ಸಕ್ಸಸ್ ಆಯ್ತು ಸಿರಿಗೆರೆ–ವಿಜಯಾಂಬಿಕಾ ಪ್ಲಾನ್‌, ವೀರು ಮೇಲೆ ಬಂತು ಅಪವಾದ, ಸುಬ್ಬು ಮೇಲೆ ಅನುಮಾನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸಕ್ಸಸ್ ಆಯ್ತು ಸಿರಿಗೆರೆ–ವಿಜಯಾಂಬಿಕಾ ಪ್ಲಾನ್‌, ವೀರು ಮೇಲೆ ಬಂತು ಅಪವಾದ, ಸುಬ್ಬು ಮೇಲೆ ಅನುಮಾನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಕ್ಸಸ್ ಆಯ್ತು ಸಿರಿಗೆರೆ–ವಿಜಯಾಂಬಿಕಾ ಪ್ಲಾನ್‌, ವೀರು ಮೇಲೆ ಬಂತು ಅಪವಾದ, ಸುಬ್ಬು ಮೇಲೆ ಅನುಮಾನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ವಿಜಯಾಂಬಿಕಾ, ಸಿರಿಗೆರೆ ಶ್ರೀನಿವಾಸ, ಮದನ್ ಸೇರಿ ಮಾಡಿದ ಮಾಸ್ಟರ್ ಪ್ಲಾನ್ ಸಕ್ಸಸ್‌. ಬ್ರೇಕಿಂಗ್ ನ್ಯೂಸ್ ಆದ್ರು ಮಿನಿಸ್ಟರ್ ವೀರೇಂದ್ರ. ಅಪವಾದ ಸುಬ್ಬು ತಲೆಗೆ ಕಟ್ಟಿದ್ರು ಸುರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 10ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 10ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 10ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 10ರ ಸಂಚಿಕೆಯಲ್ಲಿ ಶ್ರಾವಣಿಗಾಗಿ ಆಟೊ ಓಡಿಸುತ್ತಿರುವ ಪದ್ಮನಾಭರ ಬಳಿ ಇರುವ ಹಣವೆಲ್ಲಾ ಕಳ್ಳತನವಾಗುತ್ತದೆ. ಇದರಿಂದ ಆಟೊ ಬಾಡಿಗೆ ಕೊಡಲು ದುಡ್ಡಿಲ್ಲದೇ, ಸೊಸೆ ಶ್ರಾವಣಿ ಉಂಗುರ ಬಿಡಿಸಿ ಕೊಡಲು ಆಗದೇ ಪದ್ಮನಾಭ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ನ್ಯಾಯವಾಗಿ ದುಡಿದ ದುಡ್ಡು ಎಲ್ಲಿಗೂ ಹೋಗುವುದಿಲ್ಲ ಎನ್ನುವ ಭರವಸೆಯಲ್ಲಿ ಮತ್ತೆ ಆಟೊ ಓಡಿಸಲು ಹೋಗುವ ಅವರ ಕಣ್ಣಿಗೆ ವಿಜಯಾಂಬಿಕಾ, ಸಿರಿಗೆರೆ, ಮದನ್‌ ಒಟ್ಟಿಗೆ ಒಂದೆಡೆ ಸೇರಿ ಏನೋ ಪ್ಲಾನ್ ಮಾಡುತ್ತಿರುವುದು ಕಾಣಿಸುತ್ತದೆ.

ವೀರು ಮಾನ ಕಳೆಯಲು ಕೇಡಿಗಳ ಮಾಸ್ಟರ್ ಪ್ಲಾನ್

ವೀರು ಮೇಲೆ ಹೇಗಾದರೂ ಜನ ನಂಬಿಕೆ ಕಳೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ವೀರು ತಲೆಗೆ ಕೊಲೆ ಅಪವಾದ ಕಟ್ಟುವ ಪ್ಲಾನ್ ಮಾಡುತ್ತಾರೆ ವಿಜಯಾಂಬಿಕಾ ಹಾಗೂ ಸಿರೆಗೆರೆ ಶ್ರೀನಿವಾಸ. ಮದನ್‌ ಪ್ಲಾನ್ ಬಗ್ಗೆ ಕೇಳಿದಾಗ ಸಿರೆಗೆರೆ ‘ನಿಂಗೆ ಆ ಗಂಗಾಧರಯ್ಯ ಹೇಗೆ ಸತ್ತಿದ್ದು ಗೊತ್ತಾ‘ ಎಂದು ಕೇಳ್ತಾರೆ. ಅದಕ್ಕೆ ಮದನ್‌ ‘ಅವರೇನೋ ಕಾಯಿಲೆ ಬಂದು ಸತ್ತಿದ್ದು ಅಲ್ವಾ?‘ ಎಂದು ಮರು ಪ್ರಶ್ನೆ ಮಾಡುತ್ತಾನೆ. ಆಗ ಸಿರೆಗೆರೆ ‘ಅವರು ಸತ್ತಿದ್ದು ಕಾಯಿಲೆಯಿಂದಲ್ಲ, ಅಧಿಕಾರದ ಆಸೆಗೆ ವೀರುನೇ ಅವನನ್ನು ಕೊಲೆ ಮಾಡಿದ್ದು‘ ಎಂದು ಹೇಳುತ್ತಾನೆ. ಅದನ್ನು ಕೇಳಿ ಮದನ್ ಶಾಕ್ ಆಗ್ತಾನೆ. ದೇವರು ಅಂತಾನೇ ಕರೆಯುವ ವೀರು ಗಂಗಾಧರಯ್ಯನವರನ್ನು ಹೇಗೆ ಕೊಲೆ ಮಾಡಲು ಸಾಧ್ಯ, ಹೀಗೆ ಹೇಳಿದ್ರೆ ನಂಬುವವರು ಯಾರು ಎಂದು ಕೇಳ್ತಾನೆ. ಅದಕ್ಕೆ ವಿಜಯಾಂಬಿಕಾ ‘ಇದು ಸೋಷಿಯಲ್ ಮೀಡಿಯಾ ಕಾಲ, ಸೋಷಿಯಲ್ ಮೀಡಿಯಾದಲ್ಲಿ ಏನೇ ಸುಳ್ಳು ಸುದ್ದಿ ಬಂದ್ರು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತೆ, ಅದನ್ನ ಜನ ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ತಾರೆ‘ ಅಂತ ಮದನ್‌ಗೆ ಸದ್ಯದ ಸೋಷಿಯಲ್‌ ಮಿಡಿಯಾ ಪರಿಸ್ಥಿತಿ ಹಾಗೂ ಅದರಿಂದ ತಮಗೇನು ಲಾಭ ಎನ್ನುವುದನ್ನು ವಿವರಿಸ್ತಾಳೆ. ಅಷ್ಟೊತ್ತಿಗೆ ಅವರು ಫಿಕ್ಸ್ ಮಾಡಿರುವ ಯ್ಯೂಟೂಬರ್‌ಗಳು ಇವರು ಇರುವಲ್ಲಿಗೆ ಬರ್ತಾರೆ. ಅವರಿಗೆ ಪ್ಲಾನ್ ಎಲ್ಲಾ ಹೇಳಿ, ಎಲ್ಲವೂ ಸರಿಯಾಗಿ ಎಕ್ಸಿಕ್ಯೂಟ್ ಆಗಬೇಕು ಎಂದು ಹೇಳಿ ಕಳುಹಿಸುತ್ತಾರೆ. ಗಂಗಾಧರ ಮೂರ್ತಿಗಳ ಬಗ್ಗೆ ಕೇಳಿದಾಗ ವೀರು ಕೋಪಗೊಂಡು ಯೂಟ್ಯೂಬರ್‌ಗಳಿಗೆ ಹೊಡೆಯುತ್ತಾನೆ ಎಂಬುದನ್ನು ಅರಿತ ವಿಜಯಾಂಬಿಕಾ ಅದನ್ನು ಸೆರೆ ಹಿಡಿದು ಮಾಧ್ಯಮಗಳಿಗೆ ವಿಡಿಯೊ ಫುಟೇಜ್ ಕೊಡಲು ಇನ್ನೊಬ್ಬ ವಿಡಿಯೊಗ್ರಾಫರ್ ಅನ್ನು ಕೂಡ ಆಯ್ಕೆ ಮಾಡಿರುತ್ತಾಳೆ. ಈ ಬಾರಿ ತಮ್ಮ ಪ್ಲಾನ್ ಯಾವುದೇ ಕಾರಣಕ್ಕೂ ಫೈಲ್ ಆಗಬಾರದು ಅಂತ ಎಲ್ಲವನ್ನೂ ನೀಟಾಗಿ ಪ್ಲಾನ್ ಮಾಡಿ ಇರ್ತಾರೆ.

ವೀರು ಮೇಲೆ ಅಪವಾದ, ಸುಬ್ಬು ಮೇಲೆ ಅನುಮಾನ

ಪ್ಲಾನ್ ಪ್ರಕಾರ ವೀರು ಮನೆ ಮುಂದೆ ಬರ್ತಾರೆ ಯುಟ್ಯೂಬರ್‌ಗಳು. ಅವರನ್ನು ಗೇಟ್‌ನಲ್ಲೇ ಸುಬ್ಬು ತಡೆಯುತ್ತಿದ್ದರೂ ಕಾರ್ ಬಳಿಗೆ ಬರುವ ವೀರೇಂದ್ರ, ಸುರೇಂದ್ರ ಅವರನ್ನು ಒಳಗೆ ಬರುವಂತೆ ಹೇಳುತ್ತಾರೆ. ವೀರು ಬಳಿ ನಾವು ಯುಟ್ಯೂಬರ್‌ಗಳು ನಮಗೆ ನಿಮ್ಮ ಇಂಟರ್‌ವ್ಯೂ ಬೇಕು ಎಂದು ಹೇಳುವ ಅವರು ಆರಂಭದಲ್ಲಿ ಹೊಸ ಯೋಜನೆಗಳ ಬಗ್ಗೆ ಕೇಳುತ್ತಾರೆ. ಅದು ಮುಗಿದ ತಕ್ಷಣ ವೀರು ಹೊರಡಲು ಸಿದ್ಧವಾಗುತ್ತಾನೆ. ಆಗ ಅವರು ಇನ್ನೊಂದು ಮುಖ್ಯವಾದ ಪ್ರಶ್ನೆ ಇದೆ ಸರ್ ಅದಕ್ಕೆ ಉತ್ತರ ಕೊಡಿ ಎಂದು ಹೇಳುತ್ತಾರೆ. ಏನದು ಎಂದು ಕೇಳಿದಾಗ ‘ನೀವು ಅಧಿಕಾರದ ಆಸೆಗೆ ನಿಮ್ಮ ಮಾವ ಗಂಗಾಧರಯ್ಯ ಅವರನ್ನು ಕೊಲೆ ಮಾಡಿದ್ದೀರಾ ಅಂತ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ, ಅದು ನಿಜವೇ?‘ ಎಂದು ಯೂಟ್ಯೂಬರ್‌ಗಳು ಕೇಳುತ್ತಾರೆ. ಅದರಿಂದ ಸಿಟ್ಟುಗೊಳ್ಳುವ ವೀರು ಅವರ ಮೇಲೆ ಹೊಡೆಯಲು ಹೋಗುತ್ತಾನೆ. ಈ ಎಲ್ಲವನ್ನೂ ವಿಜಯಾಂಬಿಕಾ ಮೊದಲೇ ಫಿಕ್ಸ್ ಮಾಡಿದ್ದ ವಿಡಿಯೊಗ್ರಾಫರ್ ಶೂಟ್ ಮಾಡುತ್ತಾನೆ. ಈ ನಡುವೆ ಸುಬ್ಬು ‘ಯಜಮಾನ್ರೆ ಮೀಡಿಯಾದವರು, ಸುಮ್ಮನಿರಿ‘ ಅಂದ್ರು ಕೇಳದೇ ಅವರಿಗೆ ಹೊಡೆಯಲು ಹೋಗುತ್ತಾನೆ. ಕೊನೆಗೆ ಸುರೇಂದ್ರ ಮಧ್ಯೆ ಪ್ರವೇಶಿಸಿ ವೀರುವನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾನೆ. ಗಲಾಟೆ ನೋಡಿ ಲಲಿತಾದೇವಿ ಹೊರ ಬರುವಷ್ಟರಲ್ಲಿ ಎಲ್ಲವೂ ಪರಿಸ್ಥಿತಿ ತಣ್ಣಗಾಗಿರುತ್ತೆ. ಏನು ನಡೆಯಿತು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಇತ್ತ ವೀರು ತಮ್ಮಾ ಸುರೇಂದ್ರ ಜೊತೆ ಕಾರ್‌ನಲ್ಲಿ ಹೋಗುವಾಗ ‘ಹೀಗೆಲ್ಲಾ ಯಾಕಾಯ್ತು, ಅವರೆಲ್ಲಾ ಯಾರು, ನನ್ನ ಮೇಲೆ ಅವರಿಗೇಕೆ ದ್ವೇಷ, ಇದನ್ನೆಲ್ಲಾ ಯಾರು ಮಾಡಿಸುತ್ತಿರಬಹುದು‘ ಎಂದು ಬೇಸರದಲ್ಲಿ ಕೇಳುವಾಗ ಸುರೇಂದ್ರ ‘ನಂಗ್ಯಾಕೋ ಇದೆಲ್ಲಾ ಆ ಸುಬ್ಬುನೇ ಮಾಡಿಸಿದ್ದು ಅನ್ನಿಸುತ್ತೆ, ಎಲ್ಲರ ಎದುರು ಶ್ರಾವಣಿಗೆ ತಾಳಿ ಕಟ್ಟಿ ನಮ್ಮ ಮನೆಯ ಮಾರ್ಯಾದೆ ತೆಗೆದ, ಈಗ ನಿಮ್ಮ ಮೇಲೆ ಅಪವಾದ ಬರುವಂತೆ ಮಾಡುತ್ತಿರಬೇಕು‘ ಎಂದು ಸುಬ್ಬು ಮೇಲೆ ಇನ್ನಷ್ಟು ದ್ವೇಷ ಬರುವಂತೆ ಮಾತನಾಡುತ್ತಾನೆ. ವೀರೇಂದ್ರ ಕೂಡ ಈ ಬಗ್ಗೆ ಯೋಚಿಸುತ್ತಾರೆ. ಅಷ್ಟೊತ್ತಿಗೆ ಮನೆಯಲ್ಲಿ ಪಿಂಕಿ ಹಾಗೂ ವಂದನಾ ಟಿವಿಯಲ್ಲಿ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ನೋಡಿ ಶಾಕ್ ಆಗ್ತಾರೆ.

ವೀರು ಮೇಲೆ ಬಂದಿರುವ ಅಪವಾದವನ್ನು ಜನರು ನಂಬ್ತಾರಾ, ಇದರಿಂದ ವೀರು ಅಧಿಕಾರ ಕಳೆದುಕೊಳ್ಳುವಂತೆ ಆಗುತ್ತಾ, ಸುರೇಂದ್ರ ಯಾಕೆ ಸುಬ್ಬು ಮೇಲೆ ಅಪವಾದ ಬರುವಂತೆ ಮಾತನಾಡಿದ್ರು, ಸುರೇಂದ್ರ ಕೂಡ ವಿಜಯಾಂಬಿಕಾ ಪರನಾ, ಈ ಎಲ್ಲ ಪರಿಸ್ಥಿತಿಯನ್ನು ಹೇಗೆ ಎದುರಿಸ್ತಾನೆ ಸುಬ್ಬು, ಲಲಿತಾದೇವಿ ಏನು ಮಾಡಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

 

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner