ಕನ್ನಡ ಸುದ್ದಿ  /  ಮನರಂಜನೆ  /  Kannada Film Industry: ಕರುನಾಡಿನ ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲ, ಕನ್ನಡ ಚಿತ್ರೋದ್ಯಮ ಬಂದ್‌ ಮಾಡಲು ಚಿಂತನೆ

Kannada Film Industry: ಕರುನಾಡಿನ ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲ, ಕನ್ನಡ ಚಿತ್ರೋದ್ಯಮ ಬಂದ್‌ ಮಾಡಲು ಚಿಂತನೆ

ಕನ್ನಡ ಚಿತ್ರೋದ್ಯಮ ಬಂದ್‌ ಆಗುತ್ತಾ? ಹೀಗೊಂದು ಪ್ರಶ್ನೆಗೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳು ಬಾರದಿರುವುದರಿಂದ ಏನೆಲ್ಲ ಸಮಸ್ಯೆ ಎದುರಾಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

Kannada Film Industry: ಕರುನಾಡಿನ ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲ, ಕನ್ನಡ ಚಿತ್ರೋದ್ಯಮ ಬಂದ್‌ ಮಾಡಲು ಚಿಂತನೆ
Kannada Film Industry: ಕರುನಾಡಿನ ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲ, ಕನ್ನಡ ಚಿತ್ರೋದ್ಯಮ ಬಂದ್‌ ಮಾಡಲು ಚಿಂತನೆ

Kannada Film Industry: ಕನ್ನಡ ಚಿತ್ರರಂಗ ಸದ್ಯ ತೀವ್ರ ನಿಗಾ ಘಟಕದಲ್ಲಿದೆ. ಸ್ಟಾರ್‌ ಹೀರೋಗಳ ಸಿನಿಮಾಗಳ ಕೊರತೆಯಿಂದ ಬಹುತೇಕ ಚಿತ್ರಮಂದಿರಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ. ಈ ಮೊದಲೇ ಆಗೊಂದು ಈಗೊಂದು ಸ್ಟಾರ್‌ ನಟರ ಸಿನಿಮಾ ಬಿಡುಗಡೆ ಸಮಯದಲ್ಲಿಯೇ ಚಿತ್ರಮಂದಿರದ ನಿರ್ವಹಣಾ ವೆಚ್ಚ ಮಾಲೀಕರ ತಲೆ ಮೇಲೆ ದೊಡ್ಡ ಹೊರೆಯಾಗಿತ್ತು. ಇದೀಗ ಕನ್ನಡದ ಘಟಾನುಘಟಿ ಸ್ಟಾರ್‌ ಹೀರೋಗಳು ಎನಿಸಿಕೊಂಡವರೂ ಎರಡ್ಮೂರು ವರ್ಷಕ್ಕೊಂದು ಸಿನಿಮಾ ಮಾಡಿದರೆ, ಕನ್ನಡ ಚಿತ್ರರಂಗ ಬೆಳೆಯುವುದಾದರೂ ಹೇಗೆ? ಈ ಕಾರಣಕ್ಕೆ ಚಿತ್ರೋದ್ಯಮವನ್ನೇ ಬಂದ ಮಾಡಲು ಚಿಂತನೆ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಈ ನಿಟ್ಟಿನಲ್ಲಿ ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರೋದ್ಯಮದ ಎಲ್ಲ ಪದಾಧಿಕಾರಿಗಳ ಜತೆಗೆ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕನ್ನಡ ಸಿನಿಮಾರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಚಿತ್ರಮಂದಿರಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದೇವೆ ಎಂದಿದ್ದಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್.‌

ನಷ್ಟದಲ್ಲಿ ಕನ್ನಡ ಚಿತ್ರೋದ್ಯಮ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನೆಲ್ಲ ಅಂಗ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು, ಚಿತ್ರೀಕರಣ ಮತ್ತು ಚಿತ್ರೋದ್ಯಮ ಬಂದ್‌ ಮಾಡುವ ಕುರಿತಾಗಿ ಚರ್ಚೆ ನಡೆಸಲಾಗಿದೆ. ಸ್ಟಾರ್‌ ನಟರು ವರ್ಷಕ್ಕೊಂದು, ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿರುವುದರಿಂದ ಚಿತ್ರಮಂದಿರಗಳ ಸಂಕಷ್ಟವನ್ನು ಎದುರಿಸುತ್ತಿವೆ. ಸಿನಿಮಾಗಳಿಲ್ಲದೆ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿವೆ. ಇದರಿಂದ ಚಿತ್ರೋದ್ಯಮಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂದಿದ್ದಾರೆ ಉಮೇಶ್‌ ಬಣಕಾರ್.‌

ಕೇರಳ ಮಾದರಿ ಜಾರಿಗೆ ಚಿಂತನೆ

ಚಿತ್ರಮಂದಿರಗಳಲ್ಲಿ ಸಿನಿಮಾಗಳು ಉಳಿಯುತ್ತಿಲ್ಲ. ಹಾಗಾಗಿ ಬಂಡವಾಳ ಹಾಕಿದ ನಿರ್ಮಾಪಕರ ಗತಿ ಏನು? ಚಿತ್ರಮಂದಿರಗಳಲ್ಲಿ ಸಿನಿಮಾನೇ ಇಲ್ಲ ಎಂದಾದ ಮೇಲೆ, ಅವು ಹೇಗೆ ಮುಂದೆ ಸಾಗಬೇಕು, ಈ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ವಿವಿಧ ಅಂಗ ಸಂಸ್ಥೆಗಳಿಗೆ ಸಲಹೆ ನೀಡುವಂತೆ ತಿಳಿಸಿದೆ. ಚಿತ್ರಮಂದಿರದಲ್ಲಿ ಸಿನಿಮಾ ನಿಲ್ಲದ ಕಾರಣ, ಪ್ರದರ್ಶಕರಿಗೆ ಸಮಸ್ಯೆ ಎದುರಾಗ್ತಿದೆ. ದೊಡ್ಡ ದೊಡ್ಡ ನಟರುಗಳು ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇವೆ. ಕಳೆದ ಎರಡು ವಾರಗಳಿಂದ ತೆಲಂಗಾಣದಲ್ಲಿ ಚಿತ್ರಪ್ರದರ್ಶನ ಬಂದ್‌ ಮಾಡಲಾಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರುವ ಚಿಂತನೆ ನಡೆದಿದೆ. ಈ ಕುರಿತು ಚೇಂಬರ್‌ನಲ್ಲಿ ಸಭೆ ಮಾಡಲಾಗಿದೆ. ಬುಧವಾರ (ಮೇ 22) ಮತ್ತೆ ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳ ಜತೆಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದ್ದಾರೆ.

ದೊಡ್ಡ ನಿರ್ಮಾಪಕರ ಜತೆ ಸಭೆ

ಕನ್ನಡ ಸಿನಿಮಾ ಮತ್ತು ಕರ್ನಾಟಕದ ಚಿತ್ರಮಂದಿರಗಳನ್ನು ಉಳಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ತನ್ನ ಕೆಲಸ ಆರಂಭಿಸಿದೆ. ಕಲಾವಿದರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಚಿತ್ರಮಂದಿರಗಳ ಮಾಲೀಕರನ್ನು ಕರೆಸಿ ಕೂರಿಸಿ ಮಾತನಾಡಿದ್ದೇವೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಇದೇ ರೀತಿ ಆಗ್ತಿದೆ. ಆದರೆ ಮಾಲಿವುಡ್‌ ಮಾತ್ರ ಬೇರೆ ಲೆವೆಲ್‌ನಲ್ಲಿದೆ. ನಾವೂ ಮಲಯಾಳಂ ಮಾದರಿ ಅನುಸರಿಸಬೇಕಿದೆ. ಕಳೆದ ನಾಲ್ಕೈದು ತಿಂಗಳಲ್ಲಿ ಅಲ್ಲಿನ ಸಿನಿಮಾಗಳು ದೊಡ್ಡ ಮಟ್ಟದ ಗಳಿಕೆ ಮಾಡುತ್ತಿವೆ. ಸಾವಿರಾರು ಕೋಟಿ ಬಿಜಿನೆಸ್‌ ಮಾಡಿವೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆ ಸ್ಥಿತಿ ಇಲ್ಲ. ಸ್ಟಾರ್‌ಗಳ ಸಿನಿಮಾಗಳು ಬರ್ತಿಲ್ಲ, ಚಿತ್ರಮಂದಿರಗಳು ಬಂದ್‌ ಆಗ್ತಿವೆ. ಈ ನಿಟ್ಟಿನಲ್ಲಿ ಸಭೆ ಮಾಡಲಿದ್ದೇವೆ. ಈ ಸಭೆಯಲ್ಲಿ ಕನ್ನಡದ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ, ಕೆವಿಎನ್‌, ಕೆಆರ್‌ಜಿ, ರಾಕ್‌ಲೈನ್‌ ಸೇರಿ ಎಲ್ಲರನ್ನೂ ಕರೆಸಿ ಚರ್ಚೆ ಮಾಡಲಿದ್ದೇವೆ ಎಂದಿದ್ದಾರೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್.‌

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

ಟಿ20 ವರ್ಲ್ಡ್‌ಕಪ್ 2024