Kannada Serial TRP: ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಲಕ್ಷ್ಮೀ ನಿವಾಸ ಸವಾಲು! ಕಿರುತೆರೆಯ ಟಾಪ್ 5 ಧಾರಾವಾಹಿಗಳ್ಯಾವು, ಹೇಗಿದೆ ಟಿಆರ್‌ಪಿ?
Kannada Serial TRP 2024: ಕಿರುತೆರೆಯ ಸ್ಪರ್ಧಾ ಕಣ ಹಿರಿದಾಗಿದೆ. ಹಳೇ ಧಾರಾವಾಹಿಗಳು ಹೊಸ ಧಾರಾವಾಹಿಗಳ ಜತೆಗೆ ಸೆಣಸಬೇಕಿದೆ. ಅದಕ್ಕಾಗಿ ಕಥೆಯಲ್ಲಿ ಟ್ವಿಸ್ಟ್ ಟರ್ನ್ ಮೂಲಕ ಗಮನ ಸೆಳೆಯಲಾರಂಭಿಸಿವೆ. ಇದೆಲ್ಲದರ ನಡುವೆ ಟಿಆರ್‌ಪಿ ಲೆಕ್ಕಾಚಾರದ ಫಲಿತಾಂಶ ಹೊರಬಿದ್ದಿದೆ. ಅತೀ ಹೆಚ್ಚು ವೀಕ್ಷಣೆ ಕಂಡ ಟಾಪ್ ಐದು ಸೀರಿಯಲ್‌ಗಳ ವಿವರ ಇಲ್ಲಿದೆ.
Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಕೌಟುಂಬಿಕ ಪ್ರಧಾನ ಕಥೆಯ ಜತೆಗೆ ಆಕ್ಷನ್ ಸಿನಿಮಾಗಳಂತೆ ಮಾಸ್ ಎಲಿಮೆಂಟ್‌ಗಳನ್ನೂ ವೀಕ್ಷಕರಿಗೆ ಭರ್ತಿಯಾಗಿ ನೀಡುತ್ತಿವೆ ಸೀರಿಯಲ್‌ಗಳು. ಇಷ್ಟು ದಿನ ನಾಯಕಿಯ ಕಣ್ಣೀರಷ್ಟೇ ಕಾಣುತ್ತಿದ್ದ ಕಿರುತೆರೆಯಲ್ಲೀಗ, ರಗಡ್ ಆಗಿ ಫೈಟ್ ಮಾಡುವ ನಾಯಕನೂ ಅಖಾಡದಲ್ಲಿದ್ದಾನೆ. ಕಿರುತೆರೆಯ ವೀಕ್ಷಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹೊಸ ಹೊಸ ಸೀರಿಯಲ್‌ಗಳ ಆಗಮನದಿಂದ ಟಿಆರ್‌ಪಿ ಸ್ಪರ್ಧೆಯೂ ತುಸು ಜೋರಾಗಿದೆ.
ಕಳೆದ ನೂರು ದಿನಗಳಿಂದ ಕನ್ನಡ ಕಿರುತೆರೆ ವೀಕ್ಷಕರ ಪೈಕಿ ಬಹುಪಾಲು ಮಂದಿ ಸಂಪೂರ್ಣವಾಗಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಕಡೆಗೆ ವಾಲಿದ್ದರು. ಇದೀಗ ಆ ಶೋ ಮುಗಿದಿದೆ. ಅದರ ಬೆನ್ನಲ್ಲೇ ಕಳೆದ ಎರಡ್ಮೂರು ವಾರಗಳಿಂದ ಕನ್ನಡ ಕಿರುತೆರೆಯಲ್ಲಿ ಹಲವು ಹೊಸ ಸೀರಿಯಲ್‌ಗಳ ಆಗಮನವಾಗಿತ್ತು. ಬಹುತಾರಾಗಣ ಮತ್ತು ಮೇಕಿಂಗ್‌ನಿಂದಲೂ ಆ ಸೀರಿಯಲ್‌ಗಳು ಕುತೂಹಲ ಹುಟ್ಟಿಸಿದ್ದವು. ಆ ಪೈಕಿ ಆ ಧಾರಾವಾಹಿಗಳಿಗೆ ವೀಕ್ಷಕನ ಬಹುಪರಾಕ್ ಸಿಕ್ತಾ? ಸೀರಿಯಲ್‌ಗೆ ಮಾರುಹೋದನಾ? ಅಂತಿಮವಾಗಿ ಅತೀ ಹೆಚ್ಚು ವೀಕ್ಷಣೆ ಕಂಡ ಟಾಪ್ ಐದು ಸೀರಿಯಲ್‌ಗಳಾಗವವು? ಆ ಸೀರಿಯಲ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು ಇಲ್ಲಿದೆ ನೋಡಿ ಮಾಹಿತಿ.
ಪುಟ್ಟಕ್ಕನ ಮಕ್ಕಳು
ಉಮಾಶ್ರೀ ಮತ್ತು ಮಂಜು ಭಾಷಿಣಿ ಮುಖ್ಯಭೂಮಿಕೆಯಲ್ಲಿನ ಪುಟ್ಟಕ್ಕನ ಮಕ್ಕಳು ಸೀರಿಯಲ್ ಆರಂಭದಿಂದಲೂ ಟಾಪ್‌ನಲ್ಲಿದೆ. ಈಗಲೂ ಅದೇ ಹಾದಿಯಲ್ಲಿಯೇ ಸಾಗುತ್ತಿದೆ. ಟಿಆರ್‌ಪಿಯಲ್ಲಿ ಎರಡಂಕಿಗೆ ಈ ಸೀರಿಯಲ್ ಜಿಗಿದು ದಾಖಲೆ ಬರೆದಿತ್ತು. ಇದೀಗ ಅದರ ಸನಿಹದಲ್ಲಿಯೇ ವಾರಾಂತ್ಯ ಮುಗಿಸುತ್ತಿದೆ. ಸರಣಿ ಹೊಸ ಹೊಸ ಸೀರಿಯಲ್‌ಗಳ ನಡುವೆಯೂ ಎಂದಿನ ತನ್ನ ಮುನ್ನಡೆಯ ಓಟದಲ್ಲಿದೆ ಈ ಸೀರಿಯಲ್. ಈ ಬಾರಿ 8.5 ಟಿಆರ್‌ಪಿ ಈ ಸಿರಿಯಲ್‌ಗೆ ಸಿಕ್ಕಿದೆ. ಈ ಮೂಲಕ ಮೊದಲ ಸ್ಥಾನದಲ್ಲಿದೆ.
ಲಕ್ಷ್ಮೀ ನಿವಾಸ
ಜನವರಿ 16ರಂದು ಜೀ ಕನ್ನಡದಲ್ಲಿ ಶುರುವಾದ ಲಕ್ಷ್ಮೀ ನಿವಾಸ ಸೀರಿಯಲ್ ನೋಡುಗರನ್ನು ಸೆಳೆದಿದೆ. ಶುರುವಾದ ಒಂದೇ ವಾರದಲ್ಲಿಯೇ ಹೆಚ್ಚು ವೀಕ್ಷಕರನ್ನು ಸಂಪಾದಿಸಿಕೊಂಡಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ, ತನ್ನ ಗಟ್ಟಿ ಕಥೆಯ ಮೂಲಕ ಪ್ರತಿ ಮನೆ ಮನಗಳನ್ನೂ ತಲುಪುತ್ತಿದೆ. ಇದೀಗ ಇದೇ ಸೀರಿಯಲ್‌ನಲ್ಲಿ ನೋವಿನ ನಡುವೆಯೂ ಕೆಲವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಅಂದಹಾಗೆ, ಈ ಸೀರಿಯಲ್ ಈ ವಾರ 8.1 ಟಿಆರ್‌ಪಿ ಪಡೆದುಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ಪುಟ್ಟಕ್ಕನ ಮಕ್ಕಳಿಗೆ ಇನ್ನೇನು ಶೀಘ್ರದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ಟಕ್ಕರ್ ಕೊಡಲಿದೆ.
ಶ್ರೀರಸ್ತು ಶುಭಮಸ್ತು
ತುಳಸಿ ಮತ್ತು ಮಾಧವನ ಮಧುರ ಪ್ರೇಮಕಥೆ ಒಂದಷ್ಟು ಟ್ವಿಸ್ಟ್ ಟರ್ನ್‌ಗಳ ಮೂಲಕ ನೋಡುಗರನ್ನು ಮತ್ತಷ್ಟು ಮಗದಷ್ಟು ಸೆಳೆಯುತ್ತಿದೆ. ಹೊಸ್ತಿಲು ದಾಟಿ ದೀಪಿಕಾ ಬಂದಾಗಿದೆ. ದೀಪಿಕಾಳಿಂದ ತುಳಿಸಿಗೂ ಕಂಟಕ ಎದುರಾಗುತ್ತಾ? ಹೀಗೆ ಹತ್ತು ಹಲವು ಕುತೂಹಲ ಜತೆಗೆ ಈ ಸೀರಿಯಲ್ ನೋಡಿಸಿಕೊಂಡು ಹೋಗುತ್ತಿದೆ. ಈ ಸೀರಿಯಲ್ 7.8 ಟಿಆರ್‌ಪಿ ಪಡೆದುಕೊಂಡು ಟಾಪ್ ಮೂರನೇ ಸ್ಥಾನದಲ್ಲಿದೆ.
ಸೀತಾ ರಾಮ
ಸೀತಾ ರಾಮ ಸೀರಿಯಲ್ ಕಳೆದ ಎರಡು ವಾರಗಳಿಂದ ಹೊಸ ಹೊಸ ಟ್ವಿಸ್ಟ್ ಮತ್ತು ಟರ್ನ್‌ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಜೈಲು ಸೇರಿದ್ದ ರುದ್ರಪ್ರತಾಪ್ ಮತ್ತೆ ಎಂಟ್ರಿಯಾಗಿದ್ದಾನೆ. ಜೈಲಿನಿಂದಲೇ ಸೀತಾ ಮತ್ತು ರಾಮರ ಮೇಲೆ ಹಗೆ ತೀರಿಸಿಕೊಳ್ಳುತ್ತಿದ್ದಾನೆ. ಹೀಗೆ ಕೌತುಕ ಸ್ವರೂಪ ಪಡೆದಿರುವ ಈ ಸೀರಿಯಲ್ ಟಿಆರ್‌ಪಿ ವಿಚಾರದಲ್ಲಿ 7.3 ಪಡೆದುಕೊಂಡಿದೆ. ಈ ಮೂಲಕ ನಾಲ್ಕನೇ ಸ್ಥಾನದದೆ.
ಸತ್ಯ
ಜೀ ಕನ್ನಡದಲ್ಲಿ ಪ್ರಸಾರವಾಗುವ ಸತ್ಯ ಸೀರಿಯಲ್‌ನಲ್ಲೂ ಒಂದಷ್ಟು ವಿಶೇಷತೆಗಳು ನೋಡುಗನಿಗೆ ಆಪ್ತ ಎನಿಸಿವೆ. ಪೊಲೀಸ್ ಕೆಲಸಕ್ಕೆ ಸೇರಿಕೊಳ್ಳುವ ಉತ್ಸಾಹದಲ್ಲಿರುವ ಸತ್ಯಗೆ ಅತ್ತೆ ಸೀತಾಳ ಸಮ್ಮತಿ ಸಿಗುತ್ತಾ? ಪತಿ ಕಾರ್ತಿಕ್ ಸತ್ಯಾಳ ಕನಸಿಗೆ ನೀರೆರೆಯುತ್ತಾನಾ? ಇದಕ್ಕೆ ಮುಂದಿನ ಸಂಚಿಕೆಯಲ್ಲಿಯೇ ಉತ್ತರ ಸಿಗಬೇಕಿದೆ. ಹೀಗೆ ಕುತೂಹಲದತ್ತ ಸಾಗುತ್ತಿರುವ ಸತ್ಯ ಸೀರಿಯಲ್ 7.4 ಟಿಆರ್‌ಪಿ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ.
ಅಮೃತಧಾರೆ
ಗೌತಮ್ ಜತೆಗಿನ ಪ್ರೀತಿಯ ಆಟ ಮುಂದುವರಿಸಿದ್ದಾಳೆ ಭೂಮಿಕಾ. ನಿತ್ಯ ಒಂದಿಲ್ಲ ಒಂದು ರೀತಿ ಆತನನ್ನು ಇಂಪ್ರೆಸ್ ಮಾಡುತ್ತಿದ್ದಾಳೆ. ಈ ನಡುವೆಯೇ ಅಪೇಕ್ಷಾಳನ್ನು ಮನೆ ಸೊಸೆ ಮಾಡಿಕೊಳ್ಳಬೇಕು ಎಂದು ಕೊಂಡಿದ್ದಾಳೆ ಶಕುಂತಲಾ. ಈ ವಿಚಾರವನ್ನು ಗೌತಮ್ ಮುಂದೆಯೂ ಪ್ರಸ್ತಾಪ ಮಾಡಿದ್ದಾಳೆ. ಇಬ್ಬರೂ ಒಪ್ಪಿಗೆ ಕೊಟ್ಟಾಗಿದೆ. ಹೀಗೆ ನೋಡುಗರನ್ನು ಹಿಡಿದಿಡುತ್ತಿರುವ ಅಮೃತಧಾರೆ ಸೀರಿಯಲ್ 6.8 ಟಿಆರ್‌ಪಿ ಪಡೆದುಕೊಂಡು ಆರನೇ ಸ್ಥಾನದಲ್ಲಿದೆ.
ಭಾಗ್ಯಲಕ್ಷ್ಮೀ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್ ಆಟ ಅತಿಯಾಗುತ್ತಿದೆ. ಆಸ್ತಿ ಹಣ ಕೊಡುವೆ, ಮನೆಯನ್ನೂ ಕೊಡುವೆ, ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡುತ್ತಿದ್ದಾನೆ ತಾಂಡವ್. ಇದಕ್ಕೆ ಭಾಗ್ಯಾಳ ಪ್ರತಿಕ್ರಿಯೆ ಏನು? ಹೀಗೆ ರೋಚಕ ಘಟ್ಟ ತಲುಪಿರುವ ಭಾಗ್ಯಲಕ್ಷ್ಮೀ ಸೀರಿಯಲ್ 6.4 ಟಿಆರ್‌ಪಿ ಪಡೆದುಕೊಂಡಿದೆ.
ವಿಭಾಗ