ತಲೆ ಕೆಳಗಾಯ್ತು ವಿಜಯಾಂಬಿಕಾ ಪ್ಲಾನ್‌, ಲಲಿತಾದೇವಿ–ಪದ್ಮನಾಭರ ದೆಸೆಯಿಂದ ಬಯಲಾಯ್ತು ಎಲ್ಲಾ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತಲೆ ಕೆಳಗಾಯ್ತು ವಿಜಯಾಂಬಿಕಾ ಪ್ಲಾನ್‌, ಲಲಿತಾದೇವಿ–ಪದ್ಮನಾಭರ ದೆಸೆಯಿಂದ ಬಯಲಾಯ್ತು ಎಲ್ಲಾ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ತಲೆ ಕೆಳಗಾಯ್ತು ವಿಜಯಾಂಬಿಕಾ ಪ್ಲಾನ್‌, ಲಲಿತಾದೇವಿ–ಪದ್ಮನಾಭರ ದೆಸೆಯಿಂದ ಬಯಲಾಯ್ತು ಎಲ್ಲಾ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ರೌಡಿಗಳ ಜೊತೆ ಫೈಟ್ ಮಾಡಿ ಲಲಿತಾದೇವಿಯವರನ್ನು ಕಾಪಾಡಿದ್ದು ಮಾತ್ರವಲ್ಲ, ಮೋಸ ಮಾಡಿದ ಯೂಟ್ಯೂಬರ್‌ಗಳನ್ನು ಹಿಡಿದು ತಂದು ವೀರೇಂದ್ರ ಮೇಲಿನ ಅಪವಾದ ಅಳಿಸಿ ಹಾಕಿದ್ರು ಪದ್ಮನಾಭ. ಅಪ್ಪನ ಬಗ್ಗೆ ತಿಳಿಯುವ ಹಂಬಲದಲ್ಲಿ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 13ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 13ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 13ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 12ರ ಸಂಚಿಕೆಯಲ್ಲಿ ಪ್ರೆಸ್‌ಮೀಟ್‌ಗೆ ಹೊರಟ ಲಲಿತಾದೇವಿಯವರನ್ನು ಆಟೊದಲ್ಲಿ ಹತ್ತಿಸಿಕೊಂಡು ಹೊರಟ ಪದ್ಮನಾಭರನ್ನ ರೌಡಿಗಳು ಹಿಂಬಾಲಿಸುತ್ತಾರೆ. ವೇಗವಾಗಿ ಆಟೊ ಓಡಿಸಿದ್ರು ಬಂದು ಓವರ್‌ ಟೇಕ್ ಮಾಡಿ, ಆಟೊಗೆ ಗಾಡಿ ಅಡ್ಡ ನಿಲ್ಲಿಸುತ್ತಾರೆ ರೌಡಿಗಳು. ಇತ್ತ ಮದನ್ ಹಾಗೂ ವಿಜಯಾಂಬಿಕಾ ರೌಡಿಗಳ ಜೊತೆ ಆಟೊದವನನ್ನು ಮುಗಿಸಿ ಎಂದು ರೌಡಿಗಳಿಗೆ ವಾರ್ನಿಂಗ್ ಕೊಟ್ಟಿರುತ್ತಾರೆ. ಆದರೆ ಅಲ್ಲಿ ನಡಿಯೋದೇ ಬೇರೆ. ಆಟೊದಿಂದ ರಾಡ್ ಒಂದನ್ನು ತೆಗೆಯುವ ಪದ್ಮನಾಭ ರೌಡಿಗಳ ಜೊತೆ ಫೈಟ್ ಮಾಡಿ, ಅವರು ಲಲಿತಾದೇವಿ ಹತ್ತಿರ ಕೂಡ ಬರದಂತೆ ನೋಡಿಕೊಳ್ಳುತ್ತಾರೆ, ಮಾತ್ರವಲ್ಲ ರಾಡ್‌ನಿಂದ ಹೊಡೆದು ರೌಡಿಗಳು ನೆಲ ಕಚ್ಚುವಂತೆ ಮಾಡುತ್ತಾರೆ. ಲಲಿತಾದೇವಿಯವರನ್ನು ಬೇರೆ ಆಟೊದಲ್ಲಿ ಕಳುಹಿಸುವ ಪದ್ಮನಾಭ ರೌಡಿಗಳಿಗೆ ಫೋನ್ ಮಾಡಿದ ಮದನ್, ವಿಜಯಾಂಬಿಕಾಗೆ ಕಡಕ್ ವಾರ್ನಿಂಗ್ ಕೊಡ್ತಾರೆ. ‘ಈ ಬಂಟ ಇರುವವರೆಗೂ ಲಲಿತಾದೇವಿಯವರ ಉಗುರು ಸೋಕಲು ಯಾರಿಂದಲೂ ಸಾಧ್ಯವಿಲ್ಲ, ನಾನು ಇರೋವರೆಗೆ ದೊಡ್ಡ ಮನೆಯವರಿಗೆ ಯಾವುದೇ ಅಪಾಯವಾಗಲೂ ಸಾಧ್ಯವಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿ ಅಲ್ಲಿಂದ ಹೊರಡುತ್ತಾರೆ.

ಪ್ರೆಸ್‌ಮೀಟ್‌ನಲ್ಲಿ ಸತ್ಯ ಬಹಿರಂಗ

ಪ್ರೆಸ್‌ಮೀಟ್‌ನಲ್ಲಿ ಮಾವ ಗಂಗಾಧರಯ್ಯ ಹಾಗೂ ಅವರ ಆದರ್ಶಗಳ ಬಗ್ಗೆ ಮಾತನಾಡುವ ವೀರು, ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳುತ್ತಾರೆ. ಅಷ್ಟೊತ್ತಿಗೆ ಸರಿಯಾಗಿ ಅಲ್ಲಿಗೆ ಬರುವ ಲಲಿತಾದೇವಿ ‘ವೀರು, ನೀನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡ. ರಾಜೀನಾಮೆ ಕೊಡುವ ತಪ್ಪು ನೀನೇನು ಮಾಡಿಲ್ಲ‘ ಎಂದು ಹೇಳುತ್ತಾರೆ. ಅವರನ್ನು ಲೈವ್‌ನಲ್ಲಿ ನೋಡಿ ಮಾಧ್ಯಮದವರು ಸೇರಿ ನೆರೆದವರೆಲ್ಲಾ ಶಾಕ್ ಆಗ್ತಾರೆ. ಇತ್ತ ಟಿವಿಯಲ್ಲಿ ಲಲಿತಾದೇವಿಯವರನ್ನು ನೋಡಿದ ವಿಜಯಾಂಬಿಕಾ, ಮದನ್ ತತ್ತರಿಸಿ ಹೋಗುತ್ತಾರೆ. ಪ್ರೆಸ್‌ಮೀಟ್‌ಗೆ ಬಂದ ಲಲಿತಾದೇವಿ ಅಳಿಯ ತನ್ನ ಗಂಡನನ್ನು ಕೊಲ್ಲಲ್ಲು ಸಾಧ್ಯವೇ ಇಲ್ಲ. ಅವನು ತನ್ನ ಗಂಡನನ್ನು ದೇವರ ರೂಪದಲ್ಲಿ ಪೂಜಿಸುತ್ತಿದ್ದ. ಅಂದು ಕೂಡ ಇಂದು ಕೂಡ ಹಾಗೆ ಇದ್ದಾನೆ, ಅವನು ಯಾವುದೇ ತಪ್ಪು ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿಯ ಅಪವಾದ ನನ್ನ ಅಳಿಯನ ತಲೆ ಮೇಲೆ ಬರುವಂತೆ ಮಾಡಿದ್ದಾರೆ ಎಂದು ಹೇಳಿ ಅಳಿಯನ ಪರ ಮಾತನಾಡುತ್ತಾರೆ. ಆದರೆ ಮಿಡಿಯಾದವರು ‘ನಿಮ್ಮ ಅಳಿಯ ಕೊಂದಿಲ್ಲ ಅನ್ನೋದಕ್ಕೆ ಸಾಕ್ಷಿ ಏನಿದೆ‘ ಎಂದು ಪ್ರಶ್ನೆ ಮಾಡುತ್ತಾರೆ.

ಅಷ್ಟೊತ್ತಿಗೆ ಮಿನಿಸ್ಟರ್‌ ವೀರೇಂದ್ರ ಮನೆಗೆ ಬಂದು ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ, ವೀರು ಮೇಲೆ ಅಪಪ್ರಚಾರ ಮಾಡಿದ್ದ ಯೂಟ್ಯೂಬರ್‌ಗಳನ್ನು ಎಳೆದು ತರುತ್ತಾರೆ ಪದ್ಮನಾಭ. ಅವರು ಎಲ್ಲಿ ತಮ್ಮ ಹೆಸರು ಬಾಯಿ ಬಿಡುತ್ತಾರೋ ಎಂದು ಭಯ ಪಡುತ್ತಾರೆ ಮದನ್‌–ವಿಜಯಾಂಬಿಕಾ. ಆದರೆ ಆ ಯಟ್ಯೂಬರ್‌ಗಳು ವೀವ್ಸ್‌ಗೋಸ್ಕರ ತಾವು ಸುಳ್ಳು ಸುದ್ದಿ ಹಬ್ಬಿಸಿದ್ದು, ವೀರೇಂದ್ರ ಸರ್‌ದೇಸಾಯಿ ಅವರದ್ದು ಯಾವುದೇ ತಪ್ಪಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಇದರಿಂದ ವೀರೇಂದ್ರ ಮೇಲಿನ ಆರೋಪ ಸುಳ್ಳು ಎಂಬುದು ಎಲ್ಲರ ಎದುರು ಬಯಲಾಗುತ್ತದೆ. ವೀರು ಬಳಿ ಕ್ಷಮೆ ಕೇಳುವ ಮಾಧ್ಯಮದವರು, ಜನರು ಎಲ್ಲರೂ ಹೊರಟು ಹೋಗುತ್ತಾರೆ. ಇತ್ತ ವೀರೇಂದ್ರ ಪದ್ಮನಾಭ ಅವರಿಗೆ ಧನ್ಯವಾದ ಹೇಳಿ, ಕೈಹಿಡಿದು ಖುಷಿ ವ್ಯಕ್ತಪಡಿಸುತ್ತಾರೆ. ಆದರೆ ಸುಬ್ಬುಗೆ ಮಾತ್ರ ತನ್ನ ಅಪ್ಪ ಇಷ್ಟೆಲ್ಲಾ ಮಾಡಿದ್ದು ಅಚ್ಚರಿ ತಂದಿರುತ್ತದೆ. ‘ಏನಪ್ಪಾ ಇದೆಲ್ಲಾ, ನೀನು ಹೀಗೆಲ್ಲಾ ಮಾಡೋಕೆ ಹೇಗೆ ಸಾಧ್ಯ‘ ಎಂದು ಅಚ್ಚರಿಯಲ್ಲಿ ಕೇಳುತ್ತಾನೆ. ಅದಕ್ಕೆ ಪದ್ಮನಾಭ ಮಗನೇ ನೀನು ನನ್ನ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಇದೆ. ಸಮಯ ಕಳೆದಂತೆ ನಿಂಗೆ ಎಲ್ಲಾ ಗೊತ್ತಾಗುತ್ತೆ, ಈಗ ಹೋಗೋಣ ಬಾ ಎಂದು ಕರೆದುಕೊಂಡು ಹೊರಡುತ್ತಾರೆ.

ಶ್ರಾವಣಿಯನ್ನು ಮನೆಗೆ ಕರೆಸುವ ನಿರ್ಧಾರ ಮಾಡಿದ ವೀರೇಂದ್ರ

ಶ್ರಾವಣಿ ಹೆಸರಿಗೆ ಅವಳ ತಾತ ಬರೆದಿರುವ ವಿಲ್ ಅನ್ನು ಅಳಿಯನ ಎದುರು ಓದಿಸಿದ್ದ ಲಲಿತಾದೇವಿ, ನೀನೇ ಮುಂದೆ ನಿಂತು ಇದನ್ನು ಶ್ರಾವಣಿ ಹಾಗೂ ಸುಬ್ಬುಗೆ ಒಪ್ಪಿಸಬೇಕು ಎಂದು ಹೇಳಿರುತ್ತಾರೆ. ಆದರೆ ಸುಬ್ಬು ಹಾಗೂ ಶ್ರಾವಣಿ ಮುಖ ನೋಡುವುದನ್ನು ಕೂಡ ಸಹಿಸದ ವೀರೇಂದ್ರ ಇದನ್ನೆಲ್ಲಾ ಹೇಗೆ ಮಾಡುವುದು ಯೋಚಿಸುತ್ತಾರೆ. ಮಾತ್ರವಲ್ಲ, ಆಗ ಅಲ್ಲಿಗೆ ಬಂದ ಸುರೇಂದ್ರನ ಬಳಿ ಈ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ, ನನಗೆ ಇಷ್ಟವಿಲ್ಲದೇ ಇದ್ದರೂ ಅತ್ತೆಯವರು ಹೇಳಿದ್ದಾರೆ ಎಂದ ಮೇಲೆ ಮುಗಿಯಿತು. ಅದನ್ನು ಮಾಡಲೇಬೇಕಿದೆ. ನಾನು ಮಾಡುತ್ತೇನೆ‘ ಎಂದು ಮಗಳು–ಅಳಿಯನನ್ನು ಮನೆಗೆ ಕರೆಸುವ ನಿರ್ಧಾರ ಮಾಡುತ್ತಾರೆ. ಅತ್ತ ಸುಬ್ಬು ಮನೆಯಲ್ಲಿ ಸುಬ್ಬು ಹಾಗೂ ವಿಶಾಲಾಕ್ಷಿಯನ್ನು ಒಂದು ಮಾಡುವ ಪ್ರಯತ್ನದಲ್ಲಿ ತೊಡಗಿರುತ್ತಾರೆ ಶ್ರಾವಣಿ ಹಾಗೂ ಪದ್ಮನಾಭ.

ವೀರೇಂದ್ರ ಅಂದುಕೊಂಡಂತೆ ಶ್ರಾವಣಿ ಹಾಗೂ ಸುಬ್ಬುವನ್ನು ಮನೆಗೆ ಕರೆದುಕೊಂಡು ಆಸ್ತಿ ಅವಳ ಕೈ ತಲುಪುವಂತೆ ಮಾಡ್ತಾರಾ ವೀರೇಂದ್ರ, ಪ್ಲಾನ್ ಪ್ಲಾಪ್ ಆಗಿರುವುದಕ್ಕೆ ಸುಮ್ಮನಿರ್ತಾರಾ ವಿಜಯಾಂಬಿಕಾ ಅಂಡ್ ಗ್ಯಾಂಗ್, ಸುಬ್ಬು–ವಿಶಾಲಾಕ್ಷಿ ಒಂದಾಗ್ತಾರಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner