ವಿಜಯಾಂಬಿಕಾ ಕೆನ್ನೆಗೆ ಹೊಡೆದು ನೀನು ತಾಯಿನೇ ಅಲ್ಲ ಎಂದ ಮದನ್‌, ಸುಬ್ಬು ಮನೆಯಲ್ಲಿ ಶ್ರಾವಣಿಗೆ ಊಟಕ್ಕೂ ಗತಿಯಿಲ್ಲ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ವಿಜಯಾಂಬಿಕಾ ಕೆನ್ನೆಗೆ ಹೊಡೆದು ನೀನು ತಾಯಿನೇ ಅಲ್ಲ ಎಂದ ಮದನ್‌, ಸುಬ್ಬು ಮನೆಯಲ್ಲಿ ಶ್ರಾವಣಿಗೆ ಊಟಕ್ಕೂ ಗತಿಯಿಲ್ಲ; ಶ್ರಾವಣಿ ಸುಬ್ರಹ್ಮಣ್ಯ

ವಿಜಯಾಂಬಿಕಾ ಕೆನ್ನೆಗೆ ಹೊಡೆದು ನೀನು ತಾಯಿನೇ ಅಲ್ಲ ಎಂದ ಮದನ್‌, ಸುಬ್ಬು ಮನೆಯಲ್ಲಿ ಶ್ರಾವಣಿಗೆ ಊಟಕ್ಕೂ ಗತಿಯಿಲ್ಲ; ಶ್ರಾವಣಿ ಸುಬ್ರಹ್ಮಣ್ಯ

ಸೀರೆ ತರಲು ಉಂಗುರ ಮಾರಲು ಹೇಳಿದ ಶ್ರಾವಣಿ, ಸುಬ್ಬು ಮನೆಯಲ್ಲಿ ದೊಡ್ಮನೆ ಕುಡಿಗೆ ಊಟಕ್ಕೂ ಗತಿಯಿಲ್ಲ. ಸುಬ್ಬುಗೆ ಲಲಿತಾದೇವಿ ಆಹ್ವಾನ. ವಿಜಯಾಂಬಿಕಾ ಮೇಲೆ ಮದನ್ ರೋಷ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 7ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 7ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 7ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 7ರ ಸಂಚಿಕೆಯಲ್ಲಿ ತಾನು ಕೊಟ್ಟ ಸೀರೆಯನ್ನು ಮರಳಿಸುವಂತೆ ಹಿಂಸೆ ಕೊಡುವ ಕಾಂತಮ್ಮ ಒಂದು ಕಡೆ, ತೊಡಲು ಬಟ್ಟೆ ಇಲ್ಲದೇ ಇರುವುದು ಇನ್ನೊಂದು ಕಡೆ. ಇದರಿಂದ ದಾರಿ ಕಾಣದ ಶ್ರಾವಣಿ ಮಾವನಿಗೆ ಒಂದು ಉಂಗುರ ಕೊಟ್ಟು ಇದನ್ನು ಕೊಟ್ಟು ಸೀರೆ ಹಾಗೂ ತನಗೆ ಬೇಕಾದ ವಸ್ತುಗಳನ್ನು ತರುವಂತೆ ಕೇಳಿಕೊಳ್ಳುತ್ತಾಳೆ. ಆರಂಭದಲ್ಲಿ ಒಪ್ಪದ ಪದ್ಮನಾಭ ನಂತರ ಬೇರೆ ದಾರಿ ಕಾಣದೆ ಆಯ್ತು ಶ್ರಾವಣಿ ಅಮ್ಮೋರೇ ಹೋಗಿ ತರುತ್ತೇನೆ ಎಂದು ಹೊರ ಹೋಗಿ ಒಂದಿಷ್ಟು ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ತರುತ್ತಾನೆ.

ಲಲಿತಾದೇವಿ ಕರೆದರೂ ಒಳ ಹೋಗುತ್ತಿಲ್ಲ ಸುಬ್ಬು

ಯಜಮಾನರು ಕೋಪದಲ್ಲಿ ಮನೆಯ ಒಳಗೆ ಬರಬೇಡ ಎಂದು ಹೇಳಿ ಹೋಗಿದ್ದರೂ ಅಲ್ಲಿಂದ ಹೊರಟು ಹೋಗದ ಸುಬ್ಬು ಗೇಟ್ ಬಳಿಯೇ ನಿಂತು ಕಾಯುತ್ತಿರುತ್ತಾನೆ. ಮನೆಯಿಂದ ಹೊರ ಬಂದ ಲಲಿತಾದೇವಿ ಸುಬ್ಬುವನ್ನು ಗೇಟ್ ಬಳಿ ನೋಡಿ ಒಳಗೆ ಬರುವಂತೆ ಹೇಳುತ್ತಾರೆ. ಆದರೆ ಅವರ ಮಾತಿಗೂ ಒಳ ಬರದ ಸುಬ್ಬು ತಾನು ಯಜಮಾನರು ಕರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೇಳುತ್ತಾನೆ. ಲಲಿತಾದೇವಿ ಮಾತ್ರವಲ್ಲ ಸುಬ್ಬು ಹಾಗೂ ಶ್ರಾವಣಿಗೆ ಹರಸಿ, ಕಾಲವೇ ಎಲ್ಲವನ್ನೂ ಸರಿ ಮಾಡುತ್ತೆ, ನಿಮಗೆ ಒಳ್ಳೆದಾಗುತ್ತೆ ಎಂದು ಹಾರೈಸುತ್ತಾರೆ. ಅವರಿಗೆ ಸುಬ್ಬುಗೆ ಶ್ರಾವಣಿ ಮೇಲೆ ಬೆಟ್ಟದಷ್ಟು ಕೋಪ ಇರುವುದು ತಿಳಿದಿರುವುದಿಲ್ಲ. ಅಲ್ಲದೇ ಅವರು ಶ್ರಾವಣಿ–ಸುಬ್ರಹ್ಮಣ್ಯನನ್ನು ಸಾಲಿಗ್ರಾಮದಲ್ಲೇ ಬಂದು ಇರುವಂತೆ ಕರೆಯುತ್ತಾರೆ. ಆದರೆ ಇದ್ಯಾವುದಕ್ಕೂ ಒಪ್ಪಿಕೊಳ್ಳದ ಸುಬ್ಬು ಯಜಮಾನರು ತನ್ನನ್ನು ಕರೆಯುವವರೆಗೂ ತಾನು ಇಲ್ಲಿಂದ ಹೋಗುವುದಿಲ್ಲ ಎಂದು ನಿರ್ಧಾರ ಮಾಡುತ್ತಾನೆ.

ತಾಯಿ ಮೇಲೆ ಮದನ್ ರೋಷಾವೇಷ

ಮದುವೆ ಮನೆಯಿಂದ ಕಾಣೆಯಾಗಿದ್ದ ಮದನ್‌ ಮನೆಯಲ್ಲಿ ತನ್ನ ಕೋಣೆಯಲ್ಲಿ ಕುಡಿಯುತ್ತಾ ಕುಳಿತಿರುತ್ತಾನೆ. ಅಲ್ಲಿಗೆ ಬಂದ ವಿಜಯಾಂಬಿಕಾ ಮಗನನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾಳೆ. ನಾನು ಮದುವೆ ಸಮಯದಲ್ಲಿ ಒಂದು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದೆ, ಅದು ನಿಮ್ಮಿಬ್ಬರಿಗೂ ಅಪಾಯಕಾರಿಯಾಗಿತ್ತು. ಆ ಸಂಕಷ್ಟದಿಂದ ನಾವಿಬ್ಬರೂ ಕಂಬಿ ಎಣಿಸಬೇಕಿತ್ತು, ಅದಕ್ಕೆ ನನಗೆ ಮದುವೆ ಕಡೆ ಗಮನ ಕೊಡಲು ಸಾಧ್ಯವಾಗಿಲ್ಲ ಎಂದೆಲ್ಲಾ ಹೇಳುತ್ತಾಳೆ. ಈಗಲೂ ಕಾಲ ಮಿಂಚಿಲ್ಲ, ಸ್ವಲ್ಪ ತಾಳ್ಮೆಯಿಂದ ಇರು, ಶ್ರಾವಣಿಯನ್ನು ನಿನ್ನ ಜೊತೆ ಮದುವೆಯಾಗುವಂತೆ ಮಾಡುತ್ತೇನೆ ಎನ್ನುತ್ತಾಳೆ. ಆದರೆ ತಾಯಿಯ ಮಾತಿಗೆ ಕೋಪಗೊಳ್ಳುವ ಮದನ್‌ ವಿಜಯಾಂಬಿಕಾ ಕೆನ್ನೆಗೆ ಬಾರಿಸುತ್ತಾನೆ. ಮಾತ್ರವಲ್ಲ ನೀನು ನನ್ನ ತಾಯಿಯೇ ಅಲ್ಲ, ಯಾವ ತಾಯಿಯೂ ಮಕ್ಕಳ ವಿಚಾರದಲ್ಲಿ ಹೀಗೆ ನಡೆದುಕೊಳ್ಳುವುದಿಲ್ಲ. ನೀನು ಯಾವತ್ತೂ ನನ್ನನ್ನು ಮಾತನಾಡಿಸಬೇಡ. ನನ್ನ ಪಾಡಿಗೆ ನನ್ನ ಇರಲು ಬಿಡು. ನನ್ನ ಮನಸ್ಸಿಗೆ ತೋಚಿದ್ದು ನಾನು ಮಾಡುತ್ತೇನೆ ಎಂದು ರೋಷ ವ್ಯಕ್ತಪಡಿಸುತ್ತಾನೆ.

ಸುಬ್ಬ ಮನೆಯಲ್ಲಿ ಶ್ರಾವಣಿಗೆ ತಿನ್ನಲೂ ಗತಿಯಿಲ್ಲ

ಸೀರೆ, ಬಟ್ಟೆ, ಇತರ ಅಗತ್ಯ ವಸ್ತುಗಳನ್ನೆಲ್ಲಾ ತರುವ ಮಾಮ ಸೊಸೆಯನ್ನು ತಿಂಡಿ ತಿನ್ನಲು ಕರೆದುಕೊಂಡ ಬರುತ್ತಾರೆ. ಆದರೆ ಹೆಂಡತಿ–ಮಗಳು ಶ್ರಾವಣಿಗೆ ಕೊಡದಂತೆ ಎಲ್ಲವನ್ನೂ ಖಾಲಿ ಮಾಡುತ್ತಾರೆ. ಪದ್ಮನಾಭ ಬೇಡುವ ರೀತಿ ಕೇಳಿಕೊಂಡರೂ ಅವಳಿಗೆ ತಿಂಡಿ ಕೊಡುವುದಿಲ್ಲ. ಬೇಸರವಾದರೂ ತೋರಿಸಿಕೊಳ್ಳದ ಶ್ರಾವಣಿ ಮಾವನ ಬಳಿ ನಾವೇ ಅಡುಗೆ ಮಾಡೋಣ ಎಂದು ಹೇಳುತ್ತಾಳೆ. ಯುಟ್ಯೂಬ್ ನೋಡಿ ಟೊಮೆಟೊ ಗೊಜ್ಜು, ಚಪಾತಿ ಮಾಡಲು ನಿರ್ಧಾರ ಮಾಡುವ ಶ್ರಾವಣಿಗೆ ಚಪಾತಿ ಮಾಡಲು ಬರುವುದಿಲ್ಲ. ಮಾಡಿದ ಚಪಾತಿ ಹರಿದು ಹೋಗಿರುತ್ತದೆ. ಅದನ್ನು ನೋಡಿದ ಪದ್ಮನಾಭ ದೊಡ್ಮನೆ ಕುಡಿ ಕಷ್ಟ ನೋಡಲಾಗದೇ ಮರುಗುತ್ತಾರೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner