ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸಿಯೇ ಸಿದ್ಧ ಎಂದ ಶ್ರಾವಣಿಗೆ ಇಂದ್ರಮ್ಮನನ್ನು ಸೋಲಿಸಲು ಸಾಧ್ಯವೇ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಶ್ರಾವಣಿಗೆ ಮತ್ತೆ ಮತ್ತೆ ಅವಮಾನ ಮಾಡುವ ಸುಬ್ಬು ಮನೆಯವರು. ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸುತ್ತೇನೆ ಎಂದ ಶ್ರಾವಣಿಗೆ ಮತ್ತೆ ಕಾದಿದ್ಯಾ ಗಂಡಾಂತರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 11ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 11ರ ಸಂಚಿಕೆಯಲ್ಲಿ ಮನೆಯವರೆಲ್ಲರೂ ಕೂತು ಊಟ ಮಾಡುವಾಗ ಶ್ರಾವಣಿಯನ್ನೂ ಕರೆ ತರುತ್ತಾರೆ ಪದ್ಮನಾಭ. ತಾನೇ ಊಟ ಬಡಿಸುತ್ತೇನೆ ಎಂದು ಶ್ರಾವಣಿ ಹೇಳಿದ್ದೇ ತಡ ಕೋಪದಿಂದ ತಟ್ಟೆಯನ್ನು ನೆಲಕ್ಕೆ ಕುಕ್ಕಿ, ಮಗಳನ್ನು ಕರೆದುಕೊಂಡು ಎದ್ದು ಹೋಗುತ್ತಾಳೆ ವಿಶಾಲಾಕ್ಷಿ. ಧನಲಕ್ಷ್ಮೀ ಕೂಡ ಕೋಪದಿಂದ ಆ ಜಾಗದಿಂದ ಎದ್ದು ಹೋಗುತ್ತಾಳೆ. ಸುಬ್ಬು ಕೂಡ ಹೋಗಲು ನೋಡಿದಾಗ ಪದ್ಮನಾಭ ಮಗನ ಬಳಿ ತನ್ನ ಮಾತಿಗೆ ಬೆಲೆ ಕೊಟ್ಟು ಕೂತು ಊಟ ಮಾಡುವಂತೆ ಹೇಳುತ್ತಾರೆ. ಆದರೆ ಶ್ರಾವಣಿ ಬಡಿಸಿದ್ದು ಎಂಬ ಕೋಪಕ್ಕೆ ಸುಬ್ಬು ಕೋಪದಿಂದ ಗಡಿಬಿಡಿಯಲ್ಲಿ ತುತ್ತು ನುಂಗುತ್ತಾನೆ, ಇದರಿಂದ ಗಂಟಲಿಗೆ ಸಿಕ್ಕಿ ಕೆಮ್ಮಲು ಶುರು ಮಾಡುತ್ತಾನೆ. ಆಗ ಶ್ರಾವಣಿ ತಾನೇ ತಿನ್ನಿಸುವುದಾಗಿ ಹೇಳಿದ್ದೇ ತಡ ತನ್ನ ಪಾಡಿಗೆ ತನ್ನನ್ನು ಇರಲು ಬಿಡಿ ಎಂದು ಕೈ ಮುಗಿದು ಹೇಳಿ ಕೋಪದಿಂದ ಎದ್ದು ಹೋಗುತ್ತಾನೆ. ಇದರಿಂದ ಕುಸಿದು ಹೋಗುತ್ತಾಳೆ ಶ್ರಾವಣಿ. ಅಳುತ್ತಾ ಕೂತ ಶ್ರಾವಣಿಗೆ ಪದ್ಮನಾಭ ಧೈರ್ಯ ತುಂಬುತ್ತಾರೆ.
ಶ್ರೀವಲ್ಲಿ ಜೊತೆ ಕೈ ಜೋಡಿಸಲು ಕಾಂತಮ್ಮ ಸುಂದರ ಪ್ಲಾನ್
ಶ್ರಾವಣಿಯಿಂದ ತನಗೇನೂ ಸಿಗುವುದಿಲ್ಲ ಎಂದ ಅರಿವಾದ ಕಾಂತಮ್ಮ ಸುಂದರ ಶ್ರೀವಲ್ಲಿ ಜೊತೆ ಸುಬ್ಬು ಮದುವೆಯಾಗಬೇಕು ಎಂದು ಬಯಸುತ್ತಾರೆ. ಶ್ರೀವಲ್ಲಿಗೆ ಶ್ರಾವಣಿ ಹಾಗೂ ಸುಬ್ಬು ನಡುವೆ ನಡೆಯುತ್ತಿರುವ ಎಲ್ಲಾ ವಿಚಾರವನ್ನೂ ಹೇಳಬೇಕು, ಆಕೆ ಸುಬ್ಬುವನ್ನು ಮದುವೆಯಾದರೆ ತಮಗೆ ಒಂದು ಮನೆಯಾದ್ರೂ ಸಿಗುತ್ತೆ ಅಂತ ತಮ್ಮ ದುರಾಲೋಚನೆ ವ್ಯಕ್ತಪಡಿಸುತ್ತಾರೆ.
ವರದನ ಬಳಿ ವರಲಕ್ಷ್ಮೀ ಜೊತೆ ನಿನ್ನ ಮದುವೆ ಮಾಡಿಸುತ್ತೇನೆ ಎಂದು ಶ್ರಾವಣಿ
ಅಳುತ್ತಾ ಕೂತ ಶ್ರಾವಣಿಗೆ ಅವಳ ತಾಯಿ ನಂದಿನಿಯ ಹಟ, ಛಲ, ಧೈರ್ಯ ಹೇಗಿತ್ತು ಎಂದು ತಿಳಿಸುವ ಪದ್ಮನಾಭ ನೀವು ಅವರಂತೆ ಇರಬೇಕು ಎಂದು ಹೇಳಿ ಧೈರ್ಯ ತುಂಬುವಂತೆ ಮಾಡುತ್ತಾರೆ. ಅದೇ ಧೈರ್ಯದ ಮೊದಲ ಹೆಜ್ಜೆಯಾಗಿ ಶ್ರಾವಣಿ ವರಲಕ್ಷ್ಮೀಗೂ ವರದನಿಗೂ ಮದುವೆ ಮಾಡಿಸುವ ಪ್ಲಾನ್ ಮಾಡುತ್ತಾಳೆ. ವರದನನ್ನು ಫೋನ್ ಮಾಡಿ ಬರಲು ಹೇಳಿ ತನ್ನಿಂದಾದ ತಪ್ಪುಗಳನ್ನು ತಾನೇ ಸರಿಪಡಿಸುತ್ತೇನೆ ಎಂದು ಹೇಳುತ್ತಾಳೆ. ಮಾತ್ರವಲ್ಲ ಇಂದ್ರಮ್ಮನವರು ಇರಿಸಿದ ಮದುವೆ ದಿನದಂದೇ ಅದೇ ಮುಹೂರ್ತಕ್ಕೆ ವರದ ಹಾಗೂ ವರಲಕ್ಷ್ಮೀ ಮದುವೆ ಮಾಡಿಸುತ್ತೇನೆ ಎಂದು ಕೂಡ ಹೇಳುತ್ತಾಳೆ.
ಮಗನಿಗೆ ಅವಾಜ್ ಹಾಕುವ ಇಂದ್ರಮ್ಮ
ಶ್ರಾವಣಿಯನ್ನು ಭೇಟಿ ಮಾಡಿ ನಿಧಾನಕ್ಕೆ ಮನೆಯೊಳಗೆ ಬರುವ ವರದನನ್ನು ಲೈಟ್ ಹಾಕಿ ನಿಲ್ಲಿಸುತ್ತಾರೆ ಇಂದ್ರಮ್ಮ. ಮಾತ್ರವಲ್ಲ ತಾನು ನೋಡಿದ ಹುಡುಗಿಯ ಜೊತೆಗೆ ನಿಮ್ಮ ಮದುವೆ ಆಗಬೇಕು. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹೇಳಿದಂತೆ ಎಲ್ಲವೂ ನಡೆಯಬೇಕು ಎಂದು ಮಗನಿಗೆ ಹೇಳಿ ವರಲಕ್ಷ್ಮೀಯನ್ನು ಮರೆತು ಬಿಡುವಂತೆ ಅವಾಜ್ ಹಾಕುತ್ತಾರೆ.
ಶ್ರಾವಣಿ ಹೇಳಿದಂತೆ ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸಲು ಅವಳಿಂದ ಸಾಧ್ಯವಾಗುತ್ತಾ, ಇಂದ್ರಮ್ಮನನ್ನು ಸೋಲಿಸಿ ಮನೆಯವರ ಪ್ರೀತಿ ಗಳಿಸ್ತಾಳಾ ಶ್ರಾವಣಿ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
