ಸುಬ್ಬು ಬಳಿ ಮದನ್ ಸಾರಿ ಕೇಳುವಂತೆ ಮಾಡಿದ್ರು ಲಲಿತಾದೇವಿ; ಸೊಸೆಗಾಗಿ ಆಟೊ ಡ್ರೈವರ್ ಆದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಬಳಿ ಮದನ್ ಸಾರಿ ಕೇಳುವಂತೆ ಮಾಡಿದ್ರು ಲಲಿತಾದೇವಿ; ಸೊಸೆಗಾಗಿ ಆಟೊ ಡ್ರೈವರ್ ಆದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಬಳಿ ಮದನ್ ಸಾರಿ ಕೇಳುವಂತೆ ಮಾಡಿದ್ರು ಲಲಿತಾದೇವಿ; ಸೊಸೆಗಾಗಿ ಆಟೊ ಡ್ರೈವರ್ ಆದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಮೇಲೆ ಕೈ ಮಾಡಿದ ಮದನ್ ಬಳಿ ಸಾರಿ ಕೇಳಿಸಿದ ಲಲಿತಾದೇವಿ. ಸೊಸೆಗಾಗಿ ಆಟೊ ಓಡಿಸಲು ಶುರು ಮಾಡಿದ ಪದ್ಮನಾಭ. ವರದ–ವರಲಕ್ಷ್ಮೀ ಮದುವೆ ರಿಜಿಸ್ಟರ್ ಮಾಡಿಸಲು ಶ್ರಾವಣಿ ಓಡಾಟ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 13ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 13ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 13ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 13ರ ಸಂಚಿಕೆಯಲ್ಲಿ ಮನೆಯ ಗೇಟ್ ಬಳಿ ಸುಬ್ಬುವನ್ನು ನೋಡಿದ ಮದನ್ ಉರಿದು ಬೀಳುತ್ತಾನೆ. ಸುಬ್ಬು ಮೇಲೆ ಕೈ ಮಾಡುವ ಅವನು ‘ನಿನಗೂ ಈ ಸೆಕ್ಯೂರಿಟಿಗಳಿಗೂ ಬೇರೆ ವ್ಯತ್ಯಾಸವಿಲ್ಲ. ನೀನು ಅದ್ಹೇಗೆ ನಮ್ಮ ಶ್ರಾವಣಿಗೆ ತಾಳಿ ಕಟ್ಟಿದೆ. ಅವಳಿಗೆ ತಾಳಿ ಕಟ್ಟಿದ್ದು ಮಾತ್ರವಲ್ಲ ನನ್ನ ಆಸೆ, ಕನಸುಗಳನ್ನೆಲ್ಲಾ ಕೊಂದೆ‘ ಎಂದು ರೋಷ ವ್ಯಕ್ತಪಡಿಸುತ್ತಾನೆ. ಸೆಕ್ಯೂರಿಟಿಗಳು ತಡೆದರೂ ಕೇಳದ ಅವನು ಸುಬ್ಬುಗೆ ‘ನನ್ನ ಕಣ್ಣ ಮುಂದೆ ನಿಲ್ಲಬೇಡ. ಇಲ್ಲೇ ಇದ್ದರೆ ನಿನ್ನನ್ನು ಸಾಯಿಸಿಬಿಡುತ್ತೇನೆ‘ ಎಂದು ಕೋಪದಲ್ಲಿ ಕೂಗಾಡುತ್ತಾನೆ. ಆದರೆ ಅವರ ಮಾತನ್ನು ಲೆಕ್ಕಿಸದೇ ಅಲ್ಲೇ ನಿಂತಿರುವ ಸುಬ್ಬುಗೆ ಕಾಲಿನಿಂದ ಒದೆಯಬೇಕು ಎಂದು ಕಾಲು ಎತ್ತುತ್ತಾನೆ ಮದನ್. ಆಗ ಅಲ್ಲಿಗೆ ಬರುವ ಲಲಿತಾದೇವಿ ಮದನ್‌ಗೆ ಜೋರು ಮಾಡುತ್ತಾರೆ.

ವರದ–ವರಲಕ್ಷ್ಮೀ ಮದುವೆ ರಿಜಿಸ್ಟರ್ ಮಾಡಿಸಲು ಶ್ರಾವಣಿ ಸಿದ್ಧತೆ

ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದ ಶ್ರಾವಣಿ ರಿಜಿಸ್ಟರ್ ಆಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಕೊಟ್ಟು ಸಿದ್ಧತೆ ಮಾಡಿಕೊಳ್ಳಲು ಹೇಳಬೇಕು ಎಂದು ಪ್ಲಾನ್ ಮಾಡುತ್ತಾಳೆ. ಅದಕ್ಕಾಗಿ ವರದನಿಗೆ ಕಾಲ್ ಮಾಡುವ ಶ್ರಾವಣಿ ನಿಮ್ಮ ಡಾಕ್ಯುಮೆಂಟ್‌ಗಳನ್ನೆಲ್ಲಾ ಕಳುಹಿಸಿ, ರಿಜಿಸ್ಟರ್‌ ಆಫೀಸ್‌ಗೆ ಹೋಗಿ ಬರ್ತೀನಿ ಅಂತ ಮಾತನಾಡುತ್ತಿರುತ್ತಾಳೆ. ಅಷ್ಟೊತ್ತಿಗೆ ಅವರ ಮಾತನ್ನು ತಪ್ಪಿ ಶ್ರೀವಲ್ಲಿ ಕೇಳಿಸಿಕೊಳ್ಳುತ್ತಾಳೆ. ಶ್ರಾವಣಿ ಎಂದಿದ್ದು ನೋಡಿ ಅಣ್ಣನ ಬಳಿ ನಿನ್ಯಾಕೆ ಅವಳ ಜೊತೆ ಮಾತನಾಡಿದ್ದೆ ಅಂತ ತಗಾದೆ ತೆಗೆಯುತ್ತಾಳೆ. ಆದರೆ ವರದ ಆಫೀಸ್‌ನವರು ಎಂದು ಹೇಳಿ ಮ್ಯಾನೇಜ್ ಮಾಡುತ್ತಾಳೆ. ಆದರೆ ಶ್ರಾವಣಿಗೆ ಈಗ ವರಲಕ್ಷ್ಮೀ ಐಡಿ ಪ್ರೂಫ್‌ ತೆಗೆದುಕೊಳ್ಳುವುದು ಸವಾಲಾಗಿರುತ್ತದೆ.

ಸುಬ್ಬು ಬಳಿ ಸಾರಿ ಕೇಳಿದ ಮದನ್‌

ಸುಬ್ಬು ಮೇಲೆ ಕಾಲೆತ್ತಿದ್ದ ಮದನ್ ನೋಡಿ ಕೋಪಗೊಳ್ಳುವ ಲಲಿತಾದೇವಿ ನಿನಗೆಷ್ಟು ಸೊಕ್ಕು, ಸುಬ್ಬು ಈ ಮನೆಯ ಅಳಿಯ, ವೀರುಗೆ ಇರುವಷ್ಟೇ ಅಧಿಕಾರ ಸುಬ್ಬುಗೂ ಈ ಮನೆಯ ಮೇಲಿದೆ. ನೀನ್ಯಾರು ಅವನಿಗೆ ಕೈ ಮಾಡಲು ಎಂದು ಕೋಪದಲ್ಲಿ ಕುದಿಯುತ್ತಾರೆ ಲಲಿತಾದೇವಿ. ‘ಸಾರಿ ಅಜ್ಜಿ‘ ಎಂದು ಹೇಳಿ ಅಲ್ಲಿಂದ ಹೋಗಲು ನೋಡುವ ಮದನ್‌ನನ್ನು ಬಿಡದ ಆಕೆ ‘ನನ್ನ ಮೊಮ್ಮಗನ ಬಳಿ ಸಾರಿ ಕೇಳು‘ ಎಂದು ರೋಷದಲ್ಲಿ ಹೇಳುತ್ತಾರೆ. ಅವರ ಮಾತು ಕೇಳಿ ಸುಬ್ಬು ಕಣ್ಣಲ್ಲಿ ನೀರು ಬರುತ್ತದೆ. ಸಾರಿ ಕೇಳಿ ಮದನ್ ಹೋದ ನಂತರ ಮೊಮ್ಮಗಳ ಬಗ್ಗೆ ಮಾತನಾಡುವ ಲಲಿತಾದೇವಿ ನನ್ನ ಮೊಮ್ಮಗಳು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಳು. ಅವಳು ಹುಡುಗಾಟಿಕೆ ಸ್ವಭಾವದವಳು. ಅವಳು ಸರಿ ತಪ್ಪು ಯಾವುದು ಎಂದು ಯೋಚಿಸದೇ ಕೆಲಸ ಮಾಡಿದ್ರೂ ಅವಳು ಮಾಡಿದ ಕೆಲಸ ಉದ್ದೇಶ ಸರಿ ಇರುತ್ತೆ. ಅವಳು ತಾಯಿ ಪ್ರೀತಿ ಇಲ್ಲದೇ ಬೆಳೆದವಳು, ಅವಳನ್ನು ಚೆನ್ನಾಗಿ ನೋಡ್ಕೋ ಅಂತ ಹೇಳಿ ಸುಬ್ಬು ಮನಸ್ಸು ಬದಲಾಗುವಂತೆ ಮಾಡುತ್ತಾರೆ. ಇನ್ನು ಮುಂದೆ ಯಾವತ್ತೂ ಶ್ರಾವಣಿ ಮೇಡಂ ಬೇಸರ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸುಬ್ಬು ಮನದಲ್ಲೇ ಅಂದುಕೊಳ್ಳುತ್ತಾನೆ.

ಸೊಸೆಗಾಗಿ ಆಟೊ ಡ್ರೈವರ್ ಆದ ಪದ್ಮನಾಭ

ಮನೆಯಲ್ಲಿ ಸೊಸೆ ಕಷ್ಟ ಪಡುವುದು ನೋಡಲು ಸಾಧ್ಯವಾಗದ ಪದ್ಮನಾಭ ತಾನು ದುಡಿದು ಸೊಸೆಯ ಉಂಗುರ ಬಿಡಿಸಿಕೊಡಬೇಕು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಆಟೊ ಓಡಿಸುವ ನಿರ್ಧಾರ ಮಾಡುತ್ತಾರೆ. ಆಟೊ ಓಡಿಸಲು ಆರಂಭಿಸಿದ ಮೊದಲ ದಿನವೇ ಶ್ರಾವಣಿ ಅವರ ಆಟೊಗೆ ಬರುತ್ತಾರೆ, ಮುಖ ಮುಚ್ಚಿಕೊಂಡಿರುವ ಪದ್ಮನಾಭ ಆಟೊ ಓಡಿಸುತ್ತಿರುವುದು ಎಂಬುದು ಶ್ರಾವಣಿಗೆ ತಿಳಿಯುವುದಿಲ್ಲ. ಆಟೊ ಹತ್ತಿದ ಆಕೆ ಮಿನಿಸ್ಟರ್ ವೀರೇಂದ್ರ ಸರ್‌ದೇಸಾಯಿ ಅವರ ಮನೆ ಮುಂದಿನಿಂದ ಹೋಗಿ ಎಂದು ಹೇಳುತ್ತಾಳೆ. ಆದರೆ ಮಾವ–ಸೊಸೆಗೆ ಮಿನಿಸ್ಟರ್ ಮನೆ ಮುಂದೆ ಭಯಾನಕ ಸತ್ಯವೊಂದರ ಅನಾವರಣವಾಗುವುದರ ಕಲ್ಪನೆಯೂ ಇರುವುದಿಲ್ಲ.

ಶ್ರಾವಣಿಗೆ ಕಳ್ಳಿ ಎಂದ ಕಾಂತಮ್ಮ–ಸುಂದರ

ಇತ್ತ ವರಲಕ್ಷ್ಮೀ ಐಡಿ ಪ್ರೂಫ್‌ಗಾಗಿ ಅವಳ ಕೋಣೆಗೆ ಹೋಗಿ ಬ್ಯಾಗ್ ಹುಡುಕುತ್ತಿರುವಾಗ ಸಿಕ್ಕಿ ಬೀಳುತ್ತಾಳೆ ಶ್ರಾವಣಿ. ಶ್ರಾವಣಿಯ ಉದ್ದೇಶ ಅರಿಯದ ವರಲಕ್ಷ್ಮೀ ಕೂಗಿ ರಂಪಾಟ ಮಾಡುತ್ತಾಳೆ. ಮನೆಯವರೆಲ್ಲಾ ಅವಳ ಕೂಗಾಟ ನೋಡಿ ಬಂದಾಗ ಏನು ಮಾಡಬೇಕು ಎಂದು ತೋಚದೇ ನಿಲ್ಲುತ್ತಾಳೆ ಶ್ರಾವಣಿ. ಆ ಸಮಯದಲ್ಲಿ ಶ್ರಾವಣಿಗೆ ಕಳ್ಳಿ ಎನ್ನುತ್ತಾರೆ ಸುಂದರ, ಕಾಂತಮ್ಮ. ಆದರೆ ಶ್ರಾವಣಿ ಮಾತ್ರ ದಿಟ್ಟವಾಗಿ ತಾನು ಸುಬ್ಬು ಹೆಂಡತಿ ಎಂದು ಹೇಳಿ ಸುಬ್ಬು ಗುಣಗಾನ ಮಾಡುವ ಜೊತೆಗೆ ನನ್ನ ಅತ್ತೆಯ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಹೇಳುತ್ತಾಳೆ. ಅದನ್ನು ಕೇಳಿ ವಿಶಾಲಾಕ್ಷಿ ಕಣ್ಣೀರು ಹಾಕುತ್ತಾಳೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner