ಶ್ರಾವಣಿಯ ಎಲ್ಲಾ ಅಕೌಂಟ್‌ಗಳು ಬ್ಲಾಕ್‌, ಬದಲಾಯ್ತು ಕಾಂತಮ್ಮನ ವರಸೆ, ಸುಬ್ಬುಗೆ ಗನ್‌ ತೋರಿಸಿದ ವೀರು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿಯ ಎಲ್ಲಾ ಅಕೌಂಟ್‌ಗಳು ಬ್ಲಾಕ್‌, ಬದಲಾಯ್ತು ಕಾಂತಮ್ಮನ ವರಸೆ, ಸುಬ್ಬುಗೆ ಗನ್‌ ತೋರಿಸಿದ ವೀರು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿಯ ಎಲ್ಲಾ ಅಕೌಂಟ್‌ಗಳು ಬ್ಲಾಕ್‌, ಬದಲಾಯ್ತು ಕಾಂತಮ್ಮನ ವರಸೆ, ಸುಬ್ಬುಗೆ ಗನ್‌ ತೋರಿಸಿದ ವೀರು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಅಕೌಂಟ್‌, ಡೆಬಿಟ್ ಕಾರ್ಟ್‌, ಕ್ರೆಡಿಟ್ ಕಾರ್ಡ್ ಎಲ್ಲವನ್ನೂ ಬ್ಲಾಕ್ ಮಾಡಿಸಿದ ವೀರೇಂದ್ರ. ಆಕೆಯ ಬಳಿ ಹಣ ಇಲ್ಲ ಎಂದು ತಿಳಿದಿದ್ದೇ ತಡ ವರಸೆ ಬದಲಿದ ಕಾಂತಮ್ಮ–ಸುಂದರ. ಸೊಸೆಗಾಗಿ ಹೆಂಡತಿ–ಮಕ್ಕಳ ಬಳಿ ಬಟ್ಟೆ ಬೇಡಿದ ಪದ್ಮನಾಭ. ಸುಬ್ಬುಗೆ ಗನ್‌ ತೋರಿಸಿದ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 6ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 6ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 6ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 6ರ ಸಂಚಿಕೆಯಲ್ಲಿ ತನ್ನಿಂದಾದ ತಪ್ಪುಗಳ ಬಗ್ಗೆ ಯೋಚಿಸುತ್ತಾ ಕುಳಿತ ಶ್ರಾವಣಿ ಕಣ್ಣೀರು ಹಾಕುತ್ತಿರುತ್ತಾಳೆ. ಅವಳನ್ನು ನೋಡಿ ಬೇಸರ ಪಟ್ಟುಕೊಳ್ಳುವ ಪದ್ಮನಾಭ ಅವಳ ಬಳಿ ಬಂದು ‘ಶ್ರಾವಣಿ ಅಮ್ಮೋರೇ, ಯಾವುದಕ್ಕೂ ಚಿಂತೆ ಮಾಡಬೇಡಿ, ಇದೆಲ್ಲವೂ ವಿಧಿ ಲಖಿತ. ಇದನ್ನು ನಿಮ್ಮಿಂದಾಗಿದ್ದು ಎಂದು ಯಾವುದೇ ಕಾರಣಕ್ಕೂ ಅಂದುಕೊಳ್ಳಬೇಡಿ‘ ಎಂದು ಸಮಾಧಾನ ಮಾಡುತ್ತಾರೆ. ‘ಹೋಗಿ ಸ್ನಾನ ಮಾಡಿ ಬಟ್ಟೆ ಬದಲಿಸಿ, ನೀವು ಈ ಮನೆಯ ಸೊಸೆ, ಈ ಮನೆಯ ಮಹಾಲಕ್ಷ್ಮೀ‘ ಎಂದೆಲ್ಲಾ ಹೇಳುತ್ತಾರೆ. ಆಗ ಶ್ರಾವಣಿ ತನ್ನ ಬಳಿ ಸ್ನಾನ ಮಾಡಲು ಸೋಪ್ ಕೂಡ, ಬದಲಿಸಲು ಬಟ್ಟೆ ಕೂಡ ಇಲ್ಲ ಎಂಬುದು ಅರಿವಾಗುತ್ತದೆ. ಅದನ್ನೇ ಬಂಡವಾಳವನ್ನಾಗಿಸಿಕೊಳ್ಳಲು ಕಾಂತಮ್ಮ, ಸುಂದರ ಪ್ಲಾನ್ ಮಾಡುತ್ತಾರೆ. ತಾವೇ ಹೋಗಿ ಸೀರೆ, ಸೋಪ್‌, ಶ್ಯಾಂಪೂ ಎಲ್ಲವನ್ನೂ ತರುತ್ತೇವೆ, ನಮ್ಮ ಅಕೌಂಟ್‌ಗೆ ಸ್ವಲ್ಪ ದುಡ್ಡು ಹಾಕಿ ಎಂದು ಕೇಳಿಕೊಳ್ಳುತ್ತಾರೆ.

