ಕನ್ನಡ ಸುದ್ದಿ  /  Entertainment  /  Kannada Movie News Shaitan Ott Release Date Actor Rishi Acts Crime Thriller Shaitan Disney Plus Hotstar Web Series Mnk

Rishi: ಶೈತಾನ್‌ನಲ್ಲಿ ಕಡು ಕ್ರೂರಿ ಈ ರಿಷಿ, ವೆಬ್ ಸಿರೀಸ್‌ ಲೋಕಕ್ಕೆ ಕವಲುದಾರಿ ನಟ ಎಂಟ್ರಿ; ಜೂನ್‌ 15ರಿಂದ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಸ್ಯಾಂಡಲ್‌ವುಡ್‌ನ ಯುವ ನಟ ರಿಷಿ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟು, ಶೈತಾನ್‌ ಹೆಸರಿನ ವೆಬ್‌ ಸಿರೀಸ್‌ನಲ್ಲಿ ನಟಿಸಿದ್ದಾರೆ. ಆ ಸರಣಿಯಲ್ಲಿ ಕಡು ಕ್ರೂರಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ ಜೂನ್‌ 15ರಿಂದ ಅವರ ರೌದ್ರಾವತಾರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಶೈತಾನ್‌ನಲ್ಲಿ ಕಡು ಕ್ರೂರಿ ಈ ರಿಷಿ, ವೆಬ್ ಸಿರೀಸ್‌ ಲೋಕಕ್ಕೆ ಕವಲುದಾರಿ ನಟ ಎಂಟ್ರಿ; ಜೂನ್‌ 15ರಿಂದ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌
ಶೈತಾನ್‌ನಲ್ಲಿ ಕಡು ಕ್ರೂರಿ ಈ ರಿಷಿ, ವೆಬ್ ಸಿರೀಸ್‌ ಲೋಕಕ್ಕೆ ಕವಲುದಾರಿ ನಟ ಎಂಟ್ರಿ; ಜೂನ್‌ 15ರಿಂದ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

Rishi shaitan Web series: ಒಟಿಟಿ ಮೂಲಕ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಪ್ರೇಕ್ಷಕರ ಎದುರು ಬರುತ್ತಿವೆ. ಬಾಲಿವುಡ್ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು ಹಾಗೂ ಸಿನಿಮಾ ಮೇಕರ್ಸ್ (Film Makers) ಸಹ ವೆಬ್ ಸರಣಿಗಳತ್ತ ದೃಷ್ಟಿ ನೆಟ್ಟಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿಯೂ ವೆಬ್‌ ಸರಣಿಗಳ (Kannada Web series) ನಿರ್ಮಾಣ ಬಿರುಸಿನಿಂದ ನಡೆಯುತ್ತಿದೆ. ಕನ್ನಡ ಕಲಾವಿದರೂ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಆಪರೇಷನ್‌ ಅಲಮೇಲಮ್ಮ ಸಿನಿಮಾ ಖ್ಯಾತಿಯ ನಟ ರಿಷಿ.

ಇದನ್ನೂ ಓದಿ: ರಾಮನ ಅವತಾರದಲ್ಲಿ ಜೆಂಟಲ್ ಮ್ಯಾನ್ ವೇಷ; ಹಾಡಿನ ಮೂಲಕ ರಿಷಿ ಎಂಟ್ರಿ

ವೆಬ್‌ ಸಿರೀಸ್‌ನತ್ತ ರಿಷಿ ಚಿತ್ತ

ಪಾತ್ರಗಳ ಆಯ್ಕೆಯಲ್ಲಿ ರಿಷಿ ಬಹಳ ವಿಭಿನ್ನ. ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಯಾವುದೇ ಇರಲಿ ಎಲ್ಲದಕ್ಕೂ ಸರಿಹೊಂದುತ್ತಾರೆ ರಿಷಿ. ಅದಕ್ಕೆ ಉದಾರಹಣೆ ಅವರ ಈ ಹಿಂದಿನ ಸಿನಿಮಾಗಳಾದ ಆಪರೇಷನ್ ಅಲಮೇಲಮ್ಮ, ಕವಲುದಾರಿ, ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾಗಳು. ಪ್ರತಿ ಸಿನಿಮಾದಲ್ಲಿಯೂ ಹೊಸ ಬಗೆಯ ಕಂಟೆಂಟ್, ಕ್ಯಾರೆಕ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ತಾವೊಬ್ಬ ಪ್ರತಿಭಾನ್ವಿತ ನಟ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ರಿಷಿ. ಸದ್ಯ ರಾಮನ ಅವತಾರ ಸಿನಿಮಾ ರಿಲೀಸ್‌ ಸಲುವಾಗಿ ಕಾಯುತ್ತಿರುವ ರಿಷಿ, ಒಂದಷ್ಟು ಹೊಸ ಪ್ರಾಜೆಕ್ಟ್‌ಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ತೆಲುಗು ನಿರ್ದೇಶಕನ ವೆಬ್‌ಸಿರೀಸ್‌ನಲ್ಲಿ ರಿಷಿ

ಸಿನಿಮಾಗಳಲ್ಲಿ ಮಾತ್ರವಲ್ಲ ವೆಬ್ ಸಿರೀಸ್‌ಗಳಲ್ಲಿಯೂ ತಮ್ಮ ನಟನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ರಿಷಿ. ತೆಲುಗಿನ ಖ್ಯಾತ ನಿರ್ದೇಶಕ ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ "ಶೈತಾನ್" ಮೂಲಕ ರಿಷಿ ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೆಬ್ ಸರಣಿಯಲ್ಲಿ ರಿಷಿ, ಬಾಲಿ‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡು ಶೇಡ್‌ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಕಂಪ್ಲೀಟ್ ಮಾಸ್ ಅವತಾರದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾಗಳಲ್ಲಿ ದಕ್ಕದ ನಿರೀಕ್ಷಿತ ಗೆಲುವು; ಯಶಸ್ಸಿಗಾಗಿ ಕುತ್ತಾರು ಕೊರಗಜ್ಜನ ಮೊರೆಹೋದ ರಚಿತಾ ರಾಮ್‌

ನಿರ್ದೇಶಕರಿಗೆ ರಿಷಿ ಧನ್ಯವಾದ

ಕಾಮಿಡಿ, ಸಸ್ಪೆನ್ಸ್ ಪಾತ್ರದ ಮೂಲಕ ಗಮನಸೆಳೆದಿದ್ದ ಅವರೀಗ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಡಲು ಸಜ್ಜಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾಗಿರುವ ಶೈತಾನ್ ಮೂಲಕ ಇಡೀ ಇಂಡಿಯನ್ ಸಿನಿಲೋಕಕ್ಕೆ ಪರಿಚಯವಾಗಲಿದ್ದಾರೆ. ಕನ್ನಡದ ಹುಡ್ಗನ ಪ್ರತಿಭೆ ಗಮನಿಸಿ, ಅವರಿಂದ ಮಾತ್ರ ಈ ಪಾತ್ರ ಮಾಡಲು ಸಾಧ್ಯ ಎಂದು ಅವಕಾಶ ನೀಡಿರುವ ನಿರ್ದೇಶಕ ಮಹಿ ರಾಘವ್ ಹಾಗೂ ಇಡೀ ಚಿತ್ರತಂಡಕ್ಕೆ ರಿಷಿ ಧನ್ಯವಾದ ಅರ್ಪಿಸಿದ್ದಾರೆ.

ಜೂನ್‌ 15ರಿಂದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಲಭ್ಯ

ಇದೇ ತಿಂಗಳ ಜೂನ್ 15ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಶೈತಾನ್ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಭಾಷೆ ಜೊತೆಗೆ ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿಯೂ ವೆಬ್ ಸರಣಿ ಮೂಡಿಬರಲಿದೆ. ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು ಶೈತಾನ್ ಸಿರೀಸ್ ಭಾಗವಾಗಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ಹಾಗೂ ಕನ್ನಡ ಕಲಾವಿದರ ನಟನೆಗೆ ಒಂದೊಳ್ಳೆ ಬೆಲೆ ಸಿಗುತ್ತಿದೆ. ನಮ್ಮ ಇಂಡಸ್ಟ್ರೀಯ ಸ್ಟಾರ್ಸ್ ಅಕ್ಕಪಕ್ಕದ ಸಿನಿ ಲೋಕದಲ್ಲಿ ಮಿಂಚು ಹರಿಸುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ರಿಷಿ.

IPL_Entry_Point