ಹಲವು ವಾರಗಳ ಬಳಿಕ ಮತ್ತೆ ಅಗ್ರ ಸ್ಥಾನಕ್ಕೆ ಎಂಟ್ರಿಕೊಟ್ಟ ಹಳೇ ಧಾರಾವಾಹಿ, ಆದರೂ ಖುಷಿ ಕೊಡದ ಟಿಆರ್‌ಪಿ ನಂಬರ್
2025ರ 14ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಈ ಹಿಂದೆ ನಂಬರ್ 1 ಸ್ಥಾನದಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಸೀರಿಯಲ್, ಇದೀಗ ಹಲವು ವಾರಗಳ ಬಳಿಕ ಮತ್ತೆ ಮೊದಲ ಸ್ಥಾನಕ್ಕೆ ಎಂಟ್ರಿಕೊಟ್ಟಿದೆ. ಹಾಗೆ ಆಗಮಿಸಿದರೂ, ಆ ಸೀರಿಯಲ್‌ಗೆ ಹೇಳಿಕೊಳ್ಳುವ ಟಿಆರ್‌ಪಿ ನಂಬರ್ ಸಿಕ್ಕಿಲ್ಲ.

ಈ ವರ್ಷದ 14ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಜೀ ಕನ್ನಡದ ಧಾರಾವಾಹಿಗಳೇ ಟಿಆರ್‌ಪಿಯಲ್ಲಿ ಮೇಲುಗೈ ಸಾಧಿಸಿವೆ. ಆದರೆ, ಈ ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ ನಂಬರ್ಸ್ ವಿಚಾರವಾಗಿ ಕಡಿಮೆ ಆಗಿದೆ. ಟಿವಿಯಲ್ಲಿ ಐಪಿಎಲ್ ಹಂಗಾಮಾ ಶುರುವಾಗಿರೋದ್ರಿಂದ ಆ ಕಾರಣಕ್ಕೂ ಧಾರಾವಾಹಿಗಳ ಟಿಆರ್‌ಪಿ ನಂಬರ್ಸ್ ಕುಸಿತ ಕಂಡಿದೆ. ಹಾಗಾದರೆ, 14ನೇ ವಾರ ಜೀ ಕನ್ನಡದ ಸೀರಿಯಲ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಮೊದಲ ಸ್ಥಾನ ಯಾರಿಗೆ? ಹೀಗಿದೆ ವಿವರ.
ಜೀ ಕನ್ನಡ ವಾಹಿನಿಯಲ್ಲಿ ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್, ಮತ್ತೆ ಹಳೇ ಲಯಕ್ಕೆ ಮರಳಿದೆ. ಅಂದರೆ, ನಂಬರ್ 1 ಸ್ಥಾನಕ್ಕೆ ಏರಿದೆ. ಈ ಮೊದಲು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದ ಈ ಸೀರಿಯಲ್, 14ನೇ ವಾರ 7.1 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ. ಆದರೆ, ಖುಷಿಕೊಡುವಂಥ ಟಿಆರ್‌ಪಿ ನಂಬರ್ ಸಿಕ್ಕಿಲ್ಲ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಸೀರಿಯಲ್‌ಗಳಿಗೆ 8.0 ಪ್ಲಸ್ ಟಿಆರ್‌ಪಿ ಸಿಗುತ್ತಿತ್ತು. ಇದೀಗ ಐಪಿಎಲ್ ಹಿನ್ನೆಲೆಯಲ್ಲಿ ಕೊಂಚ ಕುಸಿತ ಕಂಡಿದೆ.
ಎರಡನೇ ಸ್ಥಾನಕ್ಕೆ ಶ್ರಾವಣಿ ಸುಬ್ರಮಣ್ಯ
ಸತತವಾಗಿ ಮೊದಲು ಮತ್ತು ಎರಡನೇ ಸ್ಥಾನದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ 14ನೇ ವಾರ 7.0 ಟಿಆರ್‌ಪಿ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಹೊಸ ಸೀರಿಯಲ್ ನಾ ನಿನ್ನ ಬಿಡಲಾರೆ ಆರಂಭದಲ್ಲಿ 8 ಪ್ಲಸ್ ಟಿಆರ್‌ಪಿ ಪಡೆದಿತ್ತು. ಈಗ ಅದ್ಯಾಕೋ ಕೊಂಚ ಮಂಕಾಗಿದೆ. 6.7 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿದೆ. ಅಣ್ಣಯ್ಯ ಸೀರಿಯಲ್ 6.7 ಟಿಆರ್‌ಪಿ ಪಡೆದು ನಗರ ಪ್ರದೇಶದಲ್ಲಿ ನಂಬರ್ ಕುಸಿತ ಕಂಡಿದ್ದರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಐಪಿಎಲ್ ಹಿನ್ನೆಲೆ ಟಿಆರ್‌ಪಿ ಕುಸಿತ
ಇದೀಗ ಟಿವಿಯಲ್ಲಿ ಐಪಿಎಲ್ ಹಬ್ಬ ಶುರುವಾಗಿದೆ. ರಾತ್ರಿ 7 ಗಂಟೆಗೆ ಶುರುವಾದರೆ 11:30ರ ವರೆಗೂ ಐಪಿಎಲ್‌ನದ್ದೇ ಹವಾ. ಅದರ ಪ್ರಭಾವ ಕಿರುತೆರೆ ಧಾರಾವಾಹಿಗಳ ಮೇಲೂ ಬಿದ್ದಿದೆ. ಅಂದರೆ, ಐಪಿಎಲ್ ಶುರುವಾಗುವುದಕ್ಕೂ ಮೊದಲು 7 ಗಂಟೆ ನಂತರದ ಸೀರಿಯಲ್‌ಗಳ ಟಿಆರ್‌ಪಿ ತುಸು ಹೆಚ್ಚೇ ಕಾಣುತ್ತಿತ್ತು. ಆದರೆ, ಇದೀಗ ಕುಸಿತದ ಹಾದಿಯತ್ತ ಸಾಗಿದೆ. ನಂಬರ್ 1 ಸೀರಿಯಲ್‌ನ ಟಿಆರ್‌ಪಿ 7.1ಕ್ಕೆ ಒಂದು ತಲುಪಿದೆ.
ಜೀ ಕನ್ನಡದ ಟಾಪ್ 5 ಸೀರಿಯಲ್‌ಗಳು ಯಾವುವು?
ಜೀ ಕನ್ನಡದಲ್ಲಿ ಒಟ್ಟು 9 ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಪೈಕಿ ಲಕ್ಷ್ಮೀ ನಿವಾಸ (7.1), ಶ್ರಾವಣಿ ಸುಬ್ರಮಣ್ಯ (7.0), ನಾ ನಿನ್ನ ಬಿಡಲಾರೆ (6.7), ಅಣ್ಣಯ್ಯ (6.7) ಅಮೃತಧಾರೆ (6.1) ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿವೆ. ಬ್ರಹ್ಮಗಂಟು (5.0) ಆರನೇ ಸ್ಥಾನದಲ್ಲಿದ್ದರೆ, ಪುಟ್ಟಕ್ಕನ ಮಕ್ಕಳು 4.4 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ. ಶ್ರೀರಸ್ತು ಶುಭಮಸ್ತು 2.7 ಟಿಆರ್‌ಪಿ ಮೂಲಕ ಎಂಟನೇ ಸ್ಥಾನದಲ್ಲಿದೆ. ಸೀತಾ ರಾಮ 1.8 ಟಿಆರ್‌ಪಿ ಪಡೆದು 9ನೇ ಸ್ಥಾನದಲ್ಲಿದೆ. ರಾತ್ರಿ 11 ಗಂಟೆಗೆ ರಿಪೀಟ್ ಟೆಲಿಕಾಸ್ಟ್ ಕಾಣುವ ಸೀತಾ ರಾಮ ಸೀರಿಯಲ್ ಆಗಲೂ ಒಳ್ಳೆಯ ನಂಬರ್ ಪಡೆಯುತ್ತಿದೆ.
ಯಾರಿಗೆ ಯಾವ ಸ್ಥಾನ?
- ಲಕ್ಷ್ಮೀ ನಿವಾಸ: 7.1
- ಶ್ರಾವಣಿ ಸುಬ್ರಮಣ್ಯ 7.0
- ನಾ ನಿನ್ನ ಬಿಡಲಾರೆ 6.7
- ಅಣ್ಣಯ್ಯ 6.7
- ಅಮೃತಧಾರೆ 6.1
- ಬ್ರಹ್ಮಗಂಟು 5.0
- ಪುಟ್ಟಕ್ಕನ ಮಕ್ಕಳು 4.4
- ಶ್ರೀರಸ್ತು ಶುಭಮಸ್ತು 2.7
- ಸೀತಾ ರಾಮ 1.8
ವಿಭಾಗ