ಸುದೀಪ್‌ ಜತೆ ಮ್ಯಾಕ್ಸ್‌ನಲ್ಲಿ ನಟಿಸಿದ ಕನ್ನಡ ಧಾರಾವಾಹಿ ನಟ ಶ್ರೀಧರ್‌ಗೆ ಅನಾರೋಗ್ಯ, ಸಹಾಯಕ್ಕೆ ಮನವಿ
ಕನ್ನಡ ಸುದ್ದಿ  /  ಮನರಂಜನೆ  /  ಸುದೀಪ್‌ ಜತೆ ಮ್ಯಾಕ್ಸ್‌ನಲ್ಲಿ ನಟಿಸಿದ ಕನ್ನಡ ಧಾರಾವಾಹಿ ನಟ ಶ್ರೀಧರ್‌ಗೆ ಅನಾರೋಗ್ಯ, ಸಹಾಯಕ್ಕೆ ಮನವಿ

ಸುದೀಪ್‌ ಜತೆ ಮ್ಯಾಕ್ಸ್‌ನಲ್ಲಿ ನಟಿಸಿದ ಕನ್ನಡ ಧಾರಾವಾಹಿ ನಟ ಶ್ರೀಧರ್‌ಗೆ ಅನಾರೋಗ್ಯ, ಸಹಾಯಕ್ಕೆ ಮನವಿ

ಕನ್ನಡ ಸೀರಿಯಲ್‌ ಮತ್ತು ಸಿನಿಮಾ ನಟ ಶ್ರೀಧರ್‌ ದಿಢೀರ್‌ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಡ್‌ನಲ್ಲಿ ಇವರು ಕೃಶವಾಗಿ ಮಲಗಿರುವ ಫೋಟೋ ವೈರಲ್‌ ಆಗುತ್ತಿದೆ. ನಟಿ ಅಂಕಿತಾ ಅವರು ಶ್ರೀಧರ್‌ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಸುದೀಪ್‌ ಜತೆ ಮ್ಯಾಕ್ಸ್‌ನಲ್ಲಿ ನಟಿಸಿದ ಕನ್ನಡ ಧಾರಾವಾಹಿ ನಟ ಶ್ರೀಧರ್‌ಗೆ ಅನಾರೋಗ್ಯ
ಸುದೀಪ್‌ ಜತೆ ಮ್ಯಾಕ್ಸ್‌ನಲ್ಲಿ ನಟಿಸಿದ ಕನ್ನಡ ಧಾರಾವಾಹಿ ನಟ ಶ್ರೀಧರ್‌ಗೆ ಅನಾರೋಗ್ಯ

ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದಲ್ಲಿ ಮತ್ತು ಕನ್ನಡ ಕಿರುತೆರೆಯ ಹಲವು ಸೀರಿಯಲ್‌ಗಳಲ್ಲಿ ನಟಿಸಿದ ನಟ ಶ್ರೀಧರ್‌ಗೆ ಅನಾರೋಗ್ಯ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗಿದೆ. ಇವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ಈ ಫೋಟೋದಲ್ಲಿ ಇವರು ಗುರುತೇ ಸಿಗದಂತೆ ಬದಲಾಗಿದ್ದಾರೆ. ಇವರು ಬೆಂಗಳೂರಿನ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಟ ಶ್ರೀಧರ್‌ ಅವರು ವಧು ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಪಾರು ಸೀರಿಯಲ್‌ನಲ್ಲಿ ನಾಯಕಿಯ ಚಿಕ್ಕಪ್ಪನ ಪಾತ್ರದಲ್ಲಿ ನಟಿಸುತ್ತಿದ್ದರು. ಅನಾರೋಗ್ಯದ ಕಾರಣದಿಂದ ಸೀರಿಯಲ್‌ನಿಂದ ಹೊರಬಂದಿದ್ದರು. ಇವರು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆ ನಟನ ಎಂಟ್ರಿಯಾಗಿತ್ತು. ಇದೀಗ ಇವರು ಅನಾರೋಗ್ಯದಲ್ಲಿ ಗುರುತೇ ಸಿಗದಂತೆ ಬದಲಾಗಿರುವ ಫೋಟೋ ಅಭಿಮಾನಿಗಳ‌ ಅಚ್ಚರಿಗೆ ಕಾರಣವಾಗಿದೆ.

ಕಮಲಿ ಸೀರಿಯಲ್‌ನ ನಟಿ ಅಂಕಿತಾ ಅವರು ಇನ್‌ಸ್ಟಾಗ್ರಾಂನಲ್ಲಿ ಶ್ರೀಧರ್‌ ಅವರ ಫೋಟೋ ಹಂಚಿಕೊಡಿದ್ದಾರೆ. "ನಟ ಶ್ರೀಧರ್‌ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ತೊಂದರೆಯಲ್ಲಿದ್ದಾರೆ. ಬೆಂಗಳೂರಿನ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಇವರನ್ನು ಅಡ್ಮಿಟ್‌ ಮಾಡಲಾಗಿದೆ. ಎಲ್ಲರೂ ದಯವಿಟ್ಟು ಇವರಿಗೆ ಸಹಾಯ ಮಾಡಿ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ" ಎಂದು ನಟಿ ಅಂಕಿತಾ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in