ಹಿಟ್ಲರ್ ಕಲ್ಯಾಣ ಸೀರಿಯಲ್ ನಟಿ ಪದ್ಮಿನಿ ದೇವನಹಳ್ಳಿಗೆ ಗಂಡು ಮಗು ಜನನ; ಲಕ್ಷ್ಮಿ ನಿವಾಸ ಧಾರಾವಾಹಿ ನಟ ಅಜಯ್ ರಾಜ್‌ಗೆ ಸಂಭ್ರಮ
ಹಿಟ್ಲರ್ ಕಲ್ಯಾಣ ಸೀರಿಯಲ್ ನಟಿ ಪದ್ಮಿನಿ ದೇವನಹಳ್ಳಿ ಮತ್ತು ಲಕ್ಷ್ಮಿ ನಿವಾಸ ಧಾರಾವಾಹಿ ನಟ ಅಜಯ್ ರಾಜ್ ಮನೆಗೆ ಗಂಡು ಮಗುವಿನ ಆಗಮನವಾಗಿದೆ. ನಾಲ್ಕು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಪದ್ಮಿನಿ ದೇವನಹಳ್ಳಿ ಏಪ್ರಿಲ್ 15ರಂದು ಮಗುವಿಗೆ ಜನ್ಮ ನೀಡಿದ್ದರು.

ಹಿಟ್ಲರ್ ಕಲ್ಯಾಣ ಸೀರಿಯಲ್ ನಟಿ ಪದ್ಮಿನಿ ದೇವನಹಳ್ಳಿ ಮತ್ತು ಲಕ್ಷ್ಮಿ ನಿವಾಸ ಧಾರಾವಾಹಿ ನಟ ಅಜಯ್ ರಾಜ್ ಮನೆಗೆ ಗಂಡು ಮಗುವಿನ ಆಗಮನವಾಗಿದೆ. ನಾಲ್ಕು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಪದ್ಮಿನಿ ದೇವನಹಳ್ಳಿ ಏಪ್ರಿಲ್ 15ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯ ಸುದ್ದಿಯನ್ನು ಇಂದು ಅಜಯ್ ರಾಜ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಜಯ್ ರಾಜ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಮಡದಿಯ ಜತೆಗಿರುವ ಬೇಬಿ ಬಂಪ್ಸ್ ಫೋಟೋವನ್ನು ಹಂಚಿಕೊಂಡು "ಗಂಡು ಮಗು" ಎಂದು ಶುಭ ಸುದ್ದಿ ನೀಡಿದ್ದಾರೆ. ಇವರಿಬ್ಬರಿಗೆ ಸೆಲೆಬ್ರಿಟಿಗಳು, ಕಿರುತೆರೆಯ ಸೀರಿಯಲ್ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇತ್ತೀಚೆಗೆ ಇವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೂ ಮುನ್ನ ಬೇಬಿ ಬಂಪ್ಸ್ ಫೋಟೋವನ್ನೂ ಹಂಚಿಕೊಂಡಿದ್ದರು.
ನಟಿ ಪದ್ಮಿನಿ ದೇವನಹಳ್ಳಿಯವರ ತಂದೆ ಕಲಾ ಗಂಗೋತ್ರಿ ಮಂಜು ನಾಟಕ ನಿರ್ದೇಶಕರಾಗಿದ್ದರು. ಇವರಿಂದಲೇ ಪದ್ಮಿನಿಗೆ ನಟನೆಯ ಕುರಿತು ಆಸಕ್ತಿ ಮೂಡಿತ್ತು. ಹಲವು ನಾಟಕಗಳಲ್ಲಿಯೂ ಅಭಿನಯಿಸಿದ್ದರು. ಮೈಸೂರು ಮಲ್ಲಿಗೆ ಎಂಬ ನಾಟಕದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿದ್ದರು. ಉದಯ ಟಿವಿಯ ಅಮೃತವಾಹಿನಿ ಧಾರಾವಾಹಿಯಲ್ಲಿ ನಟಿಸಿದ್ದರು. ಜೀ ಕನ್ನಡ ವಾಹಿನಿಯ ಮಹಾದೇವಿ ಸೀರಿಯಲ್‌ನಲ್ಲಿಯೂ ಪದ್ಮಿನಿ ನಟಿಸಿದ್ದಾರೆ.
ಸೈಕಾಲಜಿಯಲ್ಲಿ ಪದವಿ ಪಡೆದಿರುವ ಪದ್ಮಿನಿ ಅವರು ತೆಲುಗಿನಲ್ಲಿಯೂ ಮೂರು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಹಿಟ್ಲರ್ ಕಲ್ಯಾಣ ಕನ್ನಡ ಧಾರಾವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ಮಿಂಚಿದ್ದರು. ಸ್ಟಾರ್ ಸುವರ್ಣದ ಶ್ರೀ ಹಡಿಯೂರು ಸಿದ್ದಲಿಂಗೇಶ್ವರ ಸೀರಿಯಲ್‌ನಲ್ಲಿಯೂ ಇವರು ನಟಿಸಿದ್ದಾರೆ. ಈ ಸೀರಿಯಲ್‌ನಲ್ಲಿ ಮೂಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 2020ರಲ್ಲಿ ಅಜಯ್ ಜತೆ ಇವರ ವಿವಾಹವಾಗಿತ್ತು.
ನಟ ಅಜಯ್ ರಾಜ್ ಅವರು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇವರು ಮುಕ್ತಮುಕ್ತ ಸೀರಿಯಲ್‌ನಲ್ಲಿ ನಂಜುಡನಾಗಿ ನಟಿಸಿದ್ದರು. 1986ರ ಅಕ್ಟೋಬರ್ 7ರಂದು ಜನಿಸಿದ ಇವರು ಪದವಿ ಓದಿದ್ದಾರೆ. ಹಳ್ಳಿ ಮೇಸ್ಟ್ರು ಸಿನಿಮಾದಲ್ಲಿ ನಟಿಸಿದ್ದರು. ರವಿಚಂದ್ರನ್ ಮತ್ತು ಸಿಲ್ಕ್ ಸ್ಮಿತಾ ಜತೆ ನಟಿಸಿದ್ದರು. ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಹರೀಶ್ ಪಾತ್ರದ ಮೂಲಕ ಈಗ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಒಂದು ಗಂಟೆಯ ಕಥೆ, ಮುಂದಿನ ನಿಲ್ದಾಣ, ಅಬ್ಬಬ್ಬ ಮಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
