Jeeva Neene Lyrics: ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕ್ಸ್‌; ನಾನು ನೀನು ಇಬ್ಬರೇ ಊರಲ್ಲಿ, ಪ್ರೀತಿ ಎಂಬ ಮುತ್ತಿನ ತೇರಲ್ಲಿ
ಕನ್ನಡ ಸುದ್ದಿ  /  ಮನರಂಜನೆ  /  Jeeva Neene Lyrics: ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕ್ಸ್‌; ನಾನು ನೀನು ಇಬ್ಬರೇ ಊರಲ್ಲಿ, ಪ್ರೀತಿ ಎಂಬ ಮುತ್ತಿನ ತೇರಲ್ಲಿ

Jeeva Neene Lyrics: ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕ್ಸ್‌; ನಾನು ನೀನು ಇಬ್ಬರೇ ಊರಲ್ಲಿ, ಪ್ರೀತಿ ಎಂಬ ಮುತ್ತಿನ ತೇರಲ್ಲಿ

Martin Movie jeeva neene song lyrics: ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನ ಕನ್ನಡ ಮತ್ತು ಇಂಗ್ಲಿಷ್‌ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ. ಜತೆಗೆ ಕಿವಿತುಂಬಿಕೊಳ್ಳಲು ಹಾಡಿನ ಲಿರಿಕಲ್‌ ವಿಡಿಯೋ ಕೂಡ ನೀಡಲಾಗಿದೆ.

Martin movie Song Lyrics: ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕ್ಸ್‌; ನಾನು ನೀನು ಇಬ್ಬರೇ ಊರಲ್ಲಿ ಪ್ರೀತಿ ಎಂಬ ಮುತ್ತಿನ ತೇರಲ್ಲಿ H
Martin movie Song Lyrics: ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕ್ಸ್‌; ನಾನು ನೀನು ಇಬ್ಬರೇ ಊರಲ್ಲಿ ಪ್ರೀತಿ ಎಂಬ ಮುತ್ತಿನ ತೇರಲ್ಲಿ H

Martin Movie jeeva neene song lyrics: ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಅಕ್ಟೋಬರ್‌ 11ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಂಗೀತ ಪ್ರಿಯರು ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕ್ಸ್‌ ಕಿವಿತುಂಬಿಕೊಳ್ಳುತ್ತಿದ್ದಾರೆ. ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ "ಮಾರ್ಟಿನ್" ಪ್ಯಾನ್ ಇಂಡಿಯಾ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನಾನು ನೀನು ಇಬ್ಬರೇ ಊರಲ್ಲಿ ಪ್ರೀತಿ ಎಂಬ ಮುತ್ತಿನ ತೇರಲ್ಲಿ ಹಾಡಿನ ಕನ್ನಡ ಮತ್ತು ಇಂಗ್ಲಿಷ್‌ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ.

ಹಾಡಿನ ಹೆಸರು: ಜೀವ ನೀನೇ

ಸಿನಿಮಾದ ಹೆಸರು: ಮಾರ್ಟಿನ್‌ (ಕನ್ನಡ)

ಗಾಯಕರು: ಸೋನು ನಿಗಮ್‌, ಶ್ರುತಿಕಾ ಸಮುದ್ರಾಳ

ಸಾಹಿತ್ಯ: ಎಪಿ ಅರ್ಜುನ್‌

ಸಂಗೀತ: ಮಣಿ ಶರ್ಮಾ

ಕೋರಿಯೋಗ್ರಾಫರ್‌: ಇಮ್ರಾನ್‌ ಸರ್ಧಾರಿಯಾ

ಜೀವ ನೀನೇ ಹಾಡಿನ ಕನ್ನಡ ಲಿರಿಕ್ಸ್‌

ನಾನು ನೀನು ಇಬ್ಬರೇ ಊರಲ್ಲಿ
ಪ್ರೀತಿ ಎಂಬ ಮುತ್ತಿನ ತೇರಲ್ಲಿ
ನಿನ್ನಯ ಎದುರಿಗೆ ಸುಮ್ಮನೆ ಕೂರುವೆ
ಹೃದಯದ ಮನವಿಗೆ ಸೋಲಲು ಹೇಳುವೆ
ಇದೇ ಪ್ರೀತಿ ಇದೇ ರೀತಿ ಇರಲಿ ಎಂದಿಗೂ
ಜೀವ ನೀನೇ... ಜೀವ ನೀನೇ ಜೀವವೇ ಹೋಗಿ ಬಂದರೂ.…
ಜೀವ ನೀನೇ... ಜೀವ ನೀನೇ... ಈ ಉಸಿರು ನಿಂತೇ ಹೋದರೂ...

ಆಮಂತ್ರಣ ನಿನಗಾಗಿಯೇ
ಸ್ವೀಕರಿಸೋ ಹೃದಯ ಪರವಾಗಿಯೇ
ಎಲ್ಲಾ ಜನುಮಾ... ಇಲ್ಲೇ ಸಿಗಲಿ... ನೀನೇ ವರ ನೀಡಲಿ
ಇಬ್ಬರ ಒಲವು ಕಣ್ಣಲ್ಲಿ.... ಕರಗದೇ ಹಾಗೇ ಉಳಿಯಲಿ
ನನಗೇನಾದರೂ ಆಗಿದ್ದರೆ... ನೀ ಸಿಕ್ಕ ಮೇಲೆ ತಾನೇ..
ಇದೇ ಆಕಾಶವೇ ಹಾರೈಸಲಿ... ನನ್ನೆಲ್ಲ ಪ್ರೀತಿ ನೀನೇ…
ಜೀವ ನೀನೇ... ಜೀವ ನೀನೇ ಜೀವವೇ ಹೋಗಿ ಬಂದರೂ.…
ಜೀವ ನೀನೇ... ಜೀವ ನೀನೇ... ಈ ಉಸಿರು ನಿಂತೇ ಹೋದರೂ..

ಆವರಿಸಲಿ ದಿನವೆಲ್ಲವೂ
ನಿನ್ನೆದೆಯಲಿ ಉಲಿದಿರೋ ಉಸಿರೆಲ್ಲವನೂ
ನೀನೇ ನನಗೆ... ನಾನು ನಿನಗೆ ಇದು ಬರೆದಾಗಿದೆ
ಕನಸಲ್ಲಿ ಮಾಡಿದ ಪುಣ್ಯವು ಬದುಕಿಗೆ ನಿನ್ನ ನೀಡಿದೆ
ಅತಿ ಏನಾದರೂ ಕೇಳಿದ್ದರೆ ನಿನ್ನನ್ನೂ ಮಾತ್ರ ತಾನೇ
ಮರು ಮಾತಿಲ್ಲದೆ ಶರಣಾಗುವ ಅಭ್ಯಾಸ ಪ್ರೀತಿ ತಾನೇ…
ಜೀವ ನೀನೇ... ಜೀವ ನೀನೇ ಜೀವವೇ ಹೋಗಿ ಬಂದರೂ.…
ಜೀವ ನೀನೇ... ಜೀವ ನೀನೇ... ಈ ಉಸಿರು ನಿಂತೇ ಹೋದರೂ..

ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಇಂಗ್ಲಿಷ್‌ ಲಿರಿಕ್ಸ್‌

Naanu Neenu Ibbare Ooralli

Preethi Emba Mutthina Theralli

Ninnaya Edurige Summane Kuruve

Hrudayada Manavige Solalu Heluve

Ide Preethi Ide Reethi Irali Endigu

Jeeva Neene… Jeeva Neene… Jeevave Hogi Bandaru

Jeeva Neene… Jeeva Neene… Ee Usiru Ninthe Hodaru

Charana -1

Aamanthrana Ninagagiye

Sweekariso Hrudayada Paravagiye

Yella Januma… Ille Sigali… Ninne Vara Needali

Ibbara Olavu Kannali… Karagde Haage Uliyali

Nanagenadaru Aagiddare Nee Sikka Mele Thane

Idi Akashave Haraisali… Nannella Preethi Neene

Jeeva Neene… Jeeva Neene… Jeevave Hogi Bandaru

Jeeva Neene… Jeeva Neene… Ee Usiru Ninthe Hodaru

Charana -2

Aavarisali Dinavellavu

Nannedeyali Ulidiro Usirellavu

Neenu Nanage… Naanu Ninage Endu Baredagide

Kanasali Madida Punyavu Badukige Ninna Needide

Athi Enadaru Keliddare Ninnannu Mathra Thane

Maru Mathillade Sharanaguva Abhyasa Preethi Thane

Jeeva Neene… Jeeva Neene… Jeevave Hogi Bandaru

Jeeva Neene… Jeeva Neene… Ee Usiru Ninthe Hodaru

ಮಾರ್ಟಿನ್‌ ಸಿನಿಮಾದ ಜೀವ ನೀನೇ ಹಾಡಿನ ಲಿರಿಕಲ್‌ ವಿಡಿಯೋ

 

ಮಾರ್ಟಿನ್‌ ಸಿನಿಮಾದ ಕುರಿತು ಹೆಚ್ಚಾದ ನಿರೀಕ್ಷೆ

ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್ ನಲ್ಲಿ ಮೂಡಿಬರಿತ್ತಿರುವ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ "ಮಾರ್ಟಿನ್" ಚಿತ್ರದ ತಾರಾಬಳಗದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಮುಂತಾದವರಿದ್ದಾರೆ.

Whats_app_banner