ಸುಬ್ಬುಗೆ ವೀರು ಮನೆಯಲ್ಲಾಗುತ್ತಿರುವ ಅವಮಾನ ಶ್ರಾವಣಿ–ಪದ್ಮನಾಭ ಮುಂದೆ ಬಯಲು, ಶ್ರೀವಲ್ಲಿ ತಲೆ ಕೆಡಿಸಿದ ಕಾಂತಮ್ಮ; ಶ್ರಾವಣಿ ಸುಬ್ರಹ್ಮಣ್ಯ
ಪದ್ಮನಾಭ (ಮಾವ) ಆಟೊದಲ್ಲಿ ತಂದೆ ಮನೆ ಬಳಿ ಹೋದ ಶ್ರಾವಣಿ ಕಣ್ಣ ಮುಂದೆ ಸುಬ್ಬು ಸ್ಥಿತಿ ಅನಾವರಣ, ಗಂಡ ಬುದ್ಧಿ ಹೇಳಿದ್ರು ಬದಲಾಗ್ತಿಲ್ಲ ಇಂದ್ರಮ್ಮ, ಶ್ರೀವಲ್ಲಿ ತಲೆ ಕೆಡಿಸಿದ ಕಾಂತಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 14ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 14ರ ಸಂಚಿಕೆಯಲ್ಲಿ ಅತ್ತೆಯ ಬಳಿ ‘ಅತ್ತೆ ನಂಗೆ ಸ್ವಲ್ಪ ಹೊರಗಡೆ ಕೆಲಸ ಇದೆ. ನಾನು ಹೊರಗಡೆ ಹೋಗಿ ಬರ್ತೀನಿ‘ ಎಂದು ಹೇಳುವ ಶ್ರಾವಣಿಯ ಮಾತು ಕೇಳಿಸಿಕೊಂಡ ವರಲಕ್ಷ್ಮೀ ‘ನೀನು ಎಲ್ಲಿಗಾದ್ರೂ ಹೋಗು, ಮತ್ತೆ ಈ ಮನೆಗೆ ಬರೋಕೆ ಹೋಗಬೇಡ, ನೀನು ಬಂದಿಲ್ಲ ಅಂದ್ರೆ ಯಾರೂ ನಿನ್ನನ್ನು ಇಲ್ಲಿ ಕೇಳುವವರಿಲ್ಲ‘ ಎಂದು ಬಯ್ಯುತ್ತಾಳೆ. ಅದಕ್ಕೆ ಬೇಸರವಾದ್ರೂ ಸಮಾಧಾನದಿಂದಲೇ ಉತ್ತರ ಕೊಡುವ ಶ್ರಾವಣಿ ‘ನಾನು ಎಲ್ಲಿಗೂ ಹೋಗುವುದಿಲ್ಲ. ಈಗ ಹೋಗಿ ಮತ್ತೆ ಬರ್ತೇನೆ. ಯಾಕೆಂದರೆ ಇದು ನನ್ನ ಗಂಡನ ಮನೆ‘ ಎಂದು ಹೇಳಿ ಹೊರಡು ನಿಲ್ಲುತ್ತಾಳೆ.
