ಮದುವೆ ಬಗ್ಗೆ ಎಲ್ಲಾ ಸತ್ಯವನ್ನೂ ತಾಯಿಗೆ ಹೇಳಿದ ಸುಬ್ಬು, ಅತಂತ್ರವಾಗಲಿದ್ಯಾ ಶ್ರಾವಣಿ ಬದುಕು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮದುವೆ ಬಗ್ಗೆ ಎಲ್ಲಾ ಸತ್ಯವನ್ನೂ ತಾಯಿಗೆ ಹೇಳಿದ ಸುಬ್ಬು, ಅತಂತ್ರವಾಗಲಿದ್ಯಾ ಶ್ರಾವಣಿ ಬದುಕು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮದುವೆ ಬಗ್ಗೆ ಎಲ್ಲಾ ಸತ್ಯವನ್ನೂ ತಾಯಿಗೆ ಹೇಳಿದ ಸುಬ್ಬು, ಅತಂತ್ರವಾಗಲಿದ್ಯಾ ಶ್ರಾವಣಿ ಬದುಕು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಮೇಡಂ ಬಗ್ಗೆ ನನಗೆ ಯಾವುದೇ ಭಾವನೆ ಇಲ್ಲ, ಅವರನ್ನು ನಾನು ಮದುವೆಯಾಗೇ ಇಲ್ಲ ಎಂದು ತಾಯಿ ಬಳಿ ಹೇಳಿದ ಸುಬ್ಬು. ಶ್ರಾವಣಿಯನ್ನು ಸೊಸೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ವಿಶಾಲಾಕ್ಷಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 21ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 21ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 21ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 21ರ ಸಂಚಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ನದಿ ದಡದಲ್ಲಿ ಒಂದಾದ ತಾಯಿ–ಮಗ ಮಾತನಾಡುತ್ತಿರುತ್ತಾರೆ. ಆಗ ವಿಶಾಲಾಕ್ಷಿ ಮದುವೆ ವಿಚಾರವನ್ನು ತನ್ನ ಬಳಿ ಏಕೆ ಹೇಳಿಲ್ಲ ಎಂದು ಅಳುತ್ತಾ ಮಗನನ್ನು ಪ್ರಶ್ನಿಸುತ್ತಾರೆ. ಆಗ ಸುಬ್ಬು ‘ತಾನು ಮದುವೆ ಆಗುತ್ತಿರುವ ವಿಚಾರ ನನಗೂ ಗೊತ್ತಿರಲಿಲ್ಲ. ನಾನು ಶ್ರಾವಣಿ ಮೇಡಂ ಅನ್ನು ಪ್ರೀತಿಸಿಯೂ ಇಲ್ಲ. ನನಗೆ ದೊಡ್ಡ ಮನೆಯವರು ಎಂದರೆ ಅಭಿಮಾನ. ನಾನು ಅವರ ಸೇವೆಗೆ ಇರುವುದು ಎಂಬ ಭಾವನೆ ಇತ್ತು. ಯಜಮಾನರನ್ನು ನೋಡಿದ ಹಾಗೆ ಶ್ರಾವಣಿ ಮೇಡಂ ಅನ್ನು ಕೂಡ ನೋಡುತ್ತಿದ್ದೆ, ಆದರೆ ಇದೆಲ್ಲಾ ಯಾವ ಕಾರಣಕ್ಕೆ ಆಯ್ತು ಎಂಬುದು ಮಾತ್ರ ನನಗೆ ಅರ್ಥವಾಗ್ತಿಲ್ಲ. ನಾನು ಹಿಂದೆಯೂ ಅವರನ್ನು ಪ್ರೀತಿಸಿಲ್ಲ, ಮುಂದೆಯೂ ಪ್ರೀತಿಸುವುದಿಲ್ಲ. ನನ್ನನ್ನು ನಂಬು‘ ಎಂದು ತಾಯಿ ಬಳಿ ಇರುವ ಎಲ್ಲಾ ಸತ್ಯವನ್ನೂ ಹೇಳುತ್ತಾನೆ. ಇತ್ತ ಸತ್ಯ ಗೊತ್ತಿಲ್ಲದೇ ಮಗ ಮೇಲೆ ಕೋಪ ಮಾಡಿಕೊಂಡಿದ್ದಕ್ಕಾಗಿ ವಿಶಾಲಾಕ್ಷಿ ಪಶ್ಚಾತ್ತಾಪ ಪಡುತ್ತಾ ಅಳುತ್ತಾಳೆ.

ವರಲಕ್ಷ್ಮೀ ಕಣ್ಣೀರು, ಇಂದ್ರಮ್ಮನ ಹಠ

ಮಗನ ಮನಸ್ಸಲ್ಲಿ ವರಲಕ್ಷ್ಮೀಗೆ ಕೋಪ ಬರಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಳ್ಳುವ ಇಂದ್ರಮ್ಮ ಸೊಸೆ ಟೀ ತಂದಾಗ ತಾನು ಟೀ ಕೇಳೇ ಇಲ್ಲ ಎಂಬಂತೆ ನಾಟಕ ಮಾಡುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ವರದ ತಲೆನೋವು ಅಂತ ಕಾಫಿ ಕೇಳಿದ್ದು ನಾನು, ನೀನ್ಯಾಕೆ ಅಮ್ಮನಿಗೆ ಟೀ ಮಾಡಿದ್ದು ಎಂದು ಕೇಳುತ್ತಾನೆ. ಅದಕ್ಕೆ ವರಲಕ್ಷ್ಮೀ ಅತ್ತೆ ತಲೆನೋವು ಅಂತ ಹೇಳ್ತಾ ಇದ್ರು, ಹಾಗಾಗಿ ನಾನು ಅವರಿಗೆ ಟೀ ಮಾಡ್ಡೆ ಅಂತ ಹೇಳ್ತಾಳೆ. ಆದರೆ ಅಷ್ಟೊತ್ತಿಗೆ ನಾಟಕ ಶುರು ಮಾಡುವ ಇಂದ್ರಮ್ಮ, ‘ಅಯ್ಯೋ, ನಾನ್ಯಾವಾಗ ಟೀ ಕೇಳ್ದೆ, ನಾವ್ಯಾಗ ತಲೆನೋವು ಅಂದೆ‘ ಅಂತ ಶುರುವಿಟ್ಟುಕೊಳ್ಳುತ್ತಾಳೆ. ಮೊದಲು ಕೋಪದಲ್ಲಿ ಬಯ್ಯುವ ವರದ ನಂತರ ವರಲಕ್ಷ್ಮೀ ಬಳಿ ಸಾರಿ ಕೇಳುತ್ತಾನೆ. ಅವನಿಗೆ ಇಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥ ಆಗುವುದಿಲ್ಲ. ಅವನು ಹೋದ ಮೇಲೆ ಹೆಂಡತಿಯ ಹಿಂದೆ ಬರುವ ಶಂಕರ ‘ಇಂದ್ರ ನೀನು ಮಾಡುತ್ತಿರುವುದು ಸರಿಯಲ್ಲ, ವರಲಕ್ಷ್ಮೀ ಈ ಮನೆಯ ಸೊಸೆ, ನಿನ್ನ ಮಗನ ಹೆಂಡತಿ. ಅವಳ ಕಣ್ಣಲ್ಲಿ ನೀರು ಹಾಕಿಸೋದು ಸರಿಯಲ್ಲ‘ ಎಂದಾಗ ತಾನು ಮಾಡಿದ್ದೇ ಸರಿ ಅನ್ನುವಂತೆ ಸಮರ್ಥಿಸಿಕೊಳ್ಳುತ್ತಾಳೆ ಇಂದ್ರಮ್ಮ. ಆಗ ಶಂಕರ ‘ಆ ಶ್ರಾವಣಿ ಹೇಗೆ ಅಂತ ನಿಂಗೆ ಗೊತ್ತು, ಅವಳು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡ್ತಾಳೆ. ನೀನು ವರಲಕ್ಷ್ಮೀಗೆ ಈ ಥರ ಹಿಂಸೆ ಕೊಡೋದು ಅವಳಿಗೆ ಗೊತ್ತಾದ್ರೆ ಏನಾಗಬಹುದು ಹೇಳು‘ ಅಂತ ಹೆಂಡತಿಗೆ ಹೆದರಿಸಲು ನೋಡುತ್ತಾರೆ. ಆದರೆ ಇಂದ್ರಮ್ಮ ಮಾತ್ರ ‘ಏನಾದ್ರೂ ಆಗ್ಲಿ, ನಾನಾ ಆ ಶ್ರಾವಣಿನಾ ನೋಡೇ ಬಿಡ್ತೀನಿ‘ ಅಂತ ಗಂಡನಿಗೆ ಸವಾಲು ಹಾಕುತ್ತಾಳೆ.

ಸೊಸೆ ಅಂತ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ವಿಶಾಲಾಕ್ಷಿ

ಇತ್ತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಎಲ್ಲರೂ ಒಂದಾಗಿ ಮನೆಗೆ ಬರುತ್ತಾರೆ. ಅಮ್ಮ, ಅಪ್ಪ, ತಮ್ಮ, ನಾದಿನಿ ಎಲ್ಲರೂ ಜೊತೆಯಾಗಿ ಬಂದಿದ್ದು ಧನಲಕ್ಷ್ಮಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಇತ್ತ ಸುಂದರ ಕಾಂತಮ್ಮ ಕೂಡ ಅವಳನ್ನು ಎತ್ತಿ ಕಟ್ಟುತ್ತಾರೆ. ಆಗ ಮಗ ಸೊಸೆ ಎಲ್ಲರೂ ಒಂದಾಗಿದ್ದಾರೆ ಕುಕ್ಕೆಗೆ ಹೋಗಿ ಎಂದು ವ್ಯಂಗ್ಯ ಮಾಡುತ್ತಾಳೆ ಕಾಂತಮ್ಮ. ಅವಳ ಮಾತು ಕೇಳಿ ಕೋಪ ಮಾಡಿಕೊಳ್ಳುವ ವಿಶಾಲಾಕ್ಷಿ ‘ನಾನು ನನ್ನ ಮಗ ಒಂದಾಗಿದ್ದು ನಿಜ, ಆದರೆ ನಾನು ಯಾರನ್ನೂ ಸೊಸೆ ಅಂತ ಒಪ್ಪಿಕೊಂಡಿಲ್ಲ, ಸೊಸೆ ಅಂತ ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ‘ ಎಂದು ರೇಗುತ್ತಾಳೆ. ಆಗ ಶ್ರಾವಣಿಗೆ ‘ಇಂತ ಭಿಕಾರಿಗಳನ್ನೆಲ್ಲಾ ಮನೆ ಸೊಸೆ ಅಂತ ಎಲ್ಲಿ ವಿಶಾಲು ಒಪ್ಪಿಕೊಂಡು ಬಿಡ್ತಾಳೋ ಅಂತ ಭಯ ಆಗಿತ್ತು‘ ಅಂತ ಮತ್ತೆ ಅವಮಾನ ಮಾಡುತ್ತಾಳೆ ಕಾಂತಮ್ಮ.

ವಿಶಾಲಾಕ್ಷಿ ಹೇಳಿದಂತೆ ಅವಳು ಶ್ರಾವಣಿಯನ್ನು ಎಂದಿಗೂ ಸೊಸೆ ಅಂತ ಒಪ್ಪಿಕೊಳ್ಳುವುದಿಲ್ವಾ, ಇಂದ್ರಮ್ಮನಿಂದ ವರಲಕ್ಷ್ಮೀಗೆ ಇನ್ನಷ್ಟು ಸಂಕಷ್ಟ ಎದುರಾಗುತ್ತಾ, ಸುಬ್ಬು ತಾಯಿ ಬಳಿ ಹೇಳಿದ ಸತ್ಯ ಶ್ರಾವಣಿ ಬದುಕನ್ನೇ ಅತಂತ್ರ ಮಾಡುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner