ಇದು ಕನ್ನಡ ಸಾಹಿತ್ಯ ಲೋಕದ ಸಂಭ್ರಮ, ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ
ಕನ್ನಡ ಸುದ್ದಿ  /  ಮನರಂಜನೆ  /  ಇದು ಕನ್ನಡ ಸಾಹಿತ್ಯ ಲೋಕದ ಸಂಭ್ರಮ, ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ

ಇದು ಕನ್ನಡ ಸಾಹಿತ್ಯ ಲೋಕದ ಸಂಭ್ರಮ, ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ

ಕನ್ನಡ ಲೇಖಕಿ ಬಾನು ಮುಷ್ತಾಕ್‌ ಅವರ ಅನುವಾದಿತ ಕೃತಿ ಹಾರ್ಟ್‌ ಲ್ಯಾಂಪ್ಸ್‌ಗೆ ಈ ವರ್ಷದ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರಕಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನರು ಲೇಖಕಿ ಬಾನು ಮುಷ್ತಾಕ್‌ ಮತ್ತು ಅನುವಾದಕಿ ದೀಪಾ ಭಸ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ
ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆ (hombale films)

ಕನ್ನಡ ಲೇಖಕಿ ಬಾನು ಮುಷ್ತಾಕ್‌ ಅವರ ಅನುವಾದಿತ ಕೃತಿ ಹಾರ್ಟ್‌ ಲ್ಯಾಂಪ್ಸ್‌ಗೆ ಈ ವರ್ಷದ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರಕಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನರು ಲೇಖಕಿ ಬಾನು ಮುಷ್ತಾಕ್‌ ಮತ್ತು ಅನುವಾದಕಿ ದೀಪಾ ಭಸ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕನ್ನಡ ನಟ ರಾಜ್‌ ಬಿ ಶೆಟ್ಟಿ, ಟಿಎನ್‌ ಸೀತಾರಾಮ್‌, ಚೇತನ್‌ ಅಹಿಂಸಾ, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಸೇರಿದಂತೆ ಸಾಕಷ್ಟು ಜನರು/ ಸಿನಿಮಾ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು, ನಿರ್ಮಾಪಕರು ಬಾನು ಮುಷ್ತಾಕ್‌ ಮತ್ತು ದೀಪಾ ಭಸ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬೂಕರ್‌ ಅಂತಾರಾಷ್ಟ್ರೀಯ ಪ್ರಶಸ್ತಿ 2025: ಕನ್ನಡ ಸಾಹಿತ್ಯ ಕೃತಿಯ ಸಾಧನೆಯೊಂದಕ್ಕೆ ಕರ್ನಾಟಕದ ರಾಜಕಾರಣಿಗಳು, ಸಿನಿಮಾ ಕಲಾವಿದರು, ಜನ ಸಾಮಾನ್ಯರು, ಸೆಲೆಬ್ರಿಟಿಗಳು, ಸಾಹಿತಿಗಳು ಸಂಭ್ರಮಿಸುತ್ತಿದ್ದಾರೆ. ಕನ್ನಡ ಲೇಖಕಿ ಬಾನು ಮುಷ್ತಾಕ್‌ ಅವರ ಅನುವಾದಿತ ಕೃತಿ ಹಾರ್ಟ್‌ ಲ್ಯಾಂಪ್ಸ್‌ಗೆ ಈ ವರ್ಷದ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರಕಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸಾಕಷ್ಟು ಜನರು ಲೇಖಕಿ ಬಾನು ಮುಷ್ತಾಕ್‌ ಮತ್ತು ಅನುವಾದಕಿ ದೀಪಾ ಭಸ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕನ್ನಡ ನಟ ಮತ್ತು ನಿರ್ದೇಶಕ ರಾಜ್‌ ಬಿ. ಶೆಟ್ಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಬೂಕರ್‌ ಪ್ರಶಸ್ತಿ ಪಡೆದ ಕನ್ನಡ ಕೃತಿ ಮತ್ತು ಲೇಖಕಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನಗುವ ಇಮೋಜಿ ಮೂಲಕ ತನ್ನ ಖುಷಿ ವ್ಯಕ್ತಪಡಿಸಿದ್ದಾರೆ. ಕೆಜಿಎಫ್‌, ಕಾಂತಾರ, ಸಲಾರ್‌ ಸೇರಿದಂತೆ ಅನೇಕ ಖ್ಯಾತ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್‌ ಕೂಡ ಲೇಖಕಿ ಮತ್ತು ಅನುವಾದಕಿಗೆ ಅಭಿನಂದನೆಗಳನ್ನು ಸಲ್ಲಿಸಿದೆ. "ಅಂತಾರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತರು, ನಮ್ಮ ಹೆಮ್ಮೆಯ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದೆಗಳು! ಕನ್ನಡ ಸಾಹಿತ್ಯಕ್ಕೆ ವಿಶ್ವಮಟ್ಟದ ಕೀರ್ತಿ ತಂದ ನಿಮ್ಮಿಬ್ಬರ ಸಾಧನೆ ಅಪೂರ್ವ. ಈ ಗೌರವ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಗೆ ಮತ್ತಷ್ಟು ಶಕ್ತಿ ತುಂಬಲಿ." ಎಂದು ಹೊಂಬಾಳೆ ಫಿಲ್ಮ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

"ಕನ್ನಡಕ್ಕೆ ವಿಶ್ವ ಮಟ್ಟದ ಬೂಕರ್ ಪ್ರಶಸ್ತಿ ಗೆದ್ದು ಹೆಮ್ಮೆ ತಂದವರು ಭಾನು ಮುಷ್ತಾಕ್‌ ಮತ್ತು ದೀಪಾ ಬಸ್ತಿ. ಇದು ಕನ್ನಡ ಸಾಹಿತ್ಯ ಲೋಕದ ಸಂಭ್ರಮ. ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು. ಕನ್ನಡಕ್ಕೆ, ಭಾರತಕ್ಕೆ, ಓದುಗರಿಗೆ ಮತ್ತು ಅದರ ಮುಲಕ ನಮ್ಮೆಲ್ಲರಿಗೂ ಹೆಮ್ಮೆ, ಸಂಭ್ರಮ ತಂದಿರಿ.. ಬೂಕರ್ ಪ್ರಶಸ್ತಿ ಸಾಮಾನ್ಯದ್ದಲ್ಲ..ಇದು ವಿಶ್ವ ಮಟ್ಟದ ಸಾಹಿತ್ಯಿಕ ಆಯ್ಕೆ. ಎಲ್ಲರಿಗೂ ಹೆಮ್ಮೆ ಮತ್ತು ಅಭಿನಂದನೆಗಳು" ಎಂದು ಮುಕ್ತಮುಕ್ತ ಸೀರಿಯಲ್‌ ಖ್ಯಾತಿಯ ಟಿಎನ್‌ ಸೀತಾರಾಮ್‌ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

'ಹಾರ್ಟ್ ಲ್ಯಾಂಪ್' ಪುಸ್ತಕಕ್ಕಾಗಿ 2025 ರ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಕನ್ನಡ ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಅವರಿಗೆ ವಿಶೇಷ ಅಭಿನಂದನೆಗಳು. 'ಹಾರ್ಟ್ ಲ್ಯಾಂಪ್' ಕರ್ನಾಟಕದ ಮುಸ್ಲಿಂ ಮಹಿಳೆಯರ ದೈನಂದಿನ ಜೀವನದ ಬಗ್ಗೆ 12 ಸಣ್ಣ ಕಥೆಗಳ ಸಂಗ್ರಹವಾಗಿದೆ. ಈ ಮನ್ನಣೆ ಕರ್ನಾಟಕ ಮತ್ತು ಕನ್ನಡಕ್ಕೆ ಹೆಮ್ಮೆಯ ಮೂಲವಾಗಿದೆ" ಎಂದು ಚೇತನ್‌ ಅಹಿಂಸಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಫೇಸ್‌ಬುಕ್‌, ಟ್ವಿಟ್ಟರ್‌ (ಎಕ್ಸ್‌), ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ, ವಾಟ್ಸಪ್‌ ಸ್ಟೇಟಸ್‌ಗಗಳಲ್ಲಿ ಅನೇಕ ಸಿನಿಮಾ- ಸೀರಿಯಲ್‌ ನಟರು, ನಟಿಯರು, ನಿರ್ದೇಶಕರು ಲೇಖಕಿ ಬಾನು ಮುಷ್ತಾಕ್‌ ಮತ್ತು ಅನುವಾದಕಿ ದೀಪಾ ಭಸ್ತಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in