OTT Suspense Thriller: ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರಿಯರೇ? ಒಟಿಟಿಗೆ ಬಂತು ಕನ್ನಡದ ಸೂಪರ್​ಹಿಟ್ 'ಕಾಂಗರೂ' ಚಿತ್ರ-kannada horror thriller movie kangaroo streaming now on amazon prime video sandalwood ott news prs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Suspense Thriller: ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರಿಯರೇ? ಒಟಿಟಿಗೆ ಬಂತು ಕನ್ನಡದ ಸೂಪರ್​ಹಿಟ್ 'ಕಾಂಗರೂ' ಚಿತ್ರ

OTT Suspense Thriller: ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರಿಯರೇ? ಒಟಿಟಿಗೆ ಬಂತು ಕನ್ನಡದ ಸೂಪರ್​ಹಿಟ್ 'ಕಾಂಗರೂ' ಚಿತ್ರ

OTT Suspense Thriller: ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರಿಯರೇ? ಕನ್ನಡದ ಸೂಪರ್​ಹಿಟ್ ಕಾಂಗರೂ ಚಿತ್ರ ಒಟಿಟಿಗೆ ಬಂದಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಅಂತೂ ರೋಮಾಂಕವಾಗಿದೆ.

ಕನ್ನಡದ ಸೂಪರ್​ಹಿಟ್ ಕಾಂಗರೂ ಚಿತ್ರ.
ಕನ್ನಡದ ಸೂಪರ್​ಹಿಟ್ ಕಾಂಗರೂ ಚಿತ್ರ.

OTT Suspense Thriller: ಕನ್ನಡದಲ್ಲಿ ಈ ವರ್ಷ ಅತಿ ದೊಡ್ಡ ವಿಜಯ ಸಾಧಿಸಿದ ಹಾರರ್ ಥ್ರಿಲರ್​ ಸಿನಿಮಾ ಕಾಂಗರೂ ಒಟಿಟಿಗೆ ಬಂದಿದೆ. ಕಾಂಗರೂ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾದಲ್ಲಿ ಆದಿತ್ಯ ಮತ್ತು ರಂಜನಿ ರಾಘವನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾರರ್ ಸಿನಿಮಾ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಸೂರೆಗೊಂಡಿತು.

ಕಥೆ, ಚಿತ್ರಕಥೆ, ಟ್ವಿಸ್ಟ್​​ಗಳು ಮತ್ತು ನಟನೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಸೀಟ್ ಎಡ್ಜ್ ಥ್ರಿಲ್ಲರ್ ಎಂದಿದ್ದರು ಪ್ರೇಕ್ಷಕರು. ವಿಶೇಷವಾಗಿ ಕ್ಲೈಮ್ಯಾಕ್ಸ್​​​ ಟ್ವಿಸ್ಟ್​ ರೋಮಾಂಚನಗೊಳಿಸುತ್ತದೆ. ಈ ಚಿತ್ರವು ಐಎಂಡಿಬಿ (IMDb) ನಲ್ಲಿ 10ಕ್ಕೆ 8.1 ರೇಟಿಂಗ್ ಪಡೆದಿದೆ. ಸಾಧು ಕೋಕಿಲ, ಅಶ್ವಿನ್ ಹಾಸನ್, ಶಿವಮಣಿ, ಕರಿ ಬಾಬು ಸೇರಿದಂತೆ ಪ್ರಮುಖರು ಈ ಚಿತ್ರದಲ್ಲಿ ಜೀವ ತುಂಬಿದ್ದಾರೆ.

ಕಾಂಗರೂ ಕಥೆ ಏನು?

ಎಸಿಪಿ ಪೃಥ್ವಿ (ಆದಿತ್ಯ) ಚಿಕ್ಕಮಗಳೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗುತ್ತಾರೆ. ಠಾಣೆ ಪಕ್ಕದಲ್ಲೇ ಆಂಟೋನಿ ಗೆಸ್ಟ್ ಹೌಸ್​ನಲ್ಲಿ ತಂಗುತ್ತಾರೆ. ಆದರೆ ಈ ಗೆಸ್ಟ್ ಹೌಸ್​ಗೆ ಹೋದ 125 ಮಂದಿ ನಾಪತ್ತೆಯಾಗಿರುತ್ತಾರೆ. ಆದರೆ ಈ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ. ಸಾಕಷ್ಟು ಮಂದಿ ಈ ಗೆಸ್ಟ್​ ಹೌಸ್​ನಲ್ಲಿ ದೆವ್ವ ಇದೆ. ಎಲ್ಲರನ್ನೂ ಸಾಯಿಸುತ್ತಿದೆ ಎಂದು ಹೇಳುತ್ತಾರೆ. ಈ ನಾಪತ್ತೆಯ ಹಿಂದಿನ ರಹಸ್ಯವನ್ನು ಪೃಥ್ವಿ ಹೇಗೆ ಭೇದಿಸಿದ ಎಂಬುದೇ ಈ ಚಿತ್ರದ ಕಥೆಯಾಗಿದೆ. ಆದರೆ ಪ್ರತಿ ಹಂತದಲ್ಲೂ ರೋಚಕ ತಿರುವುಗಳಿದ್ದು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ರಂಜನಿ ರಾಘವನ್ ಸಿರಿಯಲ್ ನಟಿ

ಈ ಚಿತ್ರದಲ್ಲಿ ಮೇಘನಾ (ರಂಜನಿ ರಾಘವನ್) ಈ ಪ್ರಕರಣನ್ನು ಪರಿಹರಿಸುವಲ್ಲಿ ಪೃಥ್ವಿ ಅವರಿಗೆ ಸಹಾಯ ಮಾಡುತ್ತಾರೆ. ರಂಜನಿ ರಾಘವನ್ ಕನ್ನಡದ ಟಾಪ್ ಸೀರಿಯಲ್ ನಟರಲ್ಲಿ ಒಬ್ಬರು. ಅಕ್ಷದೀಪ ಮತ್ತು ಕನ್ನಡತಿ ಜೊತೆಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯ ನಟಿ ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ಅಲ್ಲದೆ, ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿತು. ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸತ್ಯ ಚಿತ್ರದ ಮೂಲಕ ರಂಜನಿ ರಾಘವನ್ ಟಾಲಿವುಡ್​ಗೂ ಕಾಲಿಡುತ್ತಿದ್ದಾರೆ.

ಆದಿತ್ಯ ಸಿನಿ ಜರ್ನಿ

ನಟ ಆದಿತ್ಯ ಈ ಚಿತ್ರದ ಮೂಲಕ ಮೂರು ವರ್ಷಗಳ ನಂತರ ಕನ್ನಡಕ್ಕೆ ರಿ ಎಂಟ್ರಿ ಕೊಟ್ಟರು. 2021ರಲ್ಲಿ ಬಿಡುಗಡೆಯಾದ ಮುಂದುವರೆದ ಅಧ್ಯಾಯ ಅವರ ಕೊನೆಯ ಸಿನಿಮಾವಾಗಿತ್ತು. 2004ರಲ್ಲಿ ತೆರೆಕಂಡ ಲವ್ ಚಿತ್ರದ ಮೂಲಕ ಕನ್ನಡಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿರುವ ಆದಿತ್ಯ ಈವರೆಗೆ 26 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಮಾಫಿಯಾ, ಅಂಡರ್​ವರ್ಲ್ಡ್​ ಚಿತ್ರಗಳಲ್ಲಿ ನಟಿಸಿದ್ದರು. ಡೆಡ್ಲಿ ಸೋಮ, ಎದೆಗಾರಿಕೆ ಜೊತೆಗೆ ಮೋಹಿನಿ ಸಿನಿಮಾಗಳು ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದ್ದವು. ಮಮ್ಮುಟ್ಟಿ, ಶಿವರಾಜ್‌ಕುಮಾರ್ ಮತ್ತು ದರ್ಶನ್ ಅವರಂತಹ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಆದಿತ್ಯ ನಟಿಸಿದ್ದಾರೆ.