ಶ್ರಾವಣಿಯ ಎಲ್ಲಾ ಅಕೌಂಟ್‌ಗಳೂ ಬ್ಲಾಕ್, ವರಸೆ ಬದಲಿಸಿದ ಕಾಂತಮ್ಮ

ಸುಂದರ, ಕಾಂತಮ್ಮ ಹೇಳಿದಂತೆ ಅವರ ಅಕೌಂಟ್‌ಗೆ ದುಡ್ಡು ಹಾಕಿ ತನಗೆ ಅಗತ್ಯ ಇರುವುದನ್ನೆಲ್ಲಾ ತರಿಸಿಕೊಳ್ಳಬೇಕು ಎಂದು ಯೋಚಿಸುತ್ತಾಳೆ ಶ್ರಾವಣಿ. ಅಕೌಂಟ್ ನಂಬರ್ ಕೇಳಿ ಅಕೌಂಟ್‌ಗೆ ಹಣ ಹಾಕಲು ಪ್ರಯತ್ನಿಸಿದರೆ ಹಣ ಹೋಗುವುದಿಲ್ಲ. ಇನ್ನೊಂದು ಅಕೌಂಟ್‌ನಿಂದ ಟ್ರೈ ಮಾಡ್ತೀನಿ ಅಂದುಕೊಂಡು ಪ್ರಯತ್ನ ಮಾಡಿದ್ರೂ ಅದರಲ್ಲೂ ಹಣ ಹೋಗುವುದಿಲ್ಲ. ಆಗ ಅವಳಿಗೆ ಅವಳ ಅಪ್ಪ ಎಲ್ಲಾ ಖಾತೆಗಳನ್ನೂ ಬ್ಲಾಕ್ ಮಾಡಿರುವುದು ಗಮನಕ್ಕೆ ಬರುತ್ತದೆ. ಮಾತ್ರವಲ್ಲ ಅವಳ ಡೆಬಿಟ್‌ ಕಾರ್ಡ್‌, ಕೆಡ್ರಿಟ್ ಕಾರ್ಡ್ ಎಲ್ಲವೂ ಬ್ಲಾಕ್ ಆಗಿರುತ್ತದೆ. ಇತ್ತ ಅವಳ ಬಳಿ ಹಣ ಇಲ್ಲ ಎಂದಿದ್ದೇ ತಡ ವರಸೆ ಬದಲಿಸುತ್ತಾರೆ ಕಾಂತಮ್ಮ–ಸುಂದರ. ಕಾಂತಮ್ಮ ಕಳೆದ ರಾತ್ರಿ ಶ್ರಾವಣಿಗೆ ಉಡಲು ಕೊಟ್ಟ ಸೀರೆಯನ್ನು ಕೂಡ ವಾಪಾಸ್ ಕೇಳುತ್ತಾಳೆ. ಶ್ರಾವಣಿಗೆ ಕಣ್ಣೀರೇ ಗತಿಯಾಗುತ್ತದೆ.

ಸೊಸೆಗಾಗಿ ಹೆಂಡತಿ–ಮಕ್ಕಳ ಮುಂದೆ ಕೈ ಚಾಚುವ ಪದ್ಮನಾಭ

ಸೊಸೆಯ ಖಾತೆಯಲ್ಲಿ ಹಣ ಇಲ್ಲ ಎಂದು ತಿಳಿದ ಪದ್ಮನಾಭ ಬೇರೆ ದಾರಿ ಕಾಣದೆ ಹೆಂಡತಿ ಹಾಗೂ ಮಕ್ಕಳ ಬಳಿ ಬಟ್ಟೆ ಕೇಳಲು ಬರುತ್ತಾರೆ. ಆದರೆ ವಿಶಾಲಾಕ್ಷಿ ‘ನನ್ನ ಮಗಳ ಬಾಳು ಹಾಳು ಮಾಡಿದ ಅವರಿಗೆ ಬಟ್ಟೆ ಬಿಡಿ, ನನ್ನ ಕೈಯಿಂದ ಒಂದು ಲೋಟ ನೀರು ಕೂಡ ಸಿಗುವುದಿಲ್ಲ‘ ಎಂದು ಹೇಳಿ ರೋಷ ಹೊರ ಹಾಕುತ್ತಾಳೆ. ಧನಲಕ್ಷ್ಮೀ ಕೂಡ ತಾನು ಕೊಡುವುದಿಲ್ಲ ಎಂದು ನೇರವಾಗಿ ಹೇಳುತ್ತಾಳೆ. ವರಲಕ್ಷ್ಮೀ ಬಳಿ ಕೇಳಿದಾಗ ‘ಅಪ್ಪ ನನ್ನ ಜೀವನ ಹಾಳು ಮಾಡಿದ್ದಾಳೆ ಅಪ್ಪ ಅವಳು, ನಿನಗೆ ಈಗಲೂ ಅವಳು ಚೆನ್ನಾಗಿ ಇರಬೇಕು ಅನ್ನಿಸ್ತಾ ಇದೆ ಅಲ್ವಾ, ನನ್ನ ಬದುಕು ಹಾಳಾಗಿದ್ದು ನಿಂಗೆ ಬೇಡ ಅಲ್ವಾ‘ ಎಂದು ಅಳುತ್ತಾ ಪ್ರಶ್ನಿಸುತ್ತಾಳೆ. ಆದರೆ ಅವಳಿಗೂ ಕೂಡ ‘ಇದೆಲ್ಲಾ ವಿಧಿ ಲಿಖಿತ ಮಗಳೇ, ನಿನ್ನ ಮದುವೆ ಯಾರ ಜೊತೆ ಆಗಬೇಕೋ ಅವರ ಜೊತೆ ಆಗಿಯೇ ಆಗುತ್ತದೆ‘ ಎಂದು ಸಮಾಧಾನ ಮಾಡಿ, ಏನೂ ಮಾಡಲು ತೋಚದೇ ಅಡುಗೆ ಮನೆಯಿಂದ ಹೊರ ಬರುತ್ತಾನೆ.

ಸುಬ್ಬುಗೆ ಗನ್ ತೋರಿಸಿ ವೀರೇಂದ್ರ ರೋಷಾವೇಷ

ಎಂದಿನಂತೆ ಕೆಲಸಕ್ಕೆಂದು ಯಜಮಾನರ ಮನೆ ಬಳಿ ಬಂದ ಸುಬ್ಬುವನ್ನು ಗೇಟ್‌ನಲ್ಲೇ ತಡೆಯುತ್ತಾನೆ ಸೆಕ್ಯೂರಿಟಿ. ಒಳಗೆ ಹೋಗಬೇಕು ಎಂದುಕೊಂಡು ಬೇಡಿದ್ರೂ ಬಿಡಿದೇ ಇದ್ದಾಗ ವೀರೇಂದ್ರ ಅಲ್ಲಿಗೆ ಬರುತ್ತಾರೆ. ‘ಯಜಮಾನರೇ ನನ್ನ ಒಳಗೆ ಬರಲು ಬಿಡಿ, ನಾನು ನಿಮ್ಮ ಜೊತೆ ಮಾತನಾಡಬೇಕು‘ ಅಂತ ಸುಬ್ಬು ಕೇಳಿ ಕೊಳ್ಳುತ್ತಾನೆ. ಆದರೆ ಸುಬ್ಬುವನ್ನು ಸುಟ್ಟು ಹಾಕಬೇಕು ಎನ್ನುವಷ್ಟು ಕೋಪ ಇಟ್ಟುಕೊಂಡಿರುವ ವೀರೇಂದ್ರ ‘ನೀನು ನಂಬಿಕೆ ದ್ರೋಹಿ, ನಿನ್ನ ಮೇಲಿರುವ ನಂಬಿಕೆ, ವಿಶ್ವಾಸ ಮದುವೆ ಮಂಟಪದಲ್ಲೇ ಸುಟ್ಟು ಬೂದಿಯಾಯ್ತು. ಇನ್ನೆಂದು ನೀನು ನನಗೆ ಮುಖ ತೋರಿಸಬೇಡ‘ ಎಂದು ಗನ್ ತೋರಿಸುತ್ತಾನೆ. ಆದರೂ ಜಗ್ಗದ ಸುಬ್ಬು ಯಜಮಾನರ ಬಳಿ ಬೇಡಿಕೊಳ್ಳುತ್ತಾನೆ. ನೀವು ‘ನನ್ನ ಕೊಂದರೂ ಪರ್ವಾಗಿಲ್ಲ ಯಜಮಾನ್ರೆ, ನನ್ನನ್ನು ಹೋಗು ಅಂತ ಮಾತ್ರ ಹೇಳಬೇಡಿ. ನನಗೆ ನೀವೇ ದೇವರು. ನೀವಿಲ್ಲ ಅಂದ್ರೆ ನನಗೆ ಬದುಕಿಲ್ಲ ಯಜಮಾನ್ರೆ‘ ಅಂತ ಬೇಡಿಕೊಳ್ಳುತ್ತಾನೆ. ಆದರೆ ವೀರೇಂದ್ರ ಮಾತ್ರ ಕೋಪದಲ್ಲಿ ಗುಂಡು ಮೇಲಕ್ಕೆ ಹಾರಿಸುತ್ತಾರೆ. ಆಗಲೂ ಸುಬ್ಬು ಹೋಗದಿದ್ದಾಗ ಅವನ ಹಣೆಗೆ ಶೂಟ್ ಮಾಡಲು ನೋಡುತ್ತಾರೆ. ಅಷ್ಟೊತ್ತಿಗೆ ಸುರೇಂದ್ರ ಬಂದು ಅಣ್ಣನನ್ನು ತಡೆದು ಒಳಗೆ ಕರೆದುಕೊಂಡು ಹೋಗುತ್ತಾರೆ. ಹೋಗುವಾಗ ಸುಬ್ಬುವನ್ನು ನಂಬಿಕೆ ದ್ರೋಹಿ ಎಂದು ಬೈದು ಹೋಗುತ್ತಾರೆ ಸುರೇಂದ್ರ.

ಆದರೆ ಸುಬ್ಬು ಮಾತ್ರ, ಯಜಮಾನರು ನನ್ನ ಮನೆ ಒಳಗೆ ಕರೆಯುವವರೆಗೂ ನಾನು ಇಲ್ಲೇ ಇರುತ್ತೇನೆ. ಅದೆಷ್ಟೇ ದಿನ ಆದ್ರೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ನಿರ್ಧಾರ ಮಾಡಿ ಗೇಟ್ ಬಳಿಯೇ ಕೈಕಟ್ಟಿ ನಿಲ್ಲುತ್ತಾನೆ.

ಹಣವಿಲ್ಲದೇ, ಬಟ್ಟೆ ಇಲ್ಲದೇ ಪರಾಡುತ್ತಿರುವ ಶ್ರಾವಣಿಯ ಕಷ್ಟಕ್ಕೆ ಆಗುವವರು ಯಾರು, ಸುಬ್ಬುವನ್ನು ಮನೆಯೊಳಗೆ ಕರಿತಾರಾ ಮಿನಿಸ್ಟರ್ ವೀರೇಂದ್ರ, ಪದ್ಮನಾಭ ಹೇಳಿದಂತೆ ವರಲಕ್ಷ್ಮೀ ಮದುವೆ ವರದನ ಜೊತೆ ಆಗುತ್ತಾ, ಆಗುವುದಾದರೆ ಅದು ಹೇಗೆ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner