ರಾಜೀನಾಮೆ ಕೊಡುವ ನಿರ್ಧಾರ ಮಾಡಿದ ಮಿನಿಸ್ಟರ್ ವೀರೇಂದ್ರ, ಪ್ರೆಸ್‌ಮೀಟ್‌ಗೆ ಹೊರಟ ಲಲಿತಾದೇವಿಗೆ ಸಾರಥಿಯಾದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ
ಮಿನಿಸ್ಟರ್ ಹುದ್ದೆಗೆ ರಾಜೀನಾಮೆ ಕೊಡುವ ದೃಢ ನಿರ್ಧಾರ ಮಾಡಿದ ವೀರೇಂದ್ರ. ಪ್ರೆಸ್‌ಮೀಟ್‌ಗೆ ಹೊರಟ ಲಲಿತಾದೇವಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ ವಿಜಯಾಂಬಿಕಾ, ಅಮ್ಮವರಿಗೆ ಸಾರಥಿಯಾದ್ರು ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್ 12ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 12ರ ಸಂಚಿಕೆಯಲ್ಲಿ ಸುಬ್ಬು ಬಗ್ಗೆ ಸುರೇಂದ್ರ ಹೇಳಿದ ಮಾತು ಕೇಳಿಸಿಕೊಂಡು ಅವನು ಲಲಿತಾದೇವಿಯವರ ಬಳಿ ಇರುವುದು ಗೊತ್ತಾಗಿ ತಾನೇ ಅತ್ತೆಯ ಬಳಿ ಇರುವ ವಿಚಾರ ಹೇಳುತ್ತೇನೆ ಎಂದು ಅವರ ಕೋಣೆ ಬಳಿಗೆ ಹೋಗುತ್ತಾರೆ ವೀರೇಂದ್ರ. ಆದರೆ ಅಲ್ಲಿ ಸುಬ್ಬು ಆಡಿದ ಮಾತು ಕೇಳಿದ ಅವರ ಅಭಿಪ್ರಾಯ ಬದಲಾಗುತ್ತದೆ. ಲಲಿತಾದೇವಿ ಕೋಣೆಯಲ್ಲಿ ಪಿಂಕಿ ಹಾಗೂ ಸುಬ್ಬು ಇರುತ್ತಾರೆ. ಹೀಗೆ ಮಾತನಾಡುತ್ತಿರುವಾಗ ಅವರು ಸುಬ್ಬು ಬಳಿ ಆಗ ಟಿವಿಯಲ್ಲಿ ನನ್ನ ಯಜಮಾನರು ಹಾಗೂ ವೀರು ಇರುವ ಫೋಟೊ ಹಾಕಿ ಏನೋ ಹೇಳ್ತಾ ಇದ್ರು ಅಲ್ವಾ, ಏನು ಹೇಳ್ತಾ ಇದ್ರು ನನಗೆ ಸರಿಯಾಗಿ ಕೇಳಿಸಿಲ್ಲ ಎಂದು ಸುಬ್ಬು ಬಳಿ ಕೇಳುತ್ತಾರೆ. ಅದನ್ನು ಕೇಳಿ ಸುಬ್ಬುಗೆ ಶಾಕ್ ಆದ್ರೂ ಕ್ಷಣಕಾಲದಲ್ಲಿ ಸಾವರಿಸಿಕೊಂಡು, ಅದು ಸಿರಿಗೆರೆ ಸಾಹೇಬರು ಬಂದು ಹೇಳಿದ್ರಲ್ಲಮ್ಮ ದೊಡ್ಡ ಯಜಮಾನರ ಬಗ್ಗೆ ಕಾರ್ಯಕ್ರಮ ಮಾಡಬೇಕು ಅಂತ, ಅದನ್ನೇ ಟಿವಿಯಲ್ಲಿ ತೋರಿಸ್ತಾ ಇದ್ರು. ಯಜಮಾನರಿಗೆ ದೊಡ್ಡ ಯಜಮಾನರ ಮೇಲೆ ಎಷ್ಟು ಪ್ರೀತಿ, ಗೌರವವಿದೆ ಅಂತೆಲ್ಲಾ ಹೇಳ್ತಾ ಇದ್ರು ಅಂತ ಮಾತು ಮರೆಸಿ ಅವರನ್ನು ಮಲಗಿಸುತ್ತಾನೆ. ಸುಬ್ಬು ಹಾಗೂ ಲಲಿತಾದೇವಿ ಆಡಿದ ಮಾತುಗಳು ಕೇಳಿ ವೀರೇಂದ್ರ ಅಭಿಪ್ರಾಯ ಬದಲಾಗುತ್ತದೆ.
ರಾಜೀನಾಮೆ ಕೊಡುವ ದೃಢನಿರ್ಧಾರ ಮಾಡಿದ ವೀರು
ಅತ್ತೆಯ ಕೋಣೆಯಿಂದ ಪುನಃ ಹಾಲ್‌ಗೆ ಬರುವ ವೀರೇಂದ್ರ ತಮ್ಮನ ಬಳಿ ‘ಸುಬ್ಬು ಯಾವ ವಿಚಾರವನ್ನೂ ಅತ್ತೆಯ ಬಳಿ ಹೇಳಿಲ್ಲ, ಸುರೇಂದ್ರ ಒಬ್ಬ ಮನುಷ್ಯ ಒಮ್ಮೆ ತಪ್ಪು ಮಾಡಿದ ಎನ್ನುವ ಕಾರಣಕ್ಕೆ ಪದೇ ಪದೇ ಅವನನ್ನು ಗುರಿ ಮಾಡುವುದು ತಪ್ಪು‘ ಎಂದು ಬುದ್ದಿವಾದ ಹೇಳುತ್ತಾರೆ. ಇತ್ತ ಮದನ್‌ಗೆ ಮಾವನಿಗೆ ಸುಬ್ಬು ಮೇಲೆ ಸಾಫ್ಟ್ ಕಾರ್ನರ್ ಬಂದಿರುವುದು ಸಿಟ್ಟು ತರಿಸುತ್ತದೆ. ಅದನ್ನು ತಾಯಿಯ ಬಳಿ ಹೇಳಿದ್ರೆ ಆಕೆ ನಮಗೆ ಈಗ ಬೇಕಿರುವುದು ಆ ವಿಚಾರವಲ್ಲ, ವೀರು ರಾಜೀನಾಮೆ ವಿಚಾರ ಎಂದು ಗದರುತ್ತಾಳೆ. ಅಲ್ಲದೇ ವೀರೇಂದ್ರ ಬಳಿ ‘ವೀರು ನೀನು ಸುಬ್ಬು ವಿಚಾರ ಬಿಡು, ಈ ರೀತಿ ಅಪವಾದ ಬಂದಿರುವ ಬಗ್ಗೆ ಮಾತನಾಡು, ನೀನೇನು ಮಾಡ್ಬೇಕು ಅಂದ್ಕೊಂಡಿದ್ದೀಯಾ ಹೇಳು‘ ಎಂದು ನಾಟಕದ ಮಾತನಾಡುತ್ತಾಳೆ. ಆಗ ವೀರೇಂದ್ರ ಹಿಂದೊಮ್ಮೆ ದೊಡ್ಡೆಜಮಾನರಿಗೂ ಈ ರೀತಿ ಪರಿಸ್ಥಿತಿ ಬಂದಿತ್ತು, ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿತ್ತು. ಆಗ ಅವರು ಮರು ಮಾತನಾಡದೇ ರಾಜೀನಾಮೆ ಕೊಟ್ಟಿದ್ದರು. ಅಲ್ಲದೇ ಕೆಲವೇ ದಿನಗಳಲ್ಲಿ ಇವರು ಯಾವುದೇ ಅಪರಾಧ ಮಾಡಿಲ್ಲ ಎಂಬುದು ಸಾಬೀತಾಗಿತ್ತು. ಈಗ ನಾನು ಕೂಡ ರಾಜೀನಾಮೆ ಕೊಡ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ಆದಷ್ಟು ಬೇಗ ಜನರಿಗೆ ಗೊತ್ತಾಗೇ ಆಗುತ್ತೆ‘ ಎಂದು ಹೇಳಿ ರಾಜೀನಾಮೆ ಕೊಡೋದು ಪಕ್ಕಾ ಅನ್ನೋ ರೀತಿ ಹೇಳಿ ಹೊರಟು ಬಿಡುತ್ತಾರೆ. ಇತ್ತ ವಿಜಯಾಂಬಿಕಾ ಗೆಲುವು ತನ್ನದೇ ಎಂದು ಅಟ್ಟಹಾಸ ಮರೆಯುತ್ತಾಳೆ.
ಪ್ರೆಸ್‌ಮೀಟ್‌ಗೆ ಹೊರಟ ಲಲಿತಾದೇವಿ ಕೊಲ್ಲಲು ಸ್ಕೆಚ್
ಬೆಳಗೆದ್ದು ಪೇಪರ್ ಹುಡುಕುವ ಲಲತಾದೇವಿಗೆ ಪೇಪರ್ ಕಾಣಿಸುವುದಿಲ್ಲ. ಪಿಂಕಿಯನ್ನು ಕರೆದು ಪೇಪರ್ ಕೇಳಿದ್ರೆ ಅವಳು ಬಂದಿಲ್ಲ ಅಂತ ಹೇಳ್ತಾಳೆ. ಅಷ್ಟೊತ್ತಿಗೆ ಅವರಿಗೆ ಮನೆ ಹೊರಗೆ ಬೋರ್ಡ್ ಹಿಡಿದು ಜನ ನಿಂತಿರುವುದು ಕಾಣಿಸುತ್ತದೆ. ಆದರೆ ದೂರದಲ್ಲಿರುವ ಕಾರಣ ಏನು ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಆಗ ಪಿಂಕಿ ಬಳಿ ಅದೇನು ಎಂದು ಕೇಳುತ್ತಾಳೆ. ಆಕೆ ಹೇಳಲು ತಡವರಿಸುತ್ತಿರುವಾಗಲೇ ಅಲ್ಲಿಗೆ ಬರುವ ವಂದನಾ ಅಮ್ಮ ಅದೇನೂ ಇಲ್ಲ, ಭಾವನಿಗೆ ಜೈಕಾರ ಹಾಕ್ತಾ ಇದಾರೆ ಅಂತ ಹೇಳ್ತಾಳೆ. ಆದರೂ ಲಲಿತಾದೇವಿಗೆ ಅನುಮಾನ ಬರುತ್ತದೆ. ಅವರು ವಂದನಾ ಕೈಯಿಂದ ಫೋನ್ ತೆಗೆದುಕೊಂಡು ಫೋಟೊ ತೆಗೆದು ಅದನ್ನು ಜೂಮ್ ಮಾಡಿ ನೋಡುತ್ತಾರೆ. ಆಗ ಅವರಿಗೆ ವೀರು ಜನ ಧಿಕ್ಕಾರ ಹಾಕುತ್ತಿರುವುದು ಗೊತ್ತಾಗುತ್ತದೆ. ವಂದನಾಗೆ ಜೋರು ಮಾಡಿ, ಇರುವ ವಿಚಾರ ತಿಳಿದುಕೊಳ್ಳುತ್ತಾರೆ ಲಲಿತಾದೇವಿ. ಅಲ್ಲದೇ ವೀರು ರಾಜೀನಾಮೆ ಕೊಡಲು ಪ್ರೆಸ್ ಮೀಟ್‌ಗೆ ಹೋಗಿರುವುದು ತಿಳಿದು ಈ ಕೂಡಲೇ ನಾನು ಅಲ್ಲಿಗೆ ಹೋಗಬೇಕು, ವೀರುವನ್ನು ತಡಿಬೇಕು ಎಂದು ಜೋರಾಗಿ ಮಾತನಾಡಬೇಡ ಮೆಟ್ಟಿಲಿಳಿದು ಹಾಲ್‌ಗೆ ಬರುತ್ತಾರೆ. ಆಕೆ ಆಡಿದ ಮಾತುಗಳನ್ನು ಕೇಳಿಸಿಕೊಂಡ ವಿಜಯಾಂಬಿಕಾಗೆ ಗಾಬರಿ ಶುರುವಾಗುತ್ತದೆ. ಆಕೆ ಕೂಡಲೇ ಮಗನಿಗೆ ಹೊರಗಡೆ ಗಲಾಟೆ ನಡೆಯುವ ಸಂಭವ ಇದೆ. ಈ ಗಲಾಟೆಯಲ್ಲಿ ಲಲಿತಾದೇವಿ ಪ್ರಾಣ ಹೋಗಿದೆ ಅಂತ ಸುದ್ದಿ ಆಗಬೇಕು ಎಂದು ಹೇಳುತ್ತಾರೆ. ಆಕೆ ಮಾತಿನಂತೆ ಮದನ್ ರೌಡಿಗಳಿಗೆ ಲಲಿತಾದೇವಿ ಫೋಟೊ ಕಳುಹಿಸಿ ಅವರನ್ನು ಕೊಲೆ ಮಾಡಲು ಸ್ಕೆಚ್ ನೀಡುತ್ತಾನೆ.
ಲಿಲಿತಾದೇವಿಗೆ ಸಾರಥಿಯಾಗಿ ಬಂದ ಪದ್ಮನಾಭ
ಅಳಿಯ ರಾಜೀನಾಮೆ ಕೊಡುವುದನ್ನು ತಡೆದು, ಅಳಿಯ ಮೇಲೆ ಬಂದ ಆರೋಪ ಸುಳ್ಳು ಎಂಬುದನ್ನು ಜನರೆದುರು ಸಾಬೀತು ಮಾಡಬೇಕು ಎಂದು ಪಣ ತೊಟ್ಟ ಲಲಿತಾದೇವಿ ನಡೆದುಕೊಂಡು ಪ್ರೆಸ್‌ಮೀಟ್ ನಡೆಯುವ ಜಾಗಕ್ಕೆ ಹೋಗುತ್ತಿರುತ್ತಾರೆ. ಅಷ್ಟೊತ್ತಿಗೆ ಪಾರ್ಕ್‌ವೊಂದರ ಬಳಿ ರೌಡಿಗಳು ಲಲಿತಾದೇವಿಯನ್ನು ನೋಡುತ್ತಾರೆ. ಅವರನ್ನು ಕೊಲಲ್ಲು ಹತ್ತಿರ ಹತ್ತಿರ ಬರುವಾಗಲೇ ಅವರಿಗೆ ಅಡ್ಡವಾಗಿ ಆಟೊವೊಂದು ಬರುತ್ತದೆ. ಆಟೊದಲ್ಲಿ ಪದ್ಮನಾಭ ಇರುತ್ತಾರೆ. ಅವರನ್ನು ನೋಡಿ ಲಲಿತಾದೇವಿ ಪದ್ಮನಾಭ ನೀನೇನೂ ಇಲ್ಲಿ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಪದ್ಮನಾಭ, ‘ಅಮ್ಮೋರೆ ನೀವು ಹೀಗೆ ಹೋಗ್ತಾ ಇದ್ದೀರಾ ಅಂತ ಸುಬ್ಬು ನಂಗೆ ಕಾಲ್ ಮಾಡಿ ಹೇಳಿದ. ಅವರಿಗೆ ವಂದನಮ್ಮ ಮೆಸೇಜ್ ಮಾಡಿ ಹೇಳಿದ್ರಂತೆ. ಹೋಗೋಣ ಬನ್ನಿ ಅಮ್ಮ ಎಂದು ಅವರನ್ನು ಆಟೊದಲ್ಲಿ ಹತ್ತಿಸಿಕೊಂಡು ಹೊರಟು ಬಿಡುತ್ತಾರೆ. ಇತ್ತ ರೌಡಿಗಳು ಅವರನ್ನು ಹಿಂಬಾಲಿಸುತ್ತಾರೆ.
ಪ್ರೆಸ್‌ಮೀಟ್ ಸ್ಥಳಕ್ಕೆ ಬರುವ ವೀರು ಪ್ರೆಸ್‌ಮೀಟ್‌ನಲ್ಲಿ ಗಂಗಾಧರಯ್ಯ ತನ್ನ ಪಾಲಿಗೆ ಎಷ್ಟು ಮುಖ್ಯ ಎನ್ನುವುದನ್ನು ಹೇಳುತ್ತಿರುತ್ತಾರೆ. ಅಲ್ಲದೇ ಲಲಿತಾದೇವಿ ಅಮ್ಮೋರು ನನ್ನ ಮಗ ಎಂದುಕೊಂಡಿದ್ದಾರೆ. ಅವರೊಬ್ಬರು ನನ್ನನ್ನು ನಂಬಿದ್ರೆ ಸಾಕು ಎಂದು ಭಾವುಕರಾಗಿ ಮಾತನಾಡುತ್ತಿರುತ್ತಾರೆ.
ಲಲಿತಾದೇವಿ ಹಾಗೂ ಪದ್ಮನಾಭ ಸರಿಯಾಗಿ ಸಮಯಕ್ಕೆ ಪ್ರೆಸ್ ಮೀಟ್ ನಡೆಯುವ ಜಾಗಕ್ಕೆ ತಲುಪಲು ಸಾಧ್ಯವಾಗುತ್ತಾ, ವೀರು ಮೇಲಿನ ಅಪವಾದ ಅಳಿಸಿ ಹಾಕಲು ಲಲಿತಾದೇವಿಗೆ ಸಾಧ್ಯವಾಗುತ್ತಾ, ರೌಡಿಗಳಿಂದ ಲಲಿತಾದೇವಿಗೆ ಏನಾದ್ರೂ ಅಪಾಯ ಆಗಬಹುದಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