ಮಾವನ ಆಟೊದಲ್ಲಿ ಶ್ರಾವಣಿ ಪಯಣ
ವರದ–ವರಲಕ್ಷ್ಮೀ ಮದುವೆ ರಿಜಿಸ್ಟ್ರೇಷನ್‌ಗೆ ರಿಜಿಸ್ಟರ್ ಆಫೀಸ್‌ಗೆ ಹೋದ ಶ್ರಾವಣಿ ಸ್ವಲ್ಪ ದೂರ ನಡೆದು ಬರುವಷ್ಟರಲ್ಲಿ ಸುಸ್ತಾಗುತ್ತಾಳೆ. ಕ್ಯಾಬ್ ಬುಕ್ ಮಾಡಲು ಹೊರಟ ಅವಳಿಗೆ ಹಣದ ಚಿಂತೆ ಶುರುವಾಗಿ ಸ್ವಲ್ಪ ದೂರದಲ್ಲೇ ಇರುವ ಆಟೊದಲ್ಲಿ ಹೋಗೋಣ ಅಂದುಕೊಳ್ಳುತ್ತಾಳೆ. ಆಟೊ ನೋಡಿದ್ರೆ ಅದು ಪದ್ಮನಾಭ ಅವರದ್ದಾಗಿರುತ್ತದೆ. ಆಕೆಯನ್ನು ಸ್ವರದಲ್ಲೇ ಗುರುತಿಸಿದ ಪದ್ಮನಾಭ ಮಾಸ್ಕ್ ಹಾಕಿ ಮುಖ ಮುಚ್ಚಿಕೊಂಡು ಅಲ್ಲಿಂದ ಹೊರಡಲು ನೋಡುತ್ತಾರೆ. ಆದರೆ ಅಷ್ಟರಲ್ಲಿ ಆಕೆ ಆಟೊ ಹತ್ತಿರ ಬಂದಿರುತ್ತಾಳೆ. ವಿಧಿಯಲ್ಲದೇ ಆಟೊದಲ್ಲಿ ಕರೆದುಕೊಂಡು ಹೋಗುತ್ತಾರೆ ಪದ್ಮನಾಭ. ದಾರಿಯಲ್ಲಿ ಹೋಗುವಾಗ ಮಿನಿಸ್ಟರ್ ಮನೆ ದಾರಿಯಿಂದ ಕರೆದುಕೊಂಡು ಹೋಗಿ ಎಂದು ಹೇಳುತ್ತಾಳೆ ಶ್ರಾವಣಿ. ಆದರೆ ಅವಳಿಗೆ ತಾನು ಹೋಗುತ್ತಿರುವುದು ಮಾವನ ಆಟೊದಲ್ಲಿ ಎಂಬುದು ಅರಿವಿರುವುದಿಲ್ಲ.
ಸುಬ್ಬುಗೆ ಅವಮಾನ ಮಾಡುವ ಸುರೇಂದ್ರ
ಎಷ್ಟೇ ಕೇಳಿದ್ರೂ ಕೇಳದ ಸುಬ್ಬು ಬಿಸಿಲಲ್ಲೇ ನಿಂತಿರುವುದನ್ನು ನೋಡಿದ ಸೆಕ್ಯೂರಿಟಿ ರಮೇಶ್‌ಗೆ ಅವನ ಮೇಲೆ ಬೇಸರ ಬಂದು ನೀರು ಕೊಡಲು ಮುಂದಾಗುತ್ತಾನೆ. ಅಷ್ಟೊತ್ತಿಗೆ ಅಲ್ಲಿಗೆ ಬಂದು ಅದನ್ನು ನೋಡುವ ಸುರೇಂದ್ರ ನೀರಿನ ಬಾಟಲಿಯನ್ನು ಕಿತ್ತು ಬಾಯಿಗೆ ಬಂದಂತೆ ಬಯ್ಯುತ್ತಿರುತ್ತಾನೆ. ಆ ಹೊತ್ತಿಗೆ ಪದ್ಮನಾಭ, ಶ್ರಾವಣಿ ಇರುವ ಆಟೊ ಕೂಡ ಅಲ್ಲಿ ಬಂದು ನಿಲ್ಲುತ್ತದೆ. ಪದ್ಮನಾಭ ಹಾಗೂ ಶ್ರಾವಣಿಗೆ ಸುಬ್ಬು ಹೇಳಿದ್ದು ಸುಳ್ಳು, ಮನೆಯವರಿಗೆ ನೋವಾಗಬಾರದು ಎಂದು ಯಜಮಾನರು ನನ್ನ ಜೊತೆ ಚೆನ್ನಾಗಿ ಇದಾರೆ ಅಂತ ಸುಳ್ಳು ಹೇಳಿದ್ದು ಎಂಬುದು ಅರಿವಾಗುತ್ತದೆ. ಸುಬ್ಬು ಸ್ಥಿತಿ ಕಂಡು ಹೆಂಡತಿ ಹಾಗೂ ಅಪ್ಪ ಇಬ್ಬರೂ ಕಣ್ಣೀರು ಹಾಕುತ್ತಾರೆ.
