ರಾಜೀನಾಮೆ ಕೊಡುವ ಸಂದಿಗ್ಧದಲ್ಲಿ ವೀರು, ಮಿನಿಸ್ಟರ್ ಆಗುವ ಕನಸು ಕಾಣುತ್ತಿರುವ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ರಾಜೀನಾಮೆ ಕೊಡುವ ಸಂದಿಗ್ಧದಲ್ಲಿ ವೀರು, ಮಿನಿಸ್ಟರ್ ಆಗುವ ಕನಸು ಕಾಣುತ್ತಿರುವ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ರಾಜೀನಾಮೆ ಕೊಡುವ ಸಂದಿಗ್ಧದಲ್ಲಿ ವೀರು, ಮಿನಿಸ್ಟರ್ ಆಗುವ ಕನಸು ಕಾಣುತ್ತಿರುವ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ತಮ್ಮ ಕ್ರಿಮಿನಲ್ ಪ್ಲಾನ್ ಸಕ್ಸಸ್‌ ಆಗಿದ್ದಕ್ಕೆ ವಿಜಯಾಂಬಿಕಾ, ಮದನ್, ಶ್ರೀನಿವಾಸ ಸಿರಿಗೆರೆ ಫುಲ್ ಖುಷ್‌. ಮಿನಿಸ್ಟರ್ ವೀರೇಂದ್ರ ರಾಜಿನಾಮೆಗೆ ಆಗ್ರಹ. ಸುಬ್ಬು ಮೇಲೆ ಮತ್ತೆ ಮತ್ತೆ ಆರೋಪ ಮಾಡುತ್ತಿರುವ ಸುರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 11ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 11ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 11ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 11ರ ಸಂಚಿಕೆಯಲ್ಲಿ ಮಾಧ್ಯಮದಲ್ಲಿ ವೀರು ಬಗ್ಗೆ ಸುದ್ದಿ ಹರಡುತ್ತಿರುವುದು ಕೇಳಿ ಖುಷಿ ಪಡುತ್ತಿದ್ದಾರೆ ವಿಜಯಾಂಬಿಕಾ ಮದನ್‌. ಸಿರೆಗೆರೆ ಕಾಲ್ ಮಾಡಿ ಮದನ್‌ ಮಾಡಿರುವ ಕೆಲಸ ಶಹಭಾಸ್ ಹೇಳ್ತಾರೆ. ಈ ಘಟನೆಯಿಂದಾಗಿ ವೀರು ರಾಜೀನಾಮೆ ಕೊಡುವುದು ಪಕ್ಕಾ, ಇದರಿಂದ ತಾನೇ ಮುಂದಿನ ಸಿಎಂ ಎಂದು ಬೀಗುತ್ತಿದ್ದಾನೆ ಸಿರಿಗೆರೆ ಶ್ರೀನಿವಾಸ. ಇತ್ತ ವಿಜಯಾಂಬಿಕಾ ಸಿರಿಗೆರೆ ಸಿಎಂ ಆದ್ರೆ ತಾನು ರಾಜ್ಯ ಸಚಿವೆ ಆಗ್ತೀನಿ ಎಂದು ಆಸೆ ಪಡುತ್ತಿದ್ದರೆ, ತಾನು ಮಿನಿಸ್ಟರ್ ಮಗ ಆಗ್ತೀನಿ ಅಂತ ಕನಸು ಕಾಣ್ತಿದ್ದಾನೆ ಮದನ್‌. ಈ ಹೊತ್ತಿಗೆ ಸಿರಿಗೆರೆ ಮೇಲೆ ಮದನ್‌ಗೆ ಕೊಂಚ ಅನುಮಾನ ಮೂಡುತ್ತದೆ. ಎಲ್ಲಾದ್ರೂ ಅವರೇ ನಮಗೆ ಮೋಸ ಮಾಡಿದ್ರೆ ಏನ್ ಮಾಡೋದು ಅಂತ ತಾಯಿ ಬಳಿ ಕೇಳ್ತಾನೆ. ಆಗ ವಿಜಯಾಂಬಿಕಾ ‘ನಾನು ತಮ್ಮನನ್ನೇ ಬಿಟ್ಟಿಲ್ಲ, ಇನ್ನು ಅವರು ಯಾವ ಲೆಕ್ಕ‘ ಎಂದು ಹೇಳಿ ಮಗನನ್ನು ಸಮಾಧಾನ ಮಾಡುತ್ತಾಳೆ.

ಲಲಿತಾದೇವಿಯಿಂದ ವಿಷಯ ಮುಚ್ಚಿಡುವ ಸುಬ್ಬು, ವಂದನಾ

ಟಿವಿಯಲ್ಲಿ ಬರುತ್ತಿರುವ ಸುದ್ದಿ ನೋಡಿ ದಂಗಾಗಿ ನಿಂತಿರುತ್ತಾರೆ ವಂದನಾ, ಸುಬ್ಬು ಹಾಗೂ ಪಿಂಕಿ. ಅಷ್ಟೊತ್ತಿಗೆ ವಂದನಾಳನ್ನು ಹುಡುಕಿಕೊಂಡು ಲಲಿತಾದೇವಿ ಮೇಲಿಂದ ಕೆಳಗಿಳಿದು ಬರುತ್ತಾರೆ. ಅವರಿಗೆ ಈ ವಿಷಯ ತಿಳಿಯಬಾರದು ಎಂದುಕೊಂಡು ಸುಬ್ಬು ಟಿವಿ ಮ್ಯೂಟ್ ಮಾಡಲು ಹೇಳುತ್ತಾನೆ. ಅವರು ಬರುವ ಹೊತ್ತಿಗೆ ಟಿವಿ ಆಫ್ ಮಾಡಿ ಬಿಡುತ್ತಾನೆ. ಲಲಿತಾದೇವಿ ಬಂದವರೇ ‘ವಂದನಾ ನನ್ನ ಬಿಪಿ ಮಾತ್ರೆ ಎಲ್ಲಿಟ್ಟಿದ್ದೇನೆ ಗೊತ್ತಾಗ್ತಿಲ್ಲ. ನನಗೆ ಯಾಕೋ ಒಂಥರಾ ತಳಮಳ ಆಗ್ತಿದೆ. ಮನೆಯಲ್ಲಿ ಯಾರಿಗೋ ಏನೋ ಆಗುವಾಗ ಆಗುತ್ತಲ್ಲ, ಆ ರೀತಿಯ ಭಯ ಕೂಡ ಕಾಡ್ತಿದೆ. ಯಾಕೆ ಅಂತ ಅರ್ಥ ಆಗ್ತಿಲ್ಲ‘ ಎಂದು ಹೇಳ್ತಾರೆ. ಸುಬ್ಬು ಅವರನ್ನು ಸಮಾಧಾನ ಮಾಡಿ, ನಿಮಗೆ ಏನೂ ಆಗಿರಲ್ಲ. ಮಾತ್ರೆ ತಗೊಂಡು ರೆಸ್ಟ್ ಮಾಡಿ ಎಲ್ಲ ಸರಿ ಹೋಗುತ್ತೆ ಅಂತಾನೆ‘. ಅವರು ತಮ್ಮ ಕೋಣೆಗೆ ಹೋದ ಮೇಲೆ ಯಾವುದೇ ಕಾರಣಕ್ಕೂ ಲಲಿತಾದೇವಿಗೆ ಈ ವಿಚಾರ ತಿಳಿಯಬಾರದು ಎಂದು ವಂದನಾಗೆ ಹೇಳುತ್ತಾನೆ. ಆಗ ಕಾಲ್ ಮಾಡಿದ ಅಪ್ಪನಿಗೆ ಸಮಾಧಾನ ಮಾಡುವ ಸುಬ್ಬು, ಶ್ರಾವಣಿಗೂ ಕೂಡ ಈ ವಿಚಾರ ಯಾವುದೇ ಕಾರಣಕ್ಕೂ ತಿಳಿಯದಂತೆ ನೋಡಿಕೊ ಎಂದು ಹೇಳಿ ವಿಚಾರ ತನ್ನ ಮನೆಯಲ್ಲೂ ತಿಳಿಯದಂತೆ ಮಾಡುತ್ತಾನೆ.

ಸುಬ್ಬು ಮೇಲೆ ಆರೋಪ, ವಿಜಯಾಂಬಿಕಾ–ಮದನ್‌ಗೆ ಅದೃಷ್ಟ

ಕಾರ್‌ನಲ್ಲಿ ಹೋಗುವ ಅಷ್ಟು ಹೊತ್ತು ಇದಕ್ಕೆಲ್ಲಾ ಕಾರಣ ಸುಬ್ಬುವೇ ಎಂದು ಸುರೇಂದ್ರ ಅಣ್ಣನ ಬಳಿ ಹೇಳುತ್ತಿರುತ್ತಾರೆ. ಇತ್ತ ವೀರೇಂದ್ರ ಮಾತ್ರ ಇದೆಲ್ಲಾ ಹೇಗಾಯ್ತು, ಯಾರು ಮಾಡಿರಬಹುದು ಎಂದು ಯೋಚಿಸಿ ಬೇಸರ ಮಾಡಿಕೊಳ್ಳುತ್ತಿರುತ್ತಾರೆ. ಅಷ್ಟೊತ್ತಿಗೆ ಟಿವಿಗಳಲ್ಲಿ ಸುದ್ದಿ ಬ್ರೇಕಿಂಗ್ ರೂಪದಲ್ಲಿ ಬರುತ್ತಿರುವುದು ತಿಳಿಯುತ್ತದೆ. ಕಾರ್ ಅನ್ನು ತಿರುಗಿಸಿಕೊಂಡು ಮನೆಗೆ ಹೋಗುವಂತೆ ಹೇಳುವ ವೀರೇಂದ್ರಗೆ ಮಾಧ್ಯಮದವರು ಅಡ್ಡಗಟ್ಟಿ ಪ್ರಶ್ನೆ ಕೇಳ್ತಾರೆ. ‘ನಿಮ್ಮ ರಾಜೀನಾಮೆಗೆ ಜನರು ಆಗ್ರಹಿಸ್ತಾ ಇದ್ದಾರೆ, ಇದಕ್ಕೆ ನೀವು ಏನು ಹೇಳ್ತೀರಾ‘ ಎಂದಾಗ ವೀರೇಂದ್ರ ‘ನಂಗೆ ನಾಳೆವರೆಗೆ ಟೈಮ್ ಕೊಡಿ, ನಾಳೆ ಪ್ರೆಸ್‌ಮೀಟ್ ಮಾಡಿ ತನ್ನ ನಿರ್ಧಾರ ತಿಳಿಸ್ತೀನಿ‘ ಎಂದು ಅಲ್ಲಿಂದ ಹೊರಟು ಬಿಡುತ್ತಾರೆ. ಇತ್ತ ಮನೆಗೆ ಬಂದು ಬೇಸರದಲ್ಲಿ ಕುಳತಿದ್ದ ತಮ್ಮನನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಾಳೆ ವಿಜಯಾಂಬಿಕಾ. ಆಗ ಸುರೇಂದ್ರ ಇಷ್ಟಕ್ಕೆಲ್ಲಾ ಆ ಸುಬ್ಬುವೇ ಕಾರಣ, ಅವನ ಕಾರಣದಿಂದ ಈ ಮನೆಯ ಮಾನ, ಮಾರ್ಯಾದೆ ಎಲ್ಲಾ ಹೋಯ್ತು ಎಂದು ಬಯ್ಯುತ್ತಿರುತ್ತಾನೆ. ಇದನ್ನು ಕೇಳಿದ ವಿಜಯಾಂಬಿಕಾ, ಮದನ್‌ ಬಯಸದೇ ಬಂದ ಭಾಗ್ಯ, ತಾವು ಮಾಡಿದ ಕ್ರಿಮಿನಲ್ ಕೆಲಸ ಸುಬ್ಬು ತಲೆಗೆ ಬಂದಿರುವುದನ್ನು ನೋಡಿ ಖುಷಿ ಪಡುತ್ತಾರೆ. ಅತ್ತ ಲಲಿತಾದೇವಿ ಜೊತೆಗಿರುವ ಸುಬ್ಬು ಅವರಿಗೆ ಎಲ್ಲಾ ಹೇಳಿರಬಹುದು ಎಂದು ಸುರೇಂದ್ರ ಅನುಮಾನ ವ್ಯಕ್ತಪಡಿಸುತ್ತಾನೆ. ಆಗ ವೀರೇಂದ್ರ ತಾನೇ ಅವರ ಬಳಿ ಹೋಗಿ ಎಲ್ಲಾ ವಿಷಯ ಹೇಳುವೆ ಎಂದು ಅವರ ಕೋಣೆಗೆ ಹೋಗುತ್ತಾನೆ.

ವೀರೇಂದ್ರ ಸರ್‌ದೇಸಾಯಿ ಮಿನಿಸ್ಟರ್ ಹುದ್ದೆಗೆ ರಾಜೀನಾಮೆ ಕೊಡ್ತಾರಾ, ವಿಜಯಾಂಬಿಕಾ, ಮದನ್ ಕಂಡ ಕನಸು ನನಸಾಗುತ್ತಾ, ಸುಬ್ಬು ಮೇಲೆ ಸುರೇಂದ್ರ ಮಾಡುತ್ತಿರುವ ಆರೋಪ ಸುಳ್ಳು ಎಂದು ವೀರೇಂದ್ರಗೆ ಅರ್ಥವಾಗುತ್ತಾ. ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner