡ ನಟಿ ವೈಷ್ಣವಿ ಗೌಡ ಅವರು ವಾಯುಪಡೆಯ ಅನುಕೂಲ್ ಮಿಶ್ರಾ ಅವರ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್ 14ರಂದು ಇವರ ನಿಶ್ಚಿತಾರ್ಥ ನಡೆದಿದೆ.

Vaishnavi Gowda engagement: ಸೀತಾ ರಾಮ, ಅಗ್ನಿಸಾಕ್ಷಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಕನ್ನಡ ನಟಿ ವೈಷ್ಣವಿ ಗೌಡ ಅವರು ವಾಯುಪಡೆಯ ಅನುಕೂಲ್ ಮಿಶ್ರಾ ಅವರ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್ 14ರಂದು ಇವರ ನಿಶ್ಚಿತಾರ್ಥ ನಡೆದಿದೆ. ಸೀರಿಯಲ್ ನಟಿಯ ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಕನ್ನಡದ ಹಲವು ನಟಿಯರು, ನಟರು ಭಾಗವಹಿಸಿದ್ದಾರೆ. ಅಮೂಲ್ಯ, ಪೂಜಾ ಲೋಕೇಶ್, ಜ್ಯೋತಿ ಕಿರಣ್, ರಿತು ಸಿಂಗ್, ಚೈತ್ರಾ ವಾಸುದೇವನ್ ಸೇರಿದಂತೆ ಅನೇಕ ಆಪ್ತರು ಎಂಗೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ವೈಷ್ಣವಿ ಗೌಡ ಮದುವೆಯಾಗಲಿರುವ ಗಂಡು ಯಾರು?
ವೈಷ್ಣವಿ ಗೌಡ ಮದುವೆಯಾಗಲಿರುವ ಗಂಡು ಯಾರು ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಅಗ್ನಿಸಾಕ್ಷಿ ಧಾರಾವಾಹಿ ನಟಿಯು ಕೇಂದ್ರ ಸರಕಾರದ ಉದ್ಯೋಗಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಹೆಸರು ಅನುಕೂಲ್ ಮಿಶ್ರಾ. ಪ್ರೀತಿಯಿಂದ ಅಕಾಯ್ ಎಂದು ಇವರನ್ನು ಕರೆಯುತ್ತಾರೆ. ವಾಯುಪಡೆಯಲ್ಲಿ ಉದ್ಯೋಗಿಯಾಗಿರುವ ಅನುಕೂಲ್ ಮಿಶ್ರಾ ಅವರು ಪೈಲೆಟ್ ಆಗಿರಬಹುದು ಎನ್ನಲಾಗುತ್ತಿದೆ. ಏಕೆಂದರೆ, ಇವರ ಉದ್ಯೋಗ ಆಕಾಶದಲ್ಲಿ ಎಂದು ಇನ್‌ಸ್ಟಾಗ್ರಾಂನಲ್ಲಿ ವೈಷ್ಣವಿ ಬರೆದಿದ್ದಾರೆ. ವಾಯುಪಡೆಯಲ್ಲಿ ಪೈಲೆಟ್ ಹೊರತುಪಡಿಸಿ ಬೇರೆ ಉದ್ಯೋಗವೂ ಆಗಿರಬಹುದು. ಅನುಕೂಲ್ ಮಿಶ್ರಾ ಅವರ ನಿರ್ದಿಷ್ಟ ಉದ್ಯೋಗದ ಕುರಿತು ಅಧಿಕೃತವಾಗಿ ವೈಷ್ಣವಿ ಗೌಡ ತಿಳಿಸಿಲ್ಲ.
"ಸ್ಕ್ರಿಪ್ಟ್ ಮತ್ತು ವೇದಿಕೆಗಳು ಆಕೆಯ ಜಗತ್ತು. ಆತನ ಜಗತ್ತು ಆಕಾಶ ಮತ್ತು ಸೇವೆ. ಆದರೆ, ನಮ್ಮಿಬ್ಬರ ಡೆಸ್ಟಿನಿ ಪರ್ಫೆಕ್ಟ್ ಲವ್ ಸ್ಟೋರಿಯಾಗಿದೆ" ಎಂದು ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳಿಗೆ ಕ್ಯಾಪ್ಷನ್ ಬರೆದಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ.
ಈ ಬಾರಿ ವೈಷ್ಣವಿ ಗೌಡ ಅವರು ಬೆಂಗಳೂರಿನಲ್ಲಿ ನಡೆದ ಏರ್ ಶೋ ವೀಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ "ಧನ್ಯವಾದ ಎ. ನಿಮ್ಮಿಂದ ನನಗೆ ಏರ್‌ಶೋ ನೋಡಲು ಸಾಧ್ಯವಾಯಿತು. ಇದು ಸುಂದರವಾದ ಅನುಭವ" ಎಂದು ಪೋಸ್ಟ್ ಮಾಡಿದ್ದರು. ನಿನ್ನೆ ತನ್ನ ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಇವರಿಬ್ಬರು ಎಂಗೇಜ್‌ಮಂಟ್ ಆಗಿದ್ದಾರೆ. ಸಂಜೆ ನಗರದ ಹೊರವಲಯದಲ್ಲಿ ಬರ್ತ್‌ಡೇ ಪಾರ್ಟಿ ಕೂಡ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಟಿ ವೈಷ್ಣವಿ ಗೌಡ ಅವರು ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಈಕೆ ಬಿಗ್‌ಬಾಸ್‌ನಲ್ಲಿ ಫಿನಾಲೆ ತಲುಪಿದ್ದರು. ಬಿಗ್‌ಬಾಸ್ ಮನೆಯಲ್ಲಿರುವಾಗ ತನ್ನ ಮದುವೆ- ಕನಸುಗಳ ಕುರಿತು ಮುಕ್ತವಾಗಿ ಮಾತನಾಡಿದ್ದರು. "ಮದುವೆಯಾಗಲು ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ, ಯಾರನ್ನೂ ಒಪ್ಪಿಲ್ಲ" ಎಂದು ವೈಷ್ಣವಿ ಗೌಡ ಹೇಳಿದ್ದರು.
ವೈಷ್ಣವಿ ಗೌಡ ಅವರು ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಟಿಸಿದ್ದರು. ಈ ಸೀರಿಯಲ್ ಮೂಲಕ ಇವರು ಕನ್ನಡ ಕಿರುತೆರೆ ವೀಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟರು. ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಈಗ ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ವೈಷ್ಣವಿ ಗೌಡ ಅವರಿಗೆ ನಟಿ ಅಮೂಲ್ಯ ಬೆಸ್ಟ್ ಫ್ರೆಂಡ್. ಬೆಂಗಳೂರಿನ ಜಯನಗರದಲ್ಲಿರುವ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ಇವರಿಗೆ ಪದವಿ ಶಿಕ್ಷಣವನ್ನು ಅಟೆಂಡೆನ್ಸ್ ಕೊರತೆಯಿಂದ ಪೂರ್ತಿ ಗೊಳಿಸಲು ಆಗಿರಲಿಲ್ಲವಂತೆ. ಬಳಿಕ ಡಿಸ್ಟೆನ್ಸ್ ಎಜುಕೇಷನ್ ಮೂಲಕ ಬಿಎ ಪದವಿ ಪಡೆದರು.
ಭರತನಾಟ್ಯ, ಕೂಚುಪುಡಿ ಮತ್ತು ಬೆಲ್ಲಿ ಡ್ಯಾನ್ಸ್ ಮೂರನೇ ಹಂತದ ತರಬೇತಿಯನ್ನು ಪಡೆದಿದ್ದಾರೆ. ತನ್ನ ಹದಿನಾರನೇ ವಯಸ್ಸಿನಲ್ಲಿ ಜೀ ಕನ್ನಡವಾಹಿನಿಯ ದೇವಿ ಸೀರಿಯಲ್ ಮೂಲಕ ಸೀರಿಯಲ್ ಜಗತ್ತಿಗೆ ಪ್ರವೇಶಿಸಿದ್ದರು. ಭರ್ಜರಿ ಕಾಮಿಡಿ ಶೋನಲ್ಲಿ ಆಂಕರ್ ಆಗಿದ್ದರು. ಡ್ರೆಸ್ ಕೋಡ್, ಗಿರಿಗಿಟ್ಲೆ ಸಿನಿಮಾಗಳಲ್ಲಿಯೂ ವೈಷ್ಣವಿ ಗೌಡ ನಟಿಸಿದ್ದಾರೆ.