ಶ್ರೀವಲ್ಲಿ ತಲೆ ಕೆಡಿಸುವ ಕಾಂತಮ್ಮ, ಹೆಂಡತಿಗೆ ಬುದ್ಧಿ ಹೇಳುವ ವರದನ ತಂದೆ
ಶ್ರಾವಣಿಯಿಂದ ತಮಗೇನೂ ಲಾಭ ಇಲ್ಲ ಎಂದು ಮಾತನಾಡಿಕೊಂಡ ಕಾಂತಮ್ಮ, ಸುಂದರ ಶ್ರೀವಲ್ಲಿಯನ್ನು ಈ ಮನೆಗೆ ಬರುವಂತೆ ಮಾಡಬೇಕು ಎಂದುಕೊಳ್ಳುತ್ತಾರೆ. ಶ್ರೀವಲ್ಲಿಗೆ ಕಾಲ್ ಮಾಡುವ ಕಾಂತಮ್ಮ ಸುಬ್ಬು ಹಾಗೂ ಶ್ರಾವಣಿ ಮದುವೆ ಆದ್ರೂ ಅವರ ನಡುವೆ ಪ್ರೀತಿಯಿಲ್ಲ, ಅವರ ನಡುವೆ ಏನೂ ಸರಿಯಿಲ್ಲ. ನೀನು ಈ ಮನೆಗೆ ಸೊಸೆಯಾಗಿ ಬರಬೇಕು ಎಂದು ಹೇಳಿ ಮನೆಯಲ್ಲಿ ನಡೆದಿರುವುದನ್ನೆಲ್ಲಾ ಶ್ರೀವಲ್ಲಿಗೆ ತಿಳಿಸುತ್ತಾರೆ. ಕಾಂತಮ್ಮನ ಮಾತು ಕೇಳಿದ ಶ್ರೀವಲ್ಲಿಗೆ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವಂತಾಗುತ್ತದೆ.
ಇತ್ತ ಸುಬ್ಬು ಮನೆಯವರ ಮೇಲಿನ ಕೋಪಕ್ಕೆ ಮಗನಿಗೆ ಮದುವೆ ಮಾಡಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡ ಹೆಂಡತಿಗೆ ಬುದ್ಧಿವಾದ ಹೇಳುತ್ತಾರೆ ಇಂದ್ರಮ್ಮನ ಗಂಡ. ಮಗಳ ಮದುವೆ ಆಗಿಲ್ಲ ಎನ್ನುವ ಕಾರಣಕ್ಕೆ ಮಗನ ಪ್ರೀತಿಯನ್ನು ಸಾಯಿಸುವುದು ಯಾವ ನ್ಯಾಯ ಎಂದು ಪರಿಸ್ಥಿತಿ ಅರ್ಥ ಮಾಡಿಸಲು ಹೊರಟರೂ ಕೂಡ ಆಕೆ ಅವರ ಮಾತನ್ನು ಕೇಳಿಸಿಕೊಳ್ಳಲು ಸಿದ್ಧ ಇರುವುದಿಲ್ಲ. ಹುಡುಗಿಯನ್ನೂ ಕೂಡ ನೋಡದೇ ಮದುವೆ ಮಾಡಿಸಲು ಸಿದ್ಧರಾಗುತ್ತಾರೆ.
ಇಂದ್ರಮ್ಮ ಅಂದುಕೊಂಡಂತೆ ಮಗನ ಮದುವೆ ಆಗುತ್ತಾ ಅಥವಾ ಅದಕ್ಕೂ ಮೊದಲು ವರಲಕ್ಷ್ಮೀ–ವರದನ ಮದುವೆ ಮಾಡಿಸ್ತಾಳಾ ಶ್ರಾವಣಿ, ಸುಬ್ಬುವನ್ನು ಮನೆಯೊಳಗೆ ಕರೆಯುತ್ತಾರಾ ವೀರೇಂದ್ರ, ಶ್ರೀವಲ್ಲಿಗೆ ಸುಬ್ಬು ಸಿಗಲು ಸಾಧ್ಯವೇ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
