ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಸಿನಿಮಾಗಳು ಒಟಿಟಿಗೆ ಬರುವ ಸಾಧ್ಯತೆ! ಹೀಗಿದೆ ಆ ಆರು ಚಿತ್ರಗಳ ಕುರಿತು ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಸಿನಿಮಾಗಳು ಒಟಿಟಿಗೆ ಬರುವ ಸಾಧ್ಯತೆ! ಹೀಗಿದೆ ಆ ಆರು ಚಿತ್ರಗಳ ಕುರಿತು ಮಾಹಿತಿ

ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಸಿನಿಮಾಗಳು ಒಟಿಟಿಗೆ ಬರುವ ಸಾಧ್ಯತೆ! ಹೀಗಿದೆ ಆ ಆರು ಚಿತ್ರಗಳ ಕುರಿತು ಮಾಹಿತಿ

ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಅಂದರೆ ಆರು ಸಿನಿಮಾಗಳು ಒಟಿಟಿಗೆ ಆಗಮಿಸುವ ಸಾಧ್ಯತೆಯಿದೆ. ಆ ಸಿನಿಮಾಗಳು ಯಾವುವು? ಅವು ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿವೆ ಎಂಬಿತ್ಯಾದಿ ವಿವರ ಇಲ್ಲಿದೆ.

ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಸಿನಿಮಾಗಳು ಒಟಿಟಿಗೆ ಬರುವ ಸಾಧ್ಯತೆ! ಹೀಗಿದೆ ಆ ಆರು ಚಿತ್ರಗಳ ಕುರಿತು ಮಾಹಿತಿ
ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಸಿನಿಮಾಗಳು ಒಟಿಟಿಗೆ ಬರುವ ಸಾಧ್ಯತೆ! ಹೀಗಿದೆ ಆ ಆರು ಚಿತ್ರಗಳ ಕುರಿತು ಮಾಹಿತಿ

2025ರ ಮೊದಲ ಮೂರು ತಿಂಗಳಲ್ಲಿ ಒಟ್ಟು 70ಕ್ಕೂ ಅಧಿಕ ಕನ್ನಡ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಆ 70ರಲ್ಲಿ ಕೇವಲ 10 ಸಿನಿಮಾಗಳಷ್ಟೇ ಒಟಿಟಿಗೆ ಬಂದಿವೆ. ಆ 10ರಲ್ಲಿ ಬಹುತೇಕ ಸಿನಿಮಾಗಳು ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿವೆ. ಒಂದೆರಡು ಸಿನಿಮಾಗಳು ಸನ್ ನೆಕ್ಸ್ಟ್‌ ಒಟಿಟಿಯಲ್ಲಿವೆ. ಕಟು ಸತ್ಯವೆಂದರೆ 2025ರಲ್ಲಿ ಬಿಡುಗಡೆಯಾದ ಶೇ 80% ರಷ್ಟು ಚಿತ್ರಗಳಿಗೆ ಯಾವುದೇ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್‌ ಸಿಕ್ಕಿಲ್ಲ ಎಂಬುದು ವಿಪರ್ಯಾಸ. ಇದೀಗ ಮೇ ತಿಂಗಳಲ್ಲಿ ಕನ್ನಡದ ಆರು ಸಿನಿಮಾಗಳು ಒಟಿಟಿಗೆ ಆಗಮಿಸುವ ಸಾಧ್ಯತೆಯಿವೆ. ಆ ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ.

  • ಅನಾಮಧೇಯ ಅಶೋಕ್ ಕುಮಾರ್

ಕೊಲೆ ಸುತ್ತ ತಿರುಗುವ ಸಿನಿಮಾ ಈ ಅನಾಮಧೇಯ ಅಶೋಕ್‌ ಕುಮಾರ್.‌ ವಕೀಲನ ಸಂದರ್ಶನಕ್ಕೆಂದು ತೆರಳುವ ಪರ್ತಕರ್ತನಿಗೆ ಅಲ್ಲಿ ಮೃತದೇಹದ ದರ್ಶನವಾಗುತ್ತದೆ. ಹಾಗಾದರೆ ಆ ಕೊಲೆ ಮಾಡಿದ್ದು ಯಾರು? ಹೀಗೆ ತನಿಖೆಯ ಹಾದಿಯಲ್ಲಿಯೇ ಇಡೀ ಸಿನಿಮಾ ಸಾಗುತ್ತದೆ. ಸಾಗರ್‌ ಕುಮಾರ್‌ ಚೊಚ್ಚಲ ನಿರ್ದೇಶನದ ಈ ಕ್ರೈಂ ಥ್ರಿಲ್ಲರ್‌ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: ಅಧಿಕೃತ ಘೋಷಣೆ ಆಗಿಲ್ಲ

  • ಅಜ್ಞಾತವಾಸಿ

ಗುಲ್ಟು ಸಿನಿಮಾ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಅವರ ಮೂರನೇ ನಿರ್ದೇಶನದ, ಹೇಮಂತ್ ಎಂ ರಾವ್ ನಿರ್ಮಿಸಿದ, ಸಿನಿಮಾ ಅಜ್ಞಾತವಾಸಿ. ಕ್ರೈಂ ಥ್ರಿಲ್ಲರ್‌ ಜಾನರ್‌ನ ಅಜ್ಞಾತವಾಸಿ ಸಿನಿಮಾ, ಮಲೆನಾಡು ಗ್ರಾಮದಲ್ಲಿ ನಡೆದ ಕೊಲೆಯ ಸುತ್ತ ಸುತ್ತುತ್ತದೆ. ಆ ಕೊಲೆಯ ಜಾಡು ಹಿಡಿದು ಅದರ ತನಿಖೆ ಹಿಂದೆ ಸಾಗುವ ಕಥೆಯೇ ಈ ಸಿನಿಮಾ. ರಂಗಾಯಣ ರಘು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೀ 5 ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: Zee5

  • ಅಧಿಪತ್ರ

ಬಿಗ್ ಬಾಸ್ ಕನ್ನಡ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಅವರ ಮೊದಲ ಕನ್ನಡ ಚಿತ್ರ ಅಧಿಪತ್ರ. ಕರಾವಳಿ ಭಾಗದಲ್ಲಿ ನಡೆಯುವ ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಪೊಲೀಸ್ ಆಗಿ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದು, ಸಹ ಅಧಿಕಾರಿಯ ಹತ್ಯೆ ಮತ್ತು ಅವರ ಕಾಣೆಯಾದ ರಿವಾಲ್ವರ್‌ ನೀಡುವ ಸುಳಿವಿನ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ (ನಿರೀಕ್ಷಿಸಲಾಗಿದೆ)

  • ಭುವನಂ ಗಗನಂ

ನಿರ್ದೇಶಕ ಗಿರೀಶ್ ಮೂಲಿಮನಿ ಅವರ ʻಪ್ರೀಮಿಯರ್ ಪದ್ಮಿನಿʼ ಖ್ಯಾತಿಯ ಪ್ರಮೋದ್, ಪೃಥ್ವಿ ಅಂಬಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಭುವನಂ ಗಗನಂ. ಈ ಚಿತ್ರವು ಅಭಿ ಮತ್ತು ರಾಮ್ ಎಂಬ ಇಬ್ಬರ ಯುವಕರ ಸುತ್ತ ಇಡೀ ಸಿನಿಮಾ ಸಾಗಲಿದೆ. ಈ ಸಿನಿಮಾ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಗೊತ್ತಾಗಬೇಕಿದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: ಅಧಿಕೃತ ಘೋಷಣೆ ಆಗಿಲ್ಲ

  • ಮನದ ಕಡಲು

'ಮುಂಗಾರು ಮಳೆ' ಚಿತ್ರದ ನಿರ್ಮಾಪಕರೊಂದಿಗೆ ಮತ್ತೆ ಕೈ ಜೋಡಿಸಿ ಮನದ ಕಡಲು ಎಂಬ ಸಿನಿಮಾ ತೆರೆಗೆ ತಂದಿದ್ದರು ಯೋಗರಾಜ್‌ ಭಟ್‌. ಹೊಸ ಕಲಾವಿದರಾದ ಸುಮುಖ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ಈ ಚಿತ್ರವು ಎಂಬಿಬಿಎಸ್ ಡ್ರಾಪ್ಔಟ್ ಆಗಿರುವ ಸುಮುಖನ ಪ್ರೇಮಕಥೆಯ ಸುತ್ತ ತಿರುಗಲಿದೆ. ಈ ಚಿತ್ರದಲ್ಲಿ ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಸೇರಿದಂತೆ ಇತರರು ನಟಿಸಿದ್ದಾರೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: ಅಧಿಕೃತ ಘೋಷಣೆ ಆಗಿಲ್ಲ

  • ವಿದ್ಯಾಪತಿ

ಡಾಲಿ ಧನಂಜಯ ಅವರ ನಾಲ್ಕನೇ ನಿರ್ಮಾಣದ ಮತ್ತು ಅವರ ಸ್ನೇಹಿತ ನಾಗಭೂಷಣ ನಾಯಕನಾಗಿ ನಟಿಸಿರುವ ಹಾಸ್ಯ ಚಿತ್ರ ವಿದ್ಯಾಪತಿ. ಇಕ್ಕಟ್‌ ಸಿನಿಮಾ ಖ್ಯಾತಿಯ ಈಶಮ್ ಮತ್ತು ಹಸೀನ್ ನಿರ್ದೇಶನದ ವಿದ್ಯಾಪತಿ ಸಿನಿಮಾದಲ್ಲಿ ನಾಯಕ ನಟ ನಾಗಭೂಷಣ್‌ಗೆ ನಾಯಕಿಯಾಗಿ ಉಪಾಧ್ಯಕ್ಷ ಖ್ಯಾತಿಯ ಮಲೈಕಾ ವಸುಪಾಲ್ ಜೋಡಿಯಾಗಿದ್ದರು. ಈ ಸಿನಿಮಾ ಇನ್ನೇನು ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್: ಅಧಿಕೃತ ಘೋಷಣೆ ಆಗಿಲ್ಲ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.