10 ವರ್ಷಗಳ ನಂತರ ಮರಾಠಿಗೆ ರಿಮೇಕ್‌ ಆಗ್ತಿದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  10 ವರ್ಷಗಳ ನಂತರ ಮರಾಠಿಗೆ ರಿಮೇಕ್‌ ಆಗ್ತಿದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ

10 ವರ್ಷಗಳ ನಂತರ ಮರಾಠಿಗೆ ರಿಮೇಕ್‌ ಆಗ್ತಿದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ 10 ವರ್ಷಗಳ ಹಿಂದೆ ಪ್ರಸಾರವಾಗಿ, ಸಾಕಷ್ಟು ಜನಮನ್ನಣೆ ಗಳಿಸಿದ್ದ ಪ್ರಸಿದ್ಧ ಧಾರಾವಾಹಿಯೊಂದು ಈಗ ಮರಾಠಿಗೆ ರಿಮೇಕ್ ಆಗ್ತಿದೆ. ಯಾವುದು ಆ ಧಾರಾವಾಹಿ ನೋಡಿ.

10 ವರ್ಷಗಳ ನಂತರ ಮರಾಠಿಗೆ ರಿಮೇಕ್‌ ಆಗ್ತಿದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಪ್ರಸಿದ್ಧ ಧಾರಾವಾಹಿ
10 ವರ್ಷಗಳ ನಂತರ ಮರಾಠಿಗೆ ರಿಮೇಕ್‌ ಆಗ್ತಿದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಪ್ರಸಿದ್ಧ ಧಾರಾವಾಹಿ

ಕನ್ನಡದ ಸಾಕಷ್ಟು ಧಾರಾವಾಹಿಗಳು ಹಿಂದಿ, ಮರಾಠಿ, ತೆಲುಗು, ತಮಿಳು ಭಾಷೆಗೆ ರಿಮೇಕ್ ಆಗುತ್ತಿವೆ. ಅಲ್ಲದೇ ಕನ್ನಡದಲ್ಲೂ ಮರಾಠಿ, ಹಿಂದಿ ಸೇರಿದಂತೆ ಇತರ ಭಾಷೆಯ ಧಾರಾವಾಹಿಗಳನ್ನು ರಿಮೇಕ್ ಮಾಡುತ್ತಿರುತ್ತಾರೆ. ಇದೀಗ ಕನ್ನಡದಲ್ಲಿ 10 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಧಾರಾವಾಹಿಯೊಂದು ಮರಾಠಿಗೆ ರಿಮೇಕ್ ಆಗ್ತಿದೆ. ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕನ ಪತ್ನಿ ನಾಯಕಿಯಾಗಿ ನಟಿಸಿದ್ದರು. ಯಾವುದಿರಬಹುದು ಆ ಧಾರಾವಾಹಿ ಎಂದು ಯೋಚಿಸುತ್ತಿದ್ದೀರಾ, ಹಾಗಾದರೆ ಮುಂದೆ ಓದಿ.

2015ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ‘ಶ್ರೀಮತಿ ಭಾಗ್ಯಲಕ್ಷ್ಮೀ‘. ಕನ್ನಡ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಆಸಿಫ್ ಈ ಧಾರಾವಾಹಿಗೆ ನಾಯಕನಾಗಿದ್ದರು. ವಿಭಿನ್ನ ಕಥಾಹಂದರ ಈ ಧಾರಾವಾಹಿ ಕನ್ನಡಗರಿಗೆ ಇಷ್ಟವಾಗಿತ್ತು.

ಈ ಧಾರಾವಾಹಿ ಈಗ ರಿಮೇಕ್ ಆಗಿ ಸ್ಟಾರ್ ಪ್ರವಾಹ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದರ ಇನ್ನೊಂದು ವಿಶೇಷ ಎಂದರೆ ಶ್ರೀಮತಿ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿತ್ತು. ಈಗ ಮರಾಠಿಯಲ್ಲೂ ಕೂಡ ಈ ಧಾರಾವಾಹಿ 8 ಗಂಟೆಗೆ ಪ್ರಸಾರವಾಗುತ್ತಿದೆ.

ಶ್ರೀಮತಿ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್‌ಬಾಸ್‌ 10ರ ವಿನ್ನರ್ ಕಾರ್ತಿಕ್ ಮಹೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ವಿಭಿನ್ನ ಕಥಾಹಂದರದ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗಿದ್ದವು. ಈಗಲೂ ಕೂಡ ಸುವರ್ಣ ವಾಹಿನಿ ಭಿನ್ನ ವಿಭಿನ್ನ ಕಥೆ ಇರುವ ಧಾರಾವಾಹಿಗಳನ್ನು ಪ್ರಸಾರ ಮಾಡುವ ಮೂಲಕ ಜನರನ್ನು ರಂಜಿಸುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸ್ನೇಹದ ಕಡಲಲ್ಲಿ ಧಾರಾವಾಹಿ ದಕ್ಷಿಣ ಭಾರತದ ಖ್ಯಾತ ನಟ ಸುಮನ್ ಮೊದಲ ಬಾರಿಗೆ ಕಿರುತೆರೆ ಪ್ರವೇಶ ಮಾಡುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಅಪೇಕ್ಷಾ ಪವನ್ ಒಡೆಯರ್ ಭಾಗ್ಯಲಕ್ಷ್ಮೀ ಪಾತ್ರಕ್ಕೆ ಜೀವ ತುಂಬಿದ್ದರು. ಸ್ವರೂಪ್ ಮುರಗೋಡ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.