ಅಜ್ಜಿ ಮುಂದೆ ಸುಬ್ಬು ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ, ಸುಬ್ಬು ಕಂಡರೆ ಕೆಂಡ ಕಾರುವ ತಾಯಿ ಸಹೋದರಿಯರು; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ಮುಂದೆ ಸುಬ್ಬು ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ, ಸುಬ್ಬು ಕಂಡರೆ ಕೆಂಡ ಕಾರುವ ತಾಯಿ ಸಹೋದರಿಯರು; ಶ್ರಾವಣಿ ಸುಬ್ರಹ್ಮಣ್ಯ

ಅಜ್ಜಿ ಮುಂದೆ ಸುಬ್ಬು ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ, ಸುಬ್ಬು ಕಂಡರೆ ಕೆಂಡ ಕಾರುವ ತಾಯಿ ಸಹೋದರಿಯರು; ಶ್ರಾವಣಿ ಸುಬ್ರಹ್ಮಣ್ಯ

ಮನದಲ್ಲಿ ಎಷ್ಟೇ ನೋವಿದ್ದರೂ ಅಜ್ಜಿ ಮುಂದೆ ಗಂಡನ ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ. ಯಜಮಾನರ ಮನೆಯಲ್ಲಿ ನಡೆದಿದ್ದನ್ನು ತಂದೆಗೆ ಹೇಳದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 10ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 10ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 10ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 10ರ ಸಂಚಿಕೆಯಲ್ಲಿ ಮನೆಯಲ್ಲಿ ತಿಂಡಿ ಮಾಡಿ ಕೊಡುವವರು ಇಲ್ಲದೇ ಇದ್ದಾಗ ಬೇರೆ ದಾರಿ ಕಾಣದೆ ತಾನೇ ಕಷ್ಟಪಟ್ಟು ಅಡುಗೆ ಮಾಡಿ ಮಾವನಿಗೂ ಬಡಿಸಿ ತಿನ್ನುತ್ತಾಳೆ. ಅಡುಗೆಯಲ್ಲಿ ಉಪ್ಪಿಲ್ಲ ಎಂದರೂ ಒಂದೂ ಮಾತನಾಡದೇ ತಿನ್ನುತ್ತಾರೆ ಪದ್ಮನಾಭ. ಶ್ರಾವಣಿ ಪಾಡು ನೋಡಲು ಸಾಧ್ಯವಾಗದ ಅವರು ಎಷ್ಟೇ ಕಷ್ಟ ಬಂದರೂ ಶ್ರಾವಣಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪಣತೊಡುತ್ತಾರೆ.

ಶ್ರಾವಣಿ ಮೇಲೆ ಸುಬ್ಬುಗೆ ಸುಡುವ ಕೋಪ

ಯಜಮಾನರ ಮನೆಯಿಂದ ಮರಳಿ ಬಂದ ಸುಬ್ಬುಗೆ ನೀರು ಕೊಡುತ್ತಾಳೆ ಶ್ರಾವಣಿ. ಅವಳನ್ನು ಧಿಕ್ಕರಿಸಿ ಕೋಣೆಗೆ ಹೋದ್ರೆ ಅಲ್ಲಿಗೂ ಹಿಂಬಾಲಿಸುತ್ತಾಳೆ ಆಕೆ. ಅವಳನ್ನು ನೋಡಿ ‘ಮೇಡಂ, ನಾನು ಡ್ರೆಸ್ ಚೇಂಜ್ ಮಾಡಬೇಕು ಇಲ್ಲಿಂದ ಹೋಗಿ‘ ಎನ್ನುತ್ತಾನೆ. ಅದಕ್ಕೆ ಶ್ರಾವಣಿ ‘ನಾನು ಇಲ್ಲಿಂದ ಹೋಗೋಕೆ ಬಂದಿಲ್ಲ, ಇಲ್ಲೇ ಇರಲು ಬಂದಿರೋದು‘ ಎಂದು ಹೇಳುತ್ತಾಳೆ. ಅವಳ ಮಾತು ಕೇಳಿ ಸುಬ್ಬುಗೆ ಕೋಪ ಉಕ್ಕಿ ಬರುತ್ತದೆ. ‘ಮೇಡಂ ದಯವಿಟ್ಟು ಇಲ್ಲಿಂದ ಹೋಗಿ, ನಿಮ್ಮ ಮಾತು ಕೇಳಿದ್ರೆ ನಂಗೆ ಮೈಯೆಲ್ಲಾ ಉರಿಯುತ್ತೆ. ನೀವು ನನ್ನ ಜೀವನವನ್ನೇ ಹಾಳು ಮಾಡಿದ್ರಿ‘ ಅಂತ ರೇಗುತ್ತಾನೆ. ಸುಬ್ಬು ಮಾತು ಕೇಳಿ ಕಣ್ಣೀರು ಬಂದರೂ ತಡೆದುಕೊಳ್ಳುವ ಶ್ರಾವಣಿ ‘ನೀನು ಇದ್ದಲ್ಲಿ ನಾನು ಇರುತ್ತೇನೆ. ನೀನು ಎಷ್ಟೇ ಬೈದ್ರೂ ಅಷ್ಟೇ‘ ಅಂತ ಮತ್ತೂ ಅಲ್ಲೇ ನಿಲ್ಲುತ್ತಾಳೆ. ಇದರಿಂದ ಕೋಪಗೊಳ್ಳುವ ಸುಬ್ಬು ಕೋಣೆಯಿಂದ ಹೊರ ಹೋಗುತ್ತಾನೆ.

ಸುಬ್ಬುಗೆ ಜೊತೆ ಹುಟ್ಟಿದ ಮೋಸಗಾರ ಎಂಬ ಪಟ್ಟ

ಇತ್ತ ವರಲಕ್ಷ್ಮೀ ವರದನಿಗೆ ಬೇರೆ ಮದುವೆ ಮಾಡುತ್ತಾರೆ ಎಂಬ ಬೇಸರದಲ್ಲಿ ಅಳುತ್ತಾ ಕೂತಿದ್ದರೆ ಅವರಿಗೆ ಸಮಾಧಾನ ಮಾಡುತ್ತಿರುತ್ತಾರೆ ವಿಶಾಲಾಕ್ಷಿ, ಧನಲಕ್ಷ್ಮೀ. ತಂಗಿಯನ್ನು ಮಾತನಾಡಿಸಲು ಕೋಣೆಗೆ ಬರುವ ಸುಬ್ಬು ‘ಇಂದ್ರಮ್ಮ ಕಾಲಿಗೆ ಬಿದ್ದಾದ್ರೂ ವರದನ ಜೊತೆ ವರಲಕ್ಷ್ಮೀ ಮದುವೆ ಮಾಡಿಸಲು ಹೇಳುತ್ತೇನೆ‘ ಎಂದು ಕೇಳಿಕೊಳ್ಳುತ್ತಾನೆ. ಆದರೆ ಅದನ್ನು ಕೇಳಿಸಿಕೊಂಡು ಇನ್ನಷ್ಟು ಕೋಪ ಮಾಡಿಕೊಳ್ಳುವ ವರಲಕ್ಷ್ಮೀ ‘ನೀನು ಏನು ಕೇಳಿಕೊಳ್ಳೋದು ಬೇಡ, ಈಗಾಗಲೇ ನೀನು ಮಾಡಿರುವುದು ಸಾಕು. ದಯವಿಟ್ಟು ನನ್ನ ಕಣ್ಣ ಮುಂದೆಯೂ ನಿಂತುಕೊಳ್ಳಬೇಡ, ಇಲ್ಲಿಂದ ಹೊರಟು ಹೋಗು‘ ಎಂದು ಅಳುತ್ತಾ. ತಾಯಿ, ಅಕ್ಕ ಕೂಡ ಕೋಪದಲ್ಲಿ ಹಾಗೆ ಹೇಳುತ್ತಾರೆ. ಸುಬ್ಬು ಪಾಪ ತಪ್ಪೇ ಮಾಡದೇ ಎಲ್ಲರಿಂದಲೂ ಛೀ, ಥೂ ಅನ್ನಿಸಿಕೊಳ್ಳುತ್ತಿರುತ್ತಾಳೆ.

ಅಜ್ಜಿ ಮುಂದೆ ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ

ಮೊಮ್ಮಗಳನ್ನು ನೆನೆಸಿಕೊಂಡು ಬೇಸರ ಪಡುತ್ತಿರುವ ಲಲಿತಾದೇವಿ ಬಳಿ ಬರುವ ವಂದನಾ ಶ್ರಾವಣಿಯನ್ನು ನೋಡಲು ಹೋಗಲು ಆಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಮೊಮ್ಮಗಳಿಗೆ ಕಾಲ್ ಮಾಡಿ ಕೊಡುವಂತೆ ವಂದನಾಗೆ ಹೇಳುತ್ತಾರೆ. ಮದುವೆಯಾದ ಮೇಲೆ ಮೊದಲ ಬಾರಿ ಕರೆ ಮಾಡಿರುವ ಅಜ್ಜಿ ಮುಂದೆ ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ ಈ ಮನೆಯಲ್ಲಿ ಎಲ್ಲರೂ ನನ್ನನ್ನು ರಾಣಿ ಹಾಗೆ ನೋಡಿಕೊಳ್ಳುತ್ತಿದ್ದಾರೆ. ನಾನು ತುಂಬಾ ಖುಷಿಯಾಗಿದ್ದೀನಿ ಎಂದು ಸುಳ್ಳು ಹೇಳುತ್ತಾನೆ. ಇತ್ತ ಸುಬ್ಬು ಕೂಡ ತಂದೆಯ ಮುಂದೆ ಯಜಮಾನರ ಮನೆಯಲ್ಲಿ ನಡೆದಿದ್ದನ್ನು ಹೇಳದೇ ಯಜಮಾನರ ಮನೆಯಲ್ಲಿ ತನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡರು ಎಂದು ಹೇಳಿ ಅಪ್ಪನ ಮನಸ್ಸಿಗೆ ಸಮಾಧಾನ ಆಗುವಂತೆ ಮಾಡುತ್ತಾನೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner