ಕಲರ್ಸ್ ಕನ್ನಡದಲ್ಲಿ ಬರ್ತಿದೆ ಬಹುತಾರಾಗಣದ ಹೊಸ ಧಾರಾವಾಹಿ ನಂದಗೋಕುಲ; ರಾಮಾಚಾರಿ, ದೃಷ್ಟಿಬೊಟ್ಟು ನಿರ್ದೇಶಕರ ನೂತನ ಪ್ರಯತ್ನ
ವಿಭಿನ್ನ ಕಥಾಹಂದರಗಳಿರುವ ಧಾರಾವಾಹಿಗಳ ಮೂಲಕ ಜನರ ಮನ ರಂಜಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಂದಗೋಕುಲ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಬಹು ತಾರಾಗಣ ಈ ಕಥೆಯು ತಮಿಳು ಧಾರಾವಾಹಿಯೊಂದರ ರಿಮೇಕ್ ಎನ್ನಲಾಗುತ್ತಿದೆ.

ಲಕ್ಷ್ಮೀ ಬಾರಮ್ಮ, ಭಾಗಲಕ್ಷ್ಮೀ, ದೃಷ್ಟಿಬೊಟ್ಟು, ನಿನಗಾಗಿ, ರಾಮಾಚಾರಿ, ಕರಿಮಣಿ, ಭಾರ್ಗವಿ ಎಲ್‌ಎಲ್‌ಬಿಯಂತಹ ವಿಭಿನ್ನ ಕಥೆಗಳ ಧಾರಾವಾಹಿಗಳು ಪ್ರಸಾರವಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಪ್ರಸಾರಕ್ಕೆ ಸಿದ್ಧವಾಗಿದೆ. ‘ನಂದಗೋಕುಲ‘ ಎನ್ನುವ ಹೊಸ ಧಾರಾವಾಹಿ ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಬಹುತಾರಾಗಣದ ಈ ಧಾರಾವಾಹಿಯನ್ನು ರಾಮಾಚಾರಿ, ದೃಷ್ಟಿಬೊಟ್ಟು, ನೂರುಜನ್ಮಕ್ಕೂ ಇಂತಹ ವಿಭಿನ್ನ ಕಥೆಯನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಶ್ರವಂತ್ ಅವರ ಜಾಹ್ನವಿ ಫಿಲ್ಮ್ ಎಂಫೈರ್ ಎನ್ನುವ ಹೊಸ ನಿರ್ಮಾಣ ಸಂಸ್ಥೆ ಈ ಹೊಸ ಧಾರಾವಾಹಿ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.
ಬಹು ತಾರಾಗಣದ ಈ ಧಾರಾವಾಹಿಯಲ್ಲಿ ಜೀ ಕನ್ನಡದ ಗಟ್ಟಿಮೇಳದ ಧಾರಾವಾಹಿ ವಿಕ್ರಾಂತ್ ಪಾತ್ರಧಾರಿ ಅಭಿ ದಾಸ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅರವಿಂದ್, ವಿಜಯಚಂದ್ರ, ಯಶವಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ತಮಿಳಿನ ಪಾಂಡಿಯನ್ ಸ್ಟೋರ್ಸ್ 2 ರಿಮೇಕ್
ಈ ಧಾರಾವಾಹಿಯನ್ನು ತಮಿಳಿನ ಪಾಂಡಿಯನ್ ಸ್ಟೋರ್ಸ್ 2 ನ ಆಫೀಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿ ತೆಲುಗಿಗೂ ರಿಮೇಕ್ ಆಗಿದ್ದು, ಇಲ್ಲು ಇಲ್ಲಲು ಪಿಲ್ಲಲು ಎಂಬ ಹೆಸರಿನೊಂದಿಗೆ ಪ್ರಸಾರವಾಗಿತ್ತು, ಇದೀಗ ಕನ್ನಡದಲ್ಲಿ ನಂದಗೋಕುಲ ಹೆಸರಿನಲ್ಲಿ ಪ್ರಸರವಾಗಲು ಸಜ್ಜಾಗಿದೆ.
ಈ ಧಾರಾವಾಹಿಯ ಪೋಸ್ಟರ್‌ಗಳು ಹರಿದಾಡುತ್ತಿರುವ ಬೆನ್ನಲ್ಲೇ ಧಾರಾವಾಹಿಗೆ ನಾಯಕಿ ಯಾರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಧಾರಾವಾಹಿಯ ಪೋಸ್ಟರ್ ನೋಡಿದ್ರೆ ಈ ಧಾರಾವಾಹಿಯಲ್ಲಿ ಮೂವರು ನಾಯಕರು ಇರುತ್ತಾರೆ. ಇದೊಂದು ತುಂಬು ಸಂಸಾರದ ಕಥೆ ಎಂದು ಊಹಿಸಬಹುದು.
ಈ ಧಾರಾವಾಹಿ ಬರುವ ಬೆನ್ನಲ್ಲೇ ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಭಾಗ್ಯಲಕ್ಷ್ಮೀ ಧಾರಾವಾಹಿ ಅಂತ್ಯವಾಗಲಿದೆ ಎಂದು ಮಾತು ಕೂಡ ಕೇಳಿ ಬರುತ್ತಿದೆ. ನಂದಗೋಕುಲಕ್ಕೆ ದಾರಿ ಮಾಡಿಕೊಟ್ಟು ಭಾಗ್ಯಲಕ್ಷ್ಮೀ ಮನೆಗೆ ಹೋಗ್ತಾಳಾ ಅನ್ನೋದನ್ನು ಇನ್ನಷ್ಟೇ ಕಾದು ನೋಡಬೇಕಿದೆ.
ಈಗಾಗಲೇ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಇದರ ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ. ಈ ನಡುವೆ ಭಾಗ್ಯಲಕ್ಷ್ಮೂ ಕೂಡ ಮುಗಿಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಂದ ಗೋಕುಲ ಧಾರಾವಾಹಿ ಯಾವ ಸಮಯಕ್ಕೆ ಪ್ರಸಾರವಾಗಲಿದೆ, ಇದರಲ್ಲಿ ಇನ್ನೂ ಯಾರೆಲ್ಲಾ ನಟಿಸಿಲಿದ್ದಾರೆ ಎಂಬಿತ್ಯಾದಿ ವಿವರ ಇನ್ನಷ್ಟೇ ಸಿಗಬೇಕಿದೆ.